ಮನುಷ್ಯ ಚಂಚಲ ಜೀವಿ. ಕೇವಲ ಒಂದೇ ಗಂಟೆಯಲ್ಲಿ ವಿಭಿನ್ನ ಮೂಡ್ಗೆ ಅವನ ಮನಸ್ಸು ತಿರುಗುತ್ತದೆ. ತಮ್ಮ ಜೀವನದಲ್ಲಿ ನಡೆಯುವ ಏರು ಪೇರುಗಳು ಆತನ ಸಂತೋಷಕ್ಕೆ , ದುಖಃಕ್ಕೆ ಕಾರಣವಾಗುತ್ತದೆ. ಆದರೆ ನಿಮಗೆ ಗೊತ್ತೆ ನಿಮ್ಮ ಕಾಯುವಿಕೆಯು ಕೂಡ ಮನಸಿನ ಗೊಂದಲಕ್ಕೆ ಕಾರಣವಾಗುತ್ತದೆ. ಈ ವಿಚಾರವನ್ನು ಈ ಮೊದಲೇ ಕವಿಗಳು ಮತ್ತು ತತ್ವಜ್ಞಾನಿಗಳು ತಿಳಿಸಿದ್ದಾರೆ. 'ಇತರರಿಗಾಗಿ ಅಥವಾ ಕೆಲವು ವಿಚಾರಗಳಿಗಾಗಿ ನೀವು ಕಾಯುತ್ತಾ ನಿರೀಕ್ಷೆಯಲ್ಲಿರುವುದು ನಿಮ್ಮ ಆತಂಕಕ್ಕೆ ಕಾರಣವಲ್ಲದೇ, ಮಾನಸಿಕ ಸ್ಥಿಮಿತದ ಮೇಲೆ ಪರಿಣಾಮ ಬೀರುತ್ತದೆ.
ಹೀಗಾಗಿ ಆರೋಗ್ಯ ದೃಷ್ಟಿಯಿಂದ ಯಾರದರೂ ನಿಮ್ಮನ್ನು ಪ್ರತಿ ಬಾರಿ ಕಾಯುವಂತೆ ಮಾಡುತ್ತಿದ್ದರೆ, ನಿಮಗೆ ಈ ಪ್ರಪಂಚದಲ್ಲಿ ಬೇರೆಯವರಿಗಾಗಿ ಕಾಯಲು ಸಮಯ ಬೇಕಾದಷ್ಟು ಇದೆ ಎಂದು ಅವರು ಭಾವಿಸಿದ್ದರೆ ಅವರಿಗೆ ಇಂದೇ 'ಇನ್ನು ಮುಂದೆ ಕಾಯಲು ಸಾಧ್ಯವಿಲ್ಲ' ಎಂದು ಹೇಳಿ ಬಿಡಿ. ಈ ಮೂಲಕ ನಿಮ್ಮ ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳಿ ಎಂದು ಹಿರಿಯ ಪತ್ರಕರ್ತ ತೌಫಿಕ್ ರಶೀದ್ ಹೇಳಿದ್ದಾರೆ.
ನಿಮಗೆ ಅರಿವಿಲ್ಲದೇ ನೀವು ಯಾವಗೆಲ್ಲಾ ಕಾಯುವಿಕೆಯಿಂದ ಆತಂಕಕ್ಕೆ ಒಳಗಾಗಿದ್ದೀರಿ ಗೊತ್ತೇ?
1. ನಿಮ್ಮ ಪ್ರೀತಿ ಪಾತ್ರರಿಗೆ ಅಥವಾ ತುರ್ತು ಸಂದರ್ಭದಲ್ಲಿ ಮೊಬೈಲ್ನಲ್ಲಿ ಮೆಸೇಜ್ ಕಳುಹಿಸಿದ್ದು 24 ಗಂಟೆಯಾದರೂ ಅದಕ್ಕೆ ಪ್ರತಿಕ್ರಿಯೆ ಬರದೇ ಇದ್ದಾಗ ಕಾದು ಕಾದು ನೀವು ಆತಂಕಕ್ಕೆ ಒಳಗಾಗುತ್ತೀರ.
2. ಯಾವುದೋ ಕರೆಗಾಗಿ ನಿರೀಕ್ಷಿಸಿದ್ದು ಅದು ಸಮಯಕ್ಕೆ ಸರಿಯಾಗಿ ಬರದೇ ಇದ್ದಾಗ ಒತ್ತಾಡ ಒಳಗಾಗಿ ನಿಮ್ಮ ಮನಸ್ಥಿತಿ ಬದಲಾಗುತ್ತದೆ.
3. ಜೀವನಕ್ಕೊಂದು ಅಗತ್ಯ ಉದ್ಯೋಗದ ಅವಶ್ಯಕತೆ ಇದ್ದು ಅರ್ಜಿ ಸಲ್ಲಿಸಿದ್ದು ಆದರೆ ಅದರ ಸುಳಿವೇ ಇಲ್ಲದಾಗ ಕಂಗಾಲಾಗುತ್ತೀರಿ.
ಇವುಗಳಲ್ಲದೇ ಪರೀಕ್ಷೆಯ ಫಲಿತಾಂಶ, ವೈದ್ಯರ ಅಪಾಯಿಂಟ್‌ಮೆಂಟ್, ಶಸ್ತ್ರಚಿಕಿತ್ಸೆಯ ದಿನಾಂಕ, ಯಾವುದೋ ಯೋಜನೆಯು ಪೂರ್ವಭಾವಿಯಾಗಿ ನಡೆಯಬೇಕಾಗಿ ಬಂದರೆ, ಆ ಸಂದರ್ಭದಲ್ಲೆಲ್ಲಾ ಮನಸ್ಸು ಹದಗೆಟ್ಟು ಆತಂಕಕ್ಕೆ ಒಳಗಾಗಿ ರಕ್ತದೊತ್ತಡ ಹೆಚ್ಚಾಗುತ್ತದೆ. ಮುಖ್ಯವಾಗಿ ಮಾನಸಿಕ ಯೋಗಕ್ಷೇಮದ ಮೇಲೆ ವ್ಯತಿರಿಕ್ತ ಪರಿಣಾಮ ಉಂಟು ಮಾಡುತ್ತದೆ.
ಈ ಹಿಂದೆ ಈ ಕುರಿತು ಗಮನ ಹರಿಸದೇ ಇರಬಹುದು, ಆದರೇ ಈಗಿನ ವೈದ್ಯರು ಕಾಯುವಿಕೆಯ ಅಡ್ಡ ಪರಿಣಾಮದ ಬಗ್ಗೆ ಎಚ್ಚರವಹಿಸಿದ್ದಾರೆ. ಕಾಯುವಿಕೆಯ ಸಮಯವು ವ್ಯಕ್ತಿಯ ಮನಸ್ಥಿತಿಯನ್ನು ಕುಗ್ಗಿಸುತ್ತದೆ ಜತೆಗೆ ಆತಂಕ ಹೆಚ್ಚಿಸುತ್ತದೆ ಎಂದು ಭಾರತದ ಉನ್ನತ ಮಾನಸಿಕ ಆರೋಗ್ಯ ತಜ್ಞ ಮತ್ತು ಮನೋವೈದ್ಯ ಡಾ ಜಿತೇಂದ್ರ ನಾಗ್ಪಾಲ್ ಹೇಳಿದ್ದಾರೆ. ಡಾ. ನಾಗ್ಪಾಲ್ ಅವರ ಪ್ರಕಾರ ಕಾಯುವಿಕೆ ಮನಸ್ಸಿನ ತಳಮಳದ ಆತಂಕದೊಂದಿಗೆ ಚಡಪಡಿಕೆಯನ್ನು ಹೆಚ್ಚಿಸುತ್ತದೆ. ಇದು ಮನಸ್ಥಿತಿಯನ್ನು ಬದಲಾಯಿಸುತ್ತದೆ, ಖಿನ್ನತೆಯಂತಹ ಮೂಡ್ ಡಿಸಾರ್ಡರ್‌ಗಳಿಗೆ ಕಾರಣವಾಗುತ್ತದೆ.