ನವದೆಹಲಿ: ಇತರ ಜನರಿಗೆ ಹೋಲಿಕೆ ಮಾಡಿದಾಗ ಕಡಿಮೆ ಸಾಮಾಜಿಕ - ಆರ್ಥಿಕ ಸ್ಥಿತಿ ಹೊಂದಿರುವವರು ದೀರ್ಘ ಕಾಲದ ನೋವಿಗೆ ತುತ್ತಾಗುವ ಪರಿಣಾಮ ದುಪ್ಪಟ್ಟು ಎಂದು ಅಧ್ಯಯನ ತಿಳಿಸಿದೆ. ಸಾಕಷ್ಟು ಬೆಂಬಲ ವ್ಯವಸ್ಥೆ ಇಲ್ಲದಿರುವಿಕೆ, ಶಿಕ್ಷಣ ಮತ್ತು ಆದಾಯದ ಮಿತಿ ಕೂಡ ಇದರ ಮೇಲೆ ಪರಿಣಾಮ ಹೊಂದಿದ್ದು, ಈ ಬೆದರಿಕೆಗಳು ನೋವಿನ ಪ್ರಮಾಣವನ್ನು ಏಳುಪಟ್ಟು ಹೆಚ್ಚಿಸುತ್ತದೆ ಎಂದು ಅಧ್ಯಯನ ತಿಳಿಸಿದೆ.
ಬ್ರಿಟನ್ನ ಬರ್ಮಿಂಗ್ಹ್ಯಾಮ್ ಯುನಿವರ್ಸಿಟಿಯ ವಿಜ್ಞಾನಿಗಳು ಈ ಸಂಶೋಧನೆ ನಡೆಸಿದ್ದಾರೆ. ಯಾವುದೇ ಗಾಯ ಅಥವಾ ಅಪಘಾತದ ಬಳಿಕ ಮೂರು ತಿಂಗಳಿಗಿಂತ ಹೆಚ್ಚು ಕಾಲ ನೋವು ಕಾಡಿದರೆ, ಅದು ದೀರ್ಘಾವಧಿ ನೋವಾಗಿದೆ. ಇದು ವ್ಯಕ್ತಿಯ ಜೀವನದ ಗುಣಮಟ್ಟ ಕಡಿಮೆ ಮಾಡುತ್ತದೆ. ಜತೆಗೆ ಹೃದಯ ಸಮಸ್ಯೆ ಮತ್ತು ಮಧುಮೇಹದ ಅಪಾಯ ಹೆಚ್ಚಿಸುತ್ತದೆ.
ವಿಜ್ಞಾನಿಗಳು ತಿಳಿಸುವಂತೆ, ಪ್ರಸ್ತುತ ದೀರ್ಘಕಾಲದ ನೋವಿಗೆ ಚಿಕಿತ್ಸೆ ನೀಡುವಾಗ ಗಾಯಗೊಂಡ ಭಾಗವನ್ನು ಕೇಂದ್ರಿಕರಿಸಲಾಗುವುದು. ಆದರೆ, ದೇಹವೂ ಈ ನೋವಿನಿಂದ ಉಪಶಮನವಾಗಲು ಮೂರು ತಿಂಗಳಿಗಿಂತ ಹೆಚ್ಚು ಸಮಯ ತೆಗೆದುಕೊಂಡರೆ, ಈ ಸಮಸ್ಯೆ ಸಂಕೀರ್ಣವಾಗಿದೆ ಎಂಬುದು ಸ್ವಷ್ಟವಾಗುತ್ತದೆ ಎಂದಿದ್ದಾರೆ.
ದೀರ್ಘಕಾಲದ ನೋವುಗಳು ಹಾನಿಯನ್ನು ತಡೆಯುವ ಉದ್ದೇಶದಿಂದ ವ್ಯಕ್ತಿಯ ದೇಹದ ನಡುವಳಿಕೆಯನ್ನು ಬದಲಾಯಿಸುತ್ತದೆ. ದೀರ್ಘಕಾಲದ ನೋವು ಬೇಗ ಉಪಶಮನವಾಗದೇ ಇರುವುದಕ್ಕೆ ಕಾರಣ ಗಾಯ ಅಥವಾ ಅಪಘಾತದ ಬಳಿಕ ನರವ್ಯವಸ್ಥೆಯನ್ನು ನಿರಂತರ ನೋವು ಅನುಭವಿಸುತ್ತಿರುತ್ತದೆ. ಅನೇಕ ಮನೋವೈಜ್ಞಾನಿಕ ಮತ್ತು ಸಾಮಾಜಿಕ ಅಂಶಗಳು ಕೂಡ ಈ ಗಾಯ ಮಾಯುವ ಪ್ರಕ್ರಿಯೆಯಲ್ಲಿ ಪ್ರಭಾವ ಬೀರುತ್ತದೆ. ಈ ಹಿನ್ನಲೆ ಚಿಕಿತ್ಸೆಯನ್ನು ಕೇವಲ ಗಾಯಕ್ಕೆ ಅಲ್ಲದೇ ಸಂಪೂರ್ಣ ದೃಷ್ಟಿಯಿಂದ ನೋಡಬೇಕು. ಗಾಯಗೊಂಡ ಜಾಗಕ್ಕೆ ಮಾತ್ರ ಚಿಕಿತ್ಸೆ ನೀಡುವುದು ಅನಿರೀಕ್ಷಿತ ಫಲಿತಾಂಶ ನೀಡದು ಎಂದು ಅಧ್ಯಯನದ ಲೇಖಕರಾದ ಮಿಚೆಲ್ ಡುನ್ ತಿಳಿಸಿದ್ದಾರೆ.
ವಿಜ್ಞಾನಿಗಳು ಗಾಯದ ರೀತಿಯಲ್ಲದೇ ಅಭಿವೃದ್ಧಿಯಾಗುವ ದೀರ್ಘಾವಧಿ ನೋವಿಗೆ ಕೊಡುಗೆ ನೀಡುವ ಅಂಶಗಳನ್ನು ಕಂಡು ಕೊಂಡಿದ್ದಾರೆ. ಈ ಹಿನ್ನೆಲೆ ಮೂಳೆ ಮತ್ತು ಸ್ನಾಯುಗಳ ಗಾಯಗಳನ್ನು ಕೇಂದ್ರೀಕರಿಸಿ ಚಿಕಿತ್ಸೆ ನೀಡಬೇಕಿದೆ. ಜೊತೆಗೆ ವಿಶಾಲವಾದ ಜೀವಶಾಸ್ತ್ರ, ಮನೋವೈಜ್ಞಾನಿಕ ಮತ್ತು ಸಾಮಾಜಿಕವಾಗಿಯೂ ಗಮನದಲ್ಲಿಟ್ಟುಕೊಂಡು ರೋಗಿಯ ಗಾಯವನ್ನು ಮಾಯಿಸಲು ಚಿಕಿತ್ಸೆ ನೀಡಬೇಕಾದ ಅಗತ್ಯವಿದೆ. ಉದ್ಯೋಗ ತೃಪ್ತಿ ಇಲ್ಲದಿರುವಿಕೆ, ಒತ್ತಡ ಮತ್ತು ಖಿನ್ನತೆಗಳು ಕೂಡ ದೀರ್ಘಾವಧಿ ನೋವಿಗೆ ಕಾರಣವಾಗುತ್ತದೆ ಎಂಬುದನ್ನು ವಿಜ್ಞಾನಿಗಳು ಗಮನಿಸಿದ್ದಾರೆ.
ಇದನ್ನೂ ಓದಿ: ಒತ್ತಡದ ಬಗ್ಗೆ ಬೇಡ ನಿರ್ಲಕ್ಷ್ಯ; ಬಲು ಗಂಭೀರ ಪರಿಣಾಮ ಎದುರಿಸಬೇಕಾದೀತು ಜೋಕೆ