ಕರ್ನಾಟಕ

karnataka

ETV Bharat / health

ಯಾವುದೂ ನೆನಪಾಗುತ್ತಿಲ್ಲವೇ? ಮರೆವು ಕ್ಷಣಕ್ಷಣಕ್ಕೂ ಕಾಡುತ್ತಿದೆಯಾ?: ಈ ಐದು ಕೆಲಸ ಮಾಡಿ ಮರೆವಿಗೆ ಬೈಬೈ ಹೇಳಿ! - Tips For Increase Memory Power - TIPS FOR INCREASE MEMORY POWER

How to increase memory power -ವಯಸ್ಸಾದಂತೆ ಸೌಂದರ್ಯ ಮತ್ತು ಆರೋಗ್ಯ ಎರಡೂ ಕೈಕೊಡುವುದು ಗ್ಯಾರಂಟಿ. ಅವುಗಳನ್ನು ತಡೆಯಲು ಸಾಧ್ಯವೇ ಇಲ್ಲ. ಕೆಲಕಾಲ ಮುಂದೂಡಬಹುದಷ್ಟೇ. ಆರೋಗ್ಯ ಮತ್ತು ಅಂದ-ಚಂದ ಅಷ್ಟೇ ಅಲ್ಲ ಮೆದುಳಿನ ಚಟುವಟಿಕೆಯೂ ಕಡಿಮೆಯಾಗುತ್ತದೆ. ಆದರೆ ನಿಮ್ಮ ಮರೆವಿನ ಸಮಸ್ಯೆಯನ್ನು ಕಡಿಮೆ ಮಾಡಲು ನೀವು ಕೆಲವೊಂದಿ ಸುಲಭ ಅಭ್ಯಾಸಗಳನ್ನು ಅಳವಡಿಸಿಕೊಳ್ಳಬೇಕಾಗುತ್ತದೆ.

Tips For Increase Memory Power
ಯಾವುದೂ ನೆನಪಾಗುತ್ತಿಲ್ಲವೇ? ಮರೆವು ಕ್ಷಣಕ್ಷಣಕ್ಕೂ ಕಾಡುತ್ತಿದೆಯಾ?: ((ಮೂಲ: ಗೆಟ್ಟಿ ಇಮೇಜ್​​))

By ETV Bharat Karnataka Team

Published : May 22, 2024, 5:14 PM IST

ಬೆಂಗಳೂರು​: How to increase memory power - ಮೆದುಳಿನ ಕಾರ್ಯವು ಜೀವನದಲ್ಲಿ ನಮ್ಮ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ, ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳಲು ಸಹಾಯ ಮಾಡುತ್ತದೆ. ಹೊಸ ಹೊಸ ವಿಷಯಗಳನ್ನು ಕಲಿಯಲು ನೆರವಾಗುತ್ತದೆ. ಆದರೆ ವಾಸ್ತವ ಏನೆಂದರೆ, ವಯಸ್ಸಾದಂತೆ ಸೌಂದರ್ಯ ಕಡಿಮೆಯಾಗುತ್ತದೆ ಮತ್ತು ಮೆದುಳಿನ ಕಾರ್ಯವೂ ನಿಧಾನವಾಗುತ್ತದೆ.

ವೃದ್ಧಾಪ್ಯ ಆವರಿಸುತ್ತಿದ್ದಂತೆ ಮರೆವಿನ ಸಮಸ್ಯೆಯೂ ಹೆಚ್ಚುತ್ತದೆ ಮತ್ತು ಅನೇಕ ವಿಷಯಗಳನ್ನು ಕಲಿಯಲು ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ. ಒಂದೇ ಸಮಯದಲ್ಲಿ ಎರಡು ಮೂರು ಕೆಲಸಗಳನ್ನು ಮಾಡಲು ಈ ಸಮಯದಲ್ಲಿ ನಮಗೆ ಸಾಧ್ಯವಿಲ್ಲ. ಮಾನಸಿಕವಾಗಿಯೂ ಮೊದಲಿದ್ದಂತೆ ಸಕ್ರಿಯವಾಗಿರಲು ಸಾಧ್ಯವಿಲ್ಲ. ಕೆಲವರಿಗೆ ತಕ್ಷಣ ನಾಲಿಗೆ ಮೇಲೆ ಪದಗಳೇ ಸಿಗುವುದಿಲ್ಲ. ಇವೆಲ್ಲವೂ ಸಾಮಾನ್ಯ ಮರೆವಿನ ಲಕ್ಷಣಗಳಾಗಿವೆ ಎಂಬುದನ್ನು ನಾವು ಮರೆಯದೇ ನೆನಪಿನಲ್ಲಿಟ್ಟುಕೊಳ್ಳಬೇಕು. ಆದರೆ ನೀವು ನಿಯಮಿತವಾಗಿ ಮಾಡುವ ಕೆಲವು ಕೆಲಸಗಳು ನಿಮ್ಮನ್ನು ವಯಸ್ಸಾದಂತೆ ನೀವು ಅನುಭವಿಸಬಹುದಾದ ಮಾನಸಿಕ ಸಮಸ್ಯೆಗಳನ್ನು ಕಡಿಮೆ ಮಾಡಬಹುದು. ಏನವು ಸಲಹೆಗಳು ಅಂದರೆ,

ವ್ಯಾಯಾಮ:ಆರೋಗ್ಯವನ್ನು ಕಾಪಾಡಿಕೊಳ್ಳಲು ಪ್ರತಿಯೊಬ್ಬರೂ ವ್ಯಾಯಾಮ ಮಾಡಲೇಬೇಕು. ಇದರಿಂದಿ ಆರೋಗ್ಯವನ್ನು ಸಖತ್​ ಆಗಿ ಇಟ್ಟುಕೊಳ್ಳಲು ನೆರವಾಗುತ್ತದೆ. ನಿತ್ಯದ ನಿಯಮಿತ ದೈಹಿಕ ಚಟುವಟಿಕೆಯು ಮಾನಸಿಕ ಆರೋಗ್ಯವನ್ನು ಸುಧಾರಿಸುತ್ತದೆ. ನಿತ್ಯ ವ್ಯಾಯಾಮ ಮಾಡುವವರಲ್ಲಿ ಹಿಪೊಕ್ಯಾಂಪಸ್ ಗಾತ್ರ ಹೆಚ್ಚುವಂತೆ ಮಾಡುತ್ತದೆ ಮತ್ತು ಮೆದುಳು ಹೆಚ್ಚು ಕ್ರಿಯಾಶೀಲವಾಗುತ್ತದೆ. ನೆನಪಿನ ಶಕ್ತಿಯೂ ಹೆಚ್ಚುತ್ತದೆ ಎಂದು ಕೆಲವು ಅಧ್ಯಯನಗಳಿಂದ ಇದು ಸಾಬೀತಾಗಿದೆ ಕೂಡಾ.

ಪ್ರೋಟಿನ್​​​​ಯುಕ್ತ ಆಹಾರ ಸೇವನೆ: ಆರೋಗ್ಯಕರ ಆಹಾರವು ನಾವು ತಿನ್ನುವುದರ ಮೇಲೆ ಅವಲಂಬಿಸಿರುತ್ತದೆ. ಆರೋಗ್ಯಕರ ಆಹಾರವನ್ನು ಸೇವಿಸುವ ಜನರಲ್ಲಿ ಅರಿವಿನ ಕುಸಿತವು ಶೇಕಡಾ 24 ರಷ್ಟು ಕಡಿಮೆಯಾಗಿದೆ ಎಂಬುದನ್ನು ಅಧ್ಯಯನವು ತೋರಿಸಿಕೊಟ್ಟಿದೆ. ನಿಮ್ಮ ಸ್ಮರಣೆಯನ್ನು ಕಾಪಾಡಿಕೊಳ್ಳಲು ಮತ್ತು ಮೆದುಳನ್ನು ಸಕ್ರಿಯವಾಗಿರಿಸಿಕೊಳ್ಳಬೇಕು ಎಂದರೆ ಪ್ರೋಟೀನ್​​, ಕಾರ್ಬೋಹೈಡ್ರೇಟ್​​ ಮತ್ತು ಆರೋಗ್ಯಕರ ಕೊಬ್ಬುಗಳಿಂದ ಕೂಡಿರುವ ಆಹಾರ ಸೇವೆನೆಯನ್ನು ಮಾಡಬೇಕಾಗಿರುವುದು ಅತ್ಯಗತ್ಯ. ಸಾಧ್ಯವಾದಷ್ಟು ಸಂಸ್ಕರಿಸಿದ ಸಕ್ಕರೆಯನ್ನು ತಪ್ಪಿಸುವುದು ಆರೋಗ್ಯದ ದೃಷ್ಟಿಯಿಂದ ಉತ್ತಮ.

ಮೆದುಳನ್ನು ತೀಕ್ಷ್ಣಗೊಳಿಸುವುದು ಹಾಗೂ ಜ್ಞಾಪಕ ಶಕ್ತಿ ನಷ್ಟವನ್ನು ತಡೆಗಟ್ಟುವ ಅತ್ಯುತ್ತಮ ಮಾರ್ಗವೆಂದರೆ ಪದಬಂಧದ ಆಟಗಳನ್ನು ಆಡುವುದು, ಪುಸ್ತಕಗಳನ್ನು ಓದುವುದು, ಹೊಸ ವಿಷಯಗಳು ಮತ್ತು ಕೌಶಲ್ಯಗಳನ್ನು ಕಲಿಯುವುದು, ನರ ಸಂಪರ್ಕಗಳನ್ನು ಸುಧಾರಿಸುವ ಆಟಗಳನ್ನು ಆಡುವುದರತ್ತ ಹೆಚ್ಚಿನ ಗಮನ ಕೊಡಬೇಕು. ಆಗಾಗ ಹೀಗೆ ಮಾಡುವುದರಿಂದ ನಿಮ್ಮ ನೆನಪಿನ ಶಕ್ತಿ ಹಾಗೂ ಬುದ್ದಿಮಟ್ಟ ಹಾಗೂ ಮೆದುಳನ್ನು ಚುರುಕುಗೊಳಿಸಲು ಸಹಾಯ ಮಾಡುತ್ತದೆ. ಈ ಎಲ್ಲ ಕ್ರಿಯೆಗಳು ಮಾನಸಿಕ ವ್ಯಾಯಾಮಗಳಾಗಿ ಕಾರ್ಯನಿರ್ವಹಿಸುತ್ತವೆ ಮತ್ತು ಮೆದುಳನ್ನು ಕ್ರಿಯಾಶೀಲವಾಗಿಸಲು ಸವಾಲು ಹಾಕುತ್ತವೆ.

ಒತ್ತಡದಿಂದ ಮುಕ್ತವಾಗುವುದು: ಒತ್ತಡ ಮತ್ತು ಆತಂಕವನ್ನು ಸಾಧ್ಯವಾದಷ್ಟು ತಪ್ಪಿಸಬೇಕು. ಜೀವನದಲ್ಲಿ ಅನೇಕ ಸಮಸ್ಯೆಗಳಿಂದ ಒತ್ತಡ ಮತ್ತು ಆತಂಕವು ಸಾಮಾನ್ಯವಾಗಿದೆಯಾದರೂ, ಅವುಗಳನ್ನು ನಿವಾರಿಸಲು ನೀವು ಸಂಗೀತವನ್ನು ಕೇಳುವುದು, ಪುಸ್ತಕಗಳನ್ನು ಓದುವುದು, ಪ್ರಯಾಣ ಮತ್ತು ವಿಶ್ರಾಂತಿ ಮುಂತಾದ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವುದು ಅತ್ಯವಶ್ಯಕ.

ಉತ್ತಮ ನಿದ್ರೆ: ದೈಹಿಕ ಆರೋಗ್ಯ ಮತ್ತು ಮೆದುಳಿನ ಆರೋಗ್ಯಕ್ಕೆ ಸಾಕಷ್ಟು ನಿದ್ರೆ ಅತ್ಯಗತ್ಯ. ನೀವು ಪ್ರತಿದಿನ ಕನಿಷ್ಠ ಏಳರಿಂದ ಒಂಬತ್ತು ಗಂಟೆಗಳ ನಿದ್ದೆ ಮಾಡಬೇಕು. ನಿದ್ರೆಯ ಕೊರತೆ ಅಥವಾ ಪ್ರಕ್ಷುಬ್ಧ ನಿದ್ರೆ ಎರಡೂ ನೆನಪಿನ ನಷ್ಟಕ್ಕೆ ಕಾರಣವಾಗಬಹುದು. ಆದ್ದರಿಂದ ನೀವು ಎಷ್ಟೇ ಕೆಲಸಗಳನ್ನು ಮಾಡಿದರೂ, ಶಾಂತಿಚಿತ್ತದಿಂದ ಹಾಗೂ ಮಂದಹಾಸದೊಂದಿಗೆ ಮಲಗುವ ಗುರಿಯನ್ನು ಹೊಂದಿರಬೇಕು.

ನಿಮ್ಮ ಗಮನಕ್ಕೆ: ಈ ಮೇಲೆ ನೀಡಿರುವ ಮಾಹಿತಿ, ವೈದ್ಯಕೀಯ ಸಲಹೆಗಳು ವೈಜ್ಞಾನಿಕ ಸಂಶೋಧನೆ, ಅಧ್ಯಯನಗಳು, ವೈದ್ಯಕೀಯ ಮತ್ತು ಆರೋಗ್ಯ ವೃತ್ತಿಪರ ಸಲಹೆಯನ್ನು ಆಧರಿಸಿ ನೀಡಿದವುಗಳಾಗಿವೆ. ಇವುಗಳನ್ನು ಅನುಸರಿಸುವ ಮುನ್ನ ಸಂಬಂಧಪಟ್ಟ ತಜ್ಞರೊಂದಿಗೆ ಸಮಾಲೋಚಿಸಿ ಮುಂದುವರೆಯುವುದು ಸೂಕ್ತ

ಇವುಗಳನ್ನೂ ಗಮನಿಸಿ :ದಿನಕ್ಕೆ ಇಷ್ಟು ಪ್ರಮಾಣದ ನೀರು ಕುಡಿಯೋದಿಲ್ವ? ಹಾಗಾದ್ರೆ ಈ 5 ಸಲಹೆ ನೆನಪಿರಲಿ - DRINK MORE WATER

ಸಿಂಥೆಟಿಕ್​ ಸಾಫ್ಟ್​ ಡ್ರಿಂಕ್ಸ್​​ ನೀರು ಅಥವಾ ತಾಜಾ ಹಣ್ಣಿಗೆ ಪರ್ಯಾಯವಲ್ಲ: ICMR - Synthetic Soft Drinks

ABOUT THE AUTHOR

...view details