ನವದೆಹಲಿ:ಸಫ್ದರ್ಜಂಗ್ ಆಸ್ಪತ್ರೆಯಲ್ಲಿ ಮೊದಲ ಬಾರಿಗೆ ರಕ್ತ ಕ್ಯಾನ್ಸರ್ ರೋಗಿಗೆ ಯಶಸ್ವಿಯಾಗಿ ಚಿಕಿತ್ಸೆ ಕೊಡಲಾಗಿದೆ. ಪಿಜಿಐ ಚಂಡೀಗಢ ಹಾಗೂ ದೆಹಲಿ ಏಮ್ಸ್ ನಂತರ CAR-T ಸೆಲ್ ಚಿಕಿತ್ಸೆಯೊಂದಿಗೆ ಕ್ಯಾನ್ಸರ್‌ಗೆ ಚಿಕಿತ್ಸೆ ನೀಡುವ ದೇಶದ ಮೂರನೇ ಆಸ್ಪತ್ರೆ ಸಫ್ದರ್ಜಂಗ್ ಆಗಿದೆ. ಲಿಂಫೋಮಾ ಹಾಗೂ ರಕ್ತ ಕ್ಯಾನ್ಸರ್ ಚಿಕಿತ್ಸೆಗಾಗಿ ಸಫ್ದರ್ಜಂಗ್ ಆಸ್ಪತ್ರೆಯು ಮೊದಲ CAR-T ಸೆಲ್ ಚಿಕಿತ್ಸೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದೆ. ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಪ್ರೊಫೆಸರ್ ಸಂದೀಪ್ ಬನ್ಸಾಲ್ ಅವರ ನೇತೃತ್ವದಲ್ಲಿ ಈ ಚಿಕಿತ್ಸೆಯು ಲಿಂಫೋಮಾ ಹಾಗೂ ರಕ್ತ ಕ್ಯಾನ್ಸರ್‌ಗೆ ವಿನೂತನವಾದ ಚಿಕಿತ್ಸೆಯಾಗಿದೆ.
ಆಸ್ಪತ್ರೆಯ ವಕ್ತಾರೆ ಪೂನಂ ಧಂಡಾ ಪ್ರತಿಕ್ರಿಯಿಸಿ, ವಿಭಾಗದ ಮುಖ್ಯಸ್ಥ ಡಾ. ಕೌಶಲ್ ಕಲ್ರಾ ಅವರ ನೇತೃತ್ವದಲ್ಲಿ ವೈದ್ಯಕೀಯ ಆಂಕೊಲಾಜಿ ವಿಭಾಗದ ಸಮರ್ಪಣೆ ಹಾಗೂ ಪರಿಣತಿಯಿಂದಾಗಿ ಮಹತ್ವದ ಸಾಧನೆ ಮಾಡಲು ಸಾಧ್ಯವಾಗಿದೆ. CAR-T ಸೆಲ್ ಚಿಕಿತ್ಸೆಯು ಒಂದು ಮುಂದುವರಿದ ಇಮ್ಯುನೊಥೆರಪಿಯಾಗಿದೆ. ಇದು ರೋಗಿಯ ಸ್ವಂತ ರೋಗನಿರೋಧಕ ಕೋಶಗಳ ಶಕ್ತಿಯನ್ನು ನಿರ್ದಿಷ್ಟವಾಗಿ ಟಿ-ಕೋಶಗಳನ್ನು ಕ್ಯಾನ್ಸರ್ ವಿರುದ್ಧ ಹೋರಾಡಲು ಬಳಕೆ ಮಾಡಿಕೊಳ್ಳತ್ತದೆ.
CAR-T ಸೆಲ್ ಚಿಕಿತ್ಸೆ:ಟಿ-ಸೆಲ್ಗಳನ್ನು ತಳೀಯವಾಗಿ ಮಾರ್ಪಡು ಮಾಡಲಾಗಿದೆ. ಅವು ದೇಹದ ನೈಸರ್ಗಿಕ ಪ್ರತಿರಕ್ಷಣಾ ಪ್ರತಿಕ್ರಿಯೆಗಿಂತ ಹೆಚ್ಚು ಪರಿಣಾಮಕಾರಿಯಾಗಿ ಕ್ಯಾನ್ಸರ್ ಕೋಶಗಳನ್ನು ಗುರಿಯಾಗಿಸಿಕೊಂಡು ನಾಶಪಡಿಸುತ್ತವೆ. ಈ ಚಿಕಿತ್ಸೆಯು ಹಾಡ್ಗ್ಕಿನ್ ಅಲ್ಲದೇ ಇರುವ ಲಿಂಫೋಮಾದಂತಹ ಕ್ಯಾನ್ಸರ್‌ಗಳಿಂದ ಬಳಲುತ್ತಿರುವ ರೋಗಿಗಳಿಗೆ ದಿಕ್ಕನ್ನೇ ಬದಲಾಯಿಸುವ ಗುಣ ಹೊಂದಿದೆ ಎಂಬುದನ್ನು ಸಾಬೀತು ಮಾಡಿದೆ. ಸಫ್ದರ್ಜಂಗ್ ಆಸ್ಪತ್ರೆಯಲ್ಲಿ ಮೊದಲ CAR-T ಸೆಲ್ ಚಿಕಿತ್ಸೆ ರಿಫ್ರ್ಯಾಕ್ಟರಿ ಅಲ್ಲದ ಹಾಡ್ಗ್ಕಿನ್ ಲಿಂಫೋಮಾ, ಒಂದು ರೀತಿಯ ರಕ್ತದ ಕ್ಯಾನ್ಸರ್ನಿಂದ ಬಳಲುತ್ತಿರುವ ರೋಗಿಗೆ ನೀಡಲಾಗಿದೆ.
ದೇಶದ 3ನೇ ಸೆಂಟ್ರಲ್ ಸರ್ಕಾರಿ ಆಸ್ಪತ್ರೆ:ರೋಗಿಯು ಚಿಕಿತ್ಸೆ ಚೆನ್ನಾಗಿ ಸ್ಪಂದಿಸಿದ್ದಾರೆ. ಇದು ರೋಗಿಗೆ ಮತ್ತು ವೈದ್ಯಕೀಯ ತಂಡಕ್ಕೆ ಪ್ರೋತ್ಸಾಹದಾಯಕ ಫಲಿತಾಂಶ ಲಭಿಸಿದೆ. ಈ ಯಶಸ್ವಿಗೆ ಆಸ್ಪತ್ರೆ ಅತ್ಯಾಧುನಿಕ ಕ್ಯಾನ್ಸರ್ ಆರೈಕೆ ಒದಗಿಸುವ ನಿರಂತರ ಪ್ರಯತ್ನಗಳಲ್ಲಿ ಒಂದು ಪ್ರಮುಖ ಮೈಲಿಗಲ್ಲು ಸಾಧಿಸಿದೆ. ಸಫ್ದರ್ಜಂಗ್ ಆಸ್ಪತ್ರೆಯು ಭಾರತದಲ್ಲಿ ಅತ್ಯಂತ ವಿಶೇಷ ಹಾಗೂ ಚಿಕಿತ್ಸಾ ಆಯ್ಕೆಯಾದ CAR-T ಸೆಲ್ ಚಿಕಿತ್ಸೆಯನ್ನು ನೀಡುವ 3ನೇ ಸೆಂಟ್ರಲ್ ಸರ್ಕಾರಿ ಆಸ್ಪತ್ರೆಯಾಗಿದೆ ಎಂದು ಡಾ.ಕೌಶಲ್ ಕಲ್ರಾ ಮೆಚ್ಚುಗೆ ವ್ಯಕ್ತಪಡಿಸಿದರು. ಈ ಸಾಧನೆಯ ಕುರಿತು ಸಂತೋಷ ವ್ಯಕ್ತಪಡಿಸಿದ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ.ಸಂದೀಪ್ ಬನ್ಸಾಲ್ ಅವರು, ದೇಶಾದ್ಯಂತ ರೋಗಿಗಳಿಗೆ ಸುಧಾರಿತ ವೈದ್ಯಕೀಯ ಚಿಕಿತ್ಸೆಗಳನ್ನು ಒದಗಿಸುವ ಸಂಸ್ಥೆಯ ಬದ್ಧತೆಯನ್ನು ಈ ಕಾರ್ಯವು ಒತ್ತಿಹೇಳುತ್ತದೆ ಎಂದು ತಿಳಿಸಿದರು.
ಉತ್ತರ ಭಾರತದ ಇತರ ಎರಡು ಸರ್ಕಾರಿ ಸಂಸ್ಥೆಗಳಾದ ಪಿಜಿಐ ಚಂಡೀಗಢ ಮತ್ತು ಏಮ್ಸ್ ನವದೆಹಲಿ ಮಾತ್ರ ಈ ಹಿಂದೆ ಸಿಎಆರ್ ಟಿ ಸೆಲ್ ಚಿಕಿತ್ಸೆಯನ್ನು ನೀಡುತ್ತವೆ. ಈ ಸಾಧನೆಯು ಸಫ್ದರ್ಜಂಗ್ ಆಸ್ಪತ್ರೆಯು ಪ್ರಮುಖ ಆರೋಗ್ಯ ಸಂಸ್ಥೆಯಾಗಿ ಅದರ ಖ್ಯಾತಿಯನ್ನು ಹೆಚ್ಚಿಸುವುದರ ಜೊತೆಗೆ, ಸಾರ್ವಜನಿಕ ಆರೋಗ್ಯ ವ್ಯವಸ್ಥೆಯಲ್ಲಿ ರೋಗಿಗಳಿಗೆ ಈ ಜೀವ ಉಳಿಸಲು ಈ ಚಿಕಿತ್ಸೆಯ ಮಹತ್ವದ್ದಾಗಿದೆ. ಈ ಸಾಧನೆಯು ಕ್ಯಾನ್ಸರ್ ರೋಗಿಗಳಿಗೆ ಚಿಕಿತ್ಸೆ ನೀಡಲು ಕಷ್ಟಕರವಾದ ರಕ್ತದ ಕ್ಯಾನ್ಸರ್ ಇರುವವರಿಗೆ ಆಶಾಕಿರಣವಾಗಿದೆ. ಭಾರತದ ಇತರ ಸಾರ್ವಜನಿಕ ಆಸ್ಪತ್ರೆಗಳು ಇಂತಹ ಚಿಕಿತ್ಸೆಯನ್ನು ಒದಗಿಸಲು ಹೊಸ ಮಾನದಂಡವನ್ನು ಸ್ಥಾಪಿಸುತ್ತದೆ ಎಂದು ಡಾ.ಸಂದೀಪ್ ಬನ್ಸಾಲ್ ಹೇಳಿದ್ದಾರೆ.