These Oils to Help You Grow Thick Eyebrows: ಕಣ್ಣುಗಳು ಹಾಗೂ ಹುಬ್ಬುಗಳು ಆಕರ್ಷಕವಾಗಿದ್ದರೆ ಮುಖವು ಮತ್ತಷ್ಟು ಸುಂದರವಾಗಿ ಕಾಣುತ್ತದೆ. ಹುಬ್ಬುಗಳು ದಪ್ಪ ಮತ್ತು ಕಪ್ಪಾಗಿದ್ದರೆ ಮುಖದ ಸೌಂದರ್ಯವು ಹೊಳೆಯುತ್ತದೆ. ಬ್ಯೂಟಿಷಿಯನ್ಗಳು ದಪ್ಪ ಮತ್ತು ಆರೋಗ್ಯಕರ ಹುಬ್ಬುಗಳನ್ನು ಬೆಳೆಯಲು ಕೆಲವು ಸಲಹೆಗಳನ್ನು ಅನುಸರಿಸಲು ಬಯಸುತ್ತಾರೆ.
ಆಲಿವ್ ಎಣ್ಣೆ: ಆಲಿವ್ ಎಣ್ಣೆಯು ಹುಬ್ಬುಗಳ ಬೆಳವಣಿಗೆಗೆ ಚೆನ್ನಾಗಿ ಸಹಾಯ ಮಾಡುತ್ತದೆ. ಇದರಲ್ಲಿರುವ ವಿಟಮಿನ್ - ಎ, ಇ ಮತ್ತು ಇತರ ಪೋಷಕಾಂಶಗಳು ಕೂದಲಿಗೆ ಅಗತ್ಯವಾದ ಶಕ್ತಿ ಒದಗಿಸುತ್ತವೆ ಹಾಗೂ ಈ ಕೂದಲು ಬೀಳದಂತೆ ತಡೆಯುತ್ತವೆ. ಹಾಗಾಗಿ ಪ್ರತಿದಿನ ಎರಡು ಹನಿ ಆಲಿವ್ ಎಣ್ಣೆಯನ್ನು ಹುಬ್ಬಿನ ಮೇಲೆ ಹಚ್ಚಿ ಮಸಾಜ್ ಮಾಡುವುದರಿಂದ ಉತ್ತಮ ಫಲಿತಾಂಶ ದೊರೆಯುತ್ತದೆ ಎನ್ನುತ್ತಾರೆ ತಜ್ಞರು.
ತೆಂಗಿನೆಣ್ಣೆ: ಇದು ಕಂಡೀಷನರ್ ಹಾಗೂ ಮಾಯಿಶ್ಚರೈಸರ್ ಆಗಿ ಕೆಲಸ ಮಾಡುತ್ತದೆ. ಈ ಎಣ್ಣೆಯಲ್ಲಿರುವ ವಿಟಮಿನ್ ಇ, ಕಬ್ಬಿಣ, ಆ್ಯಂಟಿ ಆಕ್ಸಿಡೆಂಟ್ ಹಾಗೂ ಕೊಬ್ಬಿನಾಮ್ಲಗಳು ಆರೋಗ್ಯಕರ ಕೂದಲು ಬೆಳವಣಿಗೆಗೆ ಸಹಾಯ ಮಾಡುತ್ತದೆ. ರಾತ್ರಿ ಮಲಗುವ ಮುನ್ನ ಸ್ವಲ್ಪ ಕೊಬ್ಬರಿ ಎಣ್ಣೆಯಿಂದ ಹುಬ್ಬುಗಳಿಗೆ ಮಸಾಜ್ ಮಾಡಿದರೆ ಒಳ್ಳೆಯ ಫಲಿತಾಂಶ ದೊರೆಯುತ್ತದೆ.
ಕ್ಯಾಸ್ಟರ್ ಆಯಿಲ್: ಮಲಗುವ ಮುನ್ನ ಹುಬ್ಬುಗಳ ಸುತ್ತಲೂ ಪ್ರತಿದಿನ ಸ್ವಲ್ಪ ಪ್ರಮಾಣದ ಕ್ಯಾಸ್ಟರ್ ಆಯಿಲ್ ಅನ್ವಯಿಸಿ. ಹೀಗೆ ಮಾಡುವುದರಿಂದ ಹುಬ್ಬುಗಳು ದಪ್ಪವಾಗಿ ಬೆಳೆಯಲು ಪೂರಕವಾಗುತ್ತದೆ. ಈ ಸಲಹೆ ಕೂಡ ಚೆನ್ನಾಗಿ ಕೆಲಸ ಮಾಡುತ್ತದೆ ಎಂದು ತಜ್ಞರು ತಿಳಿಸುತ್ತಾರೆ.
ಬಾದಾಮಿ ಎಣ್ಣೆ: ಬಾದಾಮಿ ಎಣ್ಣೆಯಲ್ಲಿ ವಿಟಮಿನ್ ಇ ಸಮೃದ್ಧವಾಗಿದೆ. ನಿಯಮಿತವಾಗಿ ಈ ಬಾದಾಮಿ ಎಣ್ಣೆಯಿಂದ ಸ್ವಲ್ಪ ಸಮಯದವರೆಗೆ ಮಸಾಜ್ ಮಾಡಿ. ಮರುದಿನ ಬೆಳಗ್ಗೆ ತಣ್ಣೀರಿನಿಂದ ಮುಖ ತೊಳೆಯಿರಿ. ಇದನ್ನು ನಿಯಮಿತವಾಗಿ ಮಾಡುವುದರಿಂದ ನಿಮ್ಮ ಹುಬ್ಬುಗಳು ದಪ್ಪವಾಗಿ ಮತ್ತು ಆರೋಗ್ಯಕರವಾಗಿ ಬೆಳೆಯುತ್ತವೆ ಎಂದು ತಜ್ಞರು ಮಾಹಿತಿ ನೀಡುತ್ತಾರೆ.
ಮತ್ತಷ್ಟು ಟಿಪ್ಸ್:
- ರಾತ್ರಿ ನೆನೆಸಿದ ಮೆಂತ್ಯ ಪೇಸ್ಟ್ ಮಾಡಿ ಮತ್ತು ಬೆಳಗ್ಗೆ ಹುಬ್ಬುಗಳ ಮೇಲೆ ಹಚ್ಚಿ. ಹೀಗೆ ಮಾಡುವುದರಿಂದ ಕೆಲವೇ ದಿನಗಳಲ್ಲಿ ಫಲಿತಾಂಶ ಕಾಣಲಿದೆ ಎನ್ನಲಾಗಿದೆ.
- ಅಂತೆಯೇ ಹುಬ್ಬುಗಳ ಮೇಲೆ ನಿಂಬೆಯನ್ನು ಉಜ್ಜುವುದರಿಂದ ಆ ಭಾಗದಲ್ಲಿ ಕೂದಲು ಬೆಳೆಯುತ್ತದೆ.
- ಈರುಳ್ಳಿಯಲ್ಲಿ ಸಲ್ಫರ್ ಅಧಿಕವಾಗಿದೆ. ಆದ್ದರಿಂದ ಇದು ರಕ್ತ ಪರಿಚಲನೆಯನ್ನು ಉತ್ತೇಜಿಸುತ್ತದೆ. ಹುಬ್ಬುಗಳ ಸುತ್ತಲೂ ಈರುಳ್ಳಿ ರಸವನ್ನು ನಿಯಮಿತವಾಗಿ ಅನ್ವಯಿಸುವುದರಿಂದ ಅವುಗಳು ದಪ್ಪವಾಗಿ ಬೆಳೆಯಲು ಸಾಧ್ಯವಾಗುತ್ತದೆ.
- ಒಂದು ಸಣ್ಣ ಬಟ್ಟಲಿನಲ್ಲಿ ಹಾಲನ್ನು ತೆಗೆದುಕೊಂಡು ಅದರಲ್ಲಿ ಹತ್ತಿ ಉಂಡೆಯನ್ನು ಅದ್ದಿ ಹುಬ್ಬುಗಳ ಸುತ್ತ ಹಚ್ಚಿಕೊಳ್ಳಬೇಕು, ಹೀಗೆ ಪದೇ ಪದೆ ಮಾಡಿದರೆ ಕೆಲವೇ ದಿನಗಳಲ್ಲಿ ಹುಬ್ಬುಗಳು ದಪ್ಪವಾಗಿ ಬೆಳೆಯುತ್ತದೆ.
- ಈ ಸಲಹೆಗಳೊಂದಿಗೆ ಪ್ರತಿದಿನ ಸಾಕಷ್ಟು ನೀರು ಕುಡಿಯಿರಿ. ಇದರಿಂದ ದೇಹದಲ್ಲಿರುವ ವಿಷಕಾರಿ ಅಂಶ ಹೊರಹೋಗುವುದಲ್ಲದೆ, ರಕ್ತ ಸಂಚಾರವೂ ಉತ್ತಮಗೊಳ್ಳುತ್ತದೆ ಎಂದು ತಜ್ಞರು ಸಲಹೆ ನೀಡುತ್ತಾರೆ.
ಹೆಚ್ಚಿನ ಮಾಹಿತಿಗಾಗಿ ಈ ವೆಬ್ಸೈಟ್ನ್ನು ವೀಕ್ಷಿಸಬಹುದು: https://www.healthline.com/health/beauty-skin-care/how-to-grow-thicker-eyebrows#olive-oil
ಓದುಗರಿಗೆ ಪ್ರಮುಖ ಸೂಚನೆ: ಈ ಲೇಖನದಲ್ಲಿ ನಿಮಗೆ ನೀಡಿರುವ ಎಲ್ಲ ಆರೋಗ್ಯ ಮಾಹಿತಿ, ಸಲಹೆಗಳು ನಿಮ್ಮ ತಿಳಿವಳಿಕೆಗಾಗಿ ಮಾತ್ರ. ವೈಜ್ಞಾನಿಕ ಸಂಶೋಧನೆ, ಅಧ್ಯಯನಗಳು, ವೈದ್ಯಕೀಯ ಮತ್ತು ಆರೋಗ್ಯ ವೃತ್ತಿಪರ ಸಲಹೆಯನ್ನು ಆಧರಿಸಿ ನಾವು ಈ ಮಾಹಿತಿಯನ್ನು ಒದಗಿಸುತ್ತಿದ್ದೇವೆ. ಆದರೆ, ಇವುಗಳನ್ನು ಅನುಸರಿಸುವ ಮೊದಲು ಪರಿಣತ ವೈದ್ಯರ ಸಲಹೆಗಳನ್ನು ತೆಗೆದುಕೊಳ್ಳುವುದು ಉತ್ತಮ.