ನವದೆಹಲಿ: ಮೊಬೈಲ್ ಚಟ ಎಲ್ಲ ವಯೋಮಾನದವರನ್ನು ಬಾಧಿಸುವ ಸಮಸ್ಯೆಯಾಗಿದೆ. ಅದರಲ್ಲೂ ಹದಿಹರೆಯದರಲ್ಲಿ ಹೆಚ್ಚಿನ ಮಟ್ಟದಲ್ಲಿರುವ ಈ ಗೀಳು ಅಗತ್ಯ ಚಟುವಟಿಕೆಗಳಾದ ತಿನ್ನುವುದು, ಮಲಗುವುದು ಮತ್ತು ವ್ಯಾಯಾಮಗಳನ್ನು ಮರೆಯುವ ಜೊತೆಗೆ ಶಾಲೆಗಳಿಗೆ ಗೈರಾಗುವ ಅಪಾಯವನ್ನು ಹೆಚ್ಚಿಸುತ್ತದೆ ಎಂದು ಫಿನ್ಲ್ಯಾಂಡ್ ಸಂಶೋಧಕರು ಪತ್ತೆ ಮಾಡಿದ್ದಾರೆ.
ಬಾಲಕರಿಗಿಂತ ಬಾಲಕಿಯರು ಅಧಿಕ ಮಟ್ಟದಲ್ಲಿ ಇಂಟರ್ನೆಟ್ ಬಳಕೆ ಮಾಡುತ್ತದೆ. ಯುವಕರಿಗಿಂತ ಸಾಮಾಜಿಕ ಮಾಧ್ಯಮದಲ್ಲಿ ಯುವತಿಯರು ಇದರ ಬಳಕೆಯಲ್ಲಿ ಹೆಚ್ಚು ಕ್ರಿಯಾಶೀಲವಾಗಿರುತ್ತಾರೆ ಎಂಬುದು ಅಧ್ಯಯನದಲ್ಲಿ ಬಹಿರಂಗವಾಗಿದೆ. ಆದಾಗ್ಯೂ ಬಾಲಕಿಯರಿಗಿಂತ ಬಾಲಕರೇ ಶಾಲೆಗೆ ಗೈರಾಗುವ ಪ್ರಮಾಣ ಹೆಚ್ಚಿದೆ ಎಂದು ವರದಿ ಪತ್ತೆ ಮಾಡಿದೆ. ಇನ್ನು ಬಾಲಕಿಯರು ಗೈರಾದರೂ ಅವರು ವೈದ್ಯಕೀಯ ಕಾರಣಗಳಿಂದ ಗೈರಾಗುವುದು ಕಂಡು ಬಂದಿದೆ.
ಹೆಲ್ಸಿಂಕಿಯ ಯುನಿವರ್ಸಿಟಿ ಸಂಶೋಧಕರು ಈ ಅಧ್ಯಯನ ನಡೆಸಿದ್ದು, ರಾತ್ರಿ 8 ರಿಂದ10 ಗಂಟೆಗಳ ನಿದ್ರೆ, ವ್ಯಾಯಾಮ ಹಾಗೂ ಪೋಷಕರಲ್ಲಿ ವಿಶ್ವಾಸಾರ್ಹ ಸಂಬಂಧವು ರಕ್ಷಣಾತ್ಮಕವಾಗಿದೆ ಎಂದು ತಿಳಿಸಿದ್ದಾರೆ. ಈ ಅಧ್ಯಯನವನ್ನು ಆರ್ಕೈವ್ಸ್ ಆಫ್ ಡೀಸಿಸ್ ಇನ್ ಚಿಲ್ಡ್ರನ್ ಜರ್ನಲ್ನಲ್ಲಿ ಪ್ರಕಟಿಸಲಾಗಿದೆ.
ಅಧ್ಯಯನಕ್ಕಾಗಿ ಸಂಶೋಧಕರು 14 ರಿಂದ 16 ವರ್ಷದ 86 ಸಾವಿರ ಹದಿಹರೆಯದವರ ದತ್ತಾಂಶವನ್ನು ವಿಶ್ಲೇಷಣೆ ನಡೆಸಿದರು. ಅವರ ಶಾಲಾ ಆರೋಗ್ಯ ಪ್ರಚಾರದ ಅಧ್ಯಯನ, ನ್ಯಾಷನಲ್ ಬೈನ್ನಿಯಲ್ ಸರ್ವೆಯಿಂದ ಮಾಹಿತಿ ಪಡೆದರು. ಜೊತೆಗೆ ಹದಿಹರೆಯದರಿಗೆ ತಮ್ಮ ಪೋಷಕರ ಜೊತೆಗಿನ ಸಂಬಂಧ ಸೇರಿದಂತೆ ಅವರ ಜೊತೆ ಮುಕ್ತವಾಗಿ ಮಾಹಿತಿ ಹಂಚಿಕೊಳ್ಳುವುವಿಕೆ, ಹಾಗೇ ನಿದ್ರೆ, ದೈಹಿಕ ಚಟುವಟಿಕೆ ಕುರಿತು ಮಾಹಿತಿ ಕೇಳಿದರು.