ಕರ್ನಾಟಕ

karnataka

ETV Bharat / health

ವಿಶ್ವ COPD ದಿನ: ಜಗತ್ತಿನಲ್ಲಿ ಶೇ 5ರಷ್ಟು ಸಾವುಗಳಿಗೆ ಕಾರಣ ಈ ಸಾಮಾನ್ಯ ಶ್ವಾಸಕೋಶದ ಕಾಯಿಲೆ - WORLD COPD DAY

ಒಂದು ಸಾಮಾನ್ಯ ಶ್ವಾಸಕೋಶದ ಕಾಯಿಲೆಯಾಗಿರುವ COPDಯನ್ನು ಎಂಫಿಸೆಮಾ ಅಥವಾ ದೀರ್ಘಕಾಲದ ಬ್ರಾಂಕೈಟಿಸ್ ಎಂದೂ ಕರೆಯಲಾಗುತ್ತದೆ. ವಿಶ್ವ COPD ದಿನವನ್ನು ನವೆಂಬರ್ ಮೂರನೇ ಬುಧವಾರದಂದು ಆಚರಿಸಲಾಗುತ್ತದೆ.

World COPD Day
ವಿಶ್ವ COPD ದಿನ (ETV Bharat)

By ETV Bharat Health Team

Published : Nov 20, 2024, 10:48 AM IST

ವಿಶ್ವ ಸಿಒಪಿಡಿ (Chronic Obstructive Pulmonary Disease) ದಿನವನ್ನು ಪ್ರತೀ ವರ್ಷ ನವೆಂಬರ್ ಮೂರನೇ ಬುಧವಾರ ಆಚರಿಸಲಾಗುತ್ತದೆ. ಈ ವರ್ಷ ನವೆಂಬರ್ 20ರಂದು ದಿನಾಚರಣೆ.

COPD ಎಂದರೇನು?:ದೀರ್ಘಕಾಲದ ಪ್ರತಿರೋಧಕ ಶ್ವಾಸಕೋಶದ ಕಾಯಿಲೆ (COPD) ಒಂದು ಸಾಮಾನ್ಯ ಶ್ವಾಸಕೋಶದ ಕಾಯಿಲೆಯಾಗಿದ್ದು, ನಿರ್ಬಂಧಿತ ಗಾಳಿಯ ಹರಿವು ಮತ್ತು ಉಸಿರಾಟದ ಸಮಸ್ಯೆಗಳನ್ನು ಉಂಟುಮಾಡುತ್ತದೆ. ಇದನ್ನು ಕೆಲವೊಮ್ಮೆ ಎಂಫಿಸೆಮಾ ಅಥವಾ ದೀರ್ಘಕಾಲದ ಬ್ರಾಂಕೈಟಿಸ್ ಎಂದೂ ಕರೆಯಲಾಗುತ್ತದೆ.

COPD ಇರುವವರಿಗೆ ಶ್ವಾಸಕೋಶಗಳಿಗೆ ಹಾನಿಯಾಗಬಹುದು ಅಥವಾ ಶ್ವಾಸಕೋಶ ಕಫದಿಂದ ಮುಚ್ಚಿಹೋಗುವ ಸಾಧ್ಯತೆಗಳಿವೆ. ಕೆಮ್ಮು, ಕೆಲವೊಮ್ಮೆ ಕಫ, ಉಸಿರಾಟದ ತೊಂದರೆ, ಉಬ್ಬಸ ಮತ್ತು ಸುಸ್ತು ಇದರ ರೋಗಲಕ್ಷಣಗಳು. ಧೂಮಪಾನ ಮತ್ತು ವಾಯುಮಾಲಿನ್ಯವು COPD ಬರಲು ಸಾಮಾನ್ಯ ಕಾರಣಗಳಾಗಿವೆ. COPD ಹೊಂದಿರುವ ಜನರಿಗೆ ಇತರ ಆರೋಗ್ಯ ಸಮಸ್ಯೆಗಳ ಅಪಾಯ ಹೆಚ್ಚಿರುತ್ತದೆ.

COPDಯನ್ನು ಗುಣಪಡಿಸಲು ಸಾಧ್ಯವಿಲ್ಲ. ಆದರೆ ಧೂಮಪಾನ ಮತ್ತು ವಾಯುಮಾಲಿನ್ಯಕ್ಕೆ ಒಡ್ಡಿಕೊಳ್ಳುವುದನ್ನು ತಪ್ಪಿಸಿದರೆ, ಮತ್ತು ಸೋಂಕುಗಳನ್ನು ತಡೆಗಟ್ಟಲು ಲಸಿಕೆಗಳನ್ನು ಪಡೆದಲ್ಲಿ ಅದರ ರೋಗಲಕ್ಷಣಗಳು ಸುಧಾರಿಸಬಹುದು. ಇದನ್ನು ಔಷಧಗಳು, ಆಮ್ಲಜನಕ ಮತ್ತು ಶ್ವಾಸಕೋಶದ ಆರೋಗ್ಯವನ್ನು ಕಾಪಾಡುವಂತಹ ವ್ಯಾಯಾಮಗಳನ್ನು ಮಾಡುವ ಮೂಲಕ ಇದಕ್ಕೆ ಚಿಕಿತ್ಸೆ ನೀಡಬಹುದು.

ದೀರ್ಘಕಾಲದ ಬ್ರಾಂಕೈಟಿಸ್:ಶ್ವಾಸಕೋಶಕ್ಕೆ ಗಾಳಿಯನ್ನು ಸಾಗಿಸುವ ಶ್ವಾಸನಾಳದ ಕೊಳವೆಗಳ ದೀರ್ಘಕಾಲದ ಉರಿಯೂತ ದೀರ್ಘಕಾಲದ ಬ್ರಾಂಕೈಟಿಸ್​ಗೆ ಕಾರಣವಾಗುತ್ತದೆ. ಉರಿಯೂತದಿಂದಾಗಿ ಹೆಚ್ಚು ಲೋಳೆ ಉತ್ಪಾದನೆಯಾಗುತ್ತದೆ. ಈ ಲೋಳೆ ಉಸಿರಾಟಕ್ಕೆ ತೊಂದರೆಯುಂಟು ಮಾಡುತ್ತದೆ. ಮತ್ತು ದೀರ್ಘಕಾಲದ ಕೆಮ್ಮಿಗೆ ಕಾರಣವಾಗುತ್ತದೆ. ದೀರ್ಘಕಾಲದ ಬ್ರಾಂಕೈಟಿಸ್ ಇರುವ ರೋಗಿಗಳು ಮತ್ತೆ ಮತ್ತೆ ಶ್ವಾಸಕೋಶದ ಸೋಂಕುಗಳಿಗೆ ಒಳಗಾಗುತ್ತಾರೆ. ಮತ್ತು ಆಗಾಗ್ಗೆ ಆರ್ದ್ರ ಕೆಮ್ಮು (Wet Cough) ಬರುತ್ತಲೇ ಇರುತ್ತದೆ.

ಶ್ವಾಸಕೋಶದ ಸಣ್ಣ ಗಾಳಿ ಚೀಲಗಳು ಅಥವಾ ಇಂಗಾಲದ ಡೈಆಕ್ಸೈಡ್ ಮತ್ತು ಆಮ್ಲಜನಕವನ್ನು ವಿನಿಮಯ ಮಾಡುವ "ಅಲ್ವಿಯೋಲಿ" ಹಾನಿಗೊಳಗಾದಾಗ ಎಂಫಿಸೆಮಾ ಬರುತ್ತದೆ. ಈ ಅಸ್ವಸ್ಥತೆ ಶ್ವಾಸಕೋಶದ ಆಮ್ಲಜನಕವನ್ನು ಸ್ವೀಕರಿಸುವ ಸಾಮರ್ಥ್ಯವನ್ನು ಕುಂಠಿತಗೊಳಿಸುತ್ತದೆ. ಇದು ಡಿಸ್ಪ್​ನಿಯಾ ಉಂಟುಮಾಡುತ್ತದೆ, ಅಂದರೆ ವಿಶೇಷವಾಗಿ ವ್ಯಾಯಾಮ ಮಾಡುವಾಗ ಗಾಳಿ ಕಡಿಮೆಯಾದಂತೆ, ಸರಿಯಾಗಿ, ವೇಗವಾಗಿ ಉಸಿರು ತೆಗೆದುಕೊಳ್ಳಲು ಕಷ್ಟವಾಗುವಂತೆ ಮಾಡುತ್ತದೆ. ವಿಶ್ರಾಂತಿ ಸಮಯದಲ್ಲಿಯೂ, ಅಡ್ವಾನ್ಸ್​ಡ್​ ಎಂಫಿಸೆಮಾ ಹೊಂದಿರುವ ವ್ಯಕ್ತಿಗಳು ಉಸಿರಾಟದ ತೊಂದರೆ ಅನುಭವಿಸಬಹುದು.

ಇತಿಹಾಸ:COPD, ಅದರ ಚಿಕಿತ್ಸೆ, ತಡೆಗಟ್ಟುವಿಕೆ ಮತ್ತು ಅದರ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ 1998ರಲ್ಲಿ ಸಮರ್ಪಿತ ವಿಜ್ಞಾನಿಗಳ ತಂಡವೊಂದು, ಗ್ಲೋಬಲ್ ಇನಿಶಿಯೇಟಿವ್ ಫಾರ್ ಕ್ರೋನಿಕ್ ಅಬ್​ಸ್ಟ್ರಕ್ಟಿವ್ ಲಂಗ್ ಡಿಸೀಸ್ (Global Initiative for Chronic Obstructive Lung Disease- GOLD) ಅನ್ನು ಸ್ಥಾಪಿಸುವಂತೆ ವಿಶ್ವ ಆರೋಗ್ಯ ಸಂಸ್ಥೆ ಮತ್ತು US ನ್ಯಾಷನಲ್ ಹಾರ್ಟ್, ಲಂಗ್ ಮತ್ತು ಬ್ಲಡ್ ಇನ್‌ಸ್ಟಿಟ್ಯೂಟ್​ಗೆ ಒತ್ತಡ ಹೇರಿತ್ತು. COPD ಬಗ್ಗೆ ಅರಿವು ಮೂಡಿಸುವುದು ಮತ್ತು ಅನಾರೋಗ್ಯದಿಂದ ಬಳಲುತ್ತಿರುವ ಲಕ್ಷಾಂತರ ಜನರಿಗೆ, ಅದರಿಂದ ಅಥವಾ ಅದರ ತೊಡಕುಗಳಿಂದ ಬೇಗನೆ ಸಾಯುವ ಜನರಿಗೆ ಸಹಾಯ ಮಾಡುವುದು GOLD ನ ಎರಡು ಪ್ರಮುಖ ಗುರಿಗಳಾಗಿವೆ.

2002 ರಲ್ಲಿ, ಮೊದಲ ಬಾರಿಗೆ ವಿಶ್ವ COPD ದಿನವನ್ನು ಆಚರಿಸಲಾಯಿತು. ಪ್ರತಿ ವರ್ಷ, 50 ದೇಶಗಳ ಸಂಘಟಕರು ಈವೆಂಟ್‌ನಲ್ಲಿ ಭಾಗವಹಿಸುತ್ತಾರೆ. WHO ನಂತಹ ಗುಂಪುಗಳ ಸಹಯೋಗದೊಂದಿಗೆ GOLD ವಿಶ್ವ COPD ದಿನವನ್ನು ಉತ್ತೇಜಿಸುತ್ತದೆ.

ರೋಗ ಲಕ್ಷಣಗಳು:COPD ಯ ಸಾಮಾನ್ಯ ಲಕ್ಷಣಗಳೆಂದರೆ ಉಸಿರಾಟದ ತೊಂದರೆ, ದೀರ್ಘಕಾಲದ ಕೆಮ್ಮು (ಕೆಲವೊಮ್ಮೆ ಕಫದೊಂದಿಗೆ) ಮತ್ತು ದಣಿದ ಭಾವನೆ. COPD ರೋಗಲಕ್ಷಣಗಳು ತ್ವರಿತವಾಗಿ ಉಲ್ಬಣವಾಗುತ್ತಾ ಹೋಗಬಹುದು. ಇವುಗಳನ್ನು ಫ್ಲೇರ್-ಅಪ್ ಎಂದು ಕರೆಯಲಾಗುತ್ತದೆ. ಇವುಗಳು ಸಾಮಾನ್ಯವಾಗಿ ಕೆಲವು ದಿನಗಳವರೆಗೆ ಮುಂದುವರಿಯಬಹುದು ಮತ್ತು ಆಗಾಗ್ಗೆ ಹೆಚ್ಚುವರಿ ಔಷಧದ ಅಗತ್ಯವಿರುತ್ತದೆ.

ಇವುಗಳೂ ಸೇರಿವೆ:

  • ಶ್ವಾಸಕೋಶದ ಸೋಂಕುಗಳು, ಜ್ವರ ಅಥವಾ ನ್ಯುಮೋನಿಯಾ
  • ಶ್ವಾಸಕೋಶದ ಕ್ಯಾನ್ಸರ್
  • ಹೃದಯದ ತೊಂದರೆಗಳು
  • ದುರ್ಬಲ ಸ್ನಾಯುಗಳು ಮತ್ತು ಮೂಳೆಗಳ ಸಡಿಲಿಕೆ
  • ಖಿನ್ನತೆ ಮತ್ತು ಆತಂಕ

ಕಾರಣಗಳು:

  • ಹಲವಾರು ವಿಷಯಗಳು ಶ್ವಾಸನಾಳ ಕಿರಿದಾಗಲು ಮತ್ತು COPD ಗೆ ಕಾರಣವಾಗಬಹುದು. ಶ್ವಾಸಕೋಶದ ಭಾಗಗಳ ನಾಶ, ಶ್ವಾಸನಾಳವನ್ನು ತಡೆಯುವ ಲೋಳೆ, ಮತ್ತು ಶ್ವಾಸನಾಳದ ಒಳಪದರದ ಉರಿಯೂತ ಮತ್ತು ಊತ ಉಂಟಾಗಬಹುದು.
  • ಅಪಾಯಕಾರಿ ಅಂಶಗಳ ಸಂಯೋಜನೆಯಿಂದ COPD ಕ್ರಮೇಣ ಬೆಳವಣಿಗೆಯಾಗುತ್ತದೆ
  • ಸಕ್ರಿಯ ಧೂಮಪಾನದಿಂದ ತಂಬಾಕು ಸೇವನೆ ಅಥವಾ ಧೂಮಪಾನ ಮಾಡವವರ ಬಳಿ ನಿಂತು ಸೇವಿಸುವ ಹೊಗೆ
  • ಧೂಳು, ಹೊಗೆ ಅಥವಾ ರಾಸಾಯನಿಕಗಳಿಗೆ ಒಡ್ಡುವುದು
  • ಒಳಾಂಗಣ ವಾಯು ಮಾಲಿನ್ಯ: ಬಯೋಮಾಸ್ ಇಂಧನ (ಮರ, ಪ್ರಾಣಿಗಳ ಸಗಣಿ, ಬೆಳೆ ಶೇಷ) ಅಥವಾ ಅಡುಗೆ ಮಾಡಲು ಬಳಸುವ ಕಲ್ಲಿದ್ದಲ ಹೊಗೆ
  • ಗರ್ಭಾಶಯದಲ್ಲಿರುವಾಗಿನ ಕಳಪೆ ಬೆಳವಣಿಗೆ, ಅವಧಿಪೂರ್ವ ಜನನ, ಆಗಾಗ್ಗೆ ಅಥವಾ ತೀವ್ರವಾದ ಉಸಿರಾಟದ ಸೋಂಕುಗಳನ್ನು ಬಾಲ್ಯದ ಕಳಪೆ ಜೀವನಶೈಲಿ ಗರಿಷ್ಠ ಶ್ವಾಸಕೋಶದ ಬೆಳವಣಿಗೆಯನ್ನು ತಡೆಯುತ್ತದೆ.
  • ಬಾಲ್ಯದಲ್ಲಿ ಆಸ್ತಮಾ
  • ಆಲ್ಫಾ-1 ಆಂಟಿಟ್ರಿಪ್ಸಿನ್ ಕೊರತೆ ಎಂಬ ಅಪರೂಪದ ಆನುವಂಶಿಕ ಸ್ಥಿತಿ, ಇದು ಚಿಕ್ಕ ವಯಸ್ಸಿನಲ್ಲಿ COPD ಗೆ ಕಾರಣವಾಗಬಹುದು.

ವಿಶ್ವ ಆರೋಗ್ಯ ಸಂಸ್ಥೆ ಅಂಕಿಅಂಶ:

  • 2021ರಲ್ಲಿ 3.5 ಮಿಲಿಯನ್ ಸಾವಿಗೆ ಕಾರಣವಾಗಿರುವ ಅಂದರೆ ಜಾಗತಿಕ ಸಾವುಗಳ ಸರಿಸುಮಾರು 5% ವನ್ನು ಆಕ್ರಮಿಸಿಕೊಂಡಿರುವ COPD, ವಿಶ್ವಾದ್ಯಂತ ಸಾವಿಗೆ ಕಾರಣವಾಗುತ್ತಿರುವ ನಾಲ್ಕನೇ ಪ್ರಮುಖ ಅಂಶವಾಗಿದೆ.
  • 70 ವರ್ಷಕ್ಕಿಂತ ಕಡಿಮೆ ವಯಸ್ಸಿನ COPD ಸಾವುಗಳಲ್ಲಿ ಸುಮಾರು 90% ಸಾವುಗಳು ಕಡಿಮೆ ಮತ್ತು ಮಧ್ಯಮ-ಆದಾಯದ ದೇಶಗಳಲ್ಲಿ (LMIC) ಸಂಭವಿಸುತ್ತವೆ.
  • COPD ವಿಶ್ವಾದ್ಯಂತ ಕಳಪೆ ಆರೋಗ್ಯಕ್ಕೆ ಎಂಟನೇ ಪ್ರಮುಖ ಕಾರಣವಾಗಿದೆ. (measured by disability-adjusted life years)
  • ಹೆಚ್ಚಿನ ಆದಾಯದ ದೇಶಗಳಲ್ಲಿ 70% ಕ್ಕಿಂತ ಹೆಚ್ಚು COPD ಪ್ರಕರಣಗಳಿಗೆ ತಂಬಾಕು ಧೂಮಪಾನವು ಕಾರಣವಾಗಿದೆ.
  • ಕಡಿಮೆ ಮತ್ತು ಮಧ್ಯಮ-ಆದಾಯದ ದೇಶಗಳಲ್ಲಿ 30-40% COPD ಪ್ರಕರಣಗಳಿಗೆ ತಂಬಾಕು ಧೂಮಪಾನ ಕಾರಣ. ಮತ್ತು ಮನೆಯ ಆಂತರಿಕ ವಾಯು ಮಾಲಿನ್ಯ ಒಂದು ಪ್ರಮುಖ ಅಪಾಯಕಾರಿ ಅಂಶವಾಗಿದೆ.

ಇದನ್ನೂ ಓದಿ:ತೂಕ ಇಳಿಸಲು ದಿನಕ್ಕೆ ಎಷ್ಟು ಸ್ಟೆಪ್​ಗಳನ್ನು ಹತ್ತಬೇಕು ಗೊತ್ತಾ? ನಿಮಗಿದು ತಿಳಿದರೆ ಮೆಟ್ಟಿಲುಗಳನ್ನೇ ಹೆಚ್ಚು ಬಳಸುತ್ತೀರಿ

ABOUT THE AUTHOR

...view details