ಹೈದರಾಬಾದ್:ಭೂಮಿ ಮೇಲೆ ಬೆಲೆಕಟ್ಟಲಾಗದ ರತ್ನ ಎಂದರೆ ಅದು ಅಮ್ಮ. ಅಂತಹ ಅಮ್ಮನಿಗೊಂದು ದಿನವೂ ಮೀಸಲಿದೆ. ಮೇ 2ರಂದು ಜಗತ್ತಿನೆಲ್ಲೆಡೆ ತಾಯಂದಿರ ದಿನ ಆಚರಿಸುವ ಮೂಲಕ ಆಕೆಯ ಸ್ವಾರ್ಥವಿಲ್ಲದ ತ್ಯಾಗಕ್ಕೆ ಕೃತಜ್ಞತೆ ಮತ್ತು ಮೆಚ್ಚುಗೆ ಹೇಳುವ ಪುಟ್ಟ ಪ್ರಯತ್ನ ನಡೆಸಲಾಗುವುದು.
ಇಂದಿನ ಓಡುವ ಜೀವನದಲ್ಲಿ ಅನೇಕ ಬಾರಿ ದಿನಗಳೆ ಮರೆತು ಹೋಗುತ್ತದೆ. ಅಂತಿಮ ವೇಳೆಯಲ್ಲಿ ತಾಯಂದಿರ ದಿನ ನೆನಪಾಗಿ, ಅಯ್ಯೊ ನನ್ನಮ್ಮನಿಗೆ ಒಂದು ವಿಶೇಷ ಉಡುಗೊರೆ ಕೊಳ್ಳಬೇಕಿತ್ತು ಎನ್ನಿಸುತ್ತದೆ. ಹೆತ್ತು ಹೊತ್ತು ಸಾಕಿ, ಜೀವನ ರೂಪಿಸಿದ ತಾಯಿಗೆ ಮಕ್ಕಳು ನೀಡುವ ಒಂದು ಸಣ್ಣ ಉಡುಗೊರೆ ಪದಗಳಲ್ಲಿ ವರ್ಣಿಸಲಾಗದು. ಈ ಹಿನ್ನಲೆ ಅಂತಿಮ ಕ್ಷಣದಲ್ಲಿ ತಾಯಂದಿರಿಗೆ ಅದ್ಬುತ, ಸೂಕ್ತ ಉಡುಗೊರೆಗೆ ತಯಾರಿ ನಡೆಸುತ್ತಿದ್ದಾರೆ. ಇಲ್ಲಿದೆ ಕೆಲವು ಐಡಿಯಾಗಳು. ಈ ಉಡುಗೊರೆಗಳು ತಾಯಂದಿರ ಮನಸು ಕದಿಯುವ ಜೊತೆಗೆ ಅವರ ಬಗ್ಗೆ ನಿಮಗಿರುವ ಆಳ ಸಂಬಂಧ ಸಾರಲು ಸಹಾಯ ಮಾಡುತ್ತದೆ
ಫೋಟೋ ಆಲ್ಬಂ: ತಾಯಿಯ ನೆನಪಿನ ಪುಟಕ್ಕೆ ಜಾರಿಸುವ ಅಮೂಲ್ಯವಾದ ಕೆಲವು ಫೋಟೋಗಳನ್ನು ಹೆಚ್ಚಿ, ಅದನ್ನು ಕೋಲಾಜ್ ರೀತಿ ಮಾಡಿ. ತಾಯಿ ಜೊತೆ ಕಳೆದ ಬೆಲೆಕಟ್ಟಲಾಗದ ಸಮಯದ ನೆನಪವನ್ನು ಈ ಮೂಲಕ ಅಮರವಾಗಿಸಬಹುದು. ಜೊತೆಗೆ ಇದು ನಿಮ್ಮನ್ನು ಪ್ರೀತಿಯ ಕ್ಷಣಗಳಿಗೆ ಜಾರುವಂತೆ ಮಾಡುತ್ತದೆ.
ಕೈಯಲ್ಲೇ ಪತ್ರ ಬರೆಯಿರಿ: ಬಿಡುವಿರದ ಜೀವನದ ನಡುವೆ ಇಂದು ಪತ್ರ ಬರೆಯುವ ಹವ್ಯಾಸ ಮರೆತಿದ್ದೇವೆ. ಆದರೆ, ಬರೆಯುವ ಪ್ರೀತಿಯ ಅಕ್ಷರಗಳು ಅಥವಾ ಪದ್ತಗಳು ತಾಯಿಯ ಬಗ್ಗೆ ನಿಮ್ಮ ಪ್ರೀತಿಯನ್ನು ವ್ಯಕ್ತಪಡಿಸುವುದು ಸುಳ್ಳಲ್ಲ. ಪತ್ರದಲ್ಲಿ ನಿಮ್ಮ ತಾಯಿಯನ್ನು ಪ್ರೀತಿಸಲು ಕಾರಣ ಏನು ಎಂಬ ಕಥೆ, ನೆನಪು ಮತ್ತು ಕಾರಣಗಳನ್ನು ಬರೆಯಿರಿ. ಸರಿಯಾದ ಭಾವನೆ, ಅರ್ಧಗರ್ಭಿತ ಪದಗಳಿಂದ ತುಂಬಿ.