ಕರ್ನಾಟಕ

karnataka

ETV Bharat / international

ಗಾಜಾ ಪಟ್ಟಿಯಲ್ಲಿ ಇಸ್ರೇಲ್​ನಿಂದ ರಾತ್ರೋರಾತ್ರಿ ದಾಳಿ: 36 ಪ್ಯಾಲೆಸ್ಟೀನಿಯರು ಸಾವು - Israeli strikes across Gaza - ISRAELI STRIKES ACROSS GAZA

ಗಾಜಾ ಪಟ್ಟಿಯಲ್ಲಿ ಇಸ್ರೇಲ್​ನಿಂದ ಭಾನುವಾರ ರಾತ್ರೋರಾತ್ರಿ ನಡೆದ ದಾಳಿ: 36 ಪ್ಯಾಲೆಸ್ಟೀನಿಯರು ಸಾವು

Attack in Gaza by Israeli forces  Israel Vs Hamas  Israel Vs Hamas War  36 Palestinians killed
ಗಾಜಾ ಪಟ್ಟಿಯಲ್ಲಿ ಇಸ್ರೇಲ್​ನಿಂದ ರಾತ್ರೋರಾತ್ರಿ ದಾಳಿ: 36 ಪ್ಯಾಲೆಸ್ಟೀನಿಯರು ಸಾವು

By ETV Bharat Karnataka Team

Published : Apr 1, 2024, 11:09 AM IST

ಗಾಜಾ:ಗಾಜಾ ಪಟ್ಟಿಯಲ್ಲಿ ರಾತ್ರೋರಾತ್ರಿ ನಡೆದ ಇಸ್ರೇಲ್​ ನಡೆಸಿದ ದಾಳಿಯಲ್ಲಿ ಕನಿಷ್ಠ 36 ಪ್ಯಾಲೆಸ್ಟೀನಿಯನ್ನರು ಮೃತಪಟ್ಟಿದ್ದಾರೆ ಮತ್ತು 12ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎಂದು ಪ್ಯಾಲೇಸ್ಟಿನಿಯನ್ ಮೂಲಗಳು ತಿಳಿಸಿವೆ.

ಖಾನ್ ಯೂನಿಸ್‌ನ ಪೂರ್ವದಲ್ಲಿರುವ ಬನಿ ಸುಹೈಲಾ ಪಟ್ಟಣದಲ್ಲಿ, ಪ್ಯಾಲೆಸ್ಟೈನ್ ಗುಂಪನ್ನು ಗುರಿಯಾಗಿಸಿಕೊಂಡು ಇಸ್ರೇಲಿ ನಡೆಸಿದ ಡ್ರೋನ್ ದಾಳಿಯಲ್ಲಿ ಭಾನುವಾರ ಕನಿಷ್ಠ 11 ಮಂದಿ ಸಾವನ್ನಪ್ಪಿದ್ದರು. ಹಲವು ಜನರು ಗಾಯಗೊಂಡಿದ್ದರು ಎಂದು ಕ್ಸಿನ್ಹುವಾ ಸುದ್ದಿ ಸಂಸ್ಥೆ ವರದಿ ಮಾಡಿದೆ.

ಖಾನ್ ಯೂನಿಸ್‌ನ ಪಶ್ಚಿಮದಲ್ಲಿರುವ ಅಲ್ - ಮವಾಸಿ ಪ್ರದೇಶದ ವಸತಿ ಗೃಹವನ್ನು ಗುರಿಯಾಗಿಸಿಕೊಂಡು ಇಸ್ರೇಲ್​ ಸೇನೆಯು ನಡೆಸಿದ ದಾಳಿಯಲ್ಲಿ ಪ್ಯಾಲೇಸ್ಟಿನಿಯನ್ ಮಹಿಳೆ ಮತ್ತು ಆಕೆಯ ಮಗು ಸಾವನ್ನಪ್ಪಿದ್ದಾರೆ ಎಂದು ಮೂಲಗಳು ಭಾನುವಾರ ಕ್ಸಿನ್ಹುವಾ ಸುದ್ದಿ ಸಂಸ್ಥೆಗೆ ತಿಳಿಸಿವೆ.

ಸಹಾಯಕ್ಕಾಗಿ ಕಾಯುತ್ತಿದ್ದವರ ಮೇಲೆ ಬಾಂಬ್​ ದಾಳಿ:ಉತ್ತರ ಗಾಜಾದಲ್ಲಿ, ಗಾಜಾ ನಗರದ ದಕ್ಷಿಣದಲ್ಲಿರುವ ಅಲ್-ಜೈಟೌನ್ ನೆರೆಹೊರೆಯಲ್ಲಿರುವ ಕುವೈತ್ ವೃತ್ತದಲ್ಲಿ ಸಹಾಯಕ್ಕಾಗಿ ಕಾಯುತ್ತಿದ್ದ ಪ್ಯಾಲೆಸ್ಟೀನಿಯನ್ನರ ಮೇಲೆ ಶನಿವಾರ ರಾತ್ರಿ ಇಸ್ರೇಲ್​ನಿಂದ ನಡೆಸಿದ ಬಾಂಬ್ ದಾಳಿಯಲ್ಲಿ 17 ಪ್ಯಾಲೆಸ್ಟೀನಿಯಾದವರು ಮೃತಪಟ್ಟಿದ್ದರು ಮತ್ತು ಕನಿಷ್ಠ 30 ಮಂದಿ ಗಾಯಗೊಂಡಿದ್ದರು ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.

ಪ್ಯಾಲೆಸ್ಟೈನ್​​​ ನಿರಾಶ್ರಿತರ ಶಿಬಿರ ದಾಳಿ:ಸೆಂಟ್ರಲ್ ಗಾಜಾ ಪಟ್ಟಿಯಲ್ಲಿರುವ ಮಘಜಿ ಪ್ಯಾಲೆಸ್ಟೈನ್​ ನಿರಾಶ್ರಿತರ ಶಿಬಿರ, ವಸತಿ ಗೃಹದ ಮೇಲೆ ವಿಮಾನವೊಂದು ಬಾಂಬ್ ದಾಳಿ ನಡೆಸಿದ್ದರಿಂದ ಕನಿಷ್ಠ ಆರು ಜನರು ಸಾವನ್ನಪ್ಪಿದ್ದಾರೆ. ಶಿಬಿರದಲ್ಲಿನ ಅವಶೇಷಗಳಡಿ ಶವಗಳು ಸಿಲುಕಿಕೊಂಡಿದ್ದವು. ಆಂಬ್ಯುಲೆನ್ಸ್ ಸಿಬ್ಬಂದಿ ಮತ್ತು ನಾಗರಿಕರು, ಗಾಯಗೊಂಡಿದ್ದ ನಿವಾಸಿಗಳನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದ್ದರು.

ಪ್ಯಾಲೇಸ್ಟಿನಿಯನ್ ಭದ್ರತಾ ಮೂಲಗಳ ಪ್ರಕಾರ, ಇಸ್ರೇಲ್​ ಪಡೆಗಳು ಸೆಂಟ್ರಲ್ ಗಾಜಾ ಪಟ್ಟಿಯಲ್ಲಿರುವ ಡೀರ್ ಅಲ್ - ಬಲಾಹ್ ನಗರದ ಹೊರವಲಯದಲ್ಲಿ ವೈಮಾನಿಕ ದಾಳಿ ಮತ್ತು ತೀವ್ರವಾದ ಫಿರಂಗಿ ಶೆಲ್ ದಾಳಿ ಆರಂಭಿಸಿವೆ. ಜೊತೆಗೆ ಅಲ್-ಬರಾಕಾ ಪ್ರದೇಶದಲ್ಲೂ ಇಸ್ರೇಲ್​ ಪಡೆಗಳು ಹಲವಾರು ಗಂಟೆಗಳ ಕಾಲ ವೈಮಾನಿಕ, ಬಾಂಬ್ ದಾಳಿ ನಡೆಸಿದ್ದವು. ಈ ಸಮಯದಲ್ಲಿ ಮನೆಯೊಂದರಲ್ಲಿದ್ದ ಅಪರಿಚಿತ ವ್ಯಕ್ತಿಯೊಬ್ಬರನ್ನು ಬಂಧಿಸಲಾಗಿತ್ತು.

2023ರ ಅಕ್ಟೋಬರ್ 7ರಂದು ದಕ್ಷಿಣ ಇಸ್ರೇಲಿ ಗಡಿಯ ಮೂಲಕ ಹಮಾಸ್ ಆಕ್ರಮಣಕ್ಕೆ ಪ್ರತೀಕಾರ ತೀರಿಸಿಕೊಳ್ಳಲು ಇಸ್ರೇಲ್ ಪಡೆ ಗಾಜಾ ಪಟ್ಟಿಯಲ್ಲಿ ಹಮಾಸ್ ವಿರುದ್ಧ ದೊಡ್ಡ ಪ್ರಮಾಣದ ಆಕ್ರಮಣ ಪ್ರಾರಂಭಿಸಿತ್ತು. ಈ ಸಮಯದಲ್ಲಿ ಸುಮಾರು 1,200 ಜನರು ಸಾವನ್ನಪ್ಪಿದ್ದರು ಮತ್ತು 200ಕ್ಕೂ ಹೆಚ್ಚು ಜನರನ್ನು ಒತ್ತೆಯಾಳುಗಳಾಗಿ ತೆಗೆದುಕೊಳ್ಳಲಾಯಿತು.

ಇದನ್ನೂ ಓದಿ:ರಷ್ಯಾ ಕ್ಷಿಪಣಿ ದಾಳಿ: ಉಕ್ರೇನ್​ನ ಅತಿದೊಡ್ಡ ಉಷ್ಣ ವಿದ್ಯುತ್ ಸ್ಥಾವರ ಧ್ವಂಸ - Russia Ukraine War

ABOUT THE AUTHOR

...view details