ಕರ್ನಾಟಕ

karnataka

ETV Bharat / international

ಲಾಹೋರ್​ ರ್‍ಯಾಲಿ ಮುಂದೂಡಿದ ತೆಹ್ರೀಕ್​ ಇ ಇನ್ಸಾಫ್​: ಕಾರಣ? - imran Khan PTI party - IMRAN KHAN PTI PARTY

ಸ್ಥಳೀಯ ಆಡಳಿತಗಾರರು ಅನುಮತಿ ನಿರಾಕರಿಸಿದ ಹಿನ್ನೆಲೆ ತೆಹ್ರೀಕ್​ ಇ ಇನ್ಸಾಫ್ ಪಕ್ಷ ಸಮಾವೇಶವನ್ನು ಮುಂಡೂಡಲು ನಿರ್ಧರಿಸಿದೆ.

agian-imran-khan-pti-postpones-rally-in-lahore
ಇಮ್ರಾನ್​ ಖಾನ್​ (ಸಂಗ್ರಹ ಚಿತ್ರ ANI)

By ANI

Published : Aug 26, 2024, 10:33 AM IST

ಇಸ್ಲಾಮಾಬಾದ್​: ಇಮ್ರಾನ್​ ಖಾನ್​ ಸ್ಥಾಪನೆ ಮಾಡಿದ್ದ ಪಾಕಿಸ್ತಾನ ತೆಹ್ರೀಕ್​ ಇ ಇನ್ಸಾಫ್​ ಆಗಸ್ಟ್​ 27ರಂದು ಲಾಹೋರ್​​ನಲ್ಲಿ ಹಮ್ಮಿಕೊಂಡಿದ್ದ ​ ಸಮಾವೇಶವನ್ನು ಆಡಳಿತಾತ್ಮಕ ಕಾರಣಗಳಿಂದ ಮುಂದೂಡಲಾಗಿದೆ ಎಂದು ಅಂತಾರಾಷ್ಟ್ರೀಯ ಮಾಧ್ಯಮವೊಂದು ವರದಿ ಮಾಡಿದೆ. ಈ ಸಮಾವೇಶಕ್ಕೆ ಸ್ಥಳೀಯ ಆಡಳಿತ ಅನುಮತಿ ನೀಡದ ಹಿನ್ನೆಲೆಯಲ್ಲಿ ಈ ಬೆಳವಣಿಗೆ ನಡೆದಿದೆ ಎಂದು ವರದಿಯೊಂದು ತಿಳಿಸಿದೆ.

ಈ ಕಾರಣಕ್ಕೆ ಸಮಾವೇಶ ಮುಂದೂಡಿಕೆ:ಸ್ಥಳೀಯ ಆಡಳಿತಗಾರರು ಅನುಮತಿ ನಿರಾಕರಿಸಿದ ಹಿನ್ನೆಲೆಯಲ್ಲಿ ಪಕ್ಷವೂ ಸಮಾವೇಶ ಮುಂದೂಡಲು ನಿರ್ಧರಿಸಿದೆ. ಸಮಾವೇಶ ಆಯೋಜನೆಗೆ ಸಂಬಂಧಿಸಿದ ಅಧಿಕಾರಿಗಳಿಂದ ಅನುಮತಿ ಸಿಗದ ಹಿನ್ನೆಲೆಯಲ್ಲಿ ಕಾರ್ಯಕ್ರಮವನ್ನು ಈಗ ರದ್ದು ಮಾಡಿ, ಮುಂದಿನ ದಿನದಲ್ಲಿ ಹಮ್ಮಿಕೊಳ್ಳಲು ನಿರ್ಧರಿಸಲಾಗಿದೆ ಎಂದು ಪಿಟಿಐ ಮಾಹಿತಿ ಕಾರ್ಯದರ್ಶಿ ಶೌಕತ್​ ಮೊಹಮ್ಮದ್​ ಬಸ್ರಾ ತಿಳಿಸಿದ್ದಾರೆ ಎಂದು ಎಆರ್​ವೈ ನ್ಯೂಸ್​ ವರದಿ ಮಾಡಿದೆ.

ಜೊತೆಗೆ ನ್ಯಾಯಾಲಯದ ಆದೇಶವನ್ನು ಅನುಸರಿಸಲು ವಿಫಲವಾದ ಹಿನ್ನೆಲೆ ಆಡಳಿತದ ವಿರುದ್ಧ ಮೊಕದ್ದಮೆ ಹೂಡಲಾಗುವುದು. ಪಿಟಿಐ ಮುಂದಿನ ದಿನದಲ್ಲಿ ಈ ರ್‍ಯಾಲಿಯನ್ನು ಮರುಯೋಜಿಸಲಿದ್ದು, ಸೆಪ್ಟೆಂಬರ್​ 8ರ ಬಳಿಕ ಈ ಸಮಾವೇಶ ನಡೆಸಲು ಅನಮತಿ ಕೋರುತ್ತೇವೆ ಎಂದರು.

ಪಿಟಿಐ ಇದೀಗ ಲಾಹೋರ್​ ರ್‍ಯಾಲಿಯನ್ನು ಮಾತ್ರ ಮುಂದೂಡಿಲ್ಲ. ಆಗಸ್ಟ್​ 22ರಂದು ನಿಗದಿಯಾಗಿದ್ದ ತರ್ನೊಲ್​ ಸಾರ್ವಜನಿಕ ಸಭೆ ಕೂಡ ಕೆಲವು ನಾಯಕರ ವಿವಾದದಿಂದ ಮುಂದೂಡಲಾಗಿತ್ತು. ಈ ಸಭೆ ಸಂಬಂಧ ಪಕ್ಷದ ನಾಯಕರು ಜೈಲಿನಲ್ಲಿರುವ ಇಮ್ರಾನ್​ ಖಾನ್​ ಅವರನ್ನು ಸಂಪರ್ಕಿಸಿಲ್ಲ ಎಂಬ ಆರೋಪ ಕೇಳಿ ಬಂದಿತ್ತು.

ಪಾಕ್​ ರಕ್ಷಣಾ ಸಚಿವರು ಹೇಳಿದ್ದಿಷ್ಟು?:ಭಾನುವಾರ ಈ ಕುರಿತು ಮಾತನಾಡಿದ ಪಾಕಿಸ್ತಾನ ರಕ್ಷಣಾ ಸಚಿವ ಕ್ವಾಜಾ ಅಸಿಫ್​, ರ್‍ಯಾಲಿ ಯಶಸ್ವಿಯಾಗುತ್ತದೆ ಎಂದು ಇಮ್ರಾನ್​ ಖಾನ್​ ನಂಬಿದ್ದರೆ, ಈ ಸಭೆ ರದ್ದಾಗುತ್ತಿರಲಿಲ್ಲ. ಮುಖ್ಯವಾದ ವಿಷಯ ಎಂದರೆ ಇಮ್ರಾನ್​ ನೇತೃತ್ವದ ಪಿಟಿಐ ಪಕ್ಷದ ಜನಪ್ರಿಯತೆ ಕುಗ್ಗುತ್ತಿದ್ದು, ರ್‍ಯಾಲಿಗಳು ರದ್ದಾಗುತ್ತಿವೆ. ಅಷ್ಟೇ ಅಲ್ಲ ಸುಳ್ಳು ನಿರೂಪಣೆ ಮೂಲಕ ತನ್ನ ಪಕ್ಷದ ವರ್ಚಸ್ಸು ಹೆಚ್ಚಿಸಿಕೊಳ್ಳಲು ಇಮ್ರಾನ್​ ಪಕ್ಷ ತಂತ್ರ ಮಾಡುತ್ತಿದೆ ಎಂದು ಆರೋಪಿಸಿದ್ದಾರೆ ಎಂದು ಜಿಯೋ ನ್ಯೂಸ್​ ವರದಿ ಮಾಡಿದೆ.

ಪಿಟಿಐ ನಾಯಕರಾದ ಗೋಹರ್ ಅಲಿ ಖಾನ್ ಮತ್ತು ಅಜಮ್ ಸ್ವಾತಿ ಅವರು ಅದೇ ದಿನ ನಿಗದಿಪಡಿಸಿದ ಖತ್ಮ್-ಇ-ನಬುವ್ವತ್ ನ ಪಾವಿತ್ರತೆ ಖಾತ್ರಿಪಡಿಸುವ ಆಗಸ್ಟ್​ 22ರ ರ್‍ಯಾಲಿ ಮುಂದೂಡಿಕೆ ಮಾಡಿದ್ದಾರೆ. ಈ ಮುಂದೂಡಿಕೆಯನ್ನು ಇಮ್ರಾನ್​ ಖಾನ್​ ಮತ್ತು ಅವರ ಅವರ ಸಹೋದರಿ ಪ್ರಶ್ನಿಸಿದ್ದಾರೆ ಎಂದು ತಿಳಿದು ಬಂದಿದೆ

ಇದನ್ನೂ ಓದಿ: ಪ್ರತ್ಯೇಕ ಅಪಘಾತ: ಪಾಕಿಸ್ತಾನದಲ್ಲಿ 36 ಜನರ ದಾರುಣ ಸಾವು

ABOUT THE AUTHOR

...view details