ನವದೆಹಲಿ: ಮೊಬೈಲ್ ಎಂಬುದು ಇಂದು ನಮ್ಮ ಜೀವನದ ಪ್ರಮುಖ ಅಂಗವಾಗಿದೆ. ಇದರ ಪ್ರಾಮುಖ್ಯತೆ ನಿರ್ಲಕ್ಷ್ಯಿಸಲು ಸಾಧ್ಯವಿಲ್ಲ. ಆದಾಗ್ಯೂ ಹೆಚ್ಚಿನ ಬಳಕೆಯಿಂದ ಅಪಾಯ ಇರುವುದನ್ನು ತಳ್ಳಿ ಹಾಕಲು ಸಾಧ್ಯವಾಗಲ್ಲ. ಅದರಲ್ಲೂ ವಿಶೇಷವಾಗಿ ಶಾಲಾ ಮಕ್ಕಳು ಇದರ ಚಟಕ್ಕೆ ಬಲಿಯಾಗುತ್ತಿದ್ದು, ಇದು ಅವರಲ್ಲಿ ಮಾನಸಿಕ ಮತ್ತು ಸಾಮಾಜಿಕ ಹಾನಿಗೆ ಕಾರಣವಾಗುತ್ತಿದೆ ಎಂದು ಅಧ್ಯಯನದಲ್ಲಿ ತಿಳಿದು ಬಂದಿದೆ.
ಈ ಅಧ್ಯಯನವನ್ನು ಇಂಟರ್ನ್ಯಾಷಲ್ ಜರ್ನಲ್ ಆಫ್ ಹೆಲ್ತ್ ಸೈನ್ಸ್ ಅಂಡ್ ರಿಸರ್ಚ್ನಲ್ಲಿ ಪ್ರಕಟಿಸಲಾಗಿದೆ. ಈ ಅಧ್ಯಯನಕ್ಕಾಗಿ ದೆಹಲಿಯ 250 ಸರ್ಕಾರಿ ಮತ್ತು 250 ಖಾಸಗಿ ಶಾಲೆಯ ಹದಿಹರೆಯದವರನ್ನು ಬಳಸಿಕೊಳ್ಳಲಾಗಿದೆ.
ದೆಹಲಿಯ ಕಲಾವತಿ ಸರನ್ ಮಕ್ಕಳ ಆಸ್ಪತ್ರೆಯ ಸಂಶೋಧಕರು ನಡೆಸಿದ ಅಧ್ಯಯನದಲ್ಲಿ ಮೊಬೈಲ್ ಫೋನ್ ಚಟಕ್ಕೆ ಸಂಬಂಧಿಸಿದಂತೆ ಸರ್ಕಾರಿ ಮತ್ತು ಖಾಸಗಿ ಶಾಲೆಗಳ ನಡುವೆ ಹದಿಹರೆಯದವರಲ್ಲಿ ಅಪಾಯದ ವ್ಯತ್ಯಾಸ ಕಂಡು ಬಂದಿದೆ. ಬಾಲಕರು ಮತ್ತು ಬಾಲಕಿಯರ ನಡುವೆ ಯಾವುದೇ ವ್ಯತ್ಯಾಸ ಕಂಡು ಬಂದಿಲ್ಲ. ಆದರೆ, ಸರ್ಕಾರಿ ಸರ್ಕಾರಿ ಮತ್ತು ಖಾಸಗಿ ಶಾಲೆಗಳ ನಡುವೆ ಹದಿಹರೆಯದವರಲ್ಲಿ ಮೊಬೈಲ್ ಫೋನ್ ಚಟದಲ್ಲಿ ಮಾನಸಿಕ ಅಪಾಯದ ವ್ಯತ್ಯಾಸ ಕಂಡು ಬಂದಿದೆ.
ಸುಲಭವಾಗಿ ಕಡಿಮೆ ದರದಲ್ಲಿ ಮೊಬೈಲ್ ಫೋನ್ಗಳು ಲಭ್ಯತೆಯು ಕೋವಿಡ್ ಸಾಂಕ್ರಾಮಿಕತೆ ಸಂದರ್ಭದಲ್ಲಿ ಹದಿಹರೆಯದವರು ಮತ್ತು ಮಕ್ಕಳಲ್ಲಿ ಮೊಬೈಲ್ ಫೋನ್‌ಗಳ ಬಳಕೆಯನ್ನು ಹೆಚ್ಚಿಸಿದೆ ಎಂದು ಆರೋಗ್ಯ ತಜ್ಞರು ತಿಳಿಸಿದ್ದಾರೆ.
ಬಹುತೇಕ ಮಕ್ಕಳು ಪರಸ್ಪರ ಮಾತನಾಡುವುದಿಲ್ಲ. ಇದು ಅವರಲ್ಲಿ ಸಾಮಾಜಿಕ ಸಂವಹನ ಕೊರತೆ ಮೂಡಿಸಿದೆ. ಈ ಅಂಶವೂ ಹೆಚ್ಚಿನದಾಗಿ ಖಾಸಗಿ ಶಾಲಾ ಮಕ್ಕಳಲ್ಲಿ ಕಂಡು ಬಂದಿದೆ. ಅವರಲ್ಲಿ ಹೆಚ್ಚಿನ ಆನ್‌ಲೈನ್ ಅಧ್ಯಯನ ಮತ್ತು ಜಾಗತಿಕ ಘಟನೆಗಳ ಪ್ರವೇಶಗಳು ಕಂಡು ಬಂದಿದೆ. ಅಷ್ಟೇ ಅಲ್ಲದೆ, ಹೆಚ್ಚಿನ ಮತ್ತು ದೀರ್ಘಕಾಲಿಕ ಮೊಬೈಲ್ ಬಳಕೆ ಮಕ್ಕಳು ಮತ್ತು ವಯಸ್ಕರರಲ್ಲಿ ಕುತ್ತಿಗೆ ಮತ್ತು ಕಣ್ಣಿನ ಮೇಲೆ ಒತ್ತಡ ಹಾಕಿ ದೈಹಿಕ ಸಮಸ್ಯೆಗಳಿಗೆ ಕಾರಣವಾಗಬಹುದು ಎಂದು ದೆಹಲಿಯ ಸಿಕೆ ಬಿರ್ಲಾ ಆಸ್ಪತ್ರೆಯ ಮಕ್ಕಳ ತಜ್ಞರಾದ ಡಾ ಪೂನಂ ಸಿದನ ತಿಳಿಸಿದ್ದಾರೆ.