ಕರ್ನಾಟಕ

karnataka

ETV Bharat / health

30 ದಾಟುತ್ತಿದ್ದಂತೆ ಮುಖದ ಮೇಲೆ ಶುರುವಾಯ್ತಾ ಸುಕ್ಕು; 20ರ ಹರೆಯದಂತೆ ಕಾಣಬೇಕಾದರೆ ಹೀಗೆ ಮಾಡಿ! - HOW TO KEEP SKING YOUNG - HOW TO KEEP SKING YOUNG

ಮುಖದಲ್ಲಿ ಉಂಟಾಗುವ ಈ ನೆರಿಗೆಯನ್ನು ತಡೆಗಟ್ಟಲು ಕೆಲವು ಸರಳ ಪರಿಹಾರ ಕ್ರಮಗಳು ಇಲ್ಲಿವೆ. ಸಂಪೂರ್ಣ ವಿವರಕ್ಕಾಗಿ ಇಲ್ಲಿ ನೋಡಿ.

wrinkles problems after 30 use these tips to young look skin
ತ್ವಚೆ ಆರೈಕೆ ಸಲಹೆ (ಈಟಿವಿ ಭಾರತ್​​)

By ETV Bharat Karnataka Team

Published : Jun 14, 2024, 1:22 PM IST

ಹೈದರಾಬಾದ್​: ಮಹಿಳೆಯರು ತಮ್ಮ ತ್ವಚೆ ಸೌಂದರ್ಯಯುತವಾಗಿ, ಹೊಳೆಯುವಂತೆ ಕಾಣಬೇಕು ಎಂದೇ ಇಚ್ಛಿಸುತ್ತಾರೆ. ಆದರೆ, ಕೆಲವರಲ್ಲಿ ಬಲು ಬೇಗ ನೆರಿಗೆಗಳು ಮೂಡಲಾರಂಭಿಸುತ್ತವೆ. ಇದನ್ನು ಮುಚ್ಚಲು ಕೆಲವೊಮ್ಮೆ ಮೇಕಪ್​ ಮೊರೆ ಹೋದರೆ, ಮತ್ತೆ ಕೆಲವು ಬಾರಿ ಹಾಗೇ ಬಿಟ್ಟು ಬಿಡುತ್ತಾರೆ. ಇಂತಹ ಸಮಸ್ಯೆಗಳನ್ನು ತಪ್ಪಿಸಲು ಕೆಲವು ಸರಳ ಪರಿಹಾರ ಕ್ರಮ ಇದೆ. ಮುಖದಲ್ಲಿ ಉಂಟಾಗುವ ಈ ನೆರಿಗೆಯನ್ನು ತಡೆಗಟ್ಟಲು ಇಲ್ಲಿದೆ ಟಿಪ್ಸ್​​

ಸತ್ತ ಚರ್ಮ ತೆಗೆಯಿರಿ​: ಎಕ್ಸ್​ಫೊಲಿಯೇಶ್​​ ಮೂಲಕ ತ್ವಚೆಯ ಸತ್ತ ಕೋಶ ತೆಗೆದು ಹಾಕುತ್ತದೆ. ಓಟ್ಸ್​ ಮತ್ತು ಹಾಲನ್ನು ಪೇಸ್ಟ್​ ಮಾಡಿ, ಮುಖಕ್ಕೆ ಹಚ್ಚಿ. ಬಳಿಕ 10 ನಿಮಿಷ ಮಸಾಜ್​ ಮಾಡಿ. ಇದಕ್ಕೆ ಹಬೆ ತೆಗೆದುಕೊಂಡರೆ, ತ್ವಚೆಯಲ್ಲಿರುವ ಸತ್ತ ಕೋಶವನ್ನು ತೆಗೆಯಬಹುದು ಎನ್ನುತ್ತಾರೆ ತಜ್ಞರು.

ಮಸಾಜ್​:ನಿತ್ಯ ಮುಖಕ್ಕೆ ಕೊಬ್ಬರಿ ಎಣ್ಣೆ, ಆಲಿವ್​ ಎಣ್ಣೆ ಅಥವಾ ಬಾದಾಮಿ ಎಣ್ಣೆಯಿಂದ ಮಸಾಜ್​ ಮಾಡಿ. ಈ ರೀತಿ ಮಾಡುವುದರಿಂದ ಸುಕ್ಕುಗಳಿಂದ ಚರ್ಮವನ್ನು ರಕ್ಷಣೆ ಮಾಡಬಹುದು.

ಮೊಟ್ಟೆ ಬಿಳಿ ಭಾಗದ ಮಾಸ್ಕ್​: ಅನೇಕ ಮಂದಿ ಸುಕ್ಕು ತಡೆಗೆ ಮಾರುಕಟ್ಟೆಯಲ್ಲಿ ಲಭ್ಯವಾಗುವ ಕ್ರೀಮ್​​ಗಳ ಬಳಕೆ ಮಾಡುತ್ತಾರೆ. ಇದರ ಬದಲು ಮೊಟ್ಟೆಯ ಬಿಳಿ ಭಾಗವನ್ನು ಮಾಸ್ಕ್​ ರೀತಿ ಹಚ್ಚುವುದರಿಂದ ಉತ್ತಮ ಪ್ರಯೋಜನ ಪಡೆಯಬಹುದು ಎನ್ನುತ್ತಾರೆ ತಜ್ಞರು. ಮೊಟ್ಟೆ ಬಿಳಿ ಭಾಗವನ್ನು ಚೆನ್ನಾಗಿ ಕಲಕಿ ಅದನ್ನು ಮುಖಕ್ಕೆ ಹಚ್ಚಿ, 15 ನಿಮಿಷದ ಬಳಿಕ ಬೆಚ್ಚಗಿನ ನೀರಿನಿಂದ ತೊಳೆಯಿರಿ.

ಆಲೋವೆರಾ ಜೆಲ್​ : ಲೊಳೆ ರಸದಲ್ಲಿ ವಿಟಮಿನ್​ ಮತ್ತು ಮಾಶ್ಚರೈಸರ್​ ಅಂಶಗಳಿದ್ದು, ತ್ವಚೆಗೆ ಉತ್ತಮವಾಗಿದೆ. ನಿತ್ಯ ಮುಖಕ್ಕೆ ಲೊಳೆರಸವನ್ನು ಹಚ್ಚುವುದರಿಂದ ಉತ್ತಮ ಫಲಿತಾಂಶವನ್ನು ಪಡೆಯಬಹುದು. 2019ರಲ್ಲಿ ಜರ್ನಲ್​ ಡರ್ಮಾಟಾಲಾಜಿಯಲ್ಲಿ ಪ್ರಕಟವಾದ ಅಧ್ಯಯನದ ಪ್ರಕಾರ, ದಿನಕ್ಕೆರಡು ಬಾರಿ ಆಲೋವೆರಾ ಜೆಲ್​ ಹಚ್ಚುವುದರಿಂದ ಮುಖ ಮತ್ತು ಕುತ್ತಿಗೆ ಸುಕ್ಕು ತಡೆಯಬಹುದಾಗಿದೆ. ಈ ಅಧ್ಯಯನದಲ್ಲಿ ಕೊರಿಯಾ ಯುನಿವರ್ಸಿಟಿ ಮೆಡಿಕಲ್​ ಕಾಲೇಜ್​ನ ಡಾ ಡಾನ್​ ಹೈನ್ ಕಿಮ್ ಕೂಡ ಭಾಗಿಯಾಗಿದ್ದಾರೆ. ಅವರು ಕೂಡ ಇದನ್ನೇ ಪ್ರತಿಪಾದಿಸಿದ್ದಾರೆ.

ಮುಖದ ವ್ಯಾಯಾಮ: ಮುಖ್ಯದ ವ್ಯಾಯಾಮ ಮಾಡುವುದರಿಂದ ಮುಖದ ಸ್ನಾಯುಗಳು ಬಿಗಿಯಾಗುತ್ತದೆ. ಇದರಿಂದ ಉತ್ತಮ ರಕ್ತ ಸಂಚಾರ ಕೂಡ ಆಗಿ, ಮುಖ ಯೌವನಯುತವಾಗಿ ಕಾಣುತ್ತದೆ. ಈ ಹಿನ್ನೆಲೆ ನಿತ್ಯ ಮುಖದ ವ್ಯಾಯಾಮ ಅಭ್ಯಾಸ ಮಾಡುವುದು ಸಹಾಯಕವಾಗಲಿದೆ.

ಇತರ ಸಲಹೆ:

  • ಪ್ರತಿನಿತ್ಯ ಮುಖವನ್ನು ಸೌತೆಕಾಯಿಯಿಂದ ಮಸಾಜ್​ ಮಾಡಿ
  • ಮುಖಕ್ಕೆ ಮೊಸರನ್ನು ಹಚ್ಚಿ, 15 ನಿಮಿಷದ ಬಳಿಕ ತೊಳೆಯಿರಿ
  • ಗ್ರೀನ್​ ಟೀ ಬ್ಯಾಗ್​ನಿಂದ ಮುಖವನ್ನು ಮಸಾಜ್​ ಮಾಡಿ
  • ಪ್ರತಿನಿತ್ಯ ದೇಹಕ್ಕೆ ಅನುಗುಣವಾಗಿ ಹೆಚ್ಚು ನೀರು ಸೇವನೆ, ತಾಜಾ ಹಣ್ಣು ಮತ್ತು ತರಕಾರಿ ಸೇವಿಸುವುದು ಅತ್ಯಗತ್ಯವಾಗಿದೆ.

ವಿಶೇಷ ಸೂಚನೆ:ಇಲ್ಲಿ ಎಲ್ಲ ಆರೋಗ್ಯ ಮಾಹಿತಿ ಮತ್ತು ಸಲಹೆಗಳು ನಿಮ್ಮ ತಿಳಿವಳಿಕೆಗಾಗಿ ಮಾತ್ರ. ವೈಜ್ಞಾನಿಕ ಸಂಶೋಧನೆ, ಅಧ್ಯಯನಗಳು, ವೃತ್ತಿಪರರ ಸಲಹೆಯನ್ನು ಆಧರಿಸಿ ನಾವು ಈ ಮಾಹಿತಿಯನ್ನು ಒದಗಿಸುತ್ತಿದ್ದೇವೆ. ಆದರೆ, ಇವುಗಳನ್ನು ಅನುಸರಿಸುವ ಮೊದಲು ಪರಿಣತರ ಸಲಹೆಯನ್ನು ತೆಗೆದುಕೊಳ್ಳುವುದು ಉತ್ತಮ.

ಇದನ್ನೂ ಓದಿ: ನಿಮ್ಮ ಆಹಾರದಲ್ಲಿ ಬ್ಲ್ಯಾಕ್​ ಸಾಲ್ಟ್ ಉಪಯೋಗಿಸುತ್ತೀರಾ?: ಅದರ ಪ್ರಯೋಜನಗಳೇನೆಂಬುದು ನಿಮಗೆ ಗೊತ್ತೇ

ABOUT THE AUTHOR

...view details