ಹೈದರಾಬಾದ್: ಪ್ರತಿವರ್ಷ ಜಾಗತಿಕವಾಗಿ 1 ಬಿಲಿಯನ್ಗೂ ಹೆಚ್ಚು ಮಂದಿ ಮೈಗ್ರೇನ್ ತಲೆನೋವಿನಿಂದ ಬಾಧಿತರಾಗುತ್ತಿದ್ದಾರೆ. ಅತಿ ಹೆಚ್ಚಿನ ಪ್ರಸರಣವನ್ನು ಇದು ಹೊಂದಿದ್ದರೂ, ಈ ಸಮಸ್ಯೆಗೆ ನಿಖರ ಕಾರಣ ಪತ್ತೆಯಾಗಿಲ್ಲ. ಅಲ್ಲದೇ ಇದಕ್ಕೆ ನಿಖರ ಚಿಕಿತ್ಸೆಯೂ ಇಲ್ಲ. ಆದಾಗ್ಯೂ, ಈ ಮೈಗ್ರೇನ್ ಸಮಸ್ಯೆ ಉಂಟುಮಾಡುವ ಅಂಶಗಳನ್ನು ಊಹೆ ಮಾಡಬಹುದಾಗಿದೆ. ಇದರಿಂದ ಅದರ ಚಿಕಿತ್ಸೆಗೆ ಸಹಾಯ ಆಗಲಿದೆ ಎಂದು ಸಂಶೋಧನೆ ತಿಳಿಸಿದೆ.
ಮೈಗ್ರೇನ್ ದಾಳಿಯನ್ನು ನಿದ್ರೆ, ಶಕ್ತಿ, ಭಾವನೆ ಮತ್ತು ಒತ್ತಡಗಳಂತಹ ಪ್ರಚೋದನಾ ಅಂಶದ ಮೂಲಕ ಅದನ್ನು ಊಹೆ ಮಾಡಬಹುದಾಗಿದೆ ಎಂದು ಅಮೆರಿಕದ ನ್ಯಾಷನಲ್ ಇನ್ಸಿಟಿಟ್ಯೂಟ್ ಆಫ್ ಮೆಂಟಲ್ ಹೆಲ್ತ್ ಸಂಶೋಧಕರು ತಿಳಿಸಿದ್ದಾರೆ.
ಕಳಪೆ ಮತ್ತು ಕಡಿಮೆ ನಿದ್ರೆಯ ಗುಣಮಟ್ಟವೂ ಮರುದಿನ ಶೇ 22ರಿಂದ ಶೇ 18ರಷ್ಟು ಮೈಗ್ರೇನ್ ಅಪಾಯವನ್ನು ಹೆಚ್ಚಿಸುತ್ತದೆ. ಅದೇ ರೀತಿ ಕಡಿಮೆ ಶಕ್ತಿ ಮಟ್ಟವೂ ಕೂಡ ಶೇ 17ರಷ್ಟು ಮೈಗ್ರೇನ್ ತಲೆನೋವಿಗೆ ಕಾರಣವಾಗುತ್ತದೆ ಎಂದು ಅಧ್ಯಯನ ತಿಳಿಸಿದೆ. ಅಷ್ಟೇ ಅಲ್ಲದೇ, ಒತ್ತಡ, ಮತ್ತು ಗಣನೀಯ ಹೆಚ್ಚಿನ ಶಕ್ತಿ ಕೂಡ ಶೇ 17ರಷ್ಟು ಮೈಗ್ರೇನ್ ತಲೆನೋವಿಗೆ ಕಾರಣವಾಗಬಹುದು ಎಂದಿದ್ದಾರೆ.
477 ಮಂದಿಯನ್ನು ಈ ಅಧ್ಯಯನಕ್ಕೆ ಒಳಪಡಿಸಲಾಗಿದ್ದು, ಅವರ ಮನಸ್ಥಿತಿ (ಮೂಡ್), ಶಕ್ತಿ, ಒತ್ತಡ, ಅತಿ ಹೆಚ್ಚಿನ ಮೊಬೈಲ್ ಬಳಕೆ ಕುರಿತಾದ ಪ್ರಶ್ನೆಗಳನ್ನು ಕೇಳಿದ್ದಾರೆ. ಈ ವೇಳೆ ಭಾಗಿದಾರರು ತಮ್ಮ ಕಳಪೆ ನಿದ್ರೆ ಮತ್ತು ದೈಹಿಕ ಚಟುವಟಿಕೆ ನಿರ್ವಹಣೆ ಕುರಿತು ತಿಳಿಸಿದ್ದಾರೆ.