ಇಂದಿನ ದಿನಗಳಲ್ಲಿ ಮಕ್ಕಳು ಹೊರಗಿನ ಫಾಸ್ಟ್ ಫುಡ್ನಂತಹ ಆಹಾರವನ್ನು ಚೆನ್ನಾಗಿ ತಿನ್ನುತ್ತಾರೆ. ಆದರೆ ಮನೆಯಲ್ಲಿ ತಯಾರಿಸಿದ ಆಹಾರವನ್ನು ತಿನ್ನಲು ಅಸಡ್ಡೆ ತೋರುತ್ತಾರೆ. ಈ ಥರದ ಮನೆಯ ಆಹಾರವನ್ನು ತಿನ್ನುವ ಬದಲು ಹೊರಗಿನ ಆಹಾರವನ್ನೇ ಹೆಚ್ಚು ತಿನ್ನುವುದರಿಂದ ಮಕ್ಕಳಲ್ಲಿ ಅಪೌಷ್ಟಿಕತೆಗೆ ಕಾರಣವಾಗಬಹುದು. ಸರಿಯಾದ ಪೋಷಣೆ ದೊರೆಯದೇ ಭವಿಷ್ಯದಲ್ಲಿ ಗಂಭೀರ ಸಮಸ್ಯೆಯಾಗುವ ಸಾಧ್ಯತೆಗಳು ಜಾಸ್ತಿ ಎನ್ನುತ್ತಾರೆ ಛತ್ತೀಸ್ಗಢದ ಅಂಬಿಕಾಪುರ ವೈದ್ಯಕೀಯ ಕಾಲೇಜಿನ ಆಹಾರ ತಜ್ಞೆ ಸುಮನ್ ಸಿಂಗ್.
ಮಕ್ಕಳಿಗೆ ಇಷ್ಟವಾದ ಹೊರಗಿನ ಆಹಾರವನ್ನು ಮನೆಯಲ್ಲಿಯೇ ತಯಾರಿಸಿ ಮಕ್ಕಳಿಗೆ ನೀಡಬಹುದು. ಇದರಿಂದ ಪೌಷ್ಟಿಕ ಆಹಾರ ಮಕ್ಕಳ ಹೊಟ್ಟೆ ತುಂಬುವುದಲ್ಲದೇ, ಮಕ್ಕಳು ಮನೆಯಲ್ಲಿ ತಯಾರಿಸಿದ ಆಹಾರವನ್ನು ತಿನ್ನಲು ಆಸಕ್ತಿ ತೋರಿಸುತ್ತಾರೆ. ಹೊರಗಿನ ಜಂಕ್ ಫುಡ್ ಕಡೆಗೆ ಆಸಕ್ತಿ ಹೋಗುವುದು ಕಡಿಮೆಯಾಗುತ್ತದೆ ಎನ್ನುವ ಸಲಹೆ ನೀಡುತ್ತಾರೆ ಸುಮನ್. ಈ ಮಕ್ಕಳಿಗೆ ಹೊರಗಿನ ತಿಂಡಿಯನ್ನು, ಇಷ್ಟವಾಗುವಂತೆ ಯಾವ ರೀತಿ ಮಾಡಿಕೊಡಬಹುದು ಎನ್ನುವ ಸಲಹೆಗಳನ್ನು ಆಹಾರ ತಜ್ಞೆ ನೀಡಿದ್ದಾರೆ.
ಸಾಮಾನ್ಯ ಪರೋಟಾ ಬದಲಿಗೆ ತರಕಾರಿ, ಪನೀರ್ ಅಥವಾ ದಾಲ್ ಪರೋಟಾ ಮಾಡಿ: ಡಯಟಿಶಿಯನ್ ಸುಮನ್ ಸಿಂಗ್ ಹೇಳುವಂತೆ, "ಮನೆಯಲ್ಲಿರುವ ಸರಳವಾದ ದೈನಂದಿನ ಆಹಾರ ಪದಾರ್ಥಗಳನ್ನು ಆಕರ್ಷಕ ಮತ್ತು ರುಚಿಕರವಾಗಿ ಮಾಡಬಹುದು ಮತ್ತು ಮಕ್ಕಳಿಗೆ ನೀಡಬಹುದು. ಸಾಮಾನ್ಯ ಪರೋಟಾವನ್ನು ಸ್ಟಫ್ಡ್ ಪರೋಟಾ, ಪನೀರ್ ಪರೋಟಾಗಳಾಗಿ ಬದಲಾಯಿಸಬಹುದು. ಅನೇಕ ತರಕಾರಿಗಳನ್ನು ಮೊಸರಿನೊಂದಿಗೆ ಮಿಶ್ರಣ ಮಾಡಿ ನೀಡಿ, ಇದು ಮಗುವಿಗೆ ಹೆಚ್ಚು ಕ್ಯಾಲ್ಸಿಯಂ ಮತ್ತು ಪೋಷಕಾಂಶಗಳನ್ನು ನೀಡುತ್ತದೆ.
ಬಾದಾಮಿ ಅಥವಾ ಆ್ಯಪಲ್ ಶೇಕ್:ಆಹಾರದೊಂದಿಗೆ ಆರೋಗ್ಯಕರ ಶೇಕ್ ನೀಡಿ. ಬಾದಾಮಿ ಪುಡಿಯನ್ನು ಹಾಲಿನಲ್ಲಿ ಬೆರೆಸಿ ಬಾದಾಮಿ ಶೇಕ್ ತಯಾರಿಸಬೇಕು. ಸೇಬು ಶೇಕ್ ಮಾಡಿ ಕೊಡಿ. ಹಾಗೆಯೇ ಮಕ್ಕಳಿಗೆ ನಡುವೆ ಎಳನೀರು ಕೊಡಿ. ಎಳನೀರು ಬಹಳಷ್ಟು ಪೊಟ್ಯಾಶಿಯಮ್ ಹೊಂದಿರುತ್ತದೆ. ಮಕ್ಕಳ ಬೆಳವಣಿಗೆಗೆ ಇದು ಬಹಳ ಮುಖ್ಯ.
ವಿವಿಧ ಬಗೆಯ ಬೇಳೆಗಳನ್ನು ಅಡುಗೆಯಲ್ಲಿ ಬಳಸಿ: ತಿಂಡಿ ಸಮಯದಲ್ಲಿ ಮಕ್ಕಳಿಗೆ ಸೊಪ್ಪನ್ನು ನೀಡಿ. ಮೂಂಗ್ ಅಥವಾ ಕಡ್ಲೆ ಚಾಟ್ ಅನ್ನು ಮನೆಯಲ್ಲೇ ತಯಾರಿಸಿ ನೀಡಬಹುದು. ಮಕ್ಕಳಿಗೆ ಗೋಲ್ಗಪ್ಪ ಅಥವಾ ಚಾಟ್ ತುಂಬಾ ಇಷ್ಟ. ಅದನ್ನು ಮನೆಯಲ್ಲಿಯೇ ತಯಾರಿಸಿ, ನೀಡಿ. ಸುಲಭವಾಗಿ ಲಭ್ಯವಿರುವ ಪೇರಲ ಮತ್ತು ಪಪ್ಪಾಯಿ ಹಣ್ಣುಗನೀಡಿ. ಬ್ಲ್ಯಾಕ್‌ಬೆರಿ ಮತ್ತು ಲಿಚಿಗಳನ್ನು ಸಹ ಆಹಾರದಲ್ಲಿ ಸೇರಿಸಲು ಮರೆಯಬೇಡಿ.
ವೆಜ್ ಪುಲಾವ್, ಉಪ್ಪಿಟ್ಟು ಅಥವಾ ಮಿಲೆಟ್ಸ್ ಪುಲಾವ್: ವೆಜ್ ಉಪ್ಪಿಟ್ಟು ಅಥವಾ ವೆಜ್ ಪುಲಾವ್ ಮಾಡುವಾಗ ಅವುಗಳಿಗೆ ರಾಗಿಯನ್ನೂ ಸೇರಿಸುವುದರಿಂದ ಆರೋಗ್ಯಕ್ಕೆ ಉತ್ತಮ. ಕೊಡೋ ವೆಜ್ ಪುಲಾವ್ ತಿನ್ನಲು ತುಂಬಾ ರುಚಿಯಾಗಿರುತ್ತದೆ. ಇದನ್ನು ಮಾಡುವುದರಿಂದ, ಮಗುವಿಗೆ ಒಂದು ಊಟದಲ್ಲಿ ಬಹಳಷ್ಟು ವಿಟಮಿನ್ಗಳು ಹಾಗೂ ಖನಿಜಗಳು ಸಿಗುತ್ತವೆ. ಮಕ್ಕಳ ಆಹಾರದಲ್ಲಿ ಬೇಳೆಕಾಳುಗಳನ್ನು ಬಳಸುವುದನ್ನು ಮರೆಯಬೇಡಿ. ಬೇಳೆ ಕಾಳುಗಳ ದಾಲ್ ಜೊತೆಗೆ ಸಾಂಬಾರ್ ಕೂಡ ಉತ್ತಮ ಆಯ್ಕೆ. ಆದರೆ, ಅದರಲ್ಲಿ ಬೇಳೆಕಾಳುಗಳ ಜೊತೆಗೆ ಹಲವು ಬಗೆಯ ತರಕಾರಿಗಳು ಮತ್ತು ಇತರ ಮಸಾಲೆಗಳನ್ನು ಸೇರಿ ಮಾಡಿದರೆ, ಮಕ್ಕಳು ಹೆಚ್ಚು ಇಷ್ಟ ಪಡುತ್ತಾರೆ.
ಜಗಿದು ತಿನ್ನುವ ಅಭ್ಯಾಸ ಬೆಳೆಸಿಕೊಳ್ಳಿ: ಮಕ್ಕಳಿಗೆ ಹಣ್ಣಿನ ರಸದ ಬದಲು ಹಣ್ಣುಗಳನ್ನು ನೀಡಿ. ಇದರಿಂದ ಮಕ್ಕಳಲ್ಲಿ ಆಹಾರ ಜಗಿಯುವ ಅಭ್ಯಾಸ ಬೆಳೆಯುತ್ತದೆ. ಹಸಿ ತೆಂಗಿನಕಾಯಿಯನ್ನೂ ತಿನ್ನಲು ಕೊಡಿ. ಒಟ್ಟಿಗೆ ಊಟ ಮಾಡುವಂತೆ ಮಕ್ಕಳ ಮೇಲೆ ಒತ್ತಡ ಹೇರಬೇಡಿ. ಆಗೊಮ್ಮೆ ಈಗೊಮ್ಮೆ ಏನಾದರೂ ತಿನ್ನಲು ಕೊಡುತ್ತಿರಿ. ಊಟದಲ್ಲಿ ಹಣ್ಣುಗಳನ್ನು ಸೇರಿಸಲು ಮರೆಯದಿರಿ. ಇತ್ತೀಚಿನ ದಿನಗಳಲ್ಲಿ ಪೋಷಕರು ತಮ್ಮ ಮಕ್ಕಳಿಗೆ ಹಿಸುಕಿದ ಆಹಾರ ಅಥವಾ ಹಣ್ಣಿನ ರಸವನ್ನು ನೀಡುತ್ತಾರೆ. ಇದನ್ನು ಮಾಡಬೇಡಿ, ಅವುಗಳನ್ನು ಜಗಿದು ತಿನ್ನುವ ಅಭ್ಯಾಸವನ್ನು ಮಕ್ಕಳಲ್ಲಿ ಬೆಳೆಸಿ ಎಂದು ಆಹಾರ ತಜ್ಞೆ ಸುಮನ್ ಸಿಂಗ್ ಹೇಳುತ್ತಾರೆ.
ಇದನ್ನೂ ಓದಿ:ರೋಗ್ಯಯುತ ಎಂದು ಡಯಟ್ ಸಾಫ್ಟ್ ಡ್ರಿಂಕ್ಸ್ ಕುಡಿಯುತ್ತೀರಾ; ಹಾಗಾದ್ರೆ ಈಗಲೇ ಎಚ್ಚೆತ್ತುಕೊಳ್ಳಿ! - diet soft drink effect on health