ನವದೆಹಲಿ: ಟೈಪ್ 2 ಮಧುಮೇಹ ಹೊಂದಿರುವವರು ಸಮತೋಲಿತ ದೇಹ ತೂಕವನ್ನು ನಿರ್ವಹಣೆ ಮಾಡುವುದನ್ನು ಯಾವಾಗಲೂ ಶಿಫಾರಸು ಮಾಡಲಾಗುವುದು. ಆದಾಗ್ಯೂ ಹೊಸ ಸಂಶೋಧನೆ ಅನುಸಾರ 65 ವರ್ಷ ಮೇಲ್ಪಟ್ಟವರಲ್ಲಿ ಅಧಿಕ ತೂಕ ನಿರ್ವಹಣೆಯು ಯಾವುದೇ ರೀತಿಯ ಹೃದಯ ರಕ್ತನಾಳದ ಸಮಸ್ಯೆಯ ಸಾವಿನ ಅಪಾಯವನ್ನು ಕಡಿಮೆ ಮಾಡುತ್ತದೆ ಎನ್ನಲಾಗಿದೆ.
ಯುಕೆ ಬಯೋಬ್ಯಾಕ್ನಿಂದ ಪಡೆಯಲಾದ ಆರೋಗ್ಯ ದತ್ತಾಂಶ ಆಧಾರದ ಅನುಸಾರ, 65 ವರ್ಷದೊಳಗಿನ ಅಥವಾ ಯುವ ಜನರು 23-25ರ ವರೆಗಿನ ಬಿಎಂಐ ದರದಲ್ಲಿ ಇರಿಸಿದರೆ, ಹೃದಯ ರಕ್ತನಾಳದಿಂದ ಸಾವನ್ನಪ್ಪುವ ಅಪಾಯ ಕಡಿಮೆ ಇದೆ ಎಂದು ತೋರಿಸಿದೆ.
65 ವರ್ಷ ಮೇಲ್ಪಟ್ಟವರೂ ಸುಧಾರಿತ ಅಧಿಕ ತೂಕವೂ ಬಿಎಂಐ 26-28 ಇರುವುದರಿಂದಲೂ ಹೃದಯ ರಕ್ತನಾಳದ ಸಾವಿನ ಅಪಾಯ ಕಡಿಮೆ ಮಾಡಬಹುದು ಎಂದು ಅಧ್ಯಯನ ತಿಳಿಸಿದೆ.
ವಯಸ್ಸು, ಹೃದಯ ಮತ್ತು ಚಯಾಪಚಯ ಅಪಾಯದ ಅಂಶಕ್ಕೆ ಅನುಗುಣವಾಗಿ ಟೈಪ್ 2 ಮಧುಮೇಹಿಗಳ ಬಿಎಂಐ ಅನ್ನು ಪ್ರದರ್ಶಿಸಲಾಗುವುದು ಎಂದು ಚೀನಾದ ಕ್ಸಿಯಾಂಗ್ಯಾಂಗ್ನ ಹುಬೈ ಯುನಿವರ್ಸಿಟಿ ಆಫ್ ಆರ್ಟ್ಸ್ ಅಂಡ್ ಸೈನ್ಸ್‌ನ ಅಫಿಲಿಯೇಟ್ ಆಸ್ಪತ್ರೆಯ ಡಾ ಶಾಯೊಂಗ್ ಕ್ಸು ತಿಳಿಸಿದ್ದಾರೆ.
ಫಲಿತಾಂಶವು ತಿಳಿಸುವಂತೆ ವಯಸ್ಸಾದವರು ಸ್ಥೂಲಕಾಯವಲ್ಲದೇ, ಸುಧಾರಿತ ತೂಕ ಹೆಚ್ಚಳ ಹೊಂದಿರುವವರು ತೂಕ ಕಡಿತದ ಬದಲಾಗಿ ಕಾಪಾಡಿಕೊಳ್ಳುವುದು ಹೃದಯ ರಕ್ತನಾಳದ ಕಾಯಿಲೆಯಿಂದ ಅಕಾಲಿಕ ಸಾವಿನ ಅಪಾಯವನ್ನು ಕಡಿಮೆ ಮಾಡಲು ಹೆಚ್ಚು ಪ್ರಾಯೋಗಿಕ ಮಾರ್ಗವಾಗಿದೆ ಎಂದು ತಿಳಿಸಿದ್ದಾರೆ.
ವಿಶೇಷವಾಗಿ ಟೈಪ್ 2 ಮಧುಮೆಹಿಗಳಲ್ಲಿ ಹೃದಯ ರಕ್ತನಾಳದ ಅಪಾಯವನ್ನು ಕಡಿತ ಮಾಡುವುದು ಆರೋಗ್ಯಯುತ ತೂಕ ನಿರ್ವಹಣೆಯಲ್ಲಿ ನಿರ್ಣಾಯಕವಾಗಿದೆ.
ಟೈಪ್ 2 ಮಧುಮೇಹದ ಹಿಂದಿನ ರೋಗ ಪತ್ತೆ ಜೊತೆಗೆ ಯುಕೆ ಬಯೋಬ್ಯಾಂಕ್ನಿಂದ ಅಧ್ಯಯನದಲ್ಲಿ ಭಾಗಿಯಾದ 22,874 ಜನರ ಬಿಎಂಐ ಮತ್ತು ಹೃದಯರಕ್ತನಾಳದ ಸಾವಿನ ಅಪಾಯದ ನಡುವಿನ ಸಂಬಂಧದಲ್ಲಿನ ವಯಸ್ಸಿನ ವ್ಯತ್ಯಾಸಗಳನ್ನು ಸಂಶೋಧಕರು ಪತ್ತೆ ಮಾಡಿದ್ದಾರೆ.
ಅಧ್ಯಯನದಲ್ಲಿ ಭಾಗಿಯಾದ ಜನರ ಸರಾಸರಿ ವಯೋಮಿತಿ 59 ವರ್ಷವಾಗಿದೆ. ಇದಲ್ಲಿ ಶೇ 59ರಷ್ಟು ಮಹಿಳೆಯರು ಭಾಗಿಯಾಗಿದ್ದರು. ಸಂಶೋಧಕರು ಎರಡು ವರ್ಗವಾಗಿ ಅಧ್ಯಯನ ನಡೆಸಿದ್ದಾರೆ. 65 ವರ್ಷ ಮೇಲ್ಪಟ್ಟ ಜನರು ಒಂದು ವರ್ಷ ಮತ್ತು 65 ವರ್ಷದೊಳಗಿನ ಮಧ್ಯಮ ವಯಸ್ಸಿನವರ ಒಂದು ವರ್ಗದವರು ಇದರಲ್ಲಿ ಸೇರಿದ್ದಾರೆ. (ಐಎಎನ್ಎಸ್)
ಇದನ್ನೂ ಓದಿ: ಭಾರತದ ದುಡಿಯುವ ವರ್ಗದಲ್ಲಿ ಕುರುಡುತನಕ್ಕೆ ಕಾರಣವಾಗುತ್ತಿರುವ ಮಧುಮೇಹ