Is thirst a good predictor of dehydration:ಮಾನವ ದೇಹಕ್ಕೆ ನೀರು ಅತ್ಯವಶ್ಯಕ ಎಂದು ಅನೇಕ ಸಂಶೋಧನೆಗಳು ಸಾಬೀತುಪಡಿಸಿವೆ. ದೇಹದ ಎಲ್ಲ ಜೀವಕೋಶಗಳು ಕಾರ್ಯನಿರ್ವಹಿಸಲು ನೀರು ತೀರಾ ಅಗತ್ಯವಾಗಿದೆ. ಲಾಲಾರಸ, ರಕ್ತ, ಮೂತ್ರ ಮತ್ತು ಬೆವರು ಮುಂತಾದ ಎಲ್ಲ ದ್ರವಗಳಿಗೆ ನೀರು ಆಧಾರವಾಗಿದೆ. ಆದ್ದರಿಂದ ಸಾಕಷ್ಟು ನೀರು ಕುಡಿಯುವುದು ಮುಖ್ಯವಾಗಿದೆ. ನೀರಿಲ್ಲದೇ ಮನುಷ್ಯ ಕೆಲವೇ ದಿನ ಬದುಕಬಲ್ಲ. ಆದರೆ, ನಾವು ಉಸಿರಾಡುವಾಗ, ಬೆವರು ಮತ್ತು ಮೂತ್ರ ವಿಸರ್ಜನೆ ಮೂಲಕ ದೇಹದಲ್ಲಿರುವ ನೀರನ್ನು ಆವಿಯ ರೂಪದಲ್ಲಿ ಕಳೆದುಕೊಳ್ಳುತ್ತೇವೆ. ಅದಕ್ಕಾಗಿಯೇ ದೇಹದಲ್ಲಿನ ನೀರಿನ ಮಟ್ಟವನ್ನು ನಿಯಂತ್ರಿಸಲು ಮತ್ತು ನಿರ್ವಹಿಸಲು ಅಂತಾನೇ ದೇಹದಲ್ಲಿ ಒಂದು ವ್ಯವಸ್ಥೆ ನಿರ್ಮಾಣವಾಗಿದೆ.
ಬಾಯಾರಿಕೆ ಎಂದರೇನು?:ಇದು ಮಾನವನ ದೇಹದಲ್ಲಿ ಆಗುವ ದ್ರವ ನಷ್ಟವನ್ನು ಸಮತೋಲನದಲ್ಲಿಡುತ್ತದೆ. ಮತ್ತು ಕುಡಿಯುವ ನೀರನ್ನು ಉತ್ತೇಜಿಸುತ್ತದೆ. ಆಗ ಬಾಯಿ ಒಣಗಿ ನೀರು ಬೇಕು ಎನ್ನಿಸುತ್ತದೆ. ಈ ಸ್ಥಿತಿಯನ್ನೇ ನಾವು ಬಾಯಾರಿಕೆ ಎಂದು ಕರೆಯುತ್ತೇವೆ.
ಬಾಯಾರಿಕೆ ಒಂದು ಮೂಲಭೂತ ಶಾರೀರಿಕ ಕಾರ್ಯವಿಧಾನವಾಗಿದೆ. ಮೆದುಳಿನ ನಿಯಂತ್ರಣ ಕೇಂದ್ರ ಎಂದು ಕರೆಯಲ್ಪಡುವ ಹೈಪೋಥಾಲಮಸ್ ಈ ಕಾರ್ಯವಿಧಾನವನ್ನು ನಿಯಂತ್ರಿಸುತ್ತದೆ. ಅದರ ಭಾಗವಾಗಿ, ಇದು ದೇಹದ ವಿವಿಧ ಭಾಗಗಳಿಂದ ಸಂಕೇತಗಳನ್ನು ಪಡೆಯುತ್ತದೆ. ಅವರು ಬಾಯಾರಿಕೆಯ ಸಂವೇದನೆಯನ್ನು ಉಂಟುಮಾಡಲು ಹಾರ್ಮೋನುಗಳನ್ನು ಬಿಡುಗಡೆ ಮಾಡುತ್ತದೆ. ಈ ಮೂಲಕ ದೇಹದ ಅಗತ್ಯಗಳನ್ನು ಪೂರೈಸಿಕೊಳ್ಳಲು ಸ್ವಯಂ ಸಂಕೇತಗಳು ಹಾಗೂ ಸಂಜ್ಞೆಗಳ ಮೂಲಕ ಮಾಹಿತಿ ರವಾನಿಸುತ್ತದೆ.
ಅಷ್ಟಕ್ಕೂ ನಿರ್ಜಲೀಕರಣ ಎಂದರೇನು?:ಹೈಡ್ರೇಟೆಡ್ ಆಗಿರುವುದು ಎಂದರೆ ನಮ್ಮ ದೇಹದಲ್ಲಿ ಸಾಕಷ್ಟು ನೀರು ಇರುವುದು ಎಂಬ ಅರ್ಥವನ್ನು ನೀಡುತ್ತದೆ. ದ್ರವದ ನಷ್ಟವು ನೀರಿನ ಸೇವನೆಗಿಂತ ಹೆಚ್ಚಿದ್ದರೆ, ದೇಹದಲ್ಲಿನ ನೀರಿನ ಸಮತೋಲನವು ತೊಂದರೆಗೊಳಗಾಗುತ್ತದೆ ಮತ್ತು ನಿರ್ಜಲೀಕರಣಕ್ಕೆ ಕಾರಣವಾಗುತ್ತದೆ. ದ್ರವದ ಪ್ರಮಾಣದಲ್ಲಿ ಸ್ವಲ್ಪ ಇಳಿಕೆಯಾದರೂ ತಲೆನೋವು, ಆಲಸ್ಯ, ಏಕಾಗ್ರತೆಯ ನಷ್ಟದಂತಹ ಸಮಸ್ಯೆಗಳನ್ನು ಉಂಟು ಮಾಡಬಹುದು. ದೀರ್ಘಕಾಲದ ನಿರ್ಜಲೀಕರಣವು ಮೂತ್ರದ ಸೋಂಕು, ಮಲಬದ್ಧತೆ ಮತ್ತು ಮೂತ್ರಪಿಂಡದ ಕಲ್ಲುಗಳಿಗೆ ಕಾರಣವಾಗಬಹುದು. ದೇಹದಲ್ಲಿನ ಈ ಕೆಳಗಿನ ಕಾರ್ಯಗಳ ಸರಿಯಾದ ಕಾರ್ಯನಿರ್ವಹಣೆಗೆ ಹೈಡ್ರೀಕರಿಸುವುದು ಅತಿ ಮುಖ್ಯವಾಗಿದೆ.
- ಬೆವರು ಮತ್ತು ಉಸಿರಾಟದ ಮೂಲಕ ದೇಹದ ಉಷ್ಣತೆ ನಿಯಂತ್ರಣ
- ಕೀಲುಗಳು ಮತ್ತು ಕಣ್ಣುಗಳನ್ನು ನಯಗೊಳಿಸಲು ಸಹಕಾರಿ
- ಸೋಂಕುಗಳನ್ನು ತಡೆಗಟ್ಟುವುದು
- ಪೋಷಕಾಂಶಗಳ ಹೀರಿಕೊಳ್ಳುವಿಕೆ ಮತ್ತು ಸರಿಯಾದ ಜೀರ್ಣಕ್ರಿಯೆಗೆ ಸಹಕಾರಿ
- ಮೂತ್ರಪಿಂಡಗಳ ಮೂಲಕ ತ್ಯಾಜ್ಯವನ್ನು ಹೊರಹಾಕುವುದು
- ಮಲಬದ್ಧತೆ ತಡೆಯುವುದು
- ಮೆದುಳಿನ ಕಾರ್ಯಕ್ಕಾಗಿ (ನೆನಪಿನ ಏಕಾಗ್ರತೆ) ಸಹಾಯ ಮಾಡುವುದು
- ಮನಸ್ಥಿತಿ ಮತ್ತು ಶಕ್ತಿಯ ಮಟ್ಟವನ್ನು ಕಾಪಾಡಿಕೊಳ್ಳುವುದು
- ದೈಹಿಕ ಕಾರ್ಯಕ್ಷಮತೆಗೆ ನೀರು ಅತ್ಯಗತ್ಯ
- ಚರ್ಮದ ಆರೋಗ್ಯ ಕಾಪಾಡಲು ನೀರು ಬೇಕೇ ಬೇಕು.
ಸಂಶೋಧನೆ ಹೇಳುವುದು ಏನು?; ಬಾಯಾರಿಕೆಯು ದೇಹವನ್ನು ಹೈಡ್ರೇಟ್ ಆಗಿ ಇಡುವುದಕ್ಕಾಗಿ ನೀರು ಕುಡಿಯಲು ಸೂಚನೆ ನೀಡುತ್ತದೆ. ಈ ಮೂಲಕ ದೇಹವನ್ನು ಸುಸ್ಥಿತಿಯಲ್ಲಿಡಲು ನೆರವು ನೀಡುತ್ತದೆ. ಆದರೆ ಬಾಯಾರಿಕೆ ಮತ್ತು ನಂತರದ ದ್ರವ ಸೇವನೆಯು ಜಲಸಂಚಯನ( ಹೈಡ್ರೇಟ್) ಮಟ್ಟಕ್ಕೆ ಸಮನಾಗಿರುವುದಿಲ್ಲ ಎಂದು ಸಂಶೋಧನೆ ತೋರಿಸುತ್ತದೆ.
ದ್ರವ ಸೇವನೆ ಮತ್ತು ಜಲಸಂಚಯನ ಸ್ಥಿತಿಯ ಮೇಲೆ ಬಾಯಾರಿಕೆಯ ಪರಿಣಾಮದ ಕುರಿತು ಇತ್ತೀಚಿನ ಸಂಶೋಧನಾ ವರದಿಯೊಂದು ಬಿಡುಗಡೆ ಆಗಿದೆ. ಈ ಸಂಶೋಧನೆಗಾಗಿ ಕೆಲವು ಸ್ವಯಂಸೇವಕರು ತಮ್ಮ ಮೂತ್ರ, ರಕ್ತ ಮತ್ತು ದೇಹದ ತೂಕದ ಮಾದರಿಗಳನ್ನು ಬೆಳಗ್ಗೆ ಮತ್ತು ಮಧ್ಯಾಹ್ನದ ವೇಳೆ ಪ್ರಯೋಗಾಲಯಕ್ಕೆ ನೀಡಿದ್ದರು. ಇವುಗಳ ಪರೀಕ್ಷಾ ವರದಿಯ ಪ್ರಕಾರ, ಬೆಳಗಿನ ಬಾಯಾರಿಕೆ ಮಟ್ಟಗಳು ಮತ್ತು ಮಧ್ಯಾಹ್ನದ ಹೈಡ್ರೇಟ್ ಸ್ಥಿತಿಯ ನಡುವೆ ಸ್ವಲ್ಪ ಪರಸ್ಪರ ಸಂಬಂಧವಿದೆ ಎಂಬುದನ್ನು ತೋರಿಸಿವೆ.
ಅಲ್ಲದೇ, ನೀರಿನ ಲಭ್ಯತೆಯಂತಹ ಅಂಶಗಳೂ ಬಾಯಾರಿಕೆಗೆ ಕಾರಣವಾಗಿರಬಹುದು ಎಂದು ಸಂಶೋಧನಾ ವರದಿ ಹೇಳಿದೆ. ಬಾಯಾರಿಕೆಯನ್ನು ಕಂಡುಹಿಡಿಯಲು, ಸಂಶೋಧಕರು ಕೆಲವನ್ನು ಸಂಶೋಧಿಸಿದ್ದಾರೆ. ಸ್ವಯಂಸೇವಕರು ಎಷ್ಟು ನೀರು ಕುಡಿಯುತ್ತಿದ್ದಾರೆ ಮತ್ತು ಅವರು ಎಷ್ಟು ಹೈಡ್ರೀಕರಿಸಿದ್ದಾರೆ ಎಂಬುದನ್ನು ನೋಡಲು ಮೇಲ್ವಿಚಾರಣೆ ಮಾಡಲಾಯಿತು. ಈ ಸಂದರ್ಭದಲ್ಲಿ ಸ್ವಯಂಸೇವಕರು ಎಷ್ಟು ಬಾಯಾರಿಕೆಯಾಗಿದ್ದರು ಮತ್ತು ಅವರು ಎಷ್ಟು ಹೈಡ್ರೀಕರಿಸಿಕೊಂಡಿದ್ದರು ಎಂಬುದರ ನಡುವೆ ಸ್ವಲ್ಪ ವ್ಯತ್ಯಾಸವಿದೆ ಎಂಬುದನ್ನು ಈ ವೇಳೆ ಕಂಡುಕೊಳ್ಳಲಾಗಿದೆ.