ಇಸ್ಲಾಮಾಬಾದ್: ಸಾಂವಿಧಾನಿಕ ತಿದ್ದುಪಡಿ ಸುಧಾರಣೆಗಳನ್ನು ಅಂಗೀಕರಿಸುವುದು ಪಾಕಿಸ್ತಾನದ ಮುಸ್ಲಿಂ ಲೀಗ್ ನವಾಜ್ (ಪಿಎಂಎಲ್-ಎನ್) ನೇತೃತ್ವದ ಫೆಡರಲ್ ಸರ್ಕಾರಕ್ಕೆ ಮಾಡು ಇಲ್ಲವೇ ಮಡಿ ಪರಿಸ್ಥಿತಿ ಅಲ್ಲ ಎಂದು ಪಾಕಿಸ್ತಾನ ರಕ್ಷಣಾ ಸಚಿವ ಖ್ವಾಜಾ ಆಸೀಫ್ ತಿಳಿಸಿದ್ದಾರೆ ಎಂದು ವರದಿಯಾಗಿದೆ.
ಈ ಕುರಿತು ಮಾತನಾಡಿರುವ ಸಚಿವರು, ಆಡಳಿತವು ಮೂರು ಸಾಂವಿಧಾನಿಕ ಮಾರ್ಪಾಡುಗಳನ್ನು ಪ್ರಸ್ತಾಪಿಸಿದೆ. ಇವೆಲ್ಲವೂ ಪ್ರಜಾಪ್ರಭುತ್ವಕ್ಕೆ ಅನುಗುಣವಾಗಿದೆ ಎಂದು ಕಾರ್ಯಕ್ರಮವೊಂದರಲ್ಲಿ ಅವರು ತಿಳಿಸಿದ್ದಾರೆ. ತಿದ್ದುಪಡಿ ಮಾಡಿದ ಪ್ರಸ್ತಾಪಗಳನ್ನು ಸಂವಿಧಾನಿಕ ನ್ಯಾಯಾಲಯದಲ್ಲಿ ಸ್ಥಾಪಿಸಲಾಗುವುದು ಎಂದು ಇದೇ ವೇಳೆ ಅವರು ಸ್ಪಷ್ಟಪಡಿಸಿದ್ದಾರೆ.
ಆಡಳಿತವೂ ಮೌಲಾನ ಫಜ್ಲುರ್ ರೆಹಮಾನ್ ನೇತೃತ್ವದ ಜಮಿಯತ್ ಉಲೇಮಾ ಎ ಇಸ್ಲಾಂ ಫಜಲ್ (ಜೆಯುಐ-ಎಫ್)ನಿಂದ ಸಂವಿಧಾನ ಸುಧಾರಣೆಯ ಬೆಂಬಲವನ್ನು ಎದುರು ನೋಡುತ್ತಿದೆ ಎಂದು ವರದಿಯೊಂದು ತಿಳಿಸಿದೆ. ಈ ಸಂವಿಧಾನಿಕ ತಿದ್ದುಪಡಿಗೆ ಬೆಂಬಲಕ್ಕೆ ಮೌಲಾನಾ ಫಜ್ಲುರ್ ರೆಹಮಾನ್ ಅವರನ್ನು ಮನವೊಲಿಸಲಾಗಿದೆ ಎಂದು ಸಚಿವರು ಇದೇ ವೇಳೆ ಮಾಹಿತಿ ನೀಡಿದ್ದಾರೆ.
ಖೈಬರ್ ಪಖ್ತುಂಖ್ವಾ ಮುಖ್ಯಮಂತ್ರಿ ಮುಖ್ಯಮಂತ್ರಿ ಅಲಿ ಅಮೀನ್ ಗಂಡಾಪುರ ಅವರ ಕ್ರಮಗಳು ಸರಳ ಸಾಫ್ಟ್‌ವೇರ್ ನವೀಕರಣವನ್ನು ಮೀರಿವೆ. ಆಲಿ ಅಮಿನ್ ಗಂಡಾಪುರ್, ಹಿಂಸಾತ್ಮಕ ಪ್ರತಿಭಟನೆಗಳನ್ನು ನಡೆಸಿದ ಬಳಿಕ ಇದೀಗ ಮುಚ್ಚಿ ಹಾಕುವ ಪ್ರಯತ್ನ ಮಾಡುತ್ತಿದ್ದಾರೆ. ಸಾಮರಸ್ಯ ಮತ್ತು ಪ್ರತಿರೋಧ ಹೀಗೆ ಎರಡನ್ನೂ ಒಟ್ಟಿಗೆ ಮಾಡಲು ಸಾಧ್ಯವಿಲ್ಲ. ಆಲಿ ಅಮೀನ್ ಗಂಡಾಪೂರ್ ಕ್ರಮಕ್ಕೆ ಪಿಟಿಐ ಸಂಸ್ಥಾಪಕ ಇಮ್ರಾನ್ ಖಾನ್ ಮೌನವಹಿಸಿರುವುದರ ಹಿಂದೆ ಏನೋ ಕಾರಣವಿದೆ ಎಂದು ಇದೇ ವೇಳೆ ಪಾಕ್ ರಕ್ಷಣಾ ಸಚಿವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಹಲವು ನಾಯಕರ ಜೊತೆ ಚರ್ಚೆ - ಸಮಾಲೋಚನೆ:ಇದಕ್ಕೆ ಮುನ್ನ ಜಮಿಯತ್ ಉಲೇಮಾ ಎ ಇಸ್ಲಾಂ ಫಜಲ್ (ಜೆಯುಐ-ಎಫ್) ಮುಖ್ಯಸ್ಥ ಮೌಲಾನಾ ಫಜ್ಲುರ್ ರೆಹಮಾನ್, ಪಾಕಿಸ್ತಾನ್ ತೆಹ್ರೀಕ್-ಇ-ಇನ್ಸಾಫ್ (ಪಿಟಿಐ) ನಾಯಕರನ್ನು ಭೇಟಿಯಾಗಿ ಪ್ರಸ್ತಾವಿತ ಸಾಂವಿಧಾನಿಕ ಸುಧಾರಣೆಗಳ ಕುರಿತು ಚರ್ಚೆ ನಡೆಸಿದರು.
ಈ ಭೇಟಿ ವೇಳೆ ಮಾತನಾಡಿದ ಪಿಟಿಐ ನಾಯಕ ಸಲ್ಮಾನ್ ಅಕ್ರಮ್ ರಾಜಾ, ಮೌಲಾನಾ ಫಜ್ಲುರ ರೆಹಮಾನ್ ಸಾಂವಿಧಾನಿಕ ತಿದ್ದುಪಡಿಗಳ ಐತಿಹಾಸಿಕ ಸ್ಥಾನಕ್ಕೆ ಬದ್ಧವಾಗಿದ್ದಾರೆ. ಮುಂದಿನ ದಿನದಲ್ಲಿ ದೇಶವೂ ಶುಭ ಸುದ್ದಿ ಪಡೆಯಲಿದೆ. ಸಂವಿಧಾನ ತಿದ್ದುಪಡಿಗೆ ಬೆಂಬಲ ನೀಡದೇ ಇರುವ ಮೂಲಕ ಮೌಲಾನ ಫಜ್ಲುರ ರೆಹಮಾನ್ ದೇಶವನ್ನು ಉಳಿಸಿದರು ಎಂದು ತಿಳಿಸಿದ್ದಾರೆ.
ಇದನ್ನೂ ಓದಿ:ಪಾಕಿಸ್ತಾನದಲ್ಲಿ 4 ಹೊಸ ಪೋಲಿಯೊ ಪ್ರಕರಣ ಪತ್ತೆ, 32ಕ್ಕೇರಿದ ಸಂಖ್ಯೆ