ಕನ್ನಡ ಚಿತ್ರರಂಗದ ಜನಪ್ರಿಯ ತಾರಾ ದಂಪತಿ ಹರ್ಷಿಕಾ ಪೂಣಚ್ಚ ಭುವನ್ ಪೊನ್ನಣ್ಣ ಕೊಲ್ಲೂರು ಮೂಕಾಂಬಿಕೆಯ ದರ್ಶನ ಪಡೆದುಕೊಂಡಿದ್ದಾರೆ. ಮೊದಲ ಮಗುವಿನ ಆರೈಕೆಯಲ್ಲಿ ಬ್ಯುಸಿಯಾಗಿರುವ ದಂಪತಿ ಇತ್ತೀಚೆಗೆ ಮಗಳೊಂದಿಗೆ ದೇವಸ್ಥಾನಕ್ಕೆ ಭೇಟಿ ಕೊಟ್ಟಿದ್ದಾರೆ. ಜೋಡಿಯ ಫೋಟೋ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಸಖತ್ ಸದ್ದು ಮಾಡುತ್ತಿದೆ.
ಮಗಳ ಜೊತೆ ಮೊದಲ ಬಾರಿಗೆ ಕೊಲ್ಲೂರಿಗೆ ಭೇಟಿ ಕೊಟ್ಟಿದ್ದಾರೆ. ಮಗು ಜನಿಸಿದ ಬಳಿಕ ಕೊಲ್ಲೂರಿಗೆ ಭೇಟಿ ನೀಡುತ್ತೇವೆ ಎಂದು ದಂಪತಿ ಪ್ರಾರ್ಥಿಸಿದ್ದರು. ಅದರಂತೆ ಕುಟುಂಬ ಸಮೇತ ಕೊಲ್ಲೂರಿಗೆ ಆಗಮಿಸಿ, ಮೂಕಾಂಬಿಕೆಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಸಖತ್ ಸದ್ದು ಮಾಡುತ್ತಿರುವ ಫೋಟೋ ವಿಡಿಯೋಗಳಿಗೆ ಅಭಿಮಾನಿಗಳು ಪ್ರೀತಿಯ ಧಾರೆಯೆರೆಯುತ್ತಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಇಂದು ದೇವಸ್ಥಾನ ಭೇಟಿಯ ವಿಡಿಯೋ ಒಂದನ್ನು ಹಂಚಿಕೊಂಡಿದ್ದಾರೆ. ಪೋಸ್ಟ್ಗೆ, ''ಹೊಸ ವರ್ಷ 2025 ರಲ್ಲಿ ಪೋಷಕರಂತೆ ಹೊಸ ಆರಂಭಕ್ಕೆ, ನಮ್ಮ ಶಕ್ತಿ ದೇವತೆಯಾದ ಕೊಲ್ಲೂರು ಮೂಕಾಂಬಿಕೆಯ ದೈವಿಕ ಆಶೀರ್ವಾದವನ್ನು ಪಡೆಯಲು ನಾವು ನಮ್ಮ ಪುಟ್ಟ ದೇವತೆಯೊಂದಿಗೆ ಕುಟುಂಬ ಸಮೇತರಾಗಿ ಕೊಲ್ಲೂರಿಗೆ ಭೇಟಿ ನೀಡಿದ್ದೇವೆ. ದೇವಿಯು ನಿಮ್ಮೆಲ್ಲರನ್ನು ಆಶೀರ್ವದಿಸಲಿ'' ಎಂದು ಬರೆದುಕೊಂಡಿದ್ದಾರೆ.
ಇದಕ್ಕೂ ಮುನ್ನ ಕುಟುಂಬದ ಫೋಟೋ ಹಂಚಿಕೊಂಡು, ನಮ್ಮ ಕುಟುಂಬದಿಂದ ನಿಮ್ಮ ಕುಟುಂಬಕ್ಕೆ 2025ರ ಹೊಸ ವರ್ಷದ ಶುಭಾಶಯಗಳು. ದೇವತೆ ಕೊಲ್ಲೂರು ಮೂಕಾಂಬಿಕೆ ನಿಮಗೆಲ್ಲರಿಗೂ ವರ್ಷವಿಡೀ ಸಂತೋಷ ಮತ್ತು ಸಮೃದ್ಧಿಯನ್ನು ಆಶೀರ್ವದಿಸಲಿ. ನಮ್ಮ ಕಡೆಯಿಂದ ಪ್ರೀತಿ ಮತ್ತು ಪಾಸಿಟಿವಿಟಿ, ಬೆಳಗೋಣ ಎಂದು ತಿಳಿಸಿದ್ದರು.
ಇದನ್ನೂ ಓದಿ: ಕ್ರಿಕೆಟರ್ ಚಹಾಲ್ ಡಿವೋರ್ಸ್ ವದಂತಿ: ಕೊನೆಗೂ ಮೌನ ಮುರಿದ ಪತ್ನಿ ಧನಶ್ರೀ ವರ್ಮಾ
ನಟಿ ಹರ್ಷಿಕಾ ಪೂಣಚ್ಚ ಹಾಗೂ ನಟ ಭುವನ್ ಪೊನ್ನಣ್ಣ ಕನ್ನಡ ಚಿತ್ರರಂಗದಲ್ಲಿ ಬಹಳ ಸಮಯದಿಮದ ಗುರುತಿಸಿಕೊಂಡಿದ್ದು, ತಮ್ಮದೇ ಆದ ಅಭಿಮಾನಿ ಬಳಗವನ್ನು ಸಂಪಾದಿಸಿದ್ದಾರೆ. 2023ರಲ್ಲಿ ದಾಂಪತ್ಯ ಜೀವನ ಆರಂಭಿಸಿದ್ದ ಪ್ರೇಮಪಕ್ಷಿಗಳು ಅಕ್ಟೋಬರ್ 4ರ ಮುಂಜಾನೆ 3 ಗಂಟೆ ಹೊತ್ತಿಗೆ ತಮ್ಮ ಮೊದಲ ಮಗುವನ್ನು ಬರಮಾಡಿಕೊಂಡಿದ್ದಾರೆ. ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಹೆರಿಗೆಯಾಗಿತ್ತು.
ಇದನ್ನೂ ಓದಿ: ಮಿಲನಾ, ಹರ್ಷಿಕಾ, ಪ್ರಣಿತಾ TO ಅನುಷ್ಕಾ ಕೊಹ್ಲಿ, ದೀಪಿಕಾ ಪಡುಕೋಣೆ: 2024ರಲ್ಲಿ ಪೋಷಕರಾದ ಸೆಲೆಬ್ರಿಟಿ ಕಪಲ್ಸ್
2023ರ ಆಗಸ್ಟ್ 24ರಂದು ಕೊಡಗಿನ ವಿರಾಜ್ ಪೇಟೆಯಲ್ಲಿ ಅಮ್ಮತಿ ಕೊಡವ ಸಮಾಜದಲ್ಲಿ ಹರ್ಷಿಕಾ ಭುವನ್ ಮದುವೆ ನಡೆದಿತ್ತು. ಸರಿ ಸುಮಾರು 10 ವರ್ಷಗಳಿಂದ ಸ್ನೇಹಿತರಾಗಿ ಗುರುತಿಸಿಕೊಂಡಿದ್ದ ಜೋಡಿ ಹಲವು ವರ್ಷಗಳಿಂದ ಪ್ರೀತಿಯಲ್ಲಿದ್ದರು. ಅಂತಿಮವಾಗಿ 2023ರಲ್ಲಿ ಪತಿ ಪತ್ನಿಯರಾಗಿ ನವ ಜೀವನ ಆರಂಭಿಸಿದ ಜೋಡಿ ಸದ್ಯ ಕೊಲ್ಲೂರು ಮೂಕಾಂಬಿಕೆಯ ದರ್ಶನ ಪಡೆದುಕೊಂಡಿದ್ದಾರೆ. ಮಗಳೊಂದಿಗೆ ಇದೇ ಮೊದಲ ಬಾರಿಗೆ ಕೊಲ್ಲೂರಿಗೆ ಭೇಟಿ ಕೊಟ್ಟಿದ್ದಾರೆ.