ವಾಷಿಂಗ್ಟನ್(ಅಮೆರಿಕ): ಮುಂಬರುವ ಟ್ರಂಪ್ ಆಡಳಿತದಲ್ಲಿ ಎಲೋನ್ ಮಸ್ಕ್ ಮುಂದೊಂದು ದಿನ ಅಧ್ಯಕ್ಷರಾಗಬಹುದೇ? ಎಂಬ ಪ್ರಶ್ನೆಗೆ ಡೊನಾಲ್ಡ್ ಟ್ರಂಪ್ ಕೊಟ್ಟ ಉತ್ತವೇನು ಗೊತ್ತಾ?. ಇಲ್ಲಿದೆ ನೋಡಿ.
ಅರಿಜೋನಾದ ಫೀನಿಕ್ಸ್‌ನಲ್ಲಿ ನಡೆದ ರಿಪಬ್ಲಿಕನ್ ಸಮ್ಮೇಳನದಲ್ಲಿ ಟ್ರಂಪ್ಗೆ 'ಎಲೋನ್ ಮಸ್ಕ್ ಮುಂದೊಂದು ದಿನ ಅಮೆರಿಕದ ಅಧ್ಯಕ್ಷರಾಗಬಹುದೇ' ಎಂದು ಕೇಳಿದರು. ಇದಕ್ಕೆ ಇಲ್ಲವೆಂದು ಅವರು ಉತ್ತರಿಸಿದ್ದಾರೆ. ಅಮೆರಿಕದಲ್ಲಿ ಜನಿಸಿದವರು ಮಾತ್ರ ಅಮೆರಿಕದ ಅಧ್ಯಕ್ಷರಾಗಬಹುದು, ಇದು ಯುಎಸ್ ಸಂವಿಧಾನದಲ್ಲಿ ಸ್ಪಷ್ಟವಾಗಿ ಹೇಳಲಾಗಿದೆ ಎಂದು ಟ್ರಂಪ್ ಸ್ಪಷ್ಟಪಡಿಸಿದ್ದಾರೆ. "ಮಸ್ಕ್ ಅಧ್ಯಕ್ಷರಾಗುವುದಿಲ್ಲ ಎಂದು ನಾನು ನಿಮಗೆ ತಿಳಿಸಲು ಬಯಸುತ್ತೇನೆ ಎಂದು ಸಮ್ಮೇಳನದಲ್ಲಿ ಟ್ರಂಪ್ ದೃಢಪಡಿಸಿದ್ದಾರೆ. ಈ ಮೂಲಕ ಅವರು ಪ್ರತಿಪಕ್ಷಗಳ ಟೀಕೆಗೆ ತಿರುಗೇಟು ನೀಡಿದ್ದಾರೆ.
ಎಲೋನ್ ಮಸ್ಕ್ ಜನನ ಸ್ಥಳ ಅಮೆರಿಕವಲ್ಲ!:ದಕ್ಷಿಣ ಆಫ್ರಿಕಾದಲ್ಲಿ ಜನಿಸಿರುವ ಟೆಸ್ಲಾ ಮತ್ತು ಸ್ಪೇಸ್‌ಎಕ್ಸ್ ಮುಖ್ಯಸ್ಥ ಎಲೋನ್ ಮಸ್ಕ್ ಬಗ್ಗೆ ಟ್ರಂಪ್ ಅವರು "ಅವರು ಏಕೆ ಅಮೆರಿಕದ ಅಧ್ಯಕ್ಷರಾಗುವುದಿಲ್ಲ ಎಂಬುದು ನಿಮಗೆ ತಿಳಿದಿದೆ? ಅವರು ಈ ದೇಶದಲ್ಲಿ ಹುಟ್ಟಿಲ್ಲ" ಎಂದರು. "ಅಮೆರಿಕ ಸಂವಿಧಾನದ ಪ್ರಕಾರ ಅಮೆರಿಕ ಅಧ್ಯಕ್ಷರಾಗಲು ಅವರು ಸಹಜವಾಗಿ ಅಮೆರಿಕದಲ್ಲಿಯೇ ಜನಿಸಿದ ಪ್ರಜೆಯಾಗಿರಬೇಕು" ಎಂದು ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದರು.
ಮುಂದುವರೆದು, ಮುಂಬರುವ ಅಮೆರಿಕದ ಅಧ್ಯಕ್ಷೀಯ ಆಡಳಿತದಲ್ಲಿ ಮಸ್ಕ್ ಅವರು ವಹಿಸುತ್ತಿರುವ ದೊಡ್ಡ ಪಾತ್ರಕ್ಕಾಗಿ, ಅಧ್ಯಕ್ಷ ಸ್ಥಾನವನ್ನು ಮಸ್ಕ್‌ಗೆ ಬಿಟ್ಟುಕೊಟ್ಟಂತೆ ಎಂದು ಡೆಮಾಕ್ರಟಿಕ್ ಪಕ್ಷದಿಂದ ಟೆಕ್ ಬಿಲಿಯನೇರ್ "ಅಧ್ಯಕ್ಷ ಮಸ್ಕ್" ಎಂದು ಚಿತ್ರಿಸುತ್ತಿದ್ದಾರೆ ಎಂಬ ಟೀಕೆಗೆ ಟ್ರಂಪ್ " ಇಲ್ಲ, ಆ ರೀತಿಯಾಗಿ ನಡೆಯುತ್ತಿಲ್ಲ" ಎಂದು ಭರವಸೆ ನೀಡಿದರು.