ನವದೆಹಲಿ:ಕೇಂದ್ರ ಸರ್ಕಾರದ ಆರೋಗ್ಯ ಯೋಜನೆ ಫಲಾನುಭವಿಗಳು ಎಲೆಕ್ಟ್ರಾನಿಕ್ ಆರೋಗ್ಯ ದಾಖಲೆ, ಮಾಹಿತಿ ಮತ್ತು ಸೇವೆಯನ್ನು ಕೈ ಬೆರಳ ತುದಿಯಲ್ಲೇ ಪಡೆಯುವ ಉದ್ದೇಶದಿಂದ ಕೇಂದ್ರ ಸರ್ಕಾರವು ಐಒಎಸ್‌ಗಾಗಿ myCGHS ಅಪ್ಲಿಕೇಶನ್ ಅನ್ನು ಬಿಡುಗಡೆ ಮಾಡಿದೆ.
myCGHS ಐಒಎಸ್ ಆ್ಯಪ್ ಅನ್ನು ಹಿಮಾಚಲ ಪ್ರದೇಶದ ರಾಷ್ಟ್ರೀಯ ಮಾಹಿತಿ ಕೇಂದ್ರ (ಎನ್ಐಸಿ)ದ ತಾಂತ್ರಿಕ ತಂಡ ಮತ್ತು ಎನ್ಐಸಿ ಆರೋಗ್ಯ ತಂಡ ಅಭಿವೃದ್ಧಿಪಡಿಸಿದೆ. ಈ ಸುಲಭದಾಯಕ ಅಪ್ಲಿಕೇಷನ್ ಅನೇಕ ವೈಶಿಷ್ಟ್ಯ ಹೊಂದಿದ್ದು, ಸಿಜಿಎಚ್ಎಸ್ ಫಲಾನುಭವಿಗಳಿಗೆ ಮಾಹಿತಿ ಮತ್ತು ತಂತ್ರಜ್ಞಾನದ ಪ್ರವೇಶವನ್ನು ಹೆಚ್ಚಿಸುವ ಗುರಿ ಹೊಂದಿದೆ.
ಈ ಆ್ಯಪ್ ಬಿಡುಗಡೆ ಬಳಿಕ ಮಾತನಾಡಿರುವ ಕೇಂದ್ರ ಆರೋಗ್ಯ ಕಾರ್ಯದರ್ಶಿ ಅಪೂರ್ವ ಚಂದ್ರ, myCGHS ಆ್ಯಪ್ ಕೇಂದ್ರ ಸರ್ಕಾರದ ಆರೋಗ್ಯ ಸೇವೆಯು ಅಗತ್ಯವಾಗಿದೆ. ಇದು ಕೇಂದ್ರ ಸರ್ಕಾರದ ಆರೋಗ್ಯ ಯೋಜನೆ (ಸಿಜಿಎಚ್ಎಸ್) ಫಲನಾಭವಿಗಳನ್ನು ಸಬಲೀಕರಣ ಮಾಡುವ ಜೊತೆಗೆ ಅವರ ಬೆರಳ ತುದಿಯಲ್ಲಿ ಆರೋಗ್ಯ ಸೇವೆ ಕುರಿತ ಅಗತ್ಯ ಸೌಲಭ್ಯದ ಮಾಹಿತಿ ಪಡೆಯಬಹುದಾಗಿದೆ. ತಂತ್ರಜ್ಞಾನದ ಬಳಕೆ ಮೂಲಕ ಆರೋಗ್ಯ ಸೇವೆಯ ಲಭ್ಯತೆ ಮತ್ತು ಗುಣಮಟ್ಟದ ಅಭಿವೃದ್ಧಿಯ ದೃಷ್ಟಿಕೋನವನ್ನು ಹೊಂದಿದೆ
ಫಲಾನುಭವಿಗಳಿಗೆ ಲಭ್ಯವಿದೆ ಈ ಸೌಲಭ್ಯ: myCGHS ಆ್ಯಪ್ ವಿಶಾಲ ದೃಷ್ಟಿಯ ಸೇವೆ ಸೌಲಭ್ಯವನ್ನು ಹೊಂದಿದೆ. ಇದರಲ್ಲಿ ವೈದ್ಯರ ಅಪಾಯಿಂಟ್ಮೆಂಟ್ ಅನ್ನು ಆನ್ಲೈನ್ ಮೂಲಕವೇ ಬುಕ್ ಮತ್ತು ಕ್ಯಾನ್ಸಲ್ ಮಾಡುವ ಸೌಲಭ್ಯ ಕಲ್ಪಿಸುತ್ತದೆ. ಸಿಜಿಎಚ್ಎಸ್ ಕಾರ್ಡ್ ಡೌನ್ಲೋಡಿಂಗ್, ಸೂಚ್ಯಂಕ ದರ, ಸಿಜಿಎಚ್ಎಸ್ ಲ್ಯಾಬ್ ಮೂಲಕ ಲ್ಯಾಬ್ ವರದಿ ಪಡೆಯುವಿಕೆ, ಔಷಧಗಳ ಇತಿಹಾಸ ಪತ್ತೆ, ವೈದ್ಯಕೀಯ ಮರುಪಾವತಿ ಕುರಿತ ಮಾಹಿತಿ, ಶಿಫಾರಸುಗಳ ಮಾಹಿತಿ ಲಭ್ಯತೆ, ಹತ್ತಿರದಲ್ಲಿನ ವೆಲ್ನೆಸ್ ಸೆಂಟರ್ ಪತ್ತೆ ಜೊತೆಗೆ ಸುದ್ದಿ ಮತ್ತು ಮುಖ್ಯಾಂಶದ ಕುರಿತು ಮಾಹಿತಿ ನೀಡುತ್ತದೆ. ಇನ್ನು ಹತ್ತಿರದಲ್ಲಿನ ಆಸ್ಪತ್ರೆ, ಲ್ಯಾಬ್ ಮತ್ತು ಡೆಂಟಲ್ ಘಟಕ ಮತ್ತು ವೆಲ್ನೆಸ್ ಕೇಂದ್ರ ಮತ್ತು ಕಚೇರಿಯ ಸಂಪರ್ಕದ ಮಾಹಿತಿಯನ್ನು ಈ ಆ್ಯಪ್ ನಿಮಗೆ ಬೆರಳ ತುದಿಯಲ್ಲೇ ನೀಡುತ್ತದೆ.
ಈ ಆ್ಯಪ್ ಎರಡು ಹಂತದ ದೃಢೀಕರಣ ಮತ್ತು ಕಾರ್ಯಾಚರಣೆಯ ಸೆಕ್ಯೂರಿಟಿ ಫೀಚರ್ ಅನ್ನು ಕೂಡಾ ಹೊಂದಿದೆ. ಎಂಪಿನ್ ಮೂಲಕ ಬಳಕೆದಾರರ ಆರೋಗ್ಯ ಮಾಹಿತಿಯ ಗೌಪತ್ಯೆ ಕಾಪಾಡಲಾಗುವುದು ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ.
myCGHS ಆ್ಯಪ್ ಇದೀಗ ಐಒಎಸ್ ಮತ್ತು ಆ್ಯಂಡ್ರಾಯ್ಡ್ ಫ್ಲಾಟ್ಫಾರ್ಮ್ನಲ್ಲಿ ಡೌನ್ಲೋಡ್ಗೆ ಲಭ್ಯವಿದ್ದು, ಉಚಿತವಾಗಿ ಇದನ್ನು ಪಡೆಯಬಹುದಾಗಿದೆ. ಸಿಜಿಎಚ್ಎಸ್ ಫಲಾನುಭವಿಗಳು ಈ ಹೊಸ ತಂತ್ರಜ್ಞಾನದ ಮೂಲಕವಾಗಿ ಅಪರಿಮಿತ ಆರೋಗ್ಯ ಸೇವೆ ಪಡೆಯಲು ಉತ್ತೇಜಿಸಲಾಗುವುದು.
ಇದನ್ನೂ ಓದಿ: ಯಶಸ್ವಿನಿ ಯೋಜನೆಯಡಿ ನೋಂದಣಿಯಾದ ಸದಸ್ಯರ ಸಂಖ್ಯೆ ಎಷ್ಟು..? ಸರ್ಕಾರದ ಮಾರ್ಗಸೂಚಿಯಲ್ಲೇನಿದೆ..?