ನವದೆಹಲಿ:ಮಿದುಳಿನಲ್ಲಿ ರಾಸಾಯನಿಕ ಬಿಡುಗಡೆ ಮತ್ತು ಮನಸ್ಥಿತಿ ಹಾಗೂ ಇತರ ಮಿದುಳಿನ ಕಾರ್ಯಾಚರಣೆಗೆ ವಿಟಮಿನ್ ಬಿ 12 ಪ್ರಮುಖ ಪಾತ್ರವಹಿಸುತ್ತದೆ. ಅಷ್ಟೇ ಅಲ್ಲದೇ, ಕೆಂಪು ರಕ್ತ ಕೋಶಗಳ ರೂಪುಗೊಳ್ಳುವಿಕೆ. ಚಯಾಪಚಯ ಮತ್ತು ನರ ವ್ಯವಸ್ಥೆ ಹಾಗೂ ಡಿಎನ್ಎ ಉತ್ಪಾದನೆಯಲ್ಲೂ ಇದು ನಿರ್ಣಾಯಕ ಪಾತ್ರ ಹೊಂದಿದೆ.
ವಿಟಮಿನ್ ಬಿ 12 ಕೊರತೆ ಸಮಸ್ಯೆ: ವಿಚಿತ್ರವಾದ ಸಂವೇದನೆಗಳು, ಮರಗಟ್ಟುವಿಕೆ, ಕೈ - ಕಾಲು ಅಥವಾ ಪಾದಗಳಲ್ಲಿ ಜುಮ್ಮೆನ್ನಿಸುವುದು, ನಡೆಯಲು ತೊಂದರೆ (ದಿಗ್ಭ್ರಮೆಗೊಳಿಸುವಿಕೆ, ಸಮತೋಲನ ಸಮಸ್ಯೆಗಳು), ರಕ್ತಹೀನತೆ, ಆಲೋಚನೆ ಮತ್ತು ಅರಿವಿನ ತೊಂದರೆಗಳು, ನೆನಪಿನ ಶಕ್ತಿ ನಷ್ಟ, ದೌರ್ಬಲ್ಯ ಅಥವಾ ಆಯಾಸದಂತಹ ಸಮಸ್ಯೆ ಕಾಡುತ್ತದೆ.
ಈ ಕುರಿತು ಮಾತನಾಡಿರುವ ಸರ್ ಗಂಗಾ ರಾಮ್ ಆಸ್ಪತ್ರೆಯ ನರರೋಗ ತಜ್ಞರಾಗಿರುವ ಡಾ ಅಂಶು ರೋಹ್ಟಗಿ, ವಿಟಮಿನ್ ಬಿ 12 ಮತ್ತು ಇತರ ಬಿ ವಿಟಮಿನ್ಗಳು ಮಿದುಳಿನ ರಾಸಾಯನಿಕ ಬಿಡುಗಡೆಯಲ್ಲಿ ಪ್ರಮುಖ ಪಾತ್ರ ಹೊಂದಿದೆ. ಇದು ಮನಸ್ಥಿತಿ ಮೇಲೆ ಮತ್ತು ಮಿದುಳಿನ ಕಾರ್ಯಾಚರಣೆ ಮೇಲೆ ಪ್ರಭಾವ ಬೀರುತ್ತದೆ. ಕಡಿಮೆ ಬಿ 12 ಮಟ್ಟ ಹಾಗೇ ವಿಟಮಿನ್ ಬಿ 6 ಖಿನ್ನತೆಯೊಂದಿಗೆ ಸಂಬಂಧಿಸಿದೆ ಎಂದಿದ್ದಾರೆ.
ಕೊರತೆಗೆ ಕಾರಣ: ಕಳಪೆ ಆಹಾರ ಅಥವಾ ವಿಟಮಿನ್ ಗ್ರಹಿಕೆಯನ್ನು ವ್ಯತ್ಯಾಸ. ಈ ಹಿನ್ನೆಲೆ ದೇಹಕ್ಕೆ ಅಗತ್ಯವಾದ ವಿಟಮಿನ್ ಬಿ 12 ಮಟ್ಟವನ್ನು ಸೇವಿಸುವ ಮೂಲಕ ಮನಸ್ಥಿತಿ ನಿಯಂತ್ರಣ ಜೊತೆ ಒಟ್ಟಾರೆ ಆರೋಗ್ಯ ಕಾಪಾಡಬಹುದಾಗಿದೆ ಎಂದಿದ್ದಾರೆ.
ಈ ಆಹಾರದಲ್ಲಿದೆ ವಿಟಮಿನ್ ಬಿ 12: ಫೌಲ್ಟ್ರಿ ಆಹಾರ, ಮಾಂಸ, ಮೀನು ಮತ್ತು ಡೈರಿ ಉತ್ಪನ್ನದಲ್ಲಿ ಲಭ್ಯವಾಗುತ್ತದೆ. ಓರಲ್ ಪೂರಕ, ಇಂಜೆಕ್ಷನ್ ಅಥವಾ ಮೂಗಿನ ಸ್ಪ್ರೇ ಕೂಡ ಲಭ್ಯವಿದೆ.