ನ್ಯೂಯಾರ್ಕ್:ಅಮೆರಿಕದ ಪ್ರಮುಖ ನಗರನ್ಯೂಯಾರ್ಕ್ ಹಾಗೂ ಫಿಲಿಡೆಲ್ಫಿಯಾದಲ್ಲಿ ಶುಕ್ರವಾರ ರಾತ್ರಿ 4.8 ಪ್ರಾಥಮಿಕ ತೀವ್ರತೆಯ ಭೂಕಂಪನ ಸಂಭವಿಸಿದೆ ಎಂದು ಅಮೆರಿಕ ಬಯೋಲಾಜಿಕಲ್ ಸರ್ವೇ ಹೇಳಿದೆ. ಆದರೆ ಯಾವುದೇ ಸಾವು- ನೋವು, ಹಾನಿಯಾಗಿರುವ ಆಗಿರುವ ಬಗ್ಗೆ ವರದಿಯಾಗಿಲ್ಲ.
ನ್ಯೂಜೆರ್ಸಿಯ ವೈಟ್ಹೌಸ್ ನಿಲ್ದಾಣದ ಬಳಿ ಅಂದರೆ ನ್ಯೂಯಾರ್ಕ್ ನಗರದ ಪಶ್ಚಿಮಕ್ಕೆ 45 ಮೈಲಿಗಳು ಹಾಗೂ ಫಿಲಿಡೆಲ್ಫಿಯಾದಿಂದ ಉತ್ತರಕ್ಕೆ 50 ಮೈಲುಗಳಷ್ಟು ದೂರದಲ್ಲಿ ಭೂಕಂಪನವಾಗಿದೆ. ಈಶಾನ್ಯ ಅಮೆರಿಕದಾದ್ಯಂತ ಗಗನಚುಂಬಿ ಕಟ್ಟಡಗಳು ಹಾಗೂ ಉಪನಗರಗಳು ಭೂಕಂಪನಕ್ಕೆ ಅಲುಗಾಡಿದ್ದು, ಜನರನ್ನು ಬೆಚ್ಚಿಬೀಳಿಸಿದೆ. ಬ್ರೂಕ್ಲಿನ್ನಲ್ಲಿನ ಕಟ್ಟಡಗಳು ಅಲುಗಾಡಿವೆ ಎಂದು ವರದಿಯಾಗಿದೆ.
ನ್ಯಾಯಾರ್ಕ್ನಲ್ಲಿರುವ ವಿಶ್ವಸಂಸ್ಥೆಯ ಪ್ರಧಾನ ಕಚೇರಿಯಲ್ಲಿ, ಗಾಜಾದ ಪರಿಸ್ಥಿತಿಯ ಕುರಿತು ಭದ್ರತಾ ಮಂಡಳಿಯ ಸಭೆ ನಡೆಯುತ್ತಿತ್ತು. ಈ ವೇಳೆ ಭೂಕಂಪನವಾದ ಕಾರಣ, ಕೆಲಹೊತ್ತು ತಾತ್ಕಾಲಿಕಾಗಿ ಸಭೆಗೆ ವಿರಾಮ ನೀಡಲಾಯಿತು.
ಬಾಲ್ಟಿಮೋರ್ನಿಂದ ಬೋಸ್ಟನ್ ಹಾಗೂ ಅದರಾಚೆಗಿನ ಜನರು ನೆಲ ಅಲುಗಾಡುತ್ತಿದ್ದ ಬಗ್ಗೆ ಅನುಭವ ಹಂಚಿಕೊಂಡಿರುವುದು ಸ್ಥಳೀಯ ಮಾಧ್ಯಮಗಳಲ್ಲಿ ವರದಿಯಾಗಿದೆ. ಗಂಭೀರ ಹಾನಿಯ ಬಗ್ಗೆ ತಕ್ಷಣದ ವರದಿಗಳಿಲ್ಲದಿದ್ದರೂ, ಅಧಿಕಾರಿಗಳು ಸೇತುವೆಗಳು ಹಾಗೂ ಕೆಲವು ಪ್ರಮುಖ ಕಟ್ಟಡಗಳ ಬಗ್ಗೆ ಪರಿಶೀಲನೆ ನಡೆಸುತ್ತಿದ್ದಾರೆ. ಇದೇ ವೇಳೆ, ಕೆಲವು ವಿಮಾನಗಳನ್ನು ವಿಳಂಬಗೊಳಿಸಿರುವುದಲ್ಲದೆ, ಬೇರೆ ನಿಲ್ದಾಣಗಳಿಗೆ ತಿರುಗಿಸಲಾಯಿತು. ಆಮ್ಟ್ರಾಕ್ ಈಶಾನ್ಯ ಕಾರಿಡಾರ್ನಾದ್ಯಂತ ರೈಲುಗಳನ್ನೂ ತಡೆ ಹಿಡಿಯಲಾಯಿತು.