ETV Bharat / bharat

'ಐಎನ್​ಡಿಐಎ' ಮೈತ್ರಿಕೂಟ ಮುಚ್ಚುವುದೊಳಿತು: ಸಿಎಂ ಒಮರ್ ಅಬ್ದುಲ್ಲಾ - INDIA BLOC

ಐಎನ್​ಡಿಐಎ ಮೈತ್ರಿಕೂಟವನ್ನು ಮುಚ್ಚುವುದು ಒಳಿತು ಎಂದು ಸಿಎಂ ಒಮರ್ ಅಬ್ದುಲ್ಲಾ ಹೇಳಿದ್ದಾರೆ.

ಒಮರ್ ಅಬ್ದುಲ್ಲಾ
ಒಮರ್ ಅಬ್ದುಲ್ಲಾ (ians)
author img

By PTI

Published : 10 hours ago

ಜಮ್ಮು: ಐಎನ್​ಡಿಐಎ ಮೈತ್ರಿಕೂಟವನ್ನು ಕೇವಲ ಲೋಕಸಭಾ ಚುನಾವಣೆಗಾಗಿ ಮಾತ್ರ ಮಾಡಲಾಗಿದ್ದರೆ ಅದನ್ನು ಇವಾಗ ಮುಚ್ಚಿ ಬಿಡುವುದು ಉತ್ತಮ ಎಂದು ಜಮ್ಮು ಮತ್ತು ಕಾಶ್ಮೀರ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಸಲಹೆ ನೀಡಿದ್ದಾರೆ. ಐಎನ್​ಡಿಐಎ ಮೈತ್ರಿಕೂಟ ಎಷ್ಟು ಕಾಲದವರೆಗೆ ಮುಂದುವರಿಯಬೇಕೆಂಬುದರ ಬಗ್ಗೆ ಯಾವುದೇ ಕಾಲಮಿತಿ ಹಾಕಿಕೊಂಡಿರಲಿಲ್ಲ ಎಂಬುದನ್ನು ಉಲ್ಲೇಖಿಸಿರುವ ಅವರು, ಮೈತ್ರಿಕೂಟದ ಅಜೆಂಡಾ ಮತ್ತು ನಾಯಕತ್ವದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

"ದೆಹಲಿ ವಿಧಾನಸಭಾ ಚುನಾವಣೆ ಮುಗಿದ ನಂತರ ಮೈತ್ರಿಕೂಟದ ಎಲ್ಲಾ ಸದಸ್ಯರ ಸಭೆ ಕರೆಯಲಿ. ಈ ಮೈತ್ರಿಕೂಟವನ್ನು ಲೋಕಸಭಾ ಚುನಾವಣೆಗಾಗಿ ಮಾತ್ರ ಮಾಡಿಕೊಂಡಿದ್ದರೆ ಅದನ್ನು ಕೊನೆಗೊಳಿಸಿ. ನಾವು ಪ್ರತ್ಯೇಕವಾಗಿ ಮುಂದುವರಿಯುತ್ತೇವೆ. ಆದರೆ ಒಂದೊಮ್ಮೆ ವಿಧಾನಸಭಾ ಚುನಾವಣೆಗಳಿಗಾಗಿಯೂ ಈ ಮೈತ್ರಿಕೂಟ ಮಾಡಿಕೊಳ್ಳಲಾಗಿದೆ ಎಂದಾದರೆ ನಾವು ಒಟ್ಟಾಗಿ ಕೆಲಸ ಮಾಡಬೇಕಾಗುತ್ತದೆ" ಎಂದು ಒಮರ್ ಹೇಳಿದರು.

ಐಎನ್​ಡಿಐಎ ಮೈತ್ರಿಕೂಟವು ಲೋಕಸಭಾ ಚುನಾವಣೆಗೆ ಮಾತ್ರ ಸೀಮಿತವಾಗಿತ್ತು ಎಂಬ ಆರ್​ಜೆಡಿ ನಾಯಕನ ಹೇಳಿಕೆಯ ಬಗ್ಗೆ ಕೇಳಿದ ಪ್ರಶ್ನೆಗೆ ನ್ಯಾಷನಲ್ ಕಾನ್ಫರೆನ್ಸ್ ನಾಯಕ ಒಮರ್ ಅಬ್ದುಲ್ಲಾ ಉತ್ತರಿಸುತ್ತಿದ್ದರು.

"ನನಗೆ ನೆನಪಿರುವಂತೆ, ಮೈತ್ರಿಕೂಟಕ್ಕೆ ಯಾವುದೇ ಕಾಲಮಿತಿ ಹಾಕಿರಲಿಲ್ಲ. ಆದರೆ ಸದ್ಯ ಐಎನ್​ಡಿಐಎ ಮೈತ್ರಿಕೂಟದ ಯಾವುದೇ ಸಭೆ ನಡೆಯುತ್ತಿಲ್ಲ" ಎಂದು ಅವರು ಹೇಳಿದರು.

ಮೈತ್ರಿಕೂಟದ ಪ್ರಮುಖ ನಾಯಕ ಯಾರು ಅಥವಾ ಪ್ರಮುಖ ಪಕ್ಷ ಯಾವುದು ಎಂಬ ಬಗ್ಗೆ ಅಥವಾ ಮೈತ್ರಿಕೂಟದ ಭವಿಷ್ಯದ ಕಾರ್ಯತಂತ್ರದ ಕಾರ್ಯಸೂಚಿಯ ಬಗ್ಗೆ ಮೈತ್ರಿಕೂಟದ ಒಳಗೆ ಯಾವುದೇ ಸ್ಪಷ್ಟತೆ ಇಲ್ಲ ಎಂದು ಹೇಳಿದ ಅವರು, ಈ ಮೈತ್ರಿ ಮುಂದುವರಿಯುವುದು ಕೂಡ ಅನುಮಾನ ಎಂದರು. ದೆಹಲಿ ಚುನಾವಣೆಯ ನಂತರ ಬಹುಶಃ ಐಎನ್​ಡಿಐಎ ಸಭೆ ನಡೆಯಬಹುದು ಮತ್ತು ಸ್ಪಷ್ಟತೆ ಹೊರಹೊಮ್ಮಬಹುದು ಎಂದು ಅಬ್ದುಲ್ಲಾ ಹೇಳಿದರು.

ಜಮ್ಮು ಮತ್ತು ಕಾಶ್ಮೀರ ವಿಧಾನಸಭೆಗೆ ಹೊಸದಾಗಿ ಆಯ್ಕೆಯಾದ ಶಾಸಕರಿಗೆ ಓರಿಯಂಟೇಶನ್ ಕಾರ್ಯಕ್ರಮ ಆಯೋಜಿಸಲಾಗುತ್ತಿರುವ ಬಗ್ಗೆ ಅವರು ಇದೇ ಸಂದರ್ಭದಲ್ಲಿ ಉಲ್ಲೇಖಿಸಿದರು.

"ನಮ್ಮಲ್ಲಿ ಅನೇಕರು ಈ ಹಿಂದೆಯೂ ಶಾಸಕರಾಗಿದ್ದರು. ಆದರೆ ಆವಾಗ ಜಮ್ಮು ಮತ್ತು ಕಾಶ್ಮೀರ ರಾಜ್ಯವಾಗಿತ್ತು. ಆದರೆ ಇಂದು ವ್ಯವಸ್ಥೆ ವಿಭಿನ್ನವಾಗಿದೆ. ಈ ವ್ಯವಸ್ಥೆಯಲ್ಲಿ ನಾವು ಹೇಗೆ ಕೆಲಸ ಮಾಡಬೇಕು ಮತ್ತು ಈ ಸದನದ ಅಧಿಕಾರಗಳು ಯಾವುವು ಎಂಬುದನ್ನು ನಾವು ಅರ್ಥಮಾಡಿಕೊಳ್ಳಬೇಕಿದೆ" ಎಂದು ಅಬ್ದುಲ್ಲಾ ಹೇಳಿದರು. ಈ ವ್ಯವಸ್ಥೆಯ ಕಾರ್ಯವಿಧಾನಗಳನ್ನು ಎಲ್ಲರಿಗೂ ಪರಿಚಯಿಸಲು, ಸ್ಪೀಕರ್ ಓರಿಯಂಟೇಶನ್ ಕಾರ್ಯಕ್ರಮವನ್ನು ಆಯೋಜಿಸಿದ್ದಾರೆ ಎಂದು ಅವರು ತಿಳಿಸಿದರು.

ಇದನ್ನೂ ಓದಿ : 1978ರ ಸಂಭಾಲ್ ಗಲಭೆಯ ಮರುತನಿಖೆಗೆ ಯುಪಿ ಸರ್ಕಾರದ ಆದೇಶ: ವಾರದೊಳಗೆ ವರದಿ ಸಲ್ಲಿಸಲು ಸೂಚನೆ - 1978 SAMBHAL RIOTS CASE

For All Latest Updates

ETV Bharat Logo

Copyright © 2025 Ushodaya Enterprises Pvt. Ltd., All Rights Reserved.