ಕರ್ನಾಟಕ

karnataka

ETV Bharat / health

ಮಹಿಳೆಯರು ಸ್ವಯಂ ಪರೀಕ್ಷೆಯಿಂದಲೇ ತ್ವರಿತವಾಗಿ ಸ್ತನ ಕ್ಯಾನ್ಸರ್ ಪತ್ತೆ ಹಚ್ಚಲು ಸಾಧ್ಯ: ಇಲ್ಲಿವೆ ವೈದ್ಯರ ಸಲಹೆಗಳು - BREAST SELF EXAMINATION

ಮಹಿಳೆಯರು ಸ್ವಯಂ ಪರೀಕ್ಷೆಯಿಂದ ತ್ವರಿತವಾಗಿ ಸ್ತನ ಕ್ಯಾನ್ಸರ್ ಪತ್ತೆ ಹಚ್ಚಲು ಸಾಧ್ಯವಿದೆ ಎಂದು ವೈದ್ಯರು ತಿಳಿಸುತ್ತಾರೆ. ಮಂಗಳೂರಿನ ಕೆಎಂಸಿ ಆಸ್ಪತ್ರೆಯ ಸ್ತನ ಕ್ಯಾನ್ಸರ್ ಸರ್ಜನ್ ಆಗಿರುವ ಡಾ. ಬಾಸಿಲ ಅಲಿ ನೀಡಿರುವ ಸಲಹೆಗಳು ಇಲ್ಲಿವೆ.

Breast self examination  breast cance  Dakshina Kannada  ಸ್ವಯಂ ಸ್ತನ ಪರೀಕ್ಷೆ
ಮಹಿಳೆಯರು ಸ್ವಯಂ ಪರೀಕ್ಷೆಯಿಂದ ತ್ವರಿತವಾಗಿ ಸ್ತನ ಕ್ಯಾನ್ಸರ್ ಪತ್ತೆ ಹಚ್ಚಲು ಸಾಧ್ಯ: ವೈದ್ಯರ ಸಲಹೆಗಳೇನು? (ETV Bharat)

By ETV Bharat Health Team

Published : Oct 22, 2024, 1:51 PM IST

ಮಂಗಳೂರು:ಸ್ತನ ಕ್ಯಾನ್ಸರ್ ಪ್ರಪಂಚದಾದ್ಯಂತ ಮಹಿಳೆಯರನ್ನು ಬಾಧಿಸುವ ಸಾಮಾನ್ಯ ಕ್ಯಾನ್ಸರ್‌ಗಳಲ್ಲಿ ಒಂದಾಗಿದೆ. ಅಕ್ಟೋಬರ್ ತಿಂಗಳನ್ನು ಸ್ತನ ಕ್ಯಾನ್ಸರ್ ಜಾಗೃತಿ ಮಾಸವಾಗಿ ಆಚರಿಸಲಾಗುತ್ತಿದೆ. ಸ್ತನ ಕ್ಯಾನ್ಸರ್ ಅನ್ನು ಶೀಘ್ರ ಪತ್ತೆ ಮಾಡುವುದು ಮತ್ತು ನಿಯಮಿತ ತಪಾಸಣೆಯ ಮಹತ್ವವನ್ನು ಮನದಟ್ಟು ಮಾಡಿಸುವ ನಿಟ್ಟಿನಲ್ಲಿ ಅರಿವು ಮೂಡಿಸಲಾಗುತ್ತಿದೆ.

ಮಂಗಳೂರಿನ ಕೆಎಂಸಿ ಆಸ್ಪತ್ರೆಯ ಸ್ತನ ಕ್ಯಾನ್ಸರ್ ಸರ್ಜನ್ ಆಗಿರುವ ಡಾ. ಬಾಸಿಲ ಅಲಿ ಅವರು ಸ್ತನ‌ ಕ್ಯಾನ್ಸರ್​ನ (Breast cancer) ಶೀಘ್ರ ಪತ್ತೆಯ ಅಗತ್ಯತೆ ಕುರಿತು ಈಟಿವಿ ಭಾರತಜೊತೆಗೆ ಮಾತನಾಡಿ, "ಸ್ತನಗಳಲ್ಲಿ ನಿಮಗೆ ಯಾವುದೇ ಬದಲಾವಣೆ ಕಂಡುಬಂದರೆ, ತಕ್ಷಣವೇ ವೈದ್ಯರನ್ನು ಭೇಟಿ ಮಾಡಬೇಕಾಗುತ್ತದೆ. ಕುಟುಂಬದ ಇತಿಹಾಸವಿದ್ದರೆ, ಕಟ್ಟುನಿಟ್ಟಾಗಿ ವೈದ್ಯರನ್ನು ನೀವು ವರ್ಷಕ್ಕೊಮ್ಮೆ ಭೇಟಿ ಮಾಡುವುದು ಉತ್ತಮ. ಯಾವುದಾದರೂ ಸಮಸ್ಯೆ ಇದ್ದರೆ, ವೈದ್ಯರನ್ನು ಸಂಪರ್ಕಿಸಬೇಕಾಗುತ್ತೆ. ವೈದ್ಯರಿಗೆ ಸಂಶಯವಾದರೆ, ಆಲ್ಟ್ರಾಸೌಂಡ್‌ನಲ್ಲಿ ಮಮೋಗ್ರಾಂ ಮಾಡಬಹುದು ಮತ್ತು ಹೆಚ್ಚಿನ ಮಾಹಿತಿಯನ್ನು ಪಡೆಯಬಹುದು. ನಂತರ ನಾವು ರೋಗನಿರ್ಣಯ ಮಾಡಬಹುದು" ಎಂದು ತಿಳಿಸುತ್ತಾರೆ.

ಮಂಗಳೂರಿನ ಕೆಎಂಸಿ ಆಸ್ಪತ್ರೆಯ ಸ್ತನ ಕ್ಯಾನ್ಸರ್ ಸರ್ಜನ್ ಡಾ. ಬಾಸಿಲ ಅಲಿ ಮಾತನಾಡಿದರು. (ETV Bharat)

ಸ್ವಯಂ ಸ್ತನ ಪರೀಕ್ಷೆ: ''ಸ್ವಯಂ ಸ್ತನ ತಪಾಸಣೆ (Breast self examination) ಅಥವಾ ಪರೀಕ್ಷೆ ತುಂಬಾ ಮಹತ್ವದ್ದಾಗಿದೆ. ಸ್ವಯಂ ಸ್ತನ ತಪಾಸಣೆಯಿಂದ ಶೀಘ್ರವೇ ಸಮಸ್ಯೆಯನ್ನು ಪತ್ತೆ ಹಚ್ಚುವುದು ಇದು ಪ್ರಮುಖ ಹಂತವಾಗಿದೆ. ಸ್ನಾನಕ್ಕೆ ಹೋಗುವ ಮೊದಲು ಅಂದ್ರೆ ಪ್ರತಿ ತಿಂಗಳಿಗೊಮ್ಮೆಯಾದರು ಸ್ವಯಂ ಸ್ತನ ತಪಾಸಣೆ ಮಾಡಿಕೊಳ್ಳಲು ಮಹಿಳೆಯರಿಗೆ ನಾವು ಸಲಹೆ ನೀಡುತ್ತೇವೆ. ಅವರಲ್ಲಿ ಯಾವುದೇ ಸಮಸ್ಯೆಯನ್ನು ಕಂಡುಕೊಂಡರೆ, ವೈದ್ಯರನ್ನು ಭೇಟಿ ಮಾಡಬೇಕು. ಇದರಿಂದ ಸ್ತನ ಕ್ಯಾನ್ಸರ್​ನ ಲಕ್ಷಣಗಳನ್ನು ಪತ್ತೆ ಮಾಡಲು ಸಾಧ್ಯವಾಗುತ್ತದೆ'' ಎಂದು ಡಾ. ಬಾಸಿಲ ಅಲಿ ವಿವರಿಸಿದ್ದಾರೆ.

ಕ್ಲಿನಿಕಲ್ ತಪಾಸಣೆ ಮತ್ತು ಮಮೋಗ್ರಾಂಗಳ ಮಹತ್ವ:''ನಿಯಮಿತ ಕ್ಲಿನಿಕಲ್ ತಪಾಸಣೆ ಮತ್ತು ಮಮೋಗ್ರಾಂಗಳು ಸ್ತನ ಕ್ಯಾನ್ಸರ್ ಅನ್ನು ಶೀಘ್ರವಾಗಿ ಪತ್ತೆಹಚ್ಚುವಲ್ಲಿ ಮಹತ್ವದ ಪಾತ್ರ ವಹಿಸುತ್ತವೆ ಎಂದು ತಿಳಿಸಿದ ಡಾ. ಬಾಸಿಲ ಅಲಿ ಅವರು, "ಯಾವುದೇ ತೊಂದರೆ ಇದ್ದರೆ, ವೈದ್ಯರನ್ನು ಭೇಟಿ ಮಾಡಿ ಕ್ಲಿನಿಕಲ್ ಸ್ತನ ತಪಾಸಣೆ ಮಾಡಿಸಬಹುದು. ಈ ಕುರಿತಂತೆ ಸಂಶಯವಿದ್ದರೆ, ಆಲ್ಟ್ರಾಸೌಂಡ್‌ನಲ್ಲಿ ಮಮೋಗ್ರಾಂ ಮಾಡಬಹುದು. ಸಾಮಾನ್ಯವಾಗಿ ಮಮೋಗ್ರಾಂ ಹಿರಿಯ ವಯಸ್ಸಿನ ಮಹಿಳೆಯರಲ್ಲಿ ಮಾಡಲಾಗುತ್ತದೆ. ಆಲ್ಟ್ರಾಸೌಂಡ್ ಪರೀಕ್ಷೆಯನ್ನು ಕಿರಿಯ ವಯೋಮಾನದ ಹೆಣ್ಣುಮಕ್ಕಳಿಗೆ ಮಾಡಲಾಗುತ್ತದೆ. ಯಾವುದೇ ಸಂಶಯವಿದ್ದರೆ, ನಾವು ಬಯಾಪ್ಸಿ ಮಾಡಿಸಿ ರೋಗನಿರ್ಣಯ ದೃಢೀಕರಿಸಬಹುದು'' ಎಂದ ಅವರು, ''ಸ್ತನ ಕ್ಯಾನ್ಸರ್‌ ಅನ್ನು ಶೀಘ್ರ ಪತ್ತೆ ಮಾಡಿದರೆ, ಆರಂಭಿಕ ಹಂತದಲ್ಲೇ ವಾಸಿ ಮಾಡಬಹುದಾದ ರೋಗವಾಗಿದೆ ಎಂಬುದು ಆಶಾದಾಯಕ ಅಂಶವಾಗಿದೆ. ಇದು ಶೇಕಡಾ 90 ರಷ್ಟು ವಾಸಿಯಾಗುವ ಸಾಧ್ಯತೆಯುಳ್ಳ ಕ್ಯಾನ್ಸರ್‌ಗಳಲ್ಲಿ ಒಂದಾಗಿದೆ'' ಎಂದು ಡಾ. ಬಾಸಿಲ ಅಲಿ ಮಾಹಿತಿ ನೀಡಿದರು.

ಹೆಚ್ಚಿನ ಮಾಹಿತಿಗಾಗಿ ಈ ವೆಬ್​ಸೈಟ್​ಗಳನ್ನು ಸಂಪರ್ಕಿಸಬಹುದು:

ಇದನ್ನೂ ಓದಿ:

ABOUT THE AUTHOR

...view details