ಟೋಕಿಯೋ, ಜಪಾನ್: ಮನೆ ಎಂಬುದು ಕೇವಲ ಕಟ್ಟಡವಲ್ಲ. ಅದೊಂದು ಭಾವನೆಗಳ ಸೌಧ. ಅದೇ ಕಲ್ಪನೆಯಲ್ಲಿ ಜಪಾನಿನ ವ್ಯಕ್ತಿಯೊಬ್ಬರು ಕೈಯಿಂದ ಮನೆ ನಿರ್ಮಾಣ ಮಾಡಿ, ಎಲ್ಲರ ಗಮನ ಸೆಳೆದಿದ್ದಾರೆ.
ರಸ್ತೆಯ ಬದಿಯಲ್ಲಿ ನಿರ್ಮಾಣವಾಗಿರುವ ಈ ಮನೆ ಕಂಡಾಕ್ಷಣ ಅನಿಮೇಷನ್ನಂತೆ ಕಾಣುತ್ತದೆ. ಅಯ್ಯೋ ಯಾವಾಗ ಬೀಳುತ್ತದೆಯೋ ಎಂಬ ಈ ಮನೆ ಕನಿಷ್ಠ ಅಂದರೂ 200 ವರ್ಷ ಬಾಳಿಕೆ ಬರುತ್ತದೆ ಎನ್ನುತ್ತಾರೆ ಇದರ ನಿರ್ಮಾಣ ಕರ್ತ 59 ವರ್ಷದ ಕೀಸುಕೆ ಓಕಾ.
20 ವರ್ಷದಿಂದ ನಿರ್ಮಾಣ ಆಗುತ್ತಲೇ ಇದೆ ಈ ಮನೆ:ಅರಿಮಾಸ್ಟನ್ ಕಟ್ಟಡ ಎಂಬ ಈ ನಾಲ್ಕು ಅಂತಸ್ಥಿನ ಮನೆಯನ್ನು ಕಳೆದ 20 ವರ್ಷದಿಂದ ನಿರ್ಮಾಣ ಮಾಡುತ್ತಿದ್ದಾರೆ ಓಕಾ. ಇಂದಿನ ಕಾಲದಲ್ಲಿ ಅತ್ಯುತ್ತಮ ವಿನ್ಯಾಸ ಮನೆಯನ್ನು ಕ್ಷಣಮಾತ್ರದಲ್ಲಿ ನಿರ್ಮಾಣ ಮಾಡುವಾಗ ಕೈಯಿಂದ ಕಾಂಕ್ರಿಟ್ ಮನೆ ಕಟ್ಟುತ್ತಿರುವ ಕುರಿತು ಮಾತನಾಡಿರುವ ಓಕಾ, ಜಗತ್ತಿನಲ್ಲಿ ಸಾಕಷ್ಟು ವಸ್ತುಗಳನ್ನು ಉತ್ಪಾದಿಸಲಾಗುತ್ತಿದೆ. ಅದನ್ನು ನಾವು ತಪ್ಪಿಸಬೇಕಿದ್ದು, ಮತ್ತೊಂದು ಮಾರ್ಗವಿದ್ದು, ಇಲ್ಲದೇ ಹೋದಲ್ಲಿ ನಾವು ತೊಂದರೆಗೆ ಸಿಲುಕಿಕೊಳ್ಳುತ್ತೇವೆ ಎಂದಿದ್ದಾರೆ.
ನೋಡಿದ ತಕ್ಷಣ ಎಲ್ಲರ ಗಮನ ಸೆಳೆಯುವ, ವಿಚಿತ್ರ ಮತ್ತು ಅದ್ಬುತವಾಗಿ ನಿರ್ಮಾಣವಾಗಿರುವ ನಾಲ್ಕು ಅಂತಸ್ತಿನ ಈ ಮನೆಯನ್ನು ಇದೀಗ ಜನರು ಗಿಬ್ಲಿ ಸಿನಿಮಾದ ಹೌಲ್ಸ್ ಮೂವಿಂಗ್ ಕ್ಯಾಸಲ್ (ಗೂಬೆಯ ಚಲಿಸುವ ಅರಮನೆ)ಗೆ ಹೋಲಿಕೆ ಮಾಡುತ್ತಿದ್ದಾರೆ. ಅರಿಮಾಸ್ಟನ್ ಕಟ್ಟಡವೂ ಸ್ಪನೀಶ್ ವಿನ್ಯಾಸವನ್ನು ಹೊಂದಿದ್ದು, ಟೋಕಿಯಾ ಪ್ರದೇಶದಲ್ಲಿ ನಿರ್ಮಾಣಗೊಂಡಿದೆ.
ಸ್ವತಃ ವಿನ್ಯಾಸ ಮಾಡಿದ ಓಕಾ:ಓಕಾ ಅವರು ಈ ಮನೆ ವಿನ್ಯಾಸವನ್ನು ಸ್ವತಃ ಮಾಡಿದ್ದಾರೆ. ಅಲ್ಲದೇ ಸ್ವತಃ ನಿರ್ಮಿಸಿದ್ದಾರೆ. ಸದ್ಯ ವೇಗವಾಗಿ ಬೆಳೆಯುತ್ತಿರುವ ಜಪಾನ್ ಕಟ್ಟಡ ಮತ್ತು ನಗರವನ್ನು ನೋಡಿದಾಗ ಓಕಾಗೆ ಬೇಜಾರಾಗುತ್ತದೆ, ಕಾರಣ ಎಲ್ಲಾ ವಿನ್ಯಾಸಗಳ ಕಂಪ್ಯೂಟರೀಕರಣಗೊಂಡಿದೆ. ಮನೆ ನಿರ್ಮಾಣ ಮಾಡುವ ವ್ಯಕ್ತಿ ಮತ್ತು ಅದನ್ನು ವಿನ್ಯಾಸ ಮಾಡುವ ವ್ಯಕ್ತಿಗಳಿಗೆ ಸಂಬಂಧವೇ ಇರುವುದಿಲ್ಲ. ಮನೆಗೆ ಜೀವಂತಿಕೆ ನೀಡುವ ಉದ್ದೇಶದಿಂದಾಗಿ ನಾನು ಈ ಮನೆ ನಿರ್ಮಾಣ ಮಾಡುವ ಯೋಜನೆ ರೂಪಿಸಿದೆ ಅಂತಾರೆ ಅವರು.
20 ವರ್ಷದಿಂದ ನಿರ್ಮಾಣ: ಓಕಾ 2005ರಲ್ಲಿ ಈ ಮನೆ ನಿರ್ಮಾಣಕ್ಕೆ ಮುಂದಾದರೂ. ಆರಂಭದಲ್ಲಿ ಕೆಲವು ಸ್ನೇಹಿತರು ಸಹಾಯ ಮಾಡಿದರೂ ಬಳಿಕ ಸಂಪೂರ್ಣ ಕಟ್ಟಡವನ್ನು ಕೈಯಿಂದ ಅವರೇ ನಿರ್ಮಾಣ ಮಾಡಿದ್ದರು. ಮನೆಗೆ ಕಾಂಕ್ರೀಟ್ ಅನ್ನು ಕೂಡ ತಾವೇ ಸ್ವತಃ ಕಲಿಸಿದ್ದಾಗಿ ಹೇಳಿದ ಅವರು, 200 ವರ್ಷಗಳ ಕಾಲ ಈ ಮನೆ ಇರಲಿದೆ ಎಂಬ ಮಾತು ಆಡುತ್ತಾರೆ.