ETV Bharat / health

ಊಟದ ಬಳಿಕ ಬಡೆಸೋಂಪು ತಿನ್ನಬೇಕೇ, ಬೇಡವೇ? ಸಂಶೋಧನೆ ಏನು ತಿಳಿಸುತ್ತೆ ಗೊತ್ತಾ? - FENNEL SEEDS BENEFITS

ಊಟ ಮಾಡಿದ ನಂತರ ಸ್ವಲ್ಪ ಬಡೆಸೋಂಪು ಅಗಿಯುವುದರಿಂದ ಜೀರ್ಣಕ್ರಿಯೆಗೆ ಸರಳವಾಗುತ್ತದೆ. ಜೊತೆಗೆ ಹಲವು ಆರೋಗ್ಯ ಲಾಭಗಳನ್ನು ಪಡೆಯಬಹುದಾಗಿದೆ.

SAUNF BENEFITS  FENNEL SEEDS FOR DIGESTIONS  CAN WE EAT FENNEL SEEDS DAILY  ಬಡೆಸೋಂಪಿನ ಆರೋಗ್ಯ ಪ್ರಯೋಜನಗಳು
ಸಾಂದರ್ಭಿಕ ಚಿತ್ರ (Getty Images)
author img

By ETV Bharat Health Team

Published : Jan 30, 2025, 5:25 PM IST

Benefits of Fennel seeds: ಊಟ ಮಾಡಿದ ಬಳಿಕ ಬಾಯಿಯಲ್ಲಿ ಒಂದು ಟೀಸ್ಪೂನ್​ನಷ್ಟು ಸೋಂಪು ಅಗಿಯುವುದರಿಂದ ಲಾಲಾರಸದ ಉತ್ಪಾದನೆ ಹೆಚ್ಚಾಗುತ್ತದೆ. ಜೊತೆಗೆ ಜೀರ್ಣಕ್ರಿಯೆಗೆ ಹೆಚ್ಚು ಸಹಾಯ ಮಾಡುತ್ತದೆ. ಮತ್ತು ಬಾಯಿ ದುರ್ವಾಸನೆಯನ್ನು ಹೋಗಲಾಡಿಲು ಸಾಧ್ಯವಾಗಿಸುತ್ತದೆ. ಫಾಸ್ಟ್ ಫುಡ್, ಕರಿದ ಆಹಾರ ಹಾಗೂ ಇತರ ಎಣ್ಣೆಯುಕ್ತ ಆಹಾರಗಳನ್ನು ಸೇವಿಸುವುದರಿಂದ ಬಹುತೇಕರು ಹಲವು ರೀತಿಯ ಜೀರ್ಣಕ್ರಿಯೆ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಇಂತಹವರು ಬಡೆಸೋಂಪು ಸೇವಿಸುವುದರಿಂದ ಪರಿಹಾರ ಲಭಿಸುತ್ತದೆ. ತಜ್ಞರು ತಿಳಿಸುವ ಪ್ರಕಾರ, ಬಡೆಸೋಂಪಿನಲ್ಲಿ ಜೀರ್ಣಕ್ರಿಯೆಗೆ ಪೂರಕವಾಗಿರುವ ಅಂಶಗಳು ಅಡಕವಾಗಿವೆ.

2017ರಲ್ಲಿ 'ಎವಿಡೆನ್ಸ್- ಬೇಸ್ಡ್ ಕಾಂಪ್ಲಿಮೆಂಟರಿ ಅಂಡ್ ಆಲ್ಟರ್ನೇಟಿವ್ ಮೆಡಿಸಿನ್' ಜರ್ನಲ್‌ನಲ್ಲಿ ಪ್ರಕಟವಾದ ಅಧ್ಯಯನದಲ್ಲಿ, ಊಟ ಮಾಡಿದ ನಂತರ ಬಡೆಸೋಂಪು ಬೀಜಗಳನ್ನು ಸೇವಿಸಿದ ಜನರಲ್ಲಿ ಕಾಡುವಂತಹ ಹೊಟ್ಟೆ ನೋವು ಮತ್ತು ಅಜೀರ್ಣದ ಲಕ್ಷಣಗಲು ಕಡಿಮೆಯಾಗುತ್ತವೆ ಎಂಬ ಮಾಹಿತಿ ಬಹಿರಂಗವಾಗಿದೆ.

ಲಕ್ನೋದ ಕಿಂಗ್ ಜಾರ್ಜ್ ವೈದ್ಯಕೀಯ ಕಾಲೇಜಿನ ಖ್ಯಾತ ಗ್ಯಾಸ್ಟ್ರೋಎಂಟರಾಲಜಿಸ್ಟ್ ಡಾ. ಎಸ್.ಕೆ. ಸಿಂಗ್ ಅವರು, ಈ ಸಂಶೋಧನೆಯಲ್ಲಿ ಪಾಲ್ಗೊಂಡಿದ್ದರು. ಬಡೆಸೋಂಪುನಲ್ಲಿರುವ ಜೀರ್ಣಕಾರಿ ರಸಗಳು, ಆಹಾರ ಸರಿಯಾಗಿ ಜೀರ್ಣಿಸಿಕೊಳ್ಳಲು ಪರಿಣಾಮಕಾರಿಯಾಗಿ ಕೆಲಸ ಮಾಡುತ್ತವೆ ಎಂದು ಅವರು ವಿವರಿಸುತ್ತಾರೆ.

ವೆಬ್‌ಎಂಡಿಯಲ್ಲಿ ಪ್ರಕಟವಾಗಿರುವ ಸಂಶೋಧನೆಯ ಪ್ರಕಾರ, ಬಡೆಸೋಂಪು ತಿನ್ನುವುದರಿಂದ ಯಾವೆಲ್ಲಾ ಆರೋಗ್ಯದ ಪ್ರಯೋಜನಗಳು ದೊರೆಯುತ್ತವೆ.

ಬಡೆಸೋಂಪು ನೀರು : ಬಡೆಸೋಂಪು ಅಗಿಯಲು ಇಷ್ಟಪಡದೇ ಇರುವವರು, ಬಡೆಸೋಂಪು ನೀರು ಸೇವನೆ ಮಾಡುವುದು ಉತ್ತಮ. ಒಂದು ಗ್ಲಾಸ್​ ನೀರಿಗೆ 1 ಟೀಸ್ಪೂನ್​ ಬಡೆಸೋಂಪು ಬೆರೆಸಿ 10 ರಿಂದ 15 ನಿಮಿಷಗಳ ಬಳಿಕ ಕುಡಿಯಬೇಕಾಗುತ್ತದೆ. ಅಜೀರ್ಣ ಹಾಗೂ ಆಮ್ಲದ ಹಿಮ್ಮುಖವಾಗಿ ಬರುವುದನ್ನು ತಡೆಯುತ್ತದೆ. ಊಟಕ್ಕಿಂತ ಅರ್ಧ ಗಂಟೆ ಮುನ್ನ ಇಲ್ಲವೇ ಊಟದ ಬಳಿಕ ಈ ನೀರನ್ನು ಸೇವಿಸಿದರೆ ಜೀರ್ಣಕ್ರಿಯೆಗೆ ಒಳ್ಳೆಯದಾಗುತ್ತದೆ. ಇದರಿಂದ ಹೊಟ್ಟೆಯ ಸೆಳೆತ ಕಡಿಮೆ ಆಗುತ್ತದೆ. ಜೊತೆಗೆ ನೈಸರ್ಗಿಕ ನಿರ್ವಿಶೀಕರಣಕಾರಕವಾಗಿ ಕಾರ್ಯ ಮಾಡಲು ಸಾಧ್ಯವಾಗುತ್ತದೆ.

ಬಡೆಸೋಂಪು ಚಹಾ : ಕೆಲವರು ಬೆಳಗ್ಗೆ ಹಾಗೂ ಮಧ್ಯಾಹ್ನದ ಊಟದ ಬಳಿಕ ಚಹಾ ಕುಡಿಯುವುದನ್ನು ಅಭ್ಯಾಸ ಮಾಡಿಕೊಂಡಿರುತ್ತಾರೆ. ಅಂತಹವರಿಗೆ ಬಡೆಸೋಂಪು ಚಹಾವು ಉತ್ತಮ ಆಯ್ಕೆಯಾಗಿದೆ. ಈ ಚಹಾದಿಂದ ಆರೋಗ್ಯಕ್ಕೆ ಉತ್ತಮ ಪ್ರಯೋಜನಗಳು ಲಭಿಸುತ್ತವೆ. 2 ಗ್ಲಾಸ್ ನೀರಿಗೆ 1 ಟೀಸ್ಪೂನ್​ ಸೋಂಪು ಸೇರಿಸಿ ಹಾಗೂ 1 ಗ್ಲಾಸ್ ನೀರನ್ನು ಚೆನ್ನಾಗಿ ಕುದಿಸಬೇಕಾಗುತ್ತದೆ. ಬೇಕಾದರೆ ಶುಂಠಿ ಸೇರಿಸಬಹುದು. ಬಳಿಕ ಸೋಸಿಕೊಂಡು ಇದರೊಳಗೆ ಜೇನುತುಪ್ಪ ಸೇರಿಸಬೇಕಾಗುತ್ತದೆ. ರಾತ್ರಿ ಮಲಗುವ ಮೊದಲು ಇದನ್ನು ಕುಡಿಯುವುದನ್ನು ರೂಢಿಸಿಕೊಂಡರೆ ಉತ್ತಮ. ಈ ಚಹಾದಿಂದ ಇದು ಜೀರ್ಣಕ್ರಿಯೆಯನ್ನು ಸರಾಗಗೊಳಿಸಲು ಸಹಾಯ ಮಾಡುತ್ತದೆ. ಇದರಿಂದ ದೇಹಕ್ಕೆ ವಿಶ್ರಾಂತಿ ಲಭಿಸಲು ಸಹಾಯ ಮಾಡುತ್ತದೆ ಹಾಗೂ ಉತ್ತಮ ನಿದ್ರೆಗೆ ಪ್ರೇರೇಪಿಸುತ್ತದೆ.

ಜೇನುತುಪ್ಪದೊಂದಿಗೆ ಬಡೆಸೋಂಪು : ಗಂಭೀರ ಜೀರ್ಣಕಾರಿ ಸಮಸ್ಯೆಗಳಿಂದ ಬಳಲುತ್ತಿರುವವರು ಜೇನುತುಪ್ಪದೊಂದಿಗೆ ಬಡೆಸೋಂಪು ಸೇವಿಸುವುದು ತುಂಬಾ ಉಪಯುಕ್ತವಾಗಿದೆ. ಜೇನುತುಪ್ಪವು ಬ್ಯಾಕ್ಟೀರಿಯಾ ವಿರೋಧಿ ಗುಣಲಕ್ಷಣಗಳನ್ನು ಹೊಂದಿದೆ. ಇದರ ಪ್ರಯೋಜನಗಳು ಬಡೆಸೋಂಪು ಜೊತೆಗೆ ಬೆರೆಸಿದಾಗ ಮತ್ತಷ್ಟು ಹೆಚ್ಚಾಗುತ್ತವೆ. ಮೊದಲು ಒಂದು ಟೀಸ್ಪೂನ್​ ಬಡೆಸೋಂಪು ಚೆನ್ನಾಗಿ ಪುಡಿಮಾಡಬೇಕಾಗುತ್ತದೆ. ಅದಕ್ಕೆ ಟೀಸ್ಪೂನ್​ ಜೇನುತುಪ್ಪ ಸೇರಿಸಬೇಕಾಗುತ್ತದೆ. ಊಟದ ನಂತರ ಈ ಮಿಶ್ರಣ ಸೇವಿಸುವುದರಿಂದ ದೀರ್ಘಕಾಲದ ಜೀರ್ಣಕ್ರಿಯೆಯ ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆ.

ಹೆಚ್ಚಿನ ಮಾಹಿತಿಗಾಗಿ ಈ ವೆಬ್​ಸೈಟ್​ನ್ನು ವೀಕ್ಷಿಸಬಹುದು:

ಓದುಗರಿಗೆ ಮುಖ್ಯ ಸೂಚನೆ: ಇಲ್ಲಿ ನಿಮಗೆ ನೀಡಿರುವ ಎಲ್ಲ ಆರೋಗ್ಯ ಮಾಹಿತಿ ಮತ್ತು ಸಲಹೆಗಳು ನಿಮ್ಮ ತಿಳಿವಳಿಕೆಗಾಗಿ ಮಾತ್ರ. ವೈಜ್ಞಾನಿಕ ಸಂಶೋಧನೆ, ಅಧ್ಯಯನಗಳು, ವೈದ್ಯಕೀಯ ಮತ್ತು ಆರೋಗ್ಯ ವೃತ್ತಿಪರ ಸಲಹೆ ಆಧರಿಸಿ ನಾವು ಈ ಮಾಹಿತಿ ನಿಮಗೆ ನೀಡಿದ್ದೇವೆ. ಆದರೆ, ಇವುಗಳನ್ನು ಅನುಸರಿಸುವ ಮೊದಲು ವೈದ್ಯರ ಸಲಹೆಯನ್ನು ತೆಗೆದುಕೊಳ್ಳುವುದು ಉತ್ತಮ.

ಇವುಗಳನ್ನೂ ಓದಿ:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.