ಹೈದರಾಬಾದ್ :ಅನೇಕ ಜನರು ತಮ್ಮ ದಿಂಬುಗಳನ್ನು ಸ್ವಚ್ಛವಾಗಿಡಲು ದಿಂಬಿನ ಕವರ್‌ಗಳನ್ನು ಬಳಸುತ್ತಾರೆ. ಕವರ್‌ಗಳನ್ನು ಪ್ರತಿ ವಾರ ಅಥವಾ ಎರಡು ವಾರಕ್ಕೊಮ್ಮೆ ಬದಲಾಯಿಸುತ್ತಾರೆ. ಇಲ್ಲವೇ ಸ್ವಚ್ಛಗೊಳಿಸುತ್ತಾರೆ. ಆದರೆ, ದಿಂಬಿನ ಕವರ್‌ಗಳನ್ನು ಎಷ್ಟು ಬಾರಿ ಸ್ವಚ್ಛಗೊಳಿಸಿದರೂ ಕೆಲವೊಮ್ಮೆ ದಿಂಬುಗಳ ಮೇಲೆ ಕಲೆಗಳು ಹಾಗೆಯೇ ಉಳಿದು ಬಿಡುತ್ತವೆ.
ಬಿಳಿ ದಿಂಬುಗಳಾಗಿದ್ದರೆ ಆ ಕಲೆಗಳು ಸುಲಭವಾಗಿ ಹೋಗದೆ ಹಾಗೆಯೇ ಉಳಿದು ಬಿಡಬಹುದು. ಕೆಲವೊಮ್ಮೆ ಇವುಗಳನ್ನು ಸ್ವಚ್ಛಗೊಳಿಸುವಾಗ ದಿಂಬುಗಳು ಹಾಳಾಗಬಹುದು. ಇನ್ನು ಮುಂದೆ ಇಂತಹ ಯಾವುದೇ ಟೆನ್ಷನ್ ಬೇಡ ಎನ್ನುತ್ತಾರೆ ತಜ್ಞರು. ಕೆಲವು ಸಿಂಪಲ್ ಟಿಪ್ಸ್ ಪಾಲಿಸಿದರೆ ಕಲೆಗಳನ್ನು ಸುಲಭವಾಗಿ ತೆಗೆಯಬಹುದು ಎಂದು ಹೇಳಿದ್ದಾರೆ. ಅವುಗಳು ಯಾವುವು ಎಂಬುದನ್ನ ತಿಳಿದುಕೊಳ್ಳೋಣ.
ವಿನೆಗರ್ :ವಿನೆಗರ್ ದಿಂಬುಗಳಲ್ಲಿನ ಕಲೆಗಳನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ ಎಂದು ತಜ್ಞರು ಹೇಳುತ್ತಾರೆ. ಅದಕ್ಕಾಗಿ ಒಂದು ಕಪ್ನಲ್ಲಿ ವಿನೆಗರ್ ಮತ್ತು ನೀರನ್ನು ಸಮನಾಗಿ ಮಿಶ್ರಣ ಮಾಡಿ, ಆ ಮಿಶ್ರಣದಲ್ಲಿ ಬಟ್ಟೆಯನ್ನು ಅದ್ದಿ ದಿಂಬಿನ ಮೇಲೆ ಕಲೆಯಾಗಿರುವ ಜಾಗಕ್ಕೆ ಚೆನ್ನಾಗಿ ಉಜ್ಜಿ. ಹೀಗೆ ಎರಡು ಬಾರಿ ಮಾಡಿದರೆ ದಿಂಬಿನ ಮೇಲಿನ ಕಲೆ ಸಂಪೂರ್ಣವಾಗಿ ಹೋಗುತ್ತದೆ ಎಂದಿದ್ದಾರೆ.
ಡಿಶ್ ಸೋಪ್ : ಬಿಸಿನೀರು, ಡಿಶ್ ಸೋಪ್.. ಈ ಎರಡನ್ನೂ ದಿಂಬಿನ ಕಲೆಗಳನ್ನು ತೆಗೆದುಹಾಕಲು ಬಳಸುತ್ತಾರೆ. ಮೊದಲು, ಸ್ವಲ್ಪ ಬಿಸಿ ನೀರನ್ನು ತೆಗೆದುಕೊಂಡು ಅದರಲ್ಲಿ ಡಿಶ್ ಸೋಪ್ ದ್ರವ ಸೇರಿಸಿ, ಸ್ವಲ್ಪ ಸಮಯದ ನಂತರ ಒಣ ಬಟ್ಟೆಯಿಂದ ಒರೆಸಿದರೆ ಕಲೆ ಮಾಯವಾಗುತ್ತದೆ ಎಂದು ತಜ್ಞರು ತಿಳಿಸಿದ್ದಾರೆ.