ಕರ್ನಾಟಕ

karnataka

ETV Bharat / international

ಕೊಲೊರಾಡೋ ಸ್ಟೇಟ್ ಪಾರ್ಕ್‌ನಲ್ಲಿ ಗುಂಡಿನ ದಾಳಿ: ಇಬ್ಬರು ಸಾವು - 2 killed in shooting - 2 KILLED IN SHOOTING

ಅಮೆರಿಕದ ಕೊಲೊರಾಡೋದ ಪ್ಯೂಬ್ಲೋ ಕೌಂಟಿಯ ಲೇಕ್ ಪ್ಯೂಬ್ಲೋ ಸ್ಟೇಟ್ ಪಾರ್ಕ್‌ನ ಸೈಲ್‌ಬೋರ್ಡ್ ಬೀಚ್​​ನಲ್ಲಿ ಅಪರಿಚಿತರು ಗುಂಡಿನ ದಾಳಿ ನಡೆಸಿದ್ದು, ಈ ದಾಳಿಯಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ.

2 killed in shooting at state park in Colorado
ಕೊಲೊರಾಡೋದ ಸ್ಟೇಟ್ ಪಾರ್ಕ್‌ನಲ್ಲಿ ಗುಂಡಿನ ದಾಳಿ: ಇಬ್ಬರು ಸಾವು (IANS)

By ETV Bharat Karnataka Team

Published : Jun 22, 2024, 6:44 AM IST

ಲಾಸ್ ಏಂಜಲೀಸ್, ಅಮೆರಿಕ: ಇಲ್ಲಿನ ಕೊಲೊರಾಡೋ ರಾಜ್ಯದ ಉದ್ಯಾನದಲ್ಲಿ ನಡೆದ ಗುಂಡಿನ ದಾಳಿಯಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ ಎಂದು ಪೊಲೀಸ್​ ಅಧಿಕಾರಿಗಳು ತಿಳಿಸಿದ್ದಾರೆ. ಮಧ್ಯರಾತ್ರಿಯ ನಂತರ ಪ್ಯೂಬ್ಲೋ ಕೌಂಟಿಯ ಲೇಕ್ ಪ್ಯೂಬ್ಲೋ ಸ್ಟೇಟ್ ಪಾರ್ಕ್‌ನ ಸೈಲ್‌ಬೋರ್ಡ್ ಬೀಚ್ ಪ್ರದೇಶದಲ್ಲಿ ಈ ಘಟನೆ ಸಂಭವಿಸಿದೆ, ಅಣೆಕಟ್ಟಿಯಿಂದ ಈ ಪಾರ್ಕ್​ ಸ್ವಲ್ಪ ದೂರದಲ್ಲಿದೆ, ಅಲ್ಲಿ ಒಂದು ಗುಂಪು ಮೀನುಗಾರಿಕೆ ನಡೆಸುತ್ತಿತ್ತು ಎಂದು ರಾಜ್ಯ ಉದ್ಯಾನದ ವ್ಯವಸ್ಥೆ ನಿರ್ವಹಿಸುವ ಕೊಲೊರಾಡೋ ಪಾರ್ಕ್ಸ್ ಮತ್ತು ವೈಲ್ಡ್‌ಲೈಫ್ ತಿಳಿಸಿದೆ.

ಕೊಲೊರಾಡೋ ಪಾರ್ಕ್ಸ್ ಮತ್ತು ವೈಲ್ಡ್​​ಲೈಫ್​​​​​​​ನಿಂದ ಕೊಲರಾಡೋ ಪೊಲೀಸರಿಗೆ ಶುಕ್ರವಾರ ಸ್ಥಳೀಯ ಸಮಯ 12:45 ಕ್ಕೆ ಸಹಾಯಕ್ಕಾಗಿ ಕರೆ ಬಂದಿತ್ತು. ಈ ಕರೆ ಸ್ವೀಕರಿಸಿದ ಪೊಲೀಸರು ತಕ್ಷಣವೇ ಪ್ರತಿಕ್ರಿಯಿಸಿದರು ಎಂದು ಸಂಸ್ಥೆ ತನ್ನ ಹೇಳಿಕೆಯಲ್ಲಿ ತಿಳಿಸಿದೆ. ಈ ಕರೆ ಮೇರೆಗೆ ಸ್ಥಳಕ್ಕೆ ಧಾವಿಸಿದಾಗ ಇಬ್ಬರು ಗುಂಡಿನ ದಾಳಿಗೆ ಬಲಿಯಾಗಿರುವುದು ತಿಳಿದು ಬಂದಿದೆ. ಪೊಲೀಸರು ಸ್ಥಳಕ್ಕೆ ಧಾವಿಸುತ್ತಿದ್ದಂತೆ ಅಪರಿಚಿತ ಬಂದೂಕುದಾರಿಗಳು ಗುಂಡಿನ ದಾಳಿ ನಡೆಸಿ ಪರಾರಿಯಾಗಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ. ಪ್ಯೂಬ್ಲೋ ಕೌಂಟಿ ಪೊಲೀಸರು ಗುಂಡಿನ ದಾಳಿಯಲ್ಲಿ ಮೃತಪಟ್ಟ ಇಬ್ಬರ ಶವಗಳನ್ನು ವಶಕ್ಕೆ ಪಡೆದು, ಪೋಸ್ಟ್​ ಮಾರ್ಟಂಗಾಗಿ ಆಸ್ಪತ್ರೆಗೆ ರವಾನಿಸಿದ್ದಾರೆ. ಶವ ಪರೀಕ್ಷೆ ಬಳಿಕ ಸಂಬಂಧಪಟ್ಟವರಿಗೆ ಮೃತದೇಹಗಳನ್ನು ಹಸ್ತಾಂತರಿಸಲಿದ್ದಾರೆ.

ಅಪರಿಚಿತರು ನಡೆಸಿದ ಗುಂಡಿನ ದಾಳಿ ವೇಳೆ, ಕೊಲೆರಾಡೋ ಉದ್ಯಾನಕ್ಕೆ ಭೇಟಿ ನೀಡಿದ ಉಳಿದವರಿಗೆ ಯಾವುದೇ ಅಪಾಯ ಎದುರಾಗಿಲ್ಲ ಎಂದು ಲೇಕ್ ಪ್ಯೂಬ್ಲೋದಲ್ಲಿ ಪಾರ್ಕ್ ಮ್ಯಾನೇಜರ್ ಜೋ ಸ್ಟಾಡ್ಟರ್ಮನ್ ತಿಳಿಸಿದ್ದಾರೆ. ಈ ಘಟನೆಗೆ ಸಂಬಂಧಿಸಿದಂತೆ ಇದುವರೆಗೆ ಯಾವುದೇ ಶಂಕಿತರ ಬಂಧನವಾಗಿಲ್ಲ ಎಂದು ಅವರು ತಿಳಿಸಿದ್ದಾರೆ. ಪೊಲೀಸರು ಘಟನೆ ಬಗ್ಗೆ ತನಿಖೆ ಮುಂದುವರೆಸಿದ್ದಾರೆ.

ಅಮೆರಿಕದಲ್ಲಿ ಇಂತಹ ಘಟನೆಗಳು ಸಾಮಾನ್ಯವಾಗಿವೆ. ಅಪರಿಚಿತರು ಇದ್ದಕ್ಕಿದ್ದಂತೆ ಗುಂಡಿನದಾಳಿ ನಡೆಸಿ ಅಮಾಯಕರನ್ನು ಕೊಲ್ಲುವ ಇಂತಹ ಘಟನೆಗಳು ಅಮೆರಿಕದಿಂದ ವರದಿಯಾಗುತ್ತಲೇ ಇರುತ್ತವೆ. ಈ ಬಗ್ಗೆ ಅಮೆರಿಕ ಅಧ್ಯಕ್ಷರು ಕಳವಳ ವ್ಯಕ್ತಪಡಿಸುತ್ತಲೇ ಇರುತ್ತಾರೆ. ಅಲ್ಲಿನ ಕೋರ್ಟ್​ಗಳು ತ್ವರಿತ ವಿಚಾರಣೆ ನಡೆಸಿ ಶಿಕ್ಷೆ ವಿಧಿಸುತ್ತಿದ್ದರು. ಇಂತಹ ಹೀನ ಕೃತ್ಯಗಳ ಮಾತ್ರ ನಿಂತಿಲ್ಲ

ಇದನ್ನು ಓದಿ:ತಮಿಳುನಾಡು ಕಳ್ಳಭಟ್ಟಿ ದುರಂತ: ಇದುವರೆಗೆ 50 ಸಾವು, ಫೋಟೋ ಹಿಡಿದು ಪೋಷಕರಿಗಾಗಿ ಪುತ್ರಿಯ ಹುಡುಕಾಟ! - Tamil Nadu Hooch Tragedy

ABOUT THE AUTHOR

...view details