IRCTC Wonders of Wayanad Tour: ಕೇರಳ ರಾಜ್ಯವು ಹಸಿರು ಬೆಟ್ಟಗಳು ಹಾಗೂ ಪ್ರಕೃತಿ ಸೌಂದರ್ಯದ ತವರೂರು ಆಗಿದೆ. ಅದಕ್ಕಾಗಿಯೇ ಅನೇಕ ಪ್ರವಾಸಿಗರು ಕೇರಳಕ್ಕೆ ಭೇಟಿ ನೀಡಲು ತುಂಬಾ ಇಷ್ಟಪಡುತ್ತಾರೆ. ಮುಖ್ಯವಾಗಿ ಚಳಿಗಾಲದಲ್ಲಿ ಜನರು ಮಂಜಿನಿಂದ ಆವೃತವಾದ ಹಸಿರು ಬೆಟ್ಟಗಳು, ಹರಿಯುವ ಜಲಪಾತಗಳನ್ನು ವೀಕ್ಷಿಸುಲು ಹಾತೊರೆಯುತ್ತಾರೆ.
ಈ ಪಟ್ಟಿಯಲ್ಲಿ ನೀವು ಕೂಡ ಇದ್ದೀರಾ? ಹಾಗಾದರೆ, ಇಂಡಿಯನ್ ರೈಲ್ವೆ ಕೇಟರಿಂಗ್ ಮತ್ತು ಟೂರಿಸಂ ಕಾರ್ಪೊರೇಷನ್ ನಿಮಗೋಸ್ಕರವಾಗಿ ಗುಡ್ನ್ಯೂಸ್ ನೀಡಿದೆ. ಈ ನಿಗಮವು ವಯನಾಡಿನ ಹಲವು ಸ್ಥಳಗಳಿಗೆ ಭೇಟಿ ನೀಡಲು ಟೂರ್ ಪ್ಯಾಕೇಜ್ ಘೋಷಿಸಿದೆ. ಈ ಪ್ಯಾಕೇಜ್ ಎಷ್ಟು ದಿನಗಳನ್ನು ಒಳಗೊಂಡಿದೆ? ಪ್ರವಾಸದ ದರ ಎಷ್ಟು? ಈ ಪ್ಯಾಕೇಜ್ನಲ್ಲಿ ಯಾವ ಸ್ಥಳಗಳು ಸೇರಿವೆ ಎಂಬುದನ್ನು ನೋಡೋಣ.
IRCTC 'ವಂಡರ್ಸ್ ಆಫ್ ವಯನಾಡ್' ಹೆಸರಿನಲ್ಲಿ ಈ ಪ್ಯಾಕೇಜ್ ತಂದಿದೆ. ಈ ಪ್ರವಾಸವು ರೈಲಿನಲ್ಲಿ ಹೈದರಾಬಾದ್‌ನಿಂದ ಆರಂಭವಾಗುತ್ತದೆ. ವಯನಾಡಿನಲ್ಲಿರುವ ಅನೇಕ ತಾಣಗಳಿಗೆ ಭೇಟಿ ನೀಡಬಹುದು. ಈ ಪ್ಯಾಕೇಜ್ 5 ರಾತ್ರಿಗಳು ಮತ್ತು 6 ಹಗಲುಗಳಿಂದ ಕೂಡಿರುತ್ತದೆ. ಈ ಪ್ರವಾಸದ ಪ್ರಯಾಣ ಪ್ರತಿ ಮಂಗಳವಾರ ನೆಡಯುತ್ತದೆ.
1ನೇ ದಿನ: ಮೊದಲ ದಿನವು ಕಾಚಿಗುಡ- ಮಂಗಳೂರು ಸೆಂಟ್ರಲ್ ಎಕ್ಸ್‌ಪ್ರೆಸ್ (ರೈಲು ಸಂಖ್ಯೆ- 12789) ಕಾಚಿಗುಡ ರೈಲು ನಿಲ್ದಾಣದಿಂದ ಬೆಳಗ್ಗೆ 6ಕ್ಕೆ ಹೊರಡಲಿದೆ. ಅವತ್ತು ಇಡೀ ದಿನ ಪ್ರಯಾಣ ಜರುಗುತ್ತದೆ.
2ನೇ ದಿನ: ಎರಡನೇ ದಿನ ಬೆಳಗ್ಗೆ 6.17ಕ್ಕೆ ಕಣ್ಣೂರು ತಲುಪಲಿದೆ. ಅಲ್ಲಿಂದ ಮೊದಲೇ ಬುಕ್ ಮಾಡಿದ ಹೋಟೆಲ್‌ಗೆ ಕರೆದುಕೊಂಡು ತೆರಳಲಾಗುವುದು. ಉಪಹಾರದ ನಂತರ, ಸೇಂಟ್ ಏಂಜೆಲೋ ಫೋರ್ಟ್ ಹಾಗೂ ಅರಕ್ಕಲ್ ಮ್ಯೂಸಿಯಂಗೆ ಭೇಟಿ ನೀಡಲಾಗುವುದು. ಅಲ್ಲಿಂದ ವಯನಾಡಿಗೆ ಪ್ರಯಾಣ ಪ್ರಾರಂಭವಾಗುತ್ತದೆ. ನಡುವೆ ಕೆಲವು ಪ್ರವಾಸಿ ತಾಣಗಳಿಗೆ ಭೇಟಿ ಕೊಡಲಾಗುವುದು. ಅಂದು ರಾತ್ರಿ ಚೆಕ್ ಇನ್ ಮಾಡಿ ಕಲ್ಪೆಟ್ಟಾದಲ್ಲಿರುವ ಹೋಟೆಲ್‌ನಲ್ಲಿ ತಂಗಲಾಗುವುದು.
3ನೇ ದಿನ: ಮೂರನೇ ದಿನ ಬೆಳಗ್ಗೆ ಹೋಟೆಲ್‌ನಲ್ಲಿ ಉಪಹಾರ ಸೇವಿಸಿದ ಬಳಿಕ ನಾವು ಕುರ್ವದೀಪದ ಅನೇಕ ಭಾಗಗಳಿಗೆ ಭೇಟಿ ಕೊಡಲಾಗುವುದು. ತಿರುನೆಲ್ಲಿ ದೇವಸ್ಥಾನ, ಬಾಣಾಸುರ ಸಾಗರ ಅಣೆಕಟ್ಟಿಗೆ ಭೇಟಿ ನೀಡಲಾಗುವುದು. ಅಂದು ರಾತ್ರಿ ಕಲ್ಪೆಟ್ಟಾದಲ್ಲಿ ಉಳಿದುಕೊಳ್ಳಲಾಗುವುದು.
4ನೇ ದಿನ: ನಾಲ್ಕನೇ ದಿನ, ಉಪಹಾರದ ನಂತರ ಅಂಬಲ್ವಾಯಲ್ ಹೆರಿಟೇಜ್ ಮ್ಯೂಸಿಯಂ, ಸ್ಕುಯಿಪಾರಾ ಫಾಲ್ಸ್, ಎಡಕ್ಕಲ್ ಗುಹೆಗಳು, ಪೊಕ್ಕೋಡ್ ಸರೋವರಕ್ಕೆ ವೀಕ್ಷಿಸಲಾಗುವುದು. ಆ ದಿನ ರಾತ್ರಿ ಕಲ್ಪೆಟ್ಟಾದಲ್ಲಿ ತಂಗಲಾಗುವುದು.
5ನೇ ದಿನ: ಐದನೇ ದಿನದ ಉಪಹಾರದ ಬಳಿಕ ಹೋಟೆಲ್‌ನಿಂದ ಚೆಕ್ಔಟ್ ಮಾಡಿ. ಅಲ್ಲಿಂದ ನೀವು ಕೋಯಿಕ್ಕೋಡ್ ತಲುಪುತ್ತೀರಿ. ಅವರು ಕಪ್ಪೆಡ್ ಬೀಚ್ ಅನ್ನು ಕಂಣ್ತುಂಬಿಕೊಳ್ಳಬಹುದು. ಸಂಜೆ ನೀವು ಎಸ್ಎಂ ಸ್ಟ್ರೀಟ್‌ನಲ್ಲಿ ಶಾಪಿಂಗ್ ಮಾಡಬಹುದಾಗಿದೆ. ಬಳಿಕ ರಾತ್ರಿ ಕ್ಯಾಲಿಕಟ್ ರೈಲು ನಿಲ್ದಾಣದಲ್ಲಿ ಪ್ರಯಾಣಿಕರನ್ನು ಕರೆದುಕೊಂಡು ಬಂದು ಬಿಡಲಾಗುತ್ತದೆ. ಮಂಗಳೂರು ಸೆಂಟ್ರಲ್ - ಕಾಚಿಗುಡ (ರೈಲು ಸಂಖ್ಯೆ- 12790) ಎಕ್ಸ್‌ಪ್ರೆಸ್ ಅಂದು ರಾತ್ರಿ 11.35ಕ್ಕೆ ಹೈದರಾಬಾದ್‌ಗೆ ಪ್ರಯಾಣ ಆರಂಭವಾಗಲಿದೆ. ಇದು ಇಡೀ ರಾತ್ರಿ ಪ್ರಯಾಣ ನಡೆಯುತ್ತದೆ.
6ನೇ ದಿನ: ಆರನೇ ದಿನ ರಾತ್ರಿ 11.40ಕ್ಕೆ ಕಾಚಿಗುಡ ತಲುಪಲಿದ್ದು, ಈ ಮೂಲಕ ಪ್ರವಾಸ ಮುಕ್ತಾಯವಾಗಲಿದೆ.
ಪ್ರವಾಸ ದರ ಮಾಹಿತಿ ಇಲ್ಲಿದೆ ನೋಡಿ:
- ಕಂಫರ್ಟ್ (3AC): (ಒಬ್ಬ ವ್ಯಕ್ತಿಗೆ) ಸಿಂಗಲ್ ಹಂಚಿಕೆ ₹36,590
- ಡಬಲ್ ಶೇರಿಂಗ್ ₹20,700
- ಟ್ರಿಪಲ್ ಹಂಚಿಕೆ ₹16,280
- ಹಾಸಿಗೆ ಸಹಿತ 5 ರಿಂದ 11 ವರ್ಷದ ಬಾಲಕ/ಬಾಲಕಿಯರಿಗೆ ₹10,510
- ಹಾಸಿಗೆ ಇಲ್ಲದೆ ಹೋದರೆ, ₹9,060 ನಿಗದಿಪಡಿಸಲಾಗಿದೆ.
ಸ್ಟ್ಯಾಂಡರ್ಡ್ (ನಾನ್ ಎಸಿ- ಎಸ್ಎಲ್):
- ಸಿಂಗಲ್ ಹಂಚಿಕೆ (ಒಬ್ಬ ವ್ಯಕ್ತಿಗೆ) ₹33,790,
- ಡಬಲ್ ಹಂಚಿಕೆ ₹17,900,
- ಟ್ರಿಪಲ್ ಹಂಚಿಕೆ ₹13,490 ಎಂದು ಪಾವತಿಸಬೇಕಾಗುತ್ತದೆ.
- ಹಾಸಿಗೆ ಸಹಿತ 5 ರಿಂದ 11 ವರ್ಷದ ಬಾಲಕ/ಬಾಲಕಿಯರಿಗೆ 7,720 ರೂ.
- ವಿತ್ ಔಟ್ ಬೆಡ್ ₹6,260 ಪಾವತಿಸಬೇಕಾಗುತ್ತದೆ.
ಪ್ಯಾಕೇಜ್ ಒಳಗೊಂಡಿರುವ ಸೌಲಭ್ಯ:
- ರೈಲು ಟಿಕೆಟ್‌ಗಳು (ಕಂಫರ್ಟ್, ಸ್ಟ್ಯಾಂಡರ್ಡ್)
- ಸ್ಥಳೀಯ ಸ್ಥಳಗಳಿಗೆ ಭೇಟಿ ನೀಡಲು ಟೂರ್ ಪ್ಯಾಕೇಜ್ ಅವಲಂಬಿಸಿ AC ವಾಹನ
- ಹೋಟೆಲ್ ತಂಗುವಿಕೆ ಜೊತೆಗೆ ಮೂರು ಉಪಾಹಾರಗಳು
- ಪ್ರಯಾಣ ವಿಮೆ
- ಪ್ರಸ್ತುತ ಈ ಟೂರ್ ಡಿಸೆಂಬರ್ 3, 10 ಹಾಗೂ 17 ರಂದು ಲಭ್ಯ ಇರುತ್ತದೆ.
- ಈ ಪ್ಯಾಕೇಜ್‌ನ ಸಂಪೂರ್ಣ ವಿವರಗಳು ಹಾಗೂ ಬುಕ್ಕಿಂಗ್‌ಗಾಗಿ ಈ ಲಿಂಕ್ ಕ್ಲಿಕ್ ಮಾಡಿ ನೋಡಿ.
ಹೆಚ್ಚಿನ ಮಾಹಿತಿಗಾಗಿ ಈ ವೆಬ್ಸೈಟ್ನ್ನು ಸಂಪರ್ಕಿಸಬಹುದು: https://www.irctctourism.com/pacakage_description?packageCode=SHR098
ಇದನ್ನೂ ಓದಿ: ಒಂದೇ ಟೂರ್ನಲ್ಲಿ ಅಜಂತಾ, ಎಲ್ಲೋರಾ, ಮಿನಿ ತಾಜ್ ಮಹಲ್: IRCTC ಸೂಪರ್ ಪ್ಯಾಕೇಜ್, ದರವೂ ಅಗ್ಗ!