ETV Bharat / health

ರಕ್ತದಲ್ಲಿನ ಸಕ್ಕರೆ ಮಟ್ಟ ನಿಯಂತ್ರಿಸಬೇಕಾ? ಹಾಗಾದರೆ ಆಹಾರಕ್ಕೆ ಸೇರಿಸಿ ನಿಂಬೆ ರಸ!: ಏನೆಲ್ಲ ಲಾಭಗಳಿವೆ ಎಂದರೆ? - HIGH BLOOD SUGAR AND LEMON

ಇತ್ತೀಚಿಗೆ ನಡೆಸಿದ ಅಧ್ಯಯನದಲ್ಲಿ ನಿಂಬೆ ಕೇವಲ 35 ನಿಮಿಷದಲ್ಲಿ ಸಕ್ಕರೆ ಮಟ್ಟ ನಿಯಂತ್ರಿಸುವುದು ಬೆಳಕಿಗೆ ಬಂದಿದೆ.

Lemon juice can lower high blood sugar know how to consume it
ಸಕ್ಕರೆ ಮಟ್ಟ ನಿಯಂತ್ರಿಸುವ ನಿಂಬೆ (ಈಟಿವಿ ಭಾರತ್​​)
author img

By ETV Bharat Health Team

Published : Nov 25, 2024, 4:10 PM IST

ಹೈದರಾಬಾದ್​: ನೀವು ಮಧುಮೇಹದಿಂದ ಬಳಲುತ್ತಿದ್ದು, ಸಕ್ಕರೆ ಮಟ್ಟ ನಿಯಂತ್ರಿಸುವ ದಾರಿ ಹುಡುಕುತ್ತಿದ್ದರೆ, ನಿಂಬೆ ನಿಮಗೆ ಸಹಾಯ ಮಾಡಬಲ್ಲದು. ಅಚ್ಚರಿಯಾದರೂ ನಿಜ. ನಿಂಬೆಹಣ್ಣಿನಲ್ಲಿರುವ ಸಮೃದ್ಧವಾಗಿರುವ ಕರಗಬಲ್ಲ ಫೈಬರ್​ ಮತ್ತು ವಿಟಮಿನ್​ ಸಿ ಸಕ್ಕರೆ ಮಟ್ಟ ನಿಯಂತ್ರಿಸುವಲ್ಲಿ ಸಹಾಯ ಮಾಡುತ್ತದೆ ಎಂದು ಅಧ್ಯಯನವೊಂದು ಸಾಬೀತು ಮಾಡಿದೆ.

ಇತ್ತೀಚಿಗೆ ನಡೆಸಿದ ಅಧ್ಯಯನದಲ್ಲಿ ನಿಂಬೆ ಕೇವಲ 35 ನಿಮಿಷದಲ್ಲಿ ಸಕ್ಕರೆ ಮಟ್ಟ ನಿಯಂತ್ರಿಸುವುದು ಬೆಳಕಿಗೆ ಬಂದಿದೆ. ಇದು ಅಚ್ಚರಿಯ ವಿಷಯವೇನೂ ಅಲ್ಲ. ಕಾರಣ ಈಗಾಗಲೇ ಅಮೆರಿಕನ್​ ಡಯಾಬಿಟಿಕ್​ ಅಸೋಸಿಯೇಷನ್​ ನಿಂಬೆಯನ್ನು ಮಧುಮೇಹದ ಸೂಪರ್​ ಫುಡ್​ ಎಂದು ಗುರುತಿಸಿದೆ.

ವೆಬ್​ಎಂಡಿ ಪ್ರಕಾರ, ನಿಂಬೆಯಲ್ಲಿ ಕಡಿಮೆ ಜಿಐ (ಗ್ಲೈಸೆಮಿಕ್​ ಇಂಡೆಕ್ಸ್​) ಇದ್ದು, ಇದು ಡಯಟ್​ಗೆ ಉತ್ತಮವಾಗಿದೆ. ಇದು ದೇಹದಲ್ಲಿನ ಉರಿಯೂತವನ್ನು ನಿಯಂತ್ರಿಸುವುದರ ಜೊತೆಗೆ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಹಾಗೇ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಇದರಲ್ಲಿ ಸಾಕಷ್ಟು ಕರಗುವ ನಾರಿನಂಶವಿದ್ದು, ಜೀರ್ಣಶಕ್ತಿಯನ್ನು ಹೆಚ್ಚಿಸುತ್ತದೆ.

ಉತ್ಕರ್ಷಣ ನಿರೋಧಕ ಅಂಶಗಳು: ಮಧುಮೇಹದಿಂದ ಬಳಲುತ್ತಿರುವವರಿಗೆ ವಿಟಮಿನ್​ ಸಿ, ಫೈಬರ್​, ಉರಿಯೂತ ವಿರೋಧಿ ಅಂಶಗಳು ಮತ್ತು ಉತ್ಕರ್ಷಣ ನಿರೋಧಕ ಅಂಶಗಳು ಅಗತ್ಯವಾಗಿ ಬೇಕು. ಇದು ಸಕ್ಕರೆ ಮಟ್ಟ ನಿಯಂತ್ರಿಸುವ ಜೊತೆಗೆ ದೇಹದ ಚಯಪಚಯನ ಪ್ರಕ್ರಿಯೆಯನ್ನು ಉತ್ತೇಜಿಸುತ್ತದೆ.

ಆರೋಗ್ಯಯುತ ಅಂಶಗಳಿರುವ ನಿಂಬೆಯನ್ನು ಆಹಾರದಲ್ಲಿ ಸೇರಿಸುವುದು ಅತಿ ಮುಖ್ಯವಾಗಿದೆ. ಇದು ಶಕ್ತಿಯುತ ಔಷಧ ಗುಣ ಹೊಂದಿದ್ದು, ಮಧುಮೇಹಿಗಳಿಗೆ ಪ್ರಯೋಜನಕಾರಿಯಾಗಿದೆ.

ಮಧುಮೇಹಿಗಳು ಈ ರೀತಿ ನಿಂಬೆ ರಸವನ್ನು ಆಹಾರದಲ್ಲಿ ಸೇರಿಸಬಹುದು.

  • ಆಹಾರದಲ್ಲಿ ನಿಂಬೆ ರಸವನ್ನು ಒಂದೆರಡು ಹನಿ ಸೇರಿಸುವುದು ಉತ್ತಮ. ಅನ್ನ, ದಾಲ್​, ತರಕಾರಿ, ಪಲ್ಯ ಸೇರಿದಂತೆ ಹಲವು ಆಹಾರದಲ್ಲಿ ನಿಂಬೆ ಸೇರಿಸಬಹುದು. ಇದು ಊಟದ ರುಚಿ ಹೆಚ್ಚಿಸುವ ಜೊತೆಗೆ ಆಹಾರದ ವಾಸನೆ ಕೂಡ ಹೆಚ್ಚಿಸುತ್ತದೆ. ಸಲಾಡ್​​ಗೆ ಸೇರಿಸುವ ಮೂಲಕ ಅದರ ರುಚಿ ಹೆಚ್ಚಿಸಬಹುದು.
  • ಪ್ರತಿದಿನ ಬೆಳಗ್ಗೆ ನೀರಿಗೆ ನಿಂಬೆ ರಸವನ್ನು ಸೇರಿಸುವುದ ಕುಡಿಯುವುದು ಉತ್ತಮ. ಇದು ದೇಹದ ತ್ಯಾಜ್ಯವನ್ನು ಕೂಡ ಹೊರ ಹಾಕಲು ಸಹಾಯ ಮಾಡುತ್ತದೆ. ನಿತ್ಯ ಉಗುರು ಬೆಚ್ಚಗಿನ ನೀರಿಗೆ ನಿಂಬೆ ರಸ ಸೇರಿಸಿ ಕುಡಿಯುವುದು ಉತ್ತಮ ಅಭ್ಯಾಸ.
  • ನಿಂಬೆಯೊಂದಿಗೆ ಡಿಟಾಕ್ಸ್​​ ನೀರನ್ನು ತಯಾರಿಸಿಕೊಳ್ಳಬಹುದು. ಇದು ದೇಹದ ವಿಷಕಾರಿ ಅಂಶದ ಜೊತೆಗೆ ಸಕ್ಕರೆ ಸಮಸ್ಯೆ ನಿಯಂತ್ರಣ ಮಾಡುತ್ತದೆ. ಜೊತೆಗೆ ಒತ್ತಡ ರಹಿತವಾಗಿ ನಿಮ್ಮನ್ನು ಇಡುತ್ತದೆ.
  • ಅನ್ನ, ಆಲೂಗಡ್ಡೆ, ಬೀಟ್​ರೂಟ್​​ ಮತ್ತು ಜೋಳದಂತಹ ಸ್ಟಾರ್ಚ್​ ಪದಾರ್ಥಕ್ಕೆ ನಿಂಬೆ ರಸ ಸೇರಿಸಿ. ಇದು ಊರಿಯುತದ ಕಡಿಮೆ ಮಾಡುವ ಜೊತೆಗೆ ದೇಹದ ಆರೋಗ್ಯ ಸಮತೋಲನವನ್ನು ಉಂಟುಮಾಡುತ್ತದೆ.
  • ಮಜ್ಜಿಗೆ ಅಥವಾ ಮೊಸರಿಗೆ ನಿಂಬೆ ರಸ ಬೆರಸಿ ಕುಡಿಯುವುದು ಕೂಡ ಪ್ರಯೋಜನಕಾರಿ. ಬೇಸಿಗೆ ಕಾಲದಲ್ಲಿ ನಿಂಬೆ ರಸದ ಜ್ಯೂಸ್​ ಕುಡಿಯುವುದು ಕೂಡ ಉಪಯುಕ್ತ.

ಓದುಗರಿಗೆ ವಿಶೇಷ ಸೂಚನೆ: ಇಲ್ಲಿ ನಿಮಗೆ ನೀಡಿರುವ ಎಲ್ಲ ಆರೋಗ್ಯ ಮಾಹಿತಿ ಹಾಗೂ ಸಲಹೆಗಳು ನಿಮ್ಮ ತಿಳಿವಳಿಕೆಗಾಗಿ ಮಾತ್ರ. ವೈಜ್ಞಾನಿಕ ಸಂಶೋಧನೆ, ಅಧ್ಯಯನ, ವೈದ್ಯಕೀಯ ಮತ್ತು ಆರೋಗ್ಯ ವೃತ್ತಿಪರ ಸಲಹೆಯನ್ನು ಆಧರಿಸಿ ನಾವು ಈ ಮಾಹಿತಿಯನ್ನು ನೀಡಿದ್ದೇವೆ.

ಇದನ್ನೂ ಓದಿ: ಬೆಳಗ್ಗೆ ಬಿಸಿ ನೀರು ಕುಡಿದರೆ ಹೃದಯ ಸಂಬಂಧಿ ಕಾಯಿಲೆ ದೂರ: ಇನ್ನಷ್ಟು ಲಾಭಗಳು ನಿಮಗೆ ತಿಳಿದರೆ ಅಚ್ಚರಿ ಪಡುತ್ತೀರಿ!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.