ಹೈದರಾಬಾದ್: ಜೇನುತುಪ್ಪ ಔಷಧಿ ಗುಣದೊಂದಿಗೆ ಆರೋಗ್ಯಕ್ಕೆ ಸಾಕಷ್ಟು ಪ್ರಯೋಜನಕಾರಿ ಅಂಶವನ್ನು ಹೊಂದಿದೆ. ತಜ್ಞರು ಹೇಳುವಂತೆ ಪ್ರತಿನಿತ್ಯ ಒಂದು ಚಮಚ(ಸ್ಪೂನ್) ಜೇನುತುಪ್ಪ ಸೇವನೆಯಿಂದ ಅನೇಕ ಆರೋಗ್ಯ ಸಮಸ್ಯೆಗಳನ್ನು ತಡೆಗಟ್ಟಬಹುದಾಗಿದೆ. ದೀರ್ಘಕಾಲ ಸಕ್ಕರೆ ಬದಲಾಗಿ ಜೇನುತುಪ್ಪ ಸೇವಿಸುವುದು ಕೂಡ ಉತ್ತಮ ಮಾರ್ಗವಾಗಿದೆ. ಜೇನುತುಪ್ಪದಲ್ಲಿ ಕ್ಯಾಲ್ಸಿಯಂ, ಕಬ್ಬಿಣ, ಸೋಡಿಯಂ, ಫಾಸ್ಪರಸ್, ಸಲ್ಫರ್, ಪೋಟಾಶಿಯಂನಂತಹ ಖನಿಜಾಂಶವಿದೆ. ಜೊತೆಗೆ ವಿಟಮಿನ್ ಸಿ ಮತ್ತು ವಿಟಮಿನ್ ಬಿ ಹಾಗೂ ಪ್ರೋಟಿನ್ ಅಂಶವಿದೆ. ಇಂತಹ ಜೇನುತುಪ್ಪವನ್ನು ಈ ಕೆಳಗಿನ ಆಹಾರದೊಂದಿಗೆ ಸೇವಿಸುವುದರಿಂದ ಮತ್ತಷ್ಟು ಆರೋಗ್ಯ ಪ್ರಯೋಜನ ಪಡೆಯಬಹುದು.
ಇದನ್ನೂ ಓದಿ:ವೇಗವಾಗಿ ತಲೆಕೂದಲು ಬೆಳೆಯಬೇಕೇ? ಈ ಸರಳ ಸಲಹೆಗಳನ್ನು ಪಾಲಿಸಿ - Tips to Grow Hair Fastly
ಬೆಳ್ಳುಳ್ಳಿ: ಸಿಪ್ಪೆ ಸುಲಿದ ಬೆಳ್ಳುಳ್ಳಿಯನ್ನು ಜೇನುತುಪ್ಪದೊಂದಿಗೆ ನೆನಸಿ ತಿನ್ನುವುದರಿಂದ ಸಾಕಷ್ಟು ಆರೋಗ್ಯ ಪ್ರಯೋಜನವಿದೆ. ಬೆಳ್ಳುಳ್ಳಿ ಮತ್ತು ಜೇನುತುಪ್ಪದಲ್ಲಿರುವ ಅಂಶಗಳು ಉರಿಯೂತ ಮತ್ತು ದೇಹದ ಊತವನ್ನು ಕಡಿಮೆ ಮಾಡುವ ಜೊತೆಗೆ ಪ್ರತಿರೋಧಕ ಶಕ್ತಿ ಹೆಚ್ಚಿಸುತ್ತದೆ. ಇದರಲ್ಲಿನ ಪೋಷಕಾಂಶಗಳು ಶ್ವಾಸಕೋಶದ ಸಮಸ್ಯೆ, ತ್ವಚೆ ರೋಗ ಮತ್ತು ಅತಿಸಾರಕ್ಕೆ ಪರಿಹಾರ ನೀಡುತ್ತದೆ. ಜೊತೆಗೆ ಅಸ್ತಮಾ, ಹೃದಯ ಸಮಸ್ಯೆ, ಮಲಬದ್ಧತೆ, ಅಧಿಕ ರಕ್ತದೊತ್ತಡ, ಅಸ್ಥಿಸಂಧಿವಾತ ಹಾಗೂ ಹಲ್ಲು ನೋವಿನ ಸಮಸ್ಯೆಗಳನ್ನು ಸಹ ತಡೆಗಟ್ಟುತ್ತದೆ.
ಇದನ್ನೂ ಓದಿ:ಬಿಡುವಿಲ್ಲದ ಜೀವನದಲ್ಲಿ ಆತಂಕ ಸಾಮಾನ್ಯ ಎಂದರೆ ಅದು ತಪ್ಪು: ಇದರಿಂದಾಗುವ ಅಪಾಯ ಕಡಿಮೆಯಲ್ಲ! - Anxiety develops Parkinsons
ಬಿಸಿ ನೀರು: ಬೆಳಗಿನ ಹೊತ್ತು ಕಾಫಿ, ಟೀ ಬದಲಾಗಿ ಬಿಸಿ ನೀರಿಗೆ ಜೇನುತುಪ್ಪ ಮತ್ತು ನಿಂಬೆ ರಸ ಬೆರಸಿ ಕುಡಿಯುವುದರಿಂದ ಕೂಡ ಸಾಕಷ್ಟು ಪ್ರಯೋಜನಗಳಿವೆ. ಖಾಲಿ ಹೊಟ್ಟೆಯಲ್ಲಿ ಇದನ್ನು ಸೇವಿಸುವುದರಿಂದ ಪ್ರತಿರೋಧಕ ಶಕ್ತಿ ಅಭಿವೃದ್ಧಿಯಾಗುತ್ತದೆ. ತಜ್ಞರು ಹೇಳುವುದರಿಂದ ಇದು ತೂಕ ಇಳಿಕೆಗೆ ಸಹಕಾರಿಯಾಗಿದ್ದು, ಜೀರ್ಣಕ್ರಿಯೆ ಸುಧಾರಣೆ ಮಾಡುತ್ತದೆ. ದೇಹದಲ್ಲಿನ ತ್ಯಾಜ್ಯವನ್ನು ಹೊರ ಹಾಕಿ, ಆರೋಗ್ಯಭಾಗ್ಯ ಕರುಣಿಸುತ್ತದೆ.
ಇದನ್ನೂ ಓದಿ:ಕೃತಕ ಬಣ್ಣದ ಸೇವನೆಯಿಂದ ಆಗುವ ಸಮಸ್ಯೆಗಳಿವು: ಇದೇ ಕಾರಣಕ್ಕೆ ಸರ್ಕಾರದಿಂದ ನಿಷೇಧ - artificial food colours side effect
ಚಕ್ಕೆ ಪುಡಿ: ಬೆಳಗಿನ ಹೊತ್ತು ಅನೇಕ ಮಂದಿ ಬಿಸಿ ನೀರಿಗೆ ಜೇನುತುಪ್ಪ ಮತ್ತು ಸ್ವಲ್ಪ ಚಕ್ಕೆ ಪುಡಿ ಸೇರಿಸುವ ಅಭ್ಯಾಸವನ್ನು ರೂಢಿಸಿಕೊಂಡಿರುತ್ತಾರೆ. ಇದು ಹೃದಯ ಕಾಯಿಲೆ ಅಪಾಯವನ್ನು ಕಡಿಮೆ ಮಾಡುತ್ತದೆ. ಜೊತೆಗೆ ದೇಹದಲ್ಲಿರುವ ಕೆಟ್ಟ ಕೊಲೆಸ್ಟ್ರಾಲ್ ಮಟ್ಟ ಕಡಿಮೆ ಮಾಡಿ. ಮಧುಮೇಹವನ್ನು ನಿಯಂತ್ರಣದಲ್ಲಿ ಇಡುತ್ತದೆ.
ಇದನ್ನೂ ಓದಿ;ಕಲ್ಲು ಸಕ್ಕರೆಯೊಂದಿಗೆ ರೋಸ್‌ವುಡ್ ಎಲೆ ಸೇವಿಸುವುದರಿಂದ ಏನೆಲ್ಲಾ ಆರೋಗ್ಯ ಲಾಭಗಳಿವೆ ಗೊತ್ತಾ? - Benefits Of Sheesham Leaves
2010ರ ಇಂಟರ್ನ್ಯಾಷನಲ್ ಜರ್ನಲ್ ಆಫ್ ಫುಡ್ ಸೈನ್ಸ್ ಮತ್ತು ನ್ಯೂಟ್ರಿಷಿಯನ್ನಲ್ಲಿ ಪ್ರಕಟವಾದ ಅಧ್ಯಯನ ಅನುಸಾರ, ಜೇನುತುಪ್ಪದೊಂದಿಗೆ ಚಕ್ಕೆ ಪುಡಿ ಬೆರೆಯಿಸಿ ಕುಡಿಯುವುದರಿಂದ ಟೈಪ್ 2 ಮಧುಮೇಹಿಗಳಲ್ಲಿ ಸಕ್ಕರೆ ಮಟ್ಟವನ್ನು ಪರಿಣಾಮಕಾರಿಯಾಗಿ ಕಡಿಮೆ ಮಾಡಬಹುದಾಗಿದೆ. ಈ ಸಂಬಂಧ ಸೌದಿ ಅರೇಬಿಯಾದ ಕಿಂಗ್ ಅಬ್ದುಲಜಿಜ್ ಯೂನಿವರ್ಸಿಟಿಯ ಪ್ರೊ ಡಾ ಅಹ್ಮದ್ ಅಲ್ ಅಗ್ರಾ ಈ ಕುರಿತು ಅಧ್ಯಯನ ನಡೆಸಿದ್ದಾರೆ.
ಹಾಲು: ಪ್ರತಿನಿತ್ಯ ಬೆಚ್ಚಗಿನ ಹಾಲಿಗೆ ಜೇನುತುಪ್ಪ ಬೆರೆಸಿ ಕುಡಿಯುವುದರಿಂದ ವೀರ್ಯಾಣುಗಳ ಸಂಖ್ಯೆ ಹೆಚ್ಚಲಿದೆ. ಜೊತೆಗೆ ಇದರಿಂದ ಟೆಸ್ಟೊಸ್ಟ್ರೊನ್ ಹಾರ್ಮೋನ್ ಉತ್ಪಾದನೆ ಕೂಡ ಅಧಿಕವಾಗಲಿದೆ. ಮಹಿಳೆಯರು ಹಾಲಿಗೆ ಜೇನುತುಪ್ಪ ಬೆರಸಿ ಕುಡಿಯುವುದರಿಂದ ಅಂಡಾಶಯದ ಸಮಸ್ಯೆಗಳು ಕಡಿಮೆಯಾಗಲಿವೆ.
ಇದನ್ನೂ ಓದಿ:ಸರ್ವರೋಗಕ್ಕೂ ಬೆಲ್ಲದೊಂದಿಗೆ ಇದನ್ನು ಸೇವಿಸಿ; ಅಡಿಯಿಂದ ಮುಡಿವರೆಗಿನ ಸಮಸ್ಯೆಗಳಿಗೆ ಇಲ್ಲಿದೆ ಪರಿಹಾರ - Jaggery and Black Pepper
ವಿಶೇಷ ಸೂಚನೆ :ಇಲ್ಲಿ ನಿಮಗೆ ನೀಡಿರುವ ಎಲ್ಲ ಆರೋಗ್ಯ ಮಾಹಿತಿ ಮತ್ತು ಸಲಹೆಗಳು ನಿಮ್ಮ ತಿಳುವಳಿಕೆಗಾಗಿ ಮಾತ್ರ. ವೈಜ್ಞಾನಿಕ ಸಂಶೋಧನೆ, ಅಧ್ಯಯನಗಳು, ವೈದ್ಯಕೀಯ ಮತ್ತು ಆರೋಗ್ಯ ವೃತ್ತಿಪರ ಸಲಹೆಯನ್ನು ಆಧರಿಸಿ ನಾವು ಈ ಮಾಹಿತಿಯನ್ನು ಒದಗಿಸುತ್ತಿದ್ದೇವೆ. ಆದರೆ, ಇವುಗಳನ್ನು ಅನುಸರಿಸುವ ಮೊದಲು ಪರಿಣಿತ ವೈದ್ಯರ ಸಲಹೆಯನ್ನು ತೆಗೆದುಕೊಳ್ಳುವುದು ಉತ್ತಮ.
ಇದನ್ನೂ ಓದಿ: ಬಿಡುವಿಲ್ಲದ ಜೀವನದಲ್ಲಿ ಆತಂಕ ಸಾಮಾನ್ಯ ಎಂದರೆ ಅದು ತಪ್ಪು: ಇದರಿಂದಾಗುವ ಅಪಾಯ ಕಡಿಮೆಯಲ್ಲ