What is the benefit of the walking after eating: ಇಂದಿನ ಬ್ಯುಸಿ ಲೈಫ್ನಲ್ಲಿ ಬಹುತೇಕ ಜನರು ಕೆಲಸ ಮತ್ತು ಉದ್ಯಮದ ಬಗ್ಗೆ ವಹಿಸುವ ಕಾಳಜಿಯನ್ನು ಆರೋಗ್ಯದ ಬಗ್ಗೆ ವಹಿಸುವುದಲ್ಲ. ಜೊತೆಗೆ ಅವರ ತಿನ್ನುವ ಅಭ್ಯಾಸಗಳು, ಜೀವನಶೈಲಿಗಳು ಬದಲಾದ, ಕೆಲಸದ ಒತ್ತಡ ಹೆಚ್ಚಿದ್ದು, ದೈಹಿಕ ಚಟುವಟಿಕೆ ಕಡಿಮೆಯಾಗುತ್ತಿದೆ. ಇದೆಲ್ಲದರ ಪರಿಣಾಮ ಆರೋಗ್ಯದ ಮೇಲೆ ಬೀರುತ್ತಿದೆ. ಇದರಿಂದ ಸ್ಥೂಲಕಾಯ, ತೂಕ ಹೆಚ್ಚಳ ಮತ್ತು ಮಧುಮೇಹದ ಸಮಸ್ಯೆ ಹೆಚ್ಚುತ್ತಿದೆ.
ಇಂತಹ ಸಮಸ್ಯೆಗಳನ್ನು ತಪ್ಪಿಸಲು ಸಣ್ಣ ಮಾರ್ಪಾಡು ನಡೆಸುವುದು ಅವಶ್ಯ. ಅದುವೇ ಊಟವಾದ ಬಳಿಕ ನಡಿಗೆ. ಊಟವಾದ ತಕ್ಷಣ ಕೇವಲ 10 ನಿಮಿಷ ವಾಕ್ ಮಾಡಿದರೂ ಸಾಕು ಇದರಿಂದ ಹೆಚ್ಚಿನ ಆರೋಗ್ಯ ಪ್ರಯೋಜನವಿದೆ ಎಂದು ಆರೋಗ್ಯ ತಜ್ಞರು ತಿಳಿಸಿದ್ದಾರೆ. ಅದು ಹೇಗೆ ಎಂದರೆ, ಇಲ್ಲಿದೆ ಉತ್ತರ.
ಉತ್ತಮ ಜೀರ್ಣಕ್ರಿಯೆ: ಊಟವಾದ ಬಳಿಕ ನಡೆದಾಗದ ಅದು ಜೀರ್ಣಕ್ರಿಯೆ ಸುಧಾರಣೆಗೆ ಸಹಾಯ ಮಾಡುತ್ತದೆ. ಜೊತೆಗೆ ಹೊಟ್ಟೆ ಉಬ್ಬರ ಕಡಿಮೆಯಾಗಿ ಆಹಾರ ಚೆನ್ನಾಗಿ ಜೀರ್ಣವಾಗುತ್ತದೆ. ಇದರ ಫಲಿತಾಂಶವಾಗಿ ಮಲಬದ್ಧತೆ, ಗ್ಯಾಸ್ನಂತಹ ಸಮಸ್ಯೆ ಕಡಿಮೆಯಾಗುತ್ತದೆ. 2014ರಲ್ಲಿ ಪ್ರಕಟವಾದ ಅಧ್ಯಯನ ಜರ್ನಲ್ ಆಫ್ ನ್ಯೂಟ್ರಿಷಿಯನ್ ಪ್ರಕಾರ, ಆರೋಗ್ಯಯುತ ಜನರಲ್ಲಿ ಜೀರ್ಣಕ್ರಿಯೆ ದರ ಹೆಚ್ಚಿದ್ದು, ಇದು ಊಟವಾದ ಬಳಿಕ ನಡೆಸುವ 10 ನಿಮಿಷ ವಾಕಿಂಗ್ ಮೇಲೆ ಪ್ರಭಾವಿತವಾಗಿದೆ. ಈ ಅಧ್ಯಯನದಲ್ಲಿ ನ್ಯೂಜಿಲ್ಯಾಂಡ್ನ ಒಟಗೊ ಯುನಿವರ್ಸಿಟಿಯ ಡಾ ಎಂಜೆ ಸ್ಯಾಂಡ್ಸ್ ಕೂಡ ಭಾಗಿಯಾಗಿದ್ದರು.
ಹೃದಯದ ಆರೋಗ್ಯ ಸುಧಾರಣೆ: ಊಟವಾದ ಬಳಿಕದ ನಡಿಗೆಯು ರಕ್ತದ ಪರಿಚಲನೆ ಹೆಚ್ಚಿಸುತ್ತದೆ. ಇದು ಕೇವಲ ಹೃದಯದ ಆರೋಗ್ಯ ಕಾಪಾಡುವುದಿಲ್ಲ. ಇದರಿಂದ ಹೃದಯ ಸಂಬಂಧಿ ರೋಗದ ತಡೆಗಟ್ಟುತ್ತದೆ. ಇದು ರಕ್ತದೊತ್ತಡ ಮತ್ತು ಕೊಲೆಸ್ಟ್ರಾಲ್ ಮಟ್ಟ ಕಡಿಮೆ ಮಾಡಲು ಸಹಾಯ ಮಾಡುತ್ತದೆ.
ತೂಕ ನಷ್ಟಕ್ಕೆ ಸಹಾಯ: ಊಟವಾದ ಬಳಿಕ ನಡೆಯುವ ಅಭ್ಯಾಸವೂ ತೂಕದ ನಷ್ಟಕ್ಕೆ ಕೂಡ ಸಹಾಯವಾಗುತ್ತದೆ. ಕಾರಣ, ಇದರಿಂದ ಕ್ಯಾಲೋರಿಗಳು ಬರ್ನ್ ಆಗುತ್ತದೆ. ಇದರಿಂದ ತೂಕ ನಿಯಂತ್ರಣ ಸಾಧಿಸಬಹುದು.