ಅಟ್ಲಾಂಟಾ:ಹೆರಿಗೆ ಸಂದರ್ಭದಲ್ಲಿ ಜಾರ್ಜಿಯಾ ದಂಪತಿಯ ಮಗುವಿನ ಕತ್ತು ಮುರಿದಿರುವಿಕೆ ಪ್ರಕರಣವೂ ವೈದ್ಯಕೀಯ ಪರೀಕ್ಷಕರು ನಡೆಸಿರುವ ನರ ಹತ್ಯೆಯಾಗಿದೆ ಎಂದು ದಂಪತಿಯ ವಕೀಲರು ವಾದಿಸಿದ್ದಾರೆ.
ಜೆಸ್ಸಿಕಾ ರಾಸ್ ಮತ್ತು ಟ್ರೆವಿಯಾನ್ ಇಸಯಾ ಟೇಲರ್ ಸೀನಿಯರ್ ದಂಪತಿಗಳು ಈ ಸಂಬಂಧ ಮೊಕದ್ಧಮೆ ಹೂಡಿದ್ದಾರೆ. ಜೆಸ್ಸಿಕಾ ರಾಸ್ ಹೆರಿಗೆ ವೇಳೆ ವೈದ್ಯರು ಅಜಾಗರೂಕತೆಯಿಂದ ಮಗುವಿನ ಕತ್ತು ಮುರಿದಿದೆ ಎಂದು ಆಪಾದಿಸಿ ಈ ದಂಪತಿ ವೈದ್ಯರು ಮತ್ತು ಆಸ್ಪತ್ರೆ ವಿರುದ್ಧ ಮೊಕದ್ಧಮೆ ಹೂಡಿದ್ದರು. ಆದರೆ, ವೈದ್ಯರು ಮತ್ತು ಆಸ್ಪತ್ರೆ ಈ ಆರೋಪವನ್ನು ನಿರಾಕರಿಸಿದೆ.
ಈ ಪ್ರಕರಣ ಕುರಿತು ಕ್ಲೇಟನ್ ಕೌಂಟಿ ಮೆಡಿಕಲ್ ಎಕ್ಸಾಮಿನರ್ ಆಫೀಸ್ ಬಿಡುಗಡೆ ಮಾಡಿರುವ ವರದಿಯಲ್ಲಿ ಕೂಡ ಮಗುವಿನ ಸಾವಿಗೆ ಕುತ್ತಿಗೆ ಮುರಿತ ಕಾರಣ ಆಗಿದೆ ಎಂಬ ವರದಿ ಬಂದಿದೆ. ಇದರ ಬಳಿಕದ ಸುದ್ದಿಗೋಷ್ಠಿಯಲ್ಲಿ ಮಾತನಾಡಿರುವ ವಕೀಲರು, ಇದು ಮಾನವರು ಮಾಡಿದ ಕೆಲಸದಿಂದ ಆಗಿರುವ ಅಪರಾಧ ಎಂದಿದ್ದಾರೆ
ಜೆಸ್ಸಿಕಾ ರೋಸ್ ಗುಂಡು ಮಗುವಿನ ಹೆರಿಗೆಗೆ ಡಾ ಸೆಂಟ್ ಜೂಲಿಯನ್ ಮುಂದಾಳತ್ವ ವಹಿಸಿದ್ದರು. ಆದರೆ, ಅವರು ಸರ್ಜರಿ ಪ್ರಕ್ರಿಯೆ ಮಾಡುವಲ್ಲಿ ವಿಫಲರಾಗಿದ್ದಾರೆ. ಹೆರಿಗೆ ಸಂದರ್ಭದಲ್ಲಿ ಮಗು ಹೊರತೆಗೆಯಲು ಸಾಧ್ಯವಾಗದೇ ಹೋದಾಗಲೂ ಅವರು ಇತರ ವೈದ್ಯರ ಸಹಾಯವನ್ನು ಕೇಳುವ ಬದಲಾಗಿ, ಮಗುವಿನ ತಲೆ ಮತ್ತು ಕುತ್ತಿಗೆ ಮೇಲೆ ಹೆಚ್ಚಿನ ಒತ್ತಡ ಹಾಕಿದ್ದಾರೆ. ಈ ಹಿನ್ನೆಲೆಯಲ್ಲಿ ಮಗು ಸಾವನ್ನಪ್ಪಿದೆ ಎಂದು ಆರೋಪಿಸಲಾಗಿದೆ.
ಆದರೆ, ಈ ಕುರಿತು ಪ್ರತಿವಾದ ಮಂಡಿಸಿರುವ ವೈದ್ಯರೂ ಆಗಿರುವ ವಕೀಲ ರೋಡೆರಿಕ್ ಎಡ್ಮಂಡ್, ಇದು ಸಂಪೂರ್ಣವಾಗಿ ವಿರುದ್ಧ ವಾದವಾಗಿದೆ. ಯಾವುದೇ ಪ್ರಸೂತಿ ತಜ್ಞರು ಈ ರೀತಿ ಮಾಡಲಾರರು. ಈ ಆರೋಪವೂ ಅಸಮಂಜಸವಾದವಾಗಿದ್ದು, ನಂಬಲಾರ್ಹವಾಗಿಲ್ಲ ಎಂದಿದ್ದಾರೆ. ಮಗು ಸಾವಿಗೆ ಮೊದಲೇ ಕತ್ತು ಮುರಿದಿತ್ತು ಎಂಬ ವಾದವನ್ನು ಸೇಂಟ್ ಜೂಲಿಯನ್ ಪರ ವಕೀಲರು ಅಲ್ಲಗಳೆದಿದ್ದಾರೆ. ಈ ಎಲ್ಲಾ ದುರ್ಘಟನೆಗಳು ವೈದ್ಯಕೀಯ ಕ್ಷೇತ್ರದಲ್ಲಿ ಅಪರೂಪವಾಗಿ ವರದಿಯಾಗುತ್ತದೆ. ವೈದ್ಯರಿಂದ ಯಾವುದೇ ರೀತಿ ತಪ್ಪು ಆಗದಿದ್ದರೂ ಈ ರೀತಿ ಸಂಭವಿಸಬಹುದು ಎಂದಿದ್ದಾರೆ.