ಹೈದರಾಬಾದ್: ಮಧುಮೇಹ ಎಂಬುದು ಸೈಲೆಂಟ್ ಕಿಲ್ಲರ್ನಂತೆ. ಇದರ ನಿಯಂತ್ರಣಕ್ಕೆ ನಿಯಮಿತ ವ್ಯಾಯಾಮ, ಡಯಟ್ ಅತ್ಯಗತ್ಯ. ಹೆಚ್ಚು ವ್ಯಾಯಾಮದ ಅಭ್ಯಾಸದ ಹೊರತಾಗಿಯೂ ಸರಳ ಆಹಾರ ಪದ್ಧತಿ ಬದಲಾವಣೆ ಮಾಡುವ ಮೂಲಕ ಈ ಮಧುಮೇಹ ನಿಯಂತ್ರಿಸಬಹುದು ಎನ್ನುತ್ತಾರೆ ತಜ್ಞರು. ದೈನಂದಿನ ಡಯಟ್ನಲ್ಲಿನ ಸಣ್ಣ ಬದಲಾವಣೆ ನಿಮ್ಮ ರಕ್ತದ ಸಕ್ಕರೆ ಮಟ್ಟವನ್ನು ನಿಯಂತ್ರಿಸುತ್ತದೆ. ಮಧುಮೇಹ ನಿಯಂತ್ರಣದಲ್ಲಿಡಲು ಸಮತೋಲಿತ ಆಹಾರ ಮತ್ತು ನಿಯಮಿತ ಚಟುವಟಿಕೆ ಅವಶ್ಯವಾಗಿದೆ. ಅದರಲ್ಲೂ ನಿಮ್ಮ ದೈನಂದಿನ ಆಹಾರದಲ್ಲಿ ಬೆಳಗಿನ ಸಮಯದಲ್ಲಿ ಈ ಆಹಾರ ಅಭ್ಯಾಸ ನಡೆಸುವುದು ಹೆಚ್ಚು ನಿರ್ಣಾಯಕವಾಗಿದೆ.
ಮಧುಮೇಹಿಗಳು ಬೆಳಗ್ಗಿನ ಹೊತ್ತು ಅರ್ಧ ಗಂಟೆಯ ವಾಕಿಂಗ್ ಜೊತೆಗೆ ಸರಳ ಕಾರ್ಬೋಹೈಡ್ರೇಟ್ ಆಹಾರ ಸೇವಿಸುವುದು ಅತ್ಯುತ್ತಮ. ಅದರಲ್ಲೂ ಕೆಲವು ಜ್ಯೂಸ್ಗಳು ಮಧುಮೇಹಕ್ಕೆ ಒಳ್ಳೆಯ ಪರಿಹಾರವಾಗಿದ್ದು, ಅವು ರಕ್ತದ ಸಕ್ಕರೆ ಮಟ್ಟವನ್ನು ನಿಯಂತ್ರಿಸುತ್ತದೆ ಎಂದಿದ್ದಾರೆ.
ಹಾಗಲಕಾಯಿ: ಹಾಗಲಕಾಯಿ ಜ್ಯೂಸ್ ಕೂಡ ಸಕ್ಕರೆ ಮಟ್ಟವನ್ನು ನಿಯಂತ್ರಿಸುತ್ತದೆ. ಬೆಳಗಿನ ಹೊತ್ತು ಇವುಗಳ ಸೇವನೆಯಿಂದ ಇನ್ಸುಲಿನ್ ಮೇಲೆ ಪರಿಣಾಮ ಬೀರುತ್ತದೆ. ಮಧುಮೇಹದ ಅಪಾಯವನ್ನು ತಡೆಯುತ್ತದೆ. ಇದರಲ್ಲಿನ ಪೊಲಿಪೆಟೈಡ್ - ಪಿಯು ಇನ್ಸುಲಿನ್ ಸುಧಾರಣೆಗೆ ಸಹಾಯ ಮಾಡುತ್ತದೆ. ಇದರಲ್ಲಿರುವ ವಿಸಿನ್ ಮತ್ತು ಲೆಕ್ಟಿನ್ ಮೇದೋಜ್ಜೀರಕ ಗ್ರಂಥಿಯಿಂದ ಇನ್ಸುಲಿನ್ ಸ್ರವಿಸುವಿಕೆ ಉತ್ತೇಜಿಸುತ್ತದೆ. ಗ್ಲೂಕೋಸ್ ನಿಧಾನಗತಿಯ ಬಳಕೆಗೆ ಕಾರಣವಾಗುತ್ತದೆ.
ಮೆಂತ್ಯೆ:ಮೆಂತ್ಯೆ ಮಧುಮೇಹ ನಿಯಂತ್ರಣಕ್ಕೆ ಅತ್ಯುತ್ತಮವಾಗಿದೆ. ರಾತ್ರಿ ನೆನಸಿದ ಮೆಂತ್ಯೆಯನ್ನು ಬೆಳಗ್ಗೆ ಸೇವಿಸುವುದರಿಂದ ಗ್ಲೆಸೆಮಿಕ್ ನಿಯಂತ್ರಣವಾಗುತ್ತದೆ. ಮೆಂತ್ಯೆ ಹಸಿವನ್ನು ಕಡಿಮೆ ಮಾಡಿ, ತೂಕ ನಿರ್ವಹಣೆ ಮಾಡುತ್ತದೆ. ಮೆಂತ್ಯ ಒಟ್ಟಾರೆ ಕೊಲೆಸ್ಟ್ರಾಲ್ ನಿಯಂತ್ರಿಸುತ್ತದೆ. ಇದು ಔಷಧೀಯ ರೀತಿಯ ಕಾರ್ಯಾಚರಣೆ ನಡೆಸುವ ಮೂಲಕ ಮಧುಮೇಹಿಗಳಲ್ಲಿ ಹೃದಯ ಸಮಸ್ಯೆ ತಡೆಯುತ್ತದೆ.