ಕರ್ನಾಟಕ

karnataka

ETV Bharat / health

ಲಕ್ಷಾಂತರ ಮಕ್ಕಳ ಜೀವ ಉಳಿಸುವ ಓಆರ್​ಎಸ್​​​ ಶಿಫಾರಸು ಮಾಡುವಲ್ಲಿ ಹಿಂದೇಟು: ಅಧ್ಯಯನ - ಓಆರ್​ಎಸ್​​​

ಓಆರ್​ಎಸ್​ ಅತಿಸಾರದಿಂದ ಜೀವ ಉಳಿಸುವ ಚಿಕಿತ್ಸೆ ಆಗಿದ್ದರೂ ಇದನ್ನು ಶಿಫಾರಸು ಮಾಡುವಲ್ಲಿ ಆರೋಗ್ಯ ಕಾರ್ಯಕರ್ತರು ತಪ್ಪು ಗ್ರಹಿಕೆ ಹೊಂದಿದ್ದಾರೆ.

ORS cheap and effective treatment for diarrhoea
ORS cheap and effective treatment for diarrhoea

By IANS

Published : Feb 10, 2024, 2:15 PM IST

ಹೈದರಾಬಾದ್​: ಓರಲ್​ ರಿಹಡ್ರೇಷನ್​​ ಸಾಲ್ಟ್ಸ್​ (ಓಆರ್​ಎಸ್​​​ ​) ಎಂಬುದು ಅತಿಸಾರಕ್ಕೆ ಪರಿಣಾಮಕಾರಿ ಮತ್ತು ಅಗ್ಗದ ಚಿಕಿತ್ಸೆಯಾಗಿದ್ದು, ಪ್ರತಿ ವರ್ಷ ಅರ್ಧ ಲಕ್ಷಕ್ಕೂ ಹೆಚ್ಚು ಮಕ್ಕಳ ಜೀವನ ಉಳಿಸುತ್ತಿದೆ ಎಂದು ಅಧ್ಯಯನ ತಿಳಿಸಿದೆ.

ಜಾಗತಿಕವಾಗಿ ಅತಿಸಾರದಿಂದ ಐದು ವರ್ಷದೊಳಗಿನ 5,00,000 ಮಕ್ಕಳು ಸಾಯುತ್ತಿದ್ದಾರೆ. ಜಗತ್ತಿನ ಇತರ ದೇಶಗಳಿಗೆ ಹೋಲಿಕೆ ಮಾಡಿದಾಗ ಭಾರತದಲ್ಲಿ ಮಕ್ಕಳ ಅತಿಸಾರ ಪ್ರಕರಣ ಹೆಚ್ಚಿದ್ದು, ಇದು ಭಾರತದಲ್ಲಿ ಮಕ್ಕಳ ಸಾವಿಗೆ ಪ್ರಮುಖ ಕಾರಣವೂ ಆಗಿದೆ. ಓಆರ್​ಎಸ್​​​ ​ ಅತಿಸಾರದಿಂದ ಜೀವ ಉಳಿಸುವ ಚಿಕಿತ್ಸೆ ಆಗಿದ್ದರೂ ಇದಕ್ಕೆ ಕೆಲವರು ಮಾತ್ರ ಶಿಫಾರಸು ಮಾಡುತ್ತಾರೆ.

ಓಆರ್​ಎಸ್​​​ ​ ಅನ್ನು ಹೆಚ್ಚಾಗಿ ಶಿಫಾರಸು ಮಾಡದ ಹಿಂದಿರುವ ಕಾರಣ ಕುರಿತು ದಕ್ಷಿಣ ಕ್ಯಾಲಿಫೋರ್ನಿಯಾ ಯುನಿವರ್ಸಿಟಿ ಸಂಶೋಧಕರ ತಂಡ ಅಧ್ಯಯನ ನಡೆಸಿದೆ. ಕರ್ನಾಟಕ ಮತ್ತು ಬಿಹಾರ್​ದ 200 ನಗರಗಳಲ್ಲಿ 2 ಸಾವಿರ ಆರೋಗ್ಯ ಕಾರ್ಯಕರ್ತರಿಂದ ಈ ಬಗ್ಗೆ ಸಮೀಕ್ಷೆ ನಡೆಸಲಾಗಿದೆ.

ಈ ಅಧ್ಯಯನವನ್ನು ಜರ್ನಲ್​ ಸೈನ್ಸ್​ನಲ್ಲಿ ಪ್ರಕಟಿಸಲಾಗಿದ್ದು, ಭಾರತದಲ್ಲಿ ಶೇ 50 ರಷ್ಟು ಅತಿಸಾರ ಹೊಂದಿರುವ ಮಕ್ಕಳಿಗೆ ಓಆರ್​ಎಸ್​ ಲಭ್ಯವಾಗುತ್ತಿಲ್ಲ ಎಂಬುದು ಅಧ್ಯಯನದಲ್ಲಿ ಬಹಿರಂಗವಾಗಿದೆ. ಇದಕ್ಕೆ ಕಾರಣ ರೋಗಿಗೆ ಓಆರ್​ಎಸ್​ ಬೇಡ ಎಂಬ ತಪ್ಪು ಗ್ರಹಿಕೆಯಾಗಿದೆ. ಓಆರ್​ಎಸ್​ ಕಡಿಮೆ ಮಾಡುವಲ್ಲಿ ಇದು ಪ್ರಮುಖ ಪಾತ್ರ ಹೊಂದಿದೆ.

ಆರೋಗ್ಯ ಕಾರ್ಯಕರ್ತರು ರೋಗಿಗೆ ಓಆರ್​ಎಸ್​ ಬಯಸುವುದಿಲ್ಲ ಎಂದು ತಿಳಿದು ಶೇ 42ರಷ್ಟು ಕಡಿಮೆ ಶಿಫಾರಸು ಮಾಡುತ್ತಾರೆ. ಅಧ್ಯಯನದ ವರದಿಯಲ್ಲಿ ಕಂಡು ಬಂದ ಅಚ್ಚರಿಯ ಅಂಶ ಎಂದರೆ ರೋಗಿಗಳ ಆದ್ಯತೆಯಲ್ಲಿ ವೈದ್ಯರ ಗ್ರಹಿಕೆಯಲ್ಲಿ ಈ ಓಆರ್​ಎಸ್​ ಕಂಡು ಬಂದಿಲ್ಲ. ಈ ಸಮಸ್ಯೆಗೆ ಓಆರ್​ಎಸ್​ ಅತ್ಯುತ್ತಮ ಚಿಕಿತ್ಸೆ ಎಂಬುದನ್ನು ತಿಳಿದಿದ್ದರೂ ಇವುಗಳ ಶಿಫಾರಸು ಕಂಡು ಬಂದಿಲ್ಲ

ಓಆರ್​ಎಸ್​ ಎಂಬುದು ದುಬಾರಿಯಲ್ಲ. ಕೆಲವೇ ರೂಪಾಯಿಯಾಗಿದ್ದು, ಅತಿಸಾರಕ್ಕೆ ಅತ್ಯುತ್ತಮ ಔಷಧವಾಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ದಶಕಗಳಿಂದಲೂ ಶಿಫಾರಸು ಮಾಡುತ್ತಿದೆ ಎಂದು ಅಮೆರಿಕದ ದಕ್ಷಿಣ ಕ್ಯಾಲಿಫೋರ್ನಿಯಾ ಯುನಿವರ್ಸಿಟಿಯ ಅಧ್ಯಯನದ ಹಿರಿಯ ಲೇಖಕ ನೀರಜ್​ ಸೂದ್​ ತಿಳಿಸಿದ್ದಾರೆ.

ಅಧ್ಯಯನಕ್ಕೆ ಆಯ್ಕೆ ಮಾಡಿಕೊಂಡ ರಾಜ್ಯಗಳು ವಿಶಾಲ ಜನಸಂಖ್ಯೆಯ ಪ್ರತಿನಿಧಿ ಎಂದು ಖಚಿತಪಡಿಸಿಕೊಳ್ಳಲು ವ್ಯಾಪಕವಾಗಿ ವಿಭಿನ್ನ ಸಾಮಾಜಿಕ ಆರ್ಥಿಕ ಜನಸಂಖ್ಯಾಶಾಸ್ತ್ರ ಮತ್ತು ಆರೋಗ್ಯ ರಕ್ಷಣೆ ಹೊಂದಿದೆ. ಬಿಹಾರವೂ ಬಡ ರಾಜ್ಯಗಳಲ್ಲಿ ಒಂದಾಗಿದ್ದು, ಇಲ್ಲಿ ಓಆರ್​ಎಸ್​ ಬಳಕೆ ಕಡಿಮೆಯಾಗಿದೆ. ಕರ್ನಾಟಕದಲ್ಲಿ ತಲಾ ಆದಾಯವೂ ಹೆಚ್ಚಿದ್ದು, ಓಆರ್​ಎಸ್​ ಬಳಕೆ ಕೂಡ ಹೆಚ್ಚಿದೆ. ಇನ್ನು ಈ ಅಧ್ಯಯನಕ್ಕೆ ನೋಂದಣಿ ಮಾಡಿದ ಆರೋಗ್ಯ ಕಾರ್ಯಕರ್ತರು ನುರಿತ ಆರೈಕೆದಾರರಾಗಿದ್ದಾರೆ.

ಅಧ್ಯಯನದ ವರದಿಯಲ್ಲಿ ಕಂಡು ಬಂದ ಅಚ್ಚರಿಯ ಅಂಶ ಎಂದರೆ ರೋಗಿಗಳ ಆದ್ಯತೆಯಲ್ಲಿ ವೈದ್ಯರ ಗ್ರಹಿಕೆಯಲ್ಲಿ ಈ ಓಆರ್​ಎಸ್​ ಕಂಡು ಬಂದಿಲ್ಲ. ಈ ಸಮಸ್ಯೆಗೆ ಓಆರ್​ಎಸ್​ ಅತ್ಯುತ್ತಮ ಚಿಕಿತ್ಸೆ ಎಂಬುದು ತಿಳಿದಿದ್ದರೂ ಇವುಗಳ ಶಿಫಾರಸು ಕಂಡು ಬಂದಿಲ್ಲ. ಓಆರ್​ಎಸ್​​ ಪ್ರಿಸ್ಕ್ರಿಪ್ಷನ್ ಬಗ್ಗೆ ಪೂರೈಕೆದಾರರ ವರ್ತನೆ ಬದಲಾಯಿಸುವುದು ಒಂದು ದೊಡ್ಡ ಸವಾಲಾಗಿ ಉಳಿದಿದೆ ಎಂದು ಮೋಹನನ್​​ ತಿಳಿಸಿದ್ದಾರೆ.

ಇದನ್ನೂ ಓದಿ:ಹವಾಮಾನ ಬದಲಾವಣೆಯು ಅತಿಸಾರ ಕಾಯಿಲೆ ಹರಡುವಿಕೆಯ ಅಪಾಯ ಹೆಚ್ಚಿಸಬಹುದು: ಅಧ್ಯಯನ

ABOUT THE AUTHOR

...view details