ಜೋಧ್ಪುರ್: ದೇಹದ ಉರಿಯೂತದ ಮಟ್ಟವನ್ನು ಪರೀಕ್ಷಿಸಿ ರೋಗವನ್ನು ಪತ್ತೆ ಹಚ್ಚಲು ಸಹಾಯ ಮಾಡುವ ನ್ಯಾನೋಸೆನ್ಸಾರ್ವೊಂದನ್ನು ಭಾರತೀಯ ತಾಂತ್ರಿಕ ಸಂಸ್ಥೆ (ಐಐಟಿ) ಜೋಧ್ಪುರ್ ಸಂಶೋಧಕರು ಅಭಿವೃದ್ಧಿಪಡಿಸಿದ್ದಾರೆ. ಉರಿಯೂತ ಮಟ್ಟವನ್ನು ನಿಯಂತ್ರಿಸುವ ಪ್ರೋಟಿನ್ ಸೈಟೊಕಿನ್ಸ್ ಅನ್ನು ಗುರಿಯಾಗಿಸಿ ಈ ತಂತ್ರಜ್ಞಾನವನ್ನು ಅಭಿವೃದ್ಧಿ ಮಾಡಲಾಗಿದ್ದು, 30 ನಿಮಿಷದಲ್ಲೇ ವಿವಿಧ ಬಗೆಯ ರೋಗದ ಪ್ರಗತಿಯ ಪತ್ತೆಗೆ ಇದು ಸಹಾಯ ಮಾಡುತ್ತದೆ.
ಸೈಟೊಕಿನ್ ಪತ್ತೆಗಾಗಿ ಪ್ರಸ್ತುತ ಬಳಸಲಾಗುವ ತಂತ್ರಗಳು ಕಿಣ್ವ ಸಂಯೋಜಿತ ಇಮ್ಯುನೊಸಾರ್ಬೆಂಟ್ ಅಸ್ಸೇ (ಇಎಲ್ಐಎಸ್ಎ) ಮತ್ತು ಪಾಲಿಮರೇಸ್ ಚೈನ್ ರಿಯಾಕ್ಷನ್ (ಪಿಸಿಆರ್) ಒಳಗೊಂಡಿವೆ. ಇದು ವಿಶ್ವಾಸಾರ್ಹವಾಗಿದ್ದರೂ ಇದರ ಬಳಕೆಯಲ್ಲಿ ಹೆಚ್ಚು ಸಮಯ ವ್ಯರ್ಥವಾಗುತ್ತದೆ. ಇದರ ಬಳಕೆಗೆ ತರಬೇತಿ ಪಡೆದ ಸಿಬ್ಬಂದಿ ಮತ್ತು ದೀರ್ಘ ಸ್ಯಾಂಪಲ್ ಸಿದ್ಧತೆ ಅಥವಾ ವಿಶ್ಲೇಷಣೆ ಬೇಕಾಗುತ್ತದೆ. ಪರೀಕ್ಷೆ ಫಲಿತಾಂಶ ಪಡೆಯಲು ಆರು ಗಂಟೆಗಳ ಕಾಲ ಸಮಯ ಬೇಕಾಗುತ್ತದೆ.
ಹೊಸ ಸೆನ್ಸಾರ್ ಕೇವಲ 30 ನಿಮಿಷಯದಲ್ಲಿ ಪರೀಕ್ಷೆ ಫಲಿತಾಂಶ ನೀಡುತ್ತದೆ. ವೆಚ್ಚವೂ ಪರಿಣಾಮಕಾರಿಯಾಗಿದೆ. ಬಹುಹಂತದ ಸ್ಕ್ಲೆರೋಸಿಸ್, ಮಧುಮೇಹ ಮತ್ತು ಅಲ್ಝೈಮರ್ನಂತಹ ಪರಿಸ್ಥಿತಿ ಅಭಿವೃದ್ಧಿಯ ನಿರ್ಣಯಿಸಲಿದೆ. ಹಾಗೆಯೇ ಮಾಲೆಕ್ಯುಲ್ ಮಟ್ಟ, ನಿಖರತೆ ಮತ್ತು ಆಯ್ಕೆಯನ್ನು ಪತ್ತೆಯನ್ನು ಮಾಡುವ ತಂತ್ರವನ್ನು ಇದರಲ್ಲಿ ಸೇರಿಸಲಾಗಿದೆ.