ಕರ್ನಾಟಕ

karnataka

ETV Bharat / international

ಗಡಿ ವಿವಾದ: ಪ್ರಧಾನಿ ಮೋದಿ ಹೇಳಿಕೆಗೆ ಚೀನಾದ ವಕ್ತಾರ ಮಾವೋ ನಿಂಗ್ ಪ್ರತಿಕ್ರಿಯೆ - Mao Ning - MAO NING

ಭಾರತ ಮತ್ತು ಚೀನಾ ಗಡಿ ವಿವಾದ ಕುರಿತು ಪ್ರಧಾನಿ ನರೇಂದ್ರ ಮೋದಿ ನೀಡಿರುವ ಹೇಳಿಕೆಗೆ ಅಲ್ಲಿನ ವಕ್ತಾರ ಮಾವೋ ನಿಂಗ್ ಪ್ರತಿಕ್ರಿಯೆ ಕೊಟ್ಟಿದ್ದಾರೆ.

ಭಾರತ ಮತ್ತು ಚೀನಾ
ಭಾರತ ಮತ್ತು ಚೀನಾ

By PTI

Published : Apr 12, 2024, 1:44 PM IST

ಬೀಜಿಂಗ್, ಚೀನಾ : ಉಭಯ ದೇಶಗಳ ನಡುವಿನ ಗಡಿ ಬಾಂಧವ್ಯ ಕುರಿತು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ನೀಡಿರುವ ಹೇಳಿಕೆಗೆ ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರ ಮಾವೋ ನಿಂಗ್​ ಪ್ರತಿಕ್ರಿಯಿಸಿದ್ದು, ಚೀನಾ - ಭಾರತದ ನಡುವೆ ಉತ್ತಮ ಮತ್ತು ಸ್ಥಿರವಾದ ಸಂಬಂಧಗಳು ಎರಡೂ ದೇಶಗಳ ಹಿತಾಸಕ್ತಿಗಳನ್ನು ಪೂರೈಸುತ್ತವೆ. ಅಲ್ಲದೇ, ಪ್ರದೇಶದಾಚೆಗೆ ಶಾಂತಿ ಮತ್ತು ಅಭಿವೃದ್ದಿಗೆ ಅನುಕೂಲಕರವಾಗಿವೆ ಎಂದಿದ್ದಾರೆ.

ಅಮೆರಿಕದ ನ್ಯೂಸ್​ವೀಕ್​ ನಿಯತಕಾಲಿಗೆ ಮಾವೋ ನಿಂಗ್​ ನೀಡಿದ ಸಂದರ್ಶನದ ವೇಳೆ ನರೇಂದ್ರ ಮೋದಿ ಅವರ ಟೀಕೆಗಳ ಬಗ್ಗೆ ಪ್ರಶ್ನೆ ಕೇಳಲಾಯಿತು. ಈ ವೇಳೆ ಪ್ರತಿಕ್ರಿಯಿಸಿದ ನಿಂಗ್​ ಗಡಿಗಳಲ್ಲಿನ ರ್ದೀರ್ಘಕಾಲದ ಪರಿಸ್ಥಿತಿಯನ್ನು ತುರ್ತಾಗಿ ತಿಳಿಸಬೇಕಾಗಿದೆ. ಈಗಾಗಲೇ ಮೋದಿ ಅವರ ಮಾತುಗಳನ್ನು ಚೀನಾ ಗಮನಿಸಿದ್ದು, ಗಡಿ ವಿವಾದವು ಚೀನಾ ಮತ್ತು ಭಾರತದ ಸಂಫೂರ್ಣ ಸಂಬಂಧವನ್ನು ಪ್ರತಿನಿಧಿಸುವುದಿಲ್ಲ ಮತ್ತು ಅದನ್ನು ದ್ವಿಪಕ್ಷೀಯ ಸಂಬಂಧಗಳಲ್ಲಿ ಸೂಕ್ತವಾಗಿ ಇರಿಸುವುದರ ಜೊತೆಗೆ ಸರಿಯಾಗಿ ನಿರ್ವಹಿಸಬೇಕಾದ ಅಗತ್ಯತೆ ಇದೆ. ಭಾರತವು ಚೀನಾದೊಂದಿಗೆ ವ್ಯವಹರಿಸುತ್ತದೆ ಎಂದು ತಿಳಿಸಿದ್ದಾರೆ. ಆದರೆ ಗಡಿ ವಿವಾದ ಮುಂದುವರಿಯುವವರೆಗೆ ಚೀನಾದೊಂದಿಗಿನ ಬಾಂಧವ್ಯದಲ್ಲಿ ಸಹಜ ಸ್ಥಿತಿಗೆ ಮರಳಲು ಸಾಧ್ಯವಿಲ್ಲ ಎಂದು ಭಾರತ ಸಮರ್ಥಿಸಿಕೊಂಡಿದೆ.

ಕಳೆದ ತಿಂಗಳು ಮಾರ್ಚ್​ನಲ್ಲಿ ನ್ಯೂಸ್​ವೀಕ್ ನಿಯತಕಾಲಿಕೆಗೆ ನರೇಂದ್ರ ಮೋದಿ ಅವರು ನೀಡಿದ ವಿಶೇಷ ಸಂದರ್ಶನದಲ್ಲಿ ಭಾರತಕ್ಕೆ, ಚೀನಾದೊಂದಿಗಿನ ಸಂಬಂಧವು ಮಹತ್ವದ್ದಾಗಿದೆ. ಭಾರತ ಮತ್ತು ಚೀನಾ ನಮ್ಮ ಗಡಿಯಲ್ಲಿನ ಸುದೀರ್ಘ ಪರಿಸ್ಥಿತಿಯನ್ನು ತುರ್ತಾಗಿ ಪರಿಹರಿಸಬೇಕಾಗಿದೆ. ಇದರಿಂದಾಗಿ ನಮ್ಮ ದ್ವಿಪಕ್ಷೀಯ ಸಂವಹನದಲ್ಲಿನ ಅಸಹಜತೆ ಹಿಂದೆ ಹಾಕಬಹುದು. ಭಾರತ ಮತ್ತು ಚೀನಾ ನಡುವಿನ ಸ್ಥಿರ ಮತ್ತು ಶಾಂತಿಯುತ ಸಂಬಂಧವು ಎರಡು ದೇಶಗಳಿಗೆ ಮಾತ್ರವಲ್ಲದೇ ಜಗತ್ತಿಗೆ ಮುಖ್ಯವಾಗಿದೆ ಎಂದು ಹೇಳಿದ್ದರು.

ಇದನ್ನೂ ಓದಿ :ನೇಪಾಳ ಗಡಿ ಮೂಲಕ ಭಾರತದೊಳಕ್ಕೆ ಅಕ್ರಮವಾಗಿ ನುಸುಳಿದ ಇಬ್ಬರು ಚೀನಿಯರ ಬಂಧನ - chinese citizens arrest

ABOUT THE AUTHOR

...view details