ನವದೆಹಲಿ: ತ್ಯಾಜ್ಯ ನಿರ್ವಹಣೆಯ ಹೊಸ ತಂತ್ರಜ್ಞಾನವು ಭಾರತದ ಹಳ್ಳಿಗಳಲ್ಲಿನ ಒಳಾಂಗಣ ವಾಯು ಮಾಲಿನ್ಯವನ್ನು ಕಡಿಮೆ ಮಾಡಿ, ಮಣ್ಣಿನ ಆರೋಗ್ಯ ಸುಧಾರಿಸಲು ಮತ್ತು ಶುದ್ಧ ಶಕ್ತಿಯ ಸೃಷ್ಟಿಗೆ ಸಹಾಯ ಮಾಡಲಿದೆ ಎಂದು ಅಧ್ಯಯನವೊಂದು ತಿಳಿಸಿದೆ.
ಜರ್ನಲ್ ಸೈನ್ಸ್ ಆಫ್ ದ ಟೋಟಲ್ ಎನ್ವರನ್ಮೆಂಟ್ನಲ್ಲಿ ಈ ವರದಿಯನ್ನು ಪ್ರಕಟಿಸಲಾಗಿದೆ. ಪೈರೋಲಿಸಿಸ್ ಎಂಬ ಪ್ರಕ್ರಿಯೆಯು ಭತ್ತದ ಹುಲ್ಲು, ಗೊಬ್ಬರ ಮತ್ತು ಮರದಂತಹ ತ್ಯಾಜ್ಯವನ್ನು ಒಂದೇ ಬಾರಿಗೆ ಮೂರು ಸಾಮಾನ್ಯ ಸಮಸ್ಯೆಗಳಿಗೆ ಪರಿಹಾರವಾಗಿ ಪರಿವರ್ತಿಸುತ್ತದೆ.
ಪೈರೋಲಿಸಿಸ್ ಎಂಬುದು ರಾಸಾಯನಿಕ ಮರುಬಳಕೆಯಾಗಿದೆ. ಇದು ಉಳಿದಿರುವ ಸಾವಯವ ಉತ್ಪನ್ನಗಳ ಮತ್ತು ಅದರ ಕಣಗಳನ್ನು ಮರುಬಳಕೆ ಮಾಡುತ್ತದೆ. ಇದು ಆಮ್ಲಜನಕ ಮುಕ್ತ ಚೆಂಬರ್ನಲ್ಲಿ ತ್ಯಾಜ್ಯವನ್ನು ಮುಚ್ಚಿ, ಅದಕ್ಕೆ 400 ಡಿಗ್ರಿ ಸೆಲ್ಸಿಯಸ್ಗಿಂತ ಹೆಚ್ಚಿನ ಶಾಖ ನೀಡಿದಾಗ ಈ ಪ್ರಕ್ರಿಯೆಯಲ್ಲಿ ಉಪಯುಕ್ತ ರಾಸಾಯನಿಕವನ್ನು ಬಿಡುಗಡೆ ಮಾಡುತ್ತದೆ.
ಯುಕೆಯ ಗ್ಲಾಸ್ಗೌ ವಿಶ್ವವಿದ್ಯಾಲಯದ ಸಂಶೋಧಕರು ಈ ಅಧ್ಯಯನ ನಡೆಸಿದ್ದು, ಹೇಗೆ ಪೈರೋಲಿಸಿಸ್ನ ಮೂರು ಉತ್ಪನ್ನಗಳಾದ ಜೈವಿಕ ಇಂಧನ, ಸಿಂಗಾಸ್ ಬಯೋಚಾರ್ ಗೊಬ್ಬರಗಳು ಗ್ರಾಮವಾಸಿಗಳು ಆರೋಗ್ಯದಿಂದ ಜೀವಿಸಲು ಮತ್ತು ಕೃಷಿ ಭೂಮಿ ಹೆಚ್ಚು ಫಲವತ್ತಾಗಿಸಲು ಸಹಾಯ ಮಾಡುತ್ತವೆ ಎಂಬುದನ್ನು ತೋರಿಸಿದ್ದಾರೆ.
ಸಂಶೋಧಕರು ವ್ಯವಸ್ಥೆಯ ಆರ್ಥಿಕ ಕಾರ್ಯಸಾಧ್ಯತೆಯನ್ನು ಗರಿಷ್ಠಗೊಳಿಸಲು ಶಿಫಾರಸುಗಳ ಸರಣಿಯನ್ನು ನೀಡುತ್ತಾರೆ. ಒಡಿಶಾದ 1,200 ಗ್ರಾಮಗಳ ಮನೆಗಳ ಮೇಲೆ ಈ ಸಮೀಕ್ಷೆ ನಡೆಸಿದ್ದು, ಅಡುಗೆ ವಿಧಾನ ಮತ್ತು ಕುಟುಂಬವನ್ನು ಸಬಲಗೊಳಿಸುವಿಕೆ ಮತ್ತು ಕೃಷಿ ಕುರಿತು ಪರಿಶೀಲನೆ ನಡೆಸಲಾಗಿದೆ.