Samantha Skin Care Routine:ನಟಿಯರ ಮುಖದ ತ್ವಚೆಯು ಇಷ್ಟು ಸ್ಪಷ್ಟ ಮತ್ತು ಹೊಳೆಯುತ್ತದೆ ಎಂದು ನಾವು ಆಶ್ಚರ್ಯ ಪಡುತ್ತೇವೆ. ಇದು ಕೇವಲ ಮೇಕಪ್‌ನಿಂದ ಎಂದು ಹಲವರು ಭಾವಿಸುತ್ತಾರೆ. ಆದರೆ ಇದು ನಿಜವೂ ಕೂಡ. ಮೇಕಪ್ ಮತ್ತು ತ್ವಚೆಯ ಆರೈಕೆಯಲ್ಲಿ ಬಹಳ ವ್ಯತ್ಯಾಸವಿದೆ. ನಿಮ್ಮ ಚರ್ಮವು ಆರೋಗ್ಯಕರವಾಗಿದ್ದರೆ ಮಾತ್ರ ನಿಮ್ಮ ಮುಖವು ಸ್ಪಷ್ಟವಾಗಿರುವ ಜೊತೆಗೆ ಹೊಳೆಯುತ್ತದೆ ಎಂಬುದನ್ನು ನೆನಪಿಡಿ ಅದಕ್ಕಾಗಿಯೇ ಪ್ರತಿಯೊಬ್ಬರೂ ಚರ್ಮದ ಆರೈಕೆಯನ್ನು ಅನುಸರಿಸಬೇಕು ಎಂದು ಹಲವರು ಹೇಳುತ್ತಾರೆ. ನಟಿ ಸಮಂತಾ ಇತ್ತೀಚೆಗೆ ತಮ್ಮ ಇನ್‌ಸ್ಟಾಗ್ರಾಮ್ ಪುಟದಲ್ಲಿ ಪೋಸ್ಟ್ ಮಾಡಿದ್ದಾರೆ. ''ಚರ್ಮದ ಆರೋಗ್ಯವು ಕೇವಲ ಸೌಂದರ್ಯವಲ್ಲ, ಇದು ನಮ್ಮ ಒಟ್ಟಾರೆ ದೇಹದ ಸ್ವಾಸ್ಥ್ಯದ ಪ್ರಮುಖ ಭಾಗವಾಗಿದೆ'' ಎಂದು ಬರೆದುಕೊಂಡಿದ್ದಾರೆ.
ನಟಿ ತನ್ನ 'ಡೇ ಇನ್ ಮೈ ಲೈಫ್' ವಿಡಿಯೋದಲ್ಲಿ ಹೊಳೆಯುವ ಮುಖದ ಹಿಂದಿನ ರಹಸ್ಯವನ್ನು ಬಹಿರಂಗಪಡಿಸಿದ್ದಾರೆ. ಹಾಗಾದರೆ, ಚರ್ಮದ ಹೊಳಪುಗಾಗಿ ರೆಡ್ ಲೈಟ್ ಥೆರಪಿಯ ಬಗ್ಗೆ ಅವರು ಏನು ಹೇಳುತ್ತಾರೆ? ಇದನ್ನು ಮಾಡುವುದರಿಂದ ಆಗುವ ಲಾಭಗಳೇನು ಎಂಬುದನ್ನು ಇಲ್ಲಿ ತಿಳಿಯೋಣ..
ರೆಡ್ ಲೈಟ್ ಥೆರಪಿ (RTL) ಎಂದರೇನು?: ರೆಡ್ ಲೈಟ್ ಥೆರಪಿಯು ಚರ್ಮದ ಮೇಲಿನ ಕಲೆಗಳು, ಸುಕ್ಕುಗಳು, ಮೊಡವೆಗಳು ಇತ್ಯಾದಿಗಳನ್ನು ಸರಿಪಡಿಸುವ ಮೂಲಕ ಮುಖ ಮತ್ತು ದೇಹದ ಸೌಂದರ್ಯವನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಈ ವಿಧಾನದಲ್ಲಿ ಕಡಿಮೆ ರೆಡ್ ಲೈಟ್ ಅನ್ನು ಬಳಸುತ್ತದೆ. ರೆಡ್ ಲೈಟ್ ಥೆರಪಿಯು ಕೆಂಪು ಬೆಳಗಿನ ಕಡಿಮೆ ತರಂಗಾಂತರಗಳನ್ನು ಬಳಸುವ ಥೆರಪಿ ತಂತ್ರವಾಗಿದೆ. ಇದು ಕೇವಲ ಮುಖದ ಆರೈಕೆಗಾಗಿ ಮಾತ್ರ ಅಲ್ಲ, ಈ ಥೆರಪಿಯನ್ನು ಇಡೀ ದೇಹದ ಚಿಕಿತ್ಸೆಗಾಗಿ ಬಳಸಲಾಗುತ್ತದೆ. ನಿರ್ದಿಷ್ಟ ಭಾಗಗಳನ್ನು ಗುರಿಯಾಗಿಸಲು ಹ್ಯಾಂಡ್ಹೆಲ್ಡ್ ಸಾಧನಗಳನ್ನು ಬಳಸಲಾಗುತ್ತದೆ.
ರೆಡ್ ಲೈಟ್ ಥೆರಪಿ ದೇಹಕ್ಕೆ ಹೇಗೆ ಸಹಾಯವಾಗುತ್ತೆ?
- ಸಂಧಿವಾತ ಸಮಸ್ಯೆ ನಿವಾರಿಸುತ್ತದೆ
- ರಕ್ತಪರಿಚಲನೆಗೆ ಸಹಾಯ ಮಾಡುತ್ತದೆ
- ಗಾಯ ವಾಸಿ ಮಾಡುತ್ತದೆ
- ರೋಗನಿರೋಧಕ ಶಕ್ತಿ ಹೆಚ್ಚಿಸುತ್ತದೆ
- ಥೈರಾಯ್ಡ್ ಹಾರ್ಮೋನ್ ವ್ಯತ್ಯಾಸವಾಗುವುದನ್ನು ತಡೆಯಲು ಸಹಾಯವಾಗುತ್ತದೆ
ನೀವು ಯಂಗ್ ಆಗಿ ಕಾಣಿಸುತ್ತೀರಿ:ರೆಡ್ ಲೈಟ್ ಥೆರಪಿಯಿಂದ ನಿಮ್ಮ ಚರ್ಮದ ಮೇಲಿನ ಸುಕ್ಕುಗಳು, ಕಲೆಗಳು, ಗೆರೆಗಳನ್ನು ಕಡಿಮೆ ಮಾಡುತ್ತದೆ. ಮತ್ತು ನಿಮ್ಮ ಚರ್ಮಕ್ಕೆ ಉತ್ತೇಜನ ನೀಡುತ್ತದೆ. ಇದು ರಕ್ತ ಪರಿಚಲನೆ ಸುಧಾರಿಸುತ್ತದೆ ಮತ್ತು ವಯಸ್ಸಾದ ಚರ್ಮದ ಸಮಸ್ಯೆಗಳನ್ನು ತಡೆಯುತ್ತದೆ. ನೀವು ಯಂಗ್ ಆಗಿ ಕಾಣಲು ಸಾಧ್ಯವಾಗುತ್ತದೆ.