ಕರ್ನಾಟಕ

karnataka

ETV Bharat / international

ಪಾಕಿಸ್ತಾನದ ಕರಾಚಿಯಲ್ಲಿ ಜಪಾನಿಗರ ವಾಹನದ ಮೇಲೆ ಆತ್ಮಾಹುತಿ​ ದಾಳಿ: ಇಬ್ಬರ ಸಾವು - suicide bombing attempt in Pakistan - SUICIDE BOMBING ATTEMPT IN PAKISTAN

ಬುಲೆಟ್​ ಪ್ರೂಫ್​​ ವಾಹನದಲ್ಲಿ ಪ್ರಯಾಣಿಸುತ್ತಿದ್ದ ಜಪಾನಿಗರು ಅದೃಷ್ಟವಶಾತ್​ ಪಾರಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

http://10.10.50.85:6060/reg-lowres/19-April-2024/karachi-3_1904newsroom_1713511119_986.jpg
http://10.10.50.85:6060/reg-lowres/19-April-2024/karachi-3_1904newsroom_1713511119_986.jpg

By PTI

Published : Apr 19, 2024, 1:53 PM IST

ಕರಾಚಿ, ಪಾಕಿಸ್ತಾನ: ಜಪಾನ್​ ಬೆಂಗಾವಲು ವಾಹನವನ್ನು ಗುರಿಯಾಗಿಸಿ ನಡೆಸಿದ ಆತ್ಮಾಹುತಿ​ ಬಾಂಬ್​ ದಾಳಿಯಲ್ಲಿ ಇಬ್ಬರು ಸಾವನ್ನಪ್ಪಿರುವ ಘಟನೆ ಪಾಕಿಸ್ತಾನದ ಸಿಂಧ್​ ಪ್ರಾಂತ್ಯದಲ್ಲಿ ನಡೆದಿದೆ. ಘಟನೆಯಲ್ಲಿ ಅದೃಷ್ಟವಶಾತ್​​ ಐವರು ಜಪಾನಿ ಪ್ರಜೆಗಳು ಪಾರಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಪೂರ್ವ ಡಿಐಜಿ ಅಜ್ಫಾರ್​​​ ಮಹೆಸರ್​​ ಘಟನೆ ಕುರಿತು ಮಾತನಾಡಿದ್ದು, ಜಪಾನಿ ಪ್ರಜೆಗಳಿದ್ದ ವ್ಯಾನ್​ಗೆ ಉಗ್ರಗಾಮಿ ಮೋಟರ್​ಬೈಕ್​ ಮೂಲಕ ಗುದ್ದಿದ್ದಾನೆ. ಲಂಧಿಯ ಮುರ್ಜಾಜ್​ ಛೋರ್ಂಗಿಯ ಸಮೀಪದ ಪಾಕಿಸ್ತಾನ್​ ಸುಜುಕಿ ಮೋಟರ್ಸ್​​ನಲ್ಲಿ ಈ ಜಪಾನಿ ಪ್ರಜೆಗಳು ಕಾರ್ಯ ನಿರ್ವಹಿಸುತ್ತಿದ್ದರು. ಘಟನೆಯಲ್ಲಿ ಐದು ಜಪಾನಿಗರು ಸುರಕ್ಷಿತವಾಗಿದ್ದು, ಅವರ ರಕ್ಷಣೆ ನಡೆಸುತ್ತಿದ್ದ ಖಾಸಗಿ ಸೆಕ್ಯೂರಿಟಿ ಗಾರ್ಡ್​​​ ಗಾಯಗೊಂಡಿದ್ದಾರೆ. ಭಯೋತ್ಪಾದಕ ವಾಹನದ ಮುಂಭಾಗದಿಂದ ಗನ್​ ತೆಗೆದು ದಾಳಿ ನಡೆಸಲು ಮುಂದಾದ ವೇಳೆ ಪೊಲೀಸ್ ಭದ್ರತಾ ಸಿಬ್ಬಂದಿ ಫೈರಿಂಗ್​ ನಡೆಸಿ ಕೊಂದಿದ್ದಾರೆ.

ಸಿಟಿಡಿ ಡಿಐಜಿ ಆಸಿಫ್​​ ಐಜಾಜ್​ ಶೇಖ್​ ಮಾತನಾಡಿ, ಜಪಾನಿ ಪ್ರಜೆಗಳು ಇಬ್ಬರು ಸೆಕ್ಯೂರಿಟಿ ಗಾರ್ಡ್​​ಗಳೊಂದಿಗೆ ವ್ಯಾನ್​ನಲ್ಲಿ ಪ್ರಯಾಣಿಸುವಾಗ ಉಗ್ರಗಾಮಿಗಳು ವ್ಯಾನ್​ ಮೇಲೆ ದಾಳಿ ನಡೆಸಿದ್ದಾರೆ. ಸೆಕ್ಯೂರಿಟಿ ಗಾರ್ಡ್​​ ಒಬ್ಬ ಉಗ್ರಗಾಮಿಯನ್ನು ಕೊಂದಿದ್ದು, ಮತ್ತೊಬ್ಬ ಉಗ್ರನಿಗಾಗಿ ವ್ಯಾನ್​ನ ಸಮೀಪ ಬರುವಾಗ ತನ್ನನ್ನು ತಾನೇ ಸ್ಪೋಟಿಸಿಕೊಂಡು ಸಾವನ್ನಪ್ಪಿದ್ದಾನೆ ಎಂದಿದ್ದಾರೆ.

ಘಟನೆಯ ದಾಳಿಯ ಹೊಣೆಯನ್ನು ಇದುವರೆಗೆ ಯಾರು ಹೊತ್ತಿಲ್ಲ. ಜಪಾನಿಗರು ಪ್ರಯಾಣಿಸುತ್ತಿದ್ದ ವ್ಯಾನ್​ ಬುಲೆಟ್​ ಪ್ರೂಫ್​ ಹೊಂದಿತ್ತು ಎಂದು ವರದಿಯಲ್ಲಿ ತಿಳಿಸಲಾಗಿದೆ. ಘಟನೆಯಲ್ಲಿ ಗಾಯಗೊಂಡ ಇಬ್ಬರು ಸೆಕ್ಯೂರಿಟಿ ಗಾರ್ಡ್​ ಮತ್ತು ದಾರಿಹೋಕನೊಬ್ಬ ಗಾಯಗೊಂಡಿದ್ದು, ಅವರನ್ನು ಜಿನ್ಹಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಇದರಲ್ಲಿ ಇಬ್ಬರ ಪರಿಸ್ಥಿತಿ ಗಂಭೀರವಾಗಿದೆ. ಯಾವುದೇ ವಿದೇಶಿಗರನ್ನು ಚಿಕಿತ್ಸೆಗೆ ಕರೆ ತಂದಿಲ್ಲ ಎಂದು ಆಸ್ಪತ್ರೆ ಅಧಿಕಾರಿಗಳು ತಿಳಿಸಿದೆ.

ಘಟನೆ ಕುರಿತು ಸಿಂದ್​ ಸಾರಿಗೆ ಸಚಿವ ಶರ್ಜೀಲ್​ ಇನಾಂ ಮೆಮೊನ್​ ಖಂಡನೆ ವ್ಯಕ್ತಪಡಿಸಿದ್ದಾರೆ. ಈ ಘಟನೆಯ ಉದ್ದೇಶವೇನು, ಈ ಘಟನೆ ಹಿಂದಿರುವ ಮಾಸ್ಟರ್​ಮೈಡ್​ ಯಾರು ಎಂಬುದನ್ನು ಕಾನೂನು ಕಾರಿ ಅಧಿಕಾರಿಗಳು ಪತ್ತೆ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.

ಮಾರ್ಚ್ 26ರಂದು ಖೈಬರ್ ಪಖ್ತುಂಖ್ವಾ ಪ್ರಾಂತ್ಯದಲ್ಲಿ ನಡೆದ ಪ್ರಮುಖ ಭಯೋತ್ಪಾದಕ ದಾಳಿಯಲ್ಲಿ ಮಹಿಳೆ ಮತ್ತು ಪಾಕಿಸ್ತಾನದ ಚಾಲಕ ಸೇರಿದಂತೆ ಐದು ಚೀನಿ ಪ್ರಜೆಗಳು ಮೃತಪಟ್ಟಿದ್ದರು. ಚೀನಾ ಪಾಕಿಸ್ತಾನ ಎಕಾನಾಮಿಕ್​ ಕಾರಿಡಾರ್​ (ಸಿಪಿಇಸಿ) ಸಂಬಂಧ ಕಾರ್ಯ ನಿರ್ವಹಿಸುತ್ತಿದ್ದ ಚೀನಾ ಪ್ರಜೆಗಳ ಮೇಲೆ ಸಣ್ಣ ಪ್ರತ್ಯೇಕ ಗುಂಪು ಮತ್ತು ತೆಹರಿಕ್​- ಇ- ತಾಲೀಬಾನ್​ ದಾಳಿ ನಡೆಸಿತು. (ಪಿಟಿಐ)

ಇದನ್ನೂ ಓದಿ: ಆತ್ಮಾಹುತಿ ದಾಳಿ: ಜೀವಭಯದಿಂದ ಪಾಕಿಸ್ತಾನ ತೊರೆಯಲು ಮುಂದಾದ ಚೀನಿ ಎಂಜಿನಿಯರ್​ಗಳು

ABOUT THE AUTHOR

...view details