ಹೈದರಾಬಾದ್: ಯಾವುದೇ ಸೌಂದರ್ಯವರ್ಧಕ ಉತ್ಪನ್ನಗಳಿಲ್ಲದೇ ಅಂದವಾಗಿ ಕಾಣಿಸುವುದು ಪ್ರತಿಯೊಬ್ಬರ ಇಚ್ಚೆ. ಈ ರೀತಿ ನೈಸರ್ಗಿಕ ತ್ವಚೆಯ ಸೌಂದರ್ಯದ ಆರೈಕೆ ಹಿಂದೆ ಕೆಲವು ವ್ಯಾಯಾಮಗಳು ಕೂಡ ಪರಿಣಾಮ ಬೀರುವುದು ಸುಳ್ಳಲ್ಲ. ಅದರಲ್ಲೂ ಕೆಲವು ಪ್ರಮುಖ ಆಸನ, ನಿರ್ದಿಷ್ಟ ಭಂಗಿ ಮತ್ತು ಪ್ರಾಣಾಯಾಮ ತಂತ್ರಗಳು ರಕ್ತ ಪರಿಚಲನೆ ಹೆಚ್ಚಿಸಿ, ಮುಖದ ಸ್ನಾಯುಗಳ ಅಭಿವೃದ್ದಿಗೆ ಸಹಾಯ ಮಾಡುತ್ತದೆ. ಇದರಿಂದ ಸೌಂದರ್ಯ ಕೂಡ ಹೆಚ್ಚುತ್ತದೆ.
ಈ ಆಸನಗಳು ಮುಖ್ಯ ರಕ್ತಪರಿಚಲನೆ ಹೆಚ್ಚಿಸುತ್ತದೆ. ಮುಖದಲ್ಲಿನ ಹೆಚ್ಚುವರಿ ಕೊಬ್ಬು ಕರಗಿಸಲು ಇದು ಸಹಾಯ ಮಾಡುತ್ತದೆ. ಇದರಿಂದ ದೇಹ ಕೂಡ ಉತ್ತಮ ಅಕಾರ ಪಡೆಯಲು ಸಾಧ್ಯವಾಗುತ್ತದೆ. ಯೋಗವೂ ಆರೋಗ್ಯದ ಜೊತೆಗೆ ಮುಖದ ಕಾಂತಿ ಹೆಚ್ಚಿಸುವಲ್ಲಿ ಉತ್ತಮ ಫಲಿತಾಂಶ ನೀಡುವುದರಲ್ಲಿ ಸಂಶಯವಿಲ್ಲ. ಮುಖದ ಸೌಂದರ್ಯದ ಕಾಂತಿ ಹೆಚ್ಚಿಸಲು ಸಹಾಯ ಮಾಡುವ ವ್ಯಾಯಾಮಗಳ ಪಟ್ಟಿ ಇಲ್ಲಿದೆ.
ಸಿದ್ದ ನಡಿಗೆ: ಇದು ಸಾಮಾನ್ಯದ ಬದಲಾಗಿ ಕೊಂಚ ವಿಭಿನ್ನ ದಾರಿಯ ನಡಿಗೆಯಾಗಿದೆ. ಈ ನಡಿಗೆಯನ್ನು 8ರ ಆಕೃತಿಯಲ್ಲಿ ಸಾಗಬೇಕು. 8 ನಂಬರ್ ಬರೆದು ಅಥವಾ ಅದನ್ನೇ ಕಲ್ಪಿಸಿ ಅದರ ಆಕೃತಿಯಲ್ಲಿ ನಡಿಗೆ ರೂಢಿಸಿಕೊಳ್ಳಬೇಕು. ಇದರಿಂದ ದೈಹಿಕ ಮತ್ತು ಮಾನಸಿಕ ಆರೋಗ್ಯ ಪ್ರಯೋಜನ ಪಡೆಯುವಲ್ಲಿ ಈ ಸಿದ್ದ ನಡಿಗೆ ಪ್ರಮುಖವಾಗಿದೆ. ನಿಯಮಿತವಾಗಿ ಈ ರೀತಿ ಬಿರುಸಾದ ನಡಿಗೆ ರೂಡಿಸಿಕೊಳ್ಳುವುದರಿಂದ ಇದು ಉತ್ತಮ ಫಲಿತಾಂಶ ನೀಡುತ್ತದೆ. ನಿತ್ಯ 20 ರಿಂದ 30 ನಿಮಿಷ ಈ ರೀತಿ ನಡೆಯುವುದರಿಂದ ಮಾನಸಿಕ ಮತ್ತು ದೈಹಿಕವಾಗಿ ಫಿಟ್ ಆಗಿರುವ ಜೊತೆ ಸೌಂದರ್ಯ ಕೂಡ ವೃದ್ಧಿಯಾಗುತ್ತದೆ.
ಪದ್ಮಾಸನ: ಸೊಂಟವನ್ನು ಬಾಗಿಸಿ ಎರಡು ಕೈಗಳಿಂದ ಕಾಲನ್ನು ಮುಟ್ಟುವ ಈ ಆಸನದಲ್ಲಿ ತಲೆ ನಿಮ್ಮ ಮಂಡಿಯನ್ನು ಮುಟ್ಟಬೇಕು. ದೀರ್ಘವಾಧಿ ಉಸಿರಾಟ ನಡೆಸಬೇಕು. ಇದು ಕೂಡ ಮುಖ, ಕತ್ತು ಸೇರಿದಂತೆ ಒಟ್ಟಾರೆ ದೇಹದಲ್ಲಿ ರಕ್ತ ಪರಿಚಲನೆಗೆ ಸುಧಾರಣೆ ಮಾಡುತ್ತದೆ.