ಕರ್ನಾಟಕ

karnataka

ETV Bharat / health

ಯುದ್ಧ ಭೂಮಿ ಗಾಜಾದಲ್ಲಿ ಪತ್ತೆಯಾಯ್ತು ಪೋಲಿಯೋ ಪ್ರಕರಣ - poliovirus detected in Gaza - POLIOVIRUS DETECTED IN GAZA

ಖಾನ್​ ಯುನಿಸ್​ ಮತ್ತು ದೇರ್​​ ಆಲ್​ ಬಲಹ್​ನಲ್ಲಿ ಆರು ಪರಿಸರ ಮಾದರಿಗಳಲ್ಲಿ ಪೋಲಿಯೋ ವೈರಸ್​ ಟೈಪ್​ 2 ಪತ್ತೆಯಾಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ವರದಿ ಮಾಡಿದೆ.

poliovirus detected in Gaza environmental samples says UN humanitarians
ಸಾಂದರ್ಭಿಕ ಚಿತ್ರ (IANS)

By ETV Bharat Karnataka Team

Published : Jul 20, 2024, 12:43 PM IST

Updated : Jul 20, 2024, 12:50 PM IST

ಹೈದರಾಬಾದ್​: ಯುದ್ಧ ಪೀಡಿತ ಪ್ರದೇಶ ಗಾಜಾದಲ್ಲಿ ಪೋಲಿಯೋ ವೈರಸ್​ ಪತ್ತೆಯಾಗಿದೆ. ಆದರೆ, ಪೋಲಿಯೋ ವೈರಸ್​ನಿಂದ ಪಾರ್ಶ್ವವಾಯುಗೆ ತುತ್ತಾಗಿರುವ ಯಾವುದೇ ವರದಿಯಾಗಿಲ್ಲ ಎಂದು ವಿಶ್ವಸಂಸ್ಥೆ ತಿಳಿಸಿದೆ.

ಗಾಜಾದಲ್ಲಿನ ನಿರಾಶ್ರಿತ ತಾಣಗಳಲ್ಲಿ ಜನಸಂದಣಿ, ನೀರಿನ ತೀವ್ರ ಕೊರತೆ ಮತ್ತು ಅನೈರ್ಮಲ್ಯ ಪರಿಸ್ಥಿತಿಗಳಿಂದಾಗಿ ಸಾಂಕ್ರಾಮಿಕ ರೋಗಗಳ ಹರಡುವಿಕೆ ಕಾಣುತ್ತಿದೆ. ಈ ಬಗ್ಗೆ ಕಾಳಜಿ ಹೊಂದಿದ್ದೇವೆ ಎಂದು ತಿಳಿಸಿದೆ ಎಂದು ವಿಶ್ವಸಂಸ್ಥೆಯ ಮಾನವೀಯ ವ್ಯವಹಾರಗಳ ಸಮನ್ವಯ ತಿಳಿಸಿದೆ ಎಂದು ಕ್ಸಿನುವಾ ಸುದ್ದಿ ಸಂಸ್ಥೆ ವರದಿ ಮಾಡಿದೆ.

ಖಾನ್​ ಯುನಿಸ್​ ಮತ್ತು ದೇರ್​​ ಆಲ್​ ಬಲಹ್​ನಲ್ಲಿ ಆರು ಪರಿಸರ ಮಾದರಿಗಳಲ್ಲಿ ಪೋಲಿಯೋ ವೈರಸ್​ ಟೈಪ್​ 2 ಪತ್ತೆಯಾಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ವರದಿ ಮಾಡಿದೆ. ಆದರೆ ಯಾವುದೇ ಪಾರ್ಶ್ವಾವಾಯುವಿನ ಪ್ರಕರಣಗಳು ಪತ್ತೆಯಾಗಿಲ್ಲ ಎಂದರು ಒಸಿಹೆಚ್​ಎ ಮಾಹಿತಿ ನೀಡಿದೆ.

ಪೋಲಿಯೋ ವೈರಸ್​ಗಳು ಲಸಿಕೆ ಪಡೆಯದ ಮಕ್ಕಳಲ್ಲಿ ಪಾರ್ಶ್ವವಾಯು ಮತ್ತು ಸಾವಿಗೆ ಕಾರಣವಾಗುತ್ತವೆ.

ಈ ಕುರಿತು ಮಾತನಾಡಿರುವ ವಿಶ್ವ ಆರೋಗ್ಯ ಸಂಸ್ಥೆ ಮುಖ್ಯಸ್ಥ ಟೆಡ್ರೊಸ್​ ಅಧಾಮೊಮ್​ ಘಬ್ರೆಯೆಸಸ್​, ಗಾಜಾದಲ್ಲಿ ಪೋಲಿಯೋ ವೈರಸ್​ ಹರಡುವಿಕೆ ವ್ಯಾಪ್ತಿ ಮತ್ತು ಅಪಾಯದ ಕುರಿತು ಮೌಲ್ಯಮಾಪನ ನಡೆಸಿದೆ ಎಂದು ಗಾಜಾ ಆರೋಗ್ಯ ಸಚಿವಾಲಯ ತಿಳಿಸಿದೆ. ಅಲ್ಲದೇ ಶೀಘ್ರದಲ್ಲೇ ಲಸಿಕೆ ಅಭಿಯಾನ ನಡೆಸುವುದಾಗಿ ಹೇಳಿದೆ.

ಗಾಜಾದಲ್ಲಿ ಕುಸಿಯುತ್ತಿರುವ ಆರೋಗ್ಯ ವ್ಯವಸ್ಥೆ, ವೈದ್ಯಕೀಯ ಪೂರೈಕೆಗಳ ಕೊರತೆ, ಜನಸಂಖ್ಯೆ ನಿರಂತರ ಸ್ಥಳಾಂತರ, ಕಳಪೆ ನೈರ್ಮಲ್ಯ ವ್ಯವಸ್ಥೆ ಮತ್ತು ನೀರಿನ ಗುಣಮಟ್ಟ, ಭದ್ರತೆ ಕೊರತೆಯು ಸೋಂಕು ಮಾತ್ರವಲ್ಲದೇ, ಲಸಿಕೆಗಳಿಂದ ತಡೆಯಬಹುದಾದ ಅನೇಕ ರೋಗದ ಅಪಾಯ ಹೆಚ್ಚಿಸಿದೆ.

ವಿಶ್ವ ಆರೋಗ್ಯ ಸಂಸ್ಥೆ ವರದಿ ಪ್ರಕಾರ, ಗಾಜಾದಲ್ಲಿ ಸೋಂಕು ಉಲ್ಬಣವಾಗುತ್ತಿದೆ. ಜುಲೈ 7ರಂದು ಸುಮಾರು 1 ಮಿಲಿಯನ್​ ಮಂದಿಯಲ್ಲಿ ಶ್ವಾಸಕೋಶ ಸಂಬಂಧಿ ಸೋಂಕು ಕಾಣಿಸಿಕೊಂಡಿದೆ. ನೀರಿನಿಂದ ಹರಡುವ ಅತಿಸಾರ ಪ್ರಕರಣಗಳು 5,75,00 ಹಾಗೂ 1,00,000 ಜಾಂಡೀಸ್​ ಪ್ರಕರಣಗಳು ದಾಖಲಾಗಿವೆ. ಈ ಸೋಂಕಿನ ಸಂಖ್ಯೆ ಮತ್ತಷ್ಟು ಹೆಚ್ಚಲಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಕಳವಳ ವ್ಯಕ್ತಪಡಿಸಿದೆ.

ಗಾಜಾದಲ್ಲಿ ಕಳೆದ ವರ್ಷದ ಅಕ್ಟೋಬರ್​ನಲ್ಲಿ ಯುದ್ಧ ಆರಂಭವಾದಾಗಿನಿಂದ ಶೇ 90ರಷ್ಟು ಜನತೆ ಸ್ಥಳಾಂತರಗೊಳ್ಳುತ್ತಿದ್ದಾರೆ. ಅನೇಕ ಮಂದಿ ಶುದ್ಧ ಕುಡಿಯುವ ನೀರನ್ನು ಪಡೆಯದಂತಹ ಭಯಾನಕ ಪರಿಸ್ಥಿತಿಗಳಲ್ಲಿ ಜೀವಿಸುತ್ತಿದ್ದಾರೆ ಎಂದು ಒಸಿಹೆಚ್ಎ ತಿಳಿಸಿದೆ. (ಐಎಎನ್​ಎಸ್​)

ಇದನ್ನೂ ಓದಿ: ಪಾಕಿಸ್ತಾನದಲ್ಲಿ ಪತ್ತೆಯಾಯ್ತು 5ನೇ ಪೋಲಿಯೊ ಪ್ರಕರಣ; ಲಸಿಕಾ ಕಾರ್ಯಕರ್ತರ ಮೇಲೆ ಭಯೋತ್ಪಾದಕರ ದಾಳಿ

Last Updated : Jul 20, 2024, 12:50 PM IST

ABOUT THE AUTHOR

...view details