ದಾಳಿಂಬೆ ಹಣ್ಣು ಸಾಕಷ್ಟು ಆರೋಗ್ಯಕರ ಪ್ರಯೋಜನಗಳನ್ನು ಹೊಂದಿದೆ. ವಿಶೇಷ ರುಚಿ ಹೊಂದಿರುವ ಈ ಹಣ್ಣಿಗೆ ಬಹುಬೇಡಿಕೆ ಇದೆ. ಫ್ಲೇವನಾಯ್ಡ್‌ಗಳು ಮತ್ತು ಆಂಥೋಸಯಾನಿನ್‌ಗಳಂತಹ ಆ್ಯಂಟಿ ಆಕ್ಸಿಡೆಂಟ್ ಗುಣಗಳನ್ನು ಇದು ಹೊಂದಿದ್ದು, ಒತ್ತಡ ಮತ್ತು ರಕ್ತನಾಳಗಳಲ್ಲಿ ಕೊಬ್ಬಿನ ಶೇಖರಣೆ ಕಡಿಮೆ ಮಾಡಲು ಸಹಾಯಕ.
ದಾಳಿಂಬೆಯ ಪ್ರಯೋಜನಗಳಿವು: ಉರಿಯೂತ ಮತ್ತು ಆಕ್ಸಿಡೇಟಿವ್ ಒತ್ತಡ ಕಡಿಮೆ ಮಾಡುವ ದಾಳಿಂಬೆ, ಸಂಧಿವಾತ ಸಮಸ್ಯೆಗಳನ್ನು ಗುಣಪಡಿಸಲು ನೆರವಾಗುತ್ತದೆ. ಗರ್ಭದಾರಣೆಗೂ ದಾಳಿಂಬೆ ಸಹಾಯ ಮಾಡುತ್ತದೆ. ಇಷ್ಟೆಲ್ಲಾ ವಿವಿಧ ರೀತಿಯಲ್ಲಿ ಆರೋಗ್ಯಕ್ಕೆ ಒಳಿತಾಗಿರುವ ದಾಳಿಂಬೆ ಕೆಲವು ಅಡ್ಡ ಪರಿಣಾಮಗಳನ್ನೂ ಹೊಂದಿದೆ.
ಇವು ಅಡ್ಡ ಪರಿಣಾಮಗಳು: ಅತಿಯಾದ ದಾಳಿಂಬೆ ಸೇವನೆ ಕೆಲವೊಮ್ಮೆ ಅತಿಸಾರಕ್ಕೂ ಕಾರಣವಾಗುತ್ತದೆ. ತುರಿಕೆ ಮತ್ತು ಊತದಂತಹ ಅಲರ್ಜಿ ಸಮಸ್ಯೆಗಳು ಉಂಟಾಗುತ್ತವೆ. ದಿನಕ್ಕೆ ಅರ್ಧ ಕಪ್ ದಾಳಿಂಬೆಯನ್ನು ತಿಂದರೂ ಅಡ್ಡ ಪರಿಣಾಮ ಎದುರಿಸಬೇಕಾಗುತ್ತದೆ ಎನ್ನುತ್ತಾರೆ ತಜ್ಞರು. ದಾಳಿಂಬೆ ಹಣ್ಣುಗಳು ಆರೋಗ್ಯಕ್ಕೆ ಪ್ರಯೋಜನ ನೀಡಿದರೂ ಈ ಹಣ್ಣನ್ನು ಬೇರೆ ಹಣ್ಣಿನೊಂದಿಗೆ ಅಥವಾ ಔಷಧಗಳೊಂದಿಗೆ ಸೇವಿಸುವುದರಿಂದ ಸಮಸ್ಯೆಗಳಿಗೆ ಕಾರಣವಾಗುತ್ತದೆ.
ದಾಳಿಂಬೆ ಸಣ್ಣ ಪ್ರಮಾಣದಲ್ಲಿ ಆಮ್ಲ ಹೊಂದಿರುತ್ತದೆ. ಈ ಹಿನ್ನೆಲೆಯಲ್ಲಿ ಬಾಳೆಹಣ್ಣಿನಂತಹ ಸಿಹಿ ಹಣ್ಣಿನೊಂದಿಗೆ ಇದನ್ನು ಸೇವಿಸಬಾರದು. ಈ ಎರಡು ಹಣ್ಣಿನ ಸಂಯೋಜನೆ ಚಯಾಪಚಯನ ಕ್ರಿಯೆಗೆ ಅಡ್ಡಿಯಾಗುತ್ತದೆ.