ETV Bharat / bharat

ಇಂದು ವಾಜಪೇಯಿ ಜನ್ಮಶತಮಾನೋತ್ಸವ: ಸುಶಾಸನ ದಿನದ ನಿಮಿತ್ತ ಅಟಲ್​​​​​ಜೀಗೆ ನಮನ ಸಲ್ಲಿಸಿದ ಪ್ರಧಾನಿ ಮೋದಿ - 100 BIRTH ANNIVERSARY OF VAJPAYEE

ಇಂದು ಮಾಜಿ ಪ್ರಧಾನಿ ಅಟಲ್​ ಬಿಹಾರಿ ವಾಜಪೇಯಿ ಅವರ 100ನೇ ಜನ್ಮದಿನ. ಅಟಲ್​ ಜೀ ಅವರ ಸಂಸದೀಯ ತೇಜಸ್ಸು ಅವರ ರಾಜಕೀಯ ಪಯಣದುದ್ದಕ್ಕೂ ಕಂಡುಬಂದಿದೆ ಎಂದು ಪ್ರಧಾನಿ ಮೋದಿ ಬಣ್ಣಿಸಿದ್ದಾರೆ.

Murmu, Modi join prayer ceremony to pay tributes to Vajpayee
ವಾಜಪೇಯಿ ಜನ್ಮಶತಮಾನೋತ್ಸವ (IANS)
author img

By PTI

Published : Dec 25, 2024, 10:38 AM IST

Updated : Dec 25, 2024, 11:11 AM IST

ನವದೆಹಲಿ: ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಶತಮಾನೋತ್ಸವದ ನಿಮಿತ್ತ ಶ್ರದ್ಧಾಂಜಲಿ ಸಲ್ಲಿಸಲಾಯಿತು. ರಾಷ್ಟ್ರಪತಿ ದ್ರೌಪದಿ ಮುರ್ಮು, ಉಪರಾಷ್ಟ್ರಪತಿ ಜಗದೀಪ್ ಧನಕರ್​, ಪ್ರಧಾನಿ ನರೇಂದ್ರ ಮೋದಿ, ಲೋಕಸಭೆ ಸ್ಪೀಕರ್ ಓಂ ಬಿರ್ಲಾ, ಹಲವು ಕೇಂದ್ರ ಸಚಿವರು ಮತ್ತು ಆಂಧ್ರಪ್ರದೇಶ ಸಿಎಂ ಚಂದ್ರಬಾಬು ನಾಯ್ಡು ಅವರು ಬುಧವಾರ ಬೆಳಗ್ಗೆ ವಾಜಪೇಯಿ ಅವರ ಸಮಾಧಿ ಇರುವ ರಾಷ್ಟ್ರೀಯ ಸ್ಮೃತಿ ಸ್ಥಳದಲ್ಲಿ ನಿರ್ಮಿಸಿರುವ ಸ್ಮಾರಕ 'ಸದೈವ ಅಟಲ್‌' ಪುಷ್ಪ ನಮನ ಸಲ್ಲಿಸಿದರು.

ಇನ್ನು ಈ ಬಗ್ಗೆ ಮಾತನಾಡಿರುವ ಪ್ರಧಾನಿ ಮೋದಿ, ಅಟಲ್ ಬಿಹಾರಿ ವಾಜಪೇಯಿ ಅವರು 21ನೇ ಶತಮಾನದ ಭಾರತದ ಪರಿವರ್ತನೆಯ ಶಿಲ್ಪಿ ಎಂದು ಬಣ್ಣಿಸಿದ್ದಾರೆ. ಕ್ರೋನಿಸಂ ಮತ್ತು ನಿಶ್ಚಲತೆಯ ಆರ್ಥಿಕ ತತ್ತ್ವಶಾಸ್ತ್ರ ತೊರೆದು, ಭಾರತದ ಆರ್ಥಿಕತೆಯ ಉನ್ನತಿಗೆ ವೇದಿಕೆ ಕಲ್ಪಿಸುವ ಸುಧಾರಣೆಗಳನ್ನು ಆರಂಭಿಸಿದ ದೀಮಂತ ಎಂದು ಮೋದಿ ಗುಣಗಾನ ಮಾಡಿದ್ದಾರೆ.

ವಾಜಪೇಯಿ ಅವರ 100 ನೇ ಜನ್ಮದಿನದಂದು ಹಲವಾರು ಪತ್ರಿಕೆಗಳಲ್ಲಿ ಪ್ರಕಟವಾದ ಲೇಖನದಲ್ಲಿ ಮೋದಿ ಅವರು, ತಮ್ಮ ಸುದೀರ್ಘ ಸಂಸದೀಯ ಅಧಿಕಾರವನ್ನು ವಾಜಪೇಯಿ ಅವರು ಹೆಚ್ಚಾಗಿ ವಿರೋಧ ಪಕ್ಷದಲ್ಲೇ ಕಳೆದರು. ಕಾಂಗ್ರೆಸ್ ಅವರನ್ನು ದೇಶದ್ರೋಹಿ ಎಂದು ಕರೆದರೂ ಅವರೆಂದೂ ಯಾವುದೇ ಕಹಿ ಭಾವನೆ ಹೊಂದಿರಲಿಲ್ಲ ಎಂಬುದನ್ನು ನೆನಪಿಸಿಕೊಂಡಿದ್ದಾರೆ.

ಅಸಂಖ್ಯಾತ ಜನರಿಗೆ ಸ್ಫೂರ್ತಿ ನೀಡುತ್ತಿರುವ ರಾಜನೀತಿಜ್ಞ: ಮಾಜಿ ಪ್ರಧಾನಿ ಅಟಲ್​ ಬಿಹಾರಿ ವಾಜಪೇಯಿ ಅವರು, ಅಸಂಖ್ಯಾತ ಜನರಿಗೆ ಸ್ಫೂರ್ತಿ ನೀಡುತ್ತಿರುವ ರಾಜನೀತಿಜ್ಞರಾಗಿ ಎತ್ತರದಲ್ಲಿ ನಿಂತಿದ್ದಾರೆ ಎಂದು ಮೋದಿ ಬಣ್ಣಿಸಿದ್ದಾರೆ. ಸುಮಾರು ಒಂಬತ್ತು ವರ್ಷಗಳಲ್ಲಿ ನಾಲ್ಕು ಲೋಕಸಭೆ ಚುನಾವಣೆಗಳು ನಡೆದಿದ್ದ 90ರ ದಶಕದ ರಾಜಕೀಯ ಅಸ್ಥಿರತೆಯಿಂದಾಗಿ ಜನರು ಅಸಹನೆ ಮತ್ತು ಸರ್ಕಾರದ ಸಾಮರ್ಥ್ಯದ ಬಗ್ಗೆ ಸಂಶಯ ವ್ಯಕ್ತಪಡಿಸುತ್ತಿದ್ದರು. ಈ ಸಮಯದಲ್ಲಿ ವಾಜಪೇಯಿ ಅವರು ಸ್ಥಿರ ಮತ್ತು ಪರಿಣಾಮಕಾರಿ ಆಡಳಿತವನ್ನು ನೀಡಿದರು ಎಂದು ಪ್ರಧಾನಿ ನೆನಪು ಮಾಡಿಕೊಂಡಿದ್ದಾರೆ.

ವಿನಮ್ರ ಬೇರುಗಳಿಂದ ಬಂದ ವಾಜಪೇಯಿ ಅವರು ಸಾಮಾನ್ಯ ನಾಗರಿಕರ ಹೋರಾಟಗಳನ್ನು ಮತ್ತು ಪರಿಣಾಮಕಾರಿ ಆಡಳಿತದ ಪರಿವರ್ತಕ ಶಕ್ತಿಯನ್ನು ಅರಿತುಕೊಂಡಿದ್ದರು, ಅವರ ನಾಯಕತ್ವದ ದೀರ್ಘಾವಧಿಯ ಪ್ರಭಾವವು ಹಲವಾರು ಕ್ಷೇತ್ರಗಳಲ್ಲಿ ಇಂದು ನಮ್ಮ ನಿಮ್ಮಲ್ಲರಿಗೂ ಗೋಚರಿಸುತ್ತಿದೆ ಎಂದು ಮೋದಿ ಹೇಳಿದ್ದಾರೆ. ಅವರ ಯುಗವು ಮಾಹಿತಿ ತಂತ್ರಜ್ಞಾನ, ದೂರಸಂಪರ್ಕ ಮತ್ತು ಸಂವಹನ ಜಗತ್ತಿನಲ್ಲಿ ದೈತ್ಯಾಕಾರದ ಪ್ರಗತಿಗೆ ಮೇಲ್ಪಂಕ್ತಿ ಹಾಕಿ ಹೋಗಿದೆ ಎಂದು ಪ್ರಧಾನಿ ಹೇಳಿದ್ದಾರೆ.

ನೆನಪಿನಲ್ಲಿ ಉಳಿಯುವ ಸುವರ್ಣ ಚತುಷ್ಪಥ ಯೋಜನೆ: ಅಟಲ್ ಜಿ ನೇತೃತ್ವದ ಎನ್‌ಡಿಎ ಸರ್ಕಾರವು ನಾಗರಿಕರಿಗೆ ತಂತ್ರಜ್ಞಾನ ಪ್ರವೇಶಿಸಲು ಮೊದಲ ಪ್ರಯತ್ನ ಮಾಡಿತು. ಅದೇ ಸಮಯದಲ್ಲಿ ಭಾರತವನ್ನು ಸಂಪರ್ಕಿಸುವಲ್ಲಿ ದೂರದೃಷ್ಟಿ ಇತ್ತು. ಇಂದಿಗೂ, ಹೆಚ್ಚಿನ ಜನರು ಭಾರತದ ಉದ್ದ ಮತ್ತು ಅಗಲವನ್ನು ಸಂಪರ್ಕಿಸುವ ಸುವರ್ಣ ಚತುಷ್ಪಥ ಯೋಜನೆಯನ್ನು ನೆನಪಿಸಿಕೊಳ್ಳುತ್ತಾರೆ ಎಂದು ನರೇಂದ್ರ ಮೋದಿ ಹೇಳಿದರು.

ಜನಮನಸೂರೆಗೊಂಡ ಗ್ರಾಮ್​ ಸಡಕ್​ ಯೋಜನೆ: ಅವರು ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆ ಮತ್ತು ದೆಹಲಿ ಮೆಟ್ರೋಗಾಗಿ ವ್ಯಾಪಕವಾದ ಕೆಲಸವನ್ನು ಮಾಡುವ ಮೂಲಕ ಮೆಟ್ರೋ ಸಂಪರ್ಕಕ್ಕಾಗಿ ಶ್ರಮಿಸಿದರು. ಇದೀಗ ವಿಶ್ವದರ್ಜೆಯ ಮೂಲಸೌಕರ್ಯ ಯೋಜನೆಯಾಗಿ ಎದ್ದು ಕಾಣುವಂತೆ ಮಾಡಿದೆ. ವಾಜಪೇಯಿ ಸರ್ಕಾರ ಆರ್ಥಿಕ ಬೆಳವಣಿಗೆಗೆ ಉತ್ತೇಜನ ನೀಡಿದ್ದಲ್ಲದೇ ದೂರದ ಪ್ರದೇಶಗಳನ್ನು ಹತ್ತಿರಕ್ಕೆ ತಂದು ಏಕತೆ ಮತ್ತು ಏಕತೆಯನ್ನು ಬೆಳೆಸಿತು ಎಂದು ಇದೇ ವೇಳೆ ಪ್ರಧಾನಿ ಗುಣಗಾನ ಮಾಡಿದರು.

ಸರ್ವಶಿಕ್ಷಾ ಅಭಿಯಾನ: ಸರ್ವಶಿಕ್ಷಾ ಅಭಿಯಾನದಂತಹ ಉಪಕ್ರಮದ ಮೂಲಕ ವಾಜಪೇಯಿ ಅವರು ಆಧುನಿಕ ಶಿಕ್ಷಣವನ್ನು ರಾಷ್ಟ್ರದಾದ್ಯಂತ ಜನರಿಗೆ ತಲುಪಿಸಲು ಶ್ರಮಿಸಿದರು. ವಿಶೇಷವಾಗಿ ಬಡ ಮತ್ತು ಅಂಚಿನಲ್ಲಿರುವ ವರ್ಗಗಳಿಗೆ ಪ್ರವೇಶಿಸಬಹುದಾದ ಭಾರತವನ್ನು ಹೇಗೆ ನಿರ್ಮಿಸುವ ಕನಸು ಕಂಡಿದ್ದರು ಎಂಬುದನ್ನು ಈ ಯೋಜನೆ ಎತ್ತಿ ತೋರಿಸುತ್ತದೆ ಎಂದು ಅವರು ಹೇಳಿದರು.

ವಿಶ್ವಕ್ಕೆ ಭಾರತದ ಶಕ್ತಿ ತೋರಿಸಿದ ಧೀಮಂತ: ಪರಮಾಣು ಪರೀಕ್ಷೆಗಳನ್ನು ನಡೆಸುವ ಮೂಲಕ ಅವರು ತಮ್ಮ ಸರ್ಕಾರದ ನಿರ್ಧಾರ ಮತ್ತು ನಂತರದ ಪರಿಣಾಮಗಳನ್ನು ನಿಭಾಯಿಸುವುದು ಹೇಗೆ ಎಂಬುದನ್ನು ತಮ್ಮ ನಾಯಕತ್ವದ ಮೂಲಕ ತೋರಿಸಿಕೊಟ್ಟಿದ್ದಾರೆ. ಇದು ನಮ್ಮ ನಿಮ್ಮೆಲ್ಲರ ಮುಂದಿರುವ ಜೀವಂತ ಉದಾಹರಣೆಯಾಗಿದೆ ಎಂದು ಮೋದಿ ಹೊಗಳಿದರು.

ಭಾರತದ ಬಲ ತೋರಿಸಿದ ಪರಮಾಣು ಪರೀಕ್ಷೆ: ಮೇ 11, 1998ರ ಪರೀಕ್ಷೆಗಳು ವೈಜ್ಞಾನಿಕ ಕೌಶಲ್ಯವನ್ನು ತೋರಿಸಿದರೆ, ಮೇ 13 ರಂದು ನಡೆದ ಪರೀಕ್ಷೆಗಳು ನಿಜವಾದ ನಾಯಕತ್ವವನ್ನು ತೋರಿಸಿವೆ ಎಂದು ಅವರು ಹೇಳಿದರು. ಭಾರತವು ಬೆದರಿಕೆ ಅಥವಾ ಒತ್ತಡಕ್ಕೆ ಸಿಲುಕುವ ದಿನಗಳು ಯಾವತ್ತೋ ಮುಗಿದು ಹೋಗಿವೆ ಎಂದು ಜಗತ್ತಿಗೆ ಅವರು ನೀಡಿರುವ ಸಂದೇಶವಾಗಿದೆ ಎಂದು ಅವರು ಹೇಳಿದರು. ಅಂತಾರಾಷ್ಟ್ರೀಯ ನಿರ್ಬಂಧಗಳನ್ನು ಎದುರಿಸುತ್ತಿದ್ದರೂ, ಎನ್‌ಡಿಎ ಸರ್ಕಾರವು ದೃಢವಾಗಿ ನಿಂತಿದೆ. ತನ್ನ ಸಾರ್ವಭೌಮತ್ವವನ್ನು ಕಾಪಾಡುವ ಭಾರತದ ಹಕ್ಕನ್ನು ಸ್ಪಷ್ಟಪಡಿಸುತ್ತದೆ ಮತ್ತು ಏಕಕಾಲದಲ್ಲಿ ವಿಶ್ವಶಾಂತಿಯ ಪ್ರಬಲ ಪ್ರತಿಪಾದಕವಾಗಿದೆ ಎಂದು ಮೋದಿ ಹೇಳಿದ್ದಾರೆ. ವಾಜಪೇಯಿ ಅವರು ಭಾರತೀಯ ಪ್ರಜಾಪ್ರಭುತ್ವವನ್ನು ಅರ್ಥಮಾಡಿಕೊಂಡಿದ್ದರು ಮತ್ತು ಅದನ್ನು ಬಲಿಷ್ಠಗೊಳಿಸುವ ಅಗತ್ಯವನ್ನು ಸಹ ಅರಿತುಕೊಂಡಿದ್ದರು ಎಂದು ಮೋದಿ ಹೇಳಿದರು.

ಸಂಸದೀಯ ತೇಜಸ್ಸು: ಅಟಲ್​ ಜೀ ಅವರ ಸಂಸದೀಯ ತೇಜಸ್ಸು ಅವರ ರಾಜಕೀಯ ಪಯಣದುದ್ದಕ್ಕೂ ಕಂಡುಬಂದಿದೆ. ಅವರು ಅಂದು ಬೆರಳೆಣಿಕೆಯಷ್ಟು ಸಂಸದರನ್ನು ಹೊಂದಿರುವ ಪಕ್ಷಕ್ಕೆ ಸೇರಿದವರಾಗಿದ್ದರು. ಆದರೆ ಅವರ ಮಾತುಗಳು ಆ ಸಮಯದಲ್ಲಿ ಸರ್ವಶಕ್ತ ಕಾಂಗ್ರೆಸ್ ಪಕ್ಷದ ಬಲವನ್ನು ಕೆಣಕಲು ಸಾಕಾಗಿತ್ತು ಎಂದು ಮೋದಿ ವಾಜಪೇಯಿ ಶಕ್ತಿಯನ್ನು ಅನಾವರಣಗೊಳಿಸಿದರು.

ಅವಕಾಶವಾದಿ ರಾಜಕೀಯ ಮಾಡಲಿಲ್ಲ ಅಟಲ್​: ವಾಜಪೇಯಿ ಅವರು ಅವಕಾಶವಾದಿ ಮಾರ್ಗಗಳ ಮೂಲಕ ಅಧಿಕಾರಕ್ಕೆ ಅಂಟಿಕೊಂಡವರಲ್ಲ. ಅವರು ಕುದುರೆ ವ್ಯಾಪಾರ ಮತ್ತು ಕೊಳಕು ರಾಜಕೀಯದ ಹಾದಿಯನ್ನು ಅನುಸರಿಸುವ ಬದಲು 1996 ರಲ್ಲಿ ರಾಜೀನಾಮೆ ನೀಡಲು ಆದ್ಯತೆ ನೀಡಿದರು, 1999 ರಲ್ಲಿ ಅವರ ಸರ್ಕಾರವು ಒಂದು ಮತದಿಂದ ಪತನವಾಯಿತು ಎಂಬುದನ್ನು ಇದೇ ವೇಳೆ ಪ್ರಧಾನಿ ಸ್ಮರಿಸಿದರು.

ವಾಜಪೇಯಿ ವಿದೇಶಾಂಗ ನೀತಿ: ವಿದೇಶಾಂಗ ವ್ಯವಹಾರಗಳ ಸಚಿವರಾಗಿ ಅಟಲ್​ ಬಿಹಾರಿ ವಾಜಪೇಯಿ ಅವರು ವಿಶ್ವಸಂಸ್ಥೆಯಲ್ಲಿ ಹಿಂದಿಯಲ್ಲಿ ಮಾತನಾಡಿದ ಮೊದಲ ಭಾರತೀಯ ನಾಯಕರಾಗಿದ್ದಾರೆ. ಈ ಮೂಲಕ ಭಾರತೀಯ ಸಂಸ್ಕೃತಿಯಲ್ಲಿ ಎಷ್ಟು ಆಳವಾಗಿ ಬೇರೂರಿದ್ದರು ಎಂಬುದನ್ನು ದೇಶಕ್ಕೆ ಆ ಮೂಲಕ ವಿಶ್ವಕ್ಕೆ ತೋರಿಸಿಕೊಟ್ಟಿದ್ದಾರೆ ಎಂಬುದನ್ನ ದೇಶದ ಜನರಿಗೆ ನೆನಪಿಸಿದರು ಮೋದಿ.

ಇದನ್ನು ಓದಿ:ಇಂದು ದೆಹಲಿಯಲ್ಲಿ ಎನ್​ ಡಿಎ ಮಹತ್ವದ ಮೀಟಿಂಗ್: ಚಂದ್ರಬಾಬು ನಾಯ್ಡು ಭಾಗಿ

ಬದುಕಿಗೆ ಬೆಳಕಾದ ಸೌರಶಕ್ತಿ: ಜೀವನ ಹಸನಾಗಿಸಿಕೊಂಡು ಇತರರ ಬಾಳು ಬೆಳಗುತ್ತಿರುವ ಸೋಲಾರ್​ ದೀದಿಯರು!

Last Updated : Dec 25, 2024, 11:11 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.