ETV Bharat / state

ಮೇಕೆದಾಟು ಯೋಜನೆಗೆ ಪ್ರಧಾನಿ ಮೋದಿಯಿಂದ ಒಪ್ಪಿಗೆ ಕೊಡಿಸುವೆ: ಹೆಚ್​.ಡಿ.ದೇವೇಗೌಡ

ಚನ್ನಪಟ್ಟಣ ಉಪಚುನಾವಣೆಯಲ್ಲಿ ಮೊಮ್ಮಗ ನಿಖಿಲ್ ಕುಮಾರಸ್ವಾಮಿ ಪರ ಗುರುವಾರ ದೇವೇಗೌಡರು ಪ್ರಚಾರ ನಡೆಸಿದರು. ಈ ವೇಳೆ ಮೇಕೆದಾಟು ಯೋಜನೆಗೆ ಪ್ರಧಾನಿ ಮೋದಿ ಅವರಿಂದ ಒಪ್ಪಿಗೆ ಕೊಡಿಸುವುದಾಗಿ ಭರವಸೆ ನೀಡಿದರು.

ಹೆಚ್​.ಡಿ.ದೇವೇಗೌಡ
ಹೆಚ್​.ಡಿ.ದೇವೇಗೌಡ (ETV Bharat)
author img

By ETV Bharat Karnataka Team

Published : Nov 8, 2024, 8:09 AM IST

ರಾಮನಗರ: ನಾನು ನನ್ನ ಕೊನೆಯುಸಿರೆಳೆಯುವ ಮುನ್ನ ಮೇಕೆದಾಟು ಯೋಜನೆಗೆ ಪ್ರಧಾನಿ ನರೇಂದ್ರ ಮೋದಿ ಅವರಿಂದ ಒಪ್ಪಿಗೆ ಕೊಡಿಸುತ್ತೇನೆ. ಈ ಯೋಜನೆ ಮೋದಿ ಅವರಿಂದ ಮಾತ್ರ ಸಾಧ್ಯ ಎಂಬುದರಲ್ಲಿ ಎರಡು ಮಾತಿಲ್ಲ ಎಂದು ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ತಿಳಿಸಿದ್ದಾರೆ.

ಹೊಡಿಕೆಹೊಸಹಳ್ಳಿ ಗ್ರಾಮದಲ್ಲಿ ಗುರುವಾರ ಎನ್​​ಡಿಎ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಪರ ಮತಯಾಚಿಸುತ್ತಾ ಅವರು ಮಾತನಾಡಿದರು.

ನಾನು‌ ಇಗ್ಗಲೂರು‌ ಅಣೆಕಟ್ಟು ಕಟ್ಟಿದ್ದು‌ ದೊಡ್ಡ ವಿಷಯ ಅಲ್ಲ. ನಾನು ಪ್ರಧಾನಿ ಆಗಿದ್ದು‌ ದೈವದ ಆಟ. ಮೇಕೆದಾಟು ಯೋಜನೆ ಬಗ್ಗೆ ಮೋದಿ ಅವರಿಗೆ ವಾಸ್ತವ ಸ್ಥಿತಿ ಮನವರಿಕೆ ಮಾಡಿಕೊಡುತ್ತೇನೆ. ಈಗಾಗಲೇ ಹಲವಾರು ಸಲ ಅವರು ನನ್ನ ಮನವಿ ಆಲಿಸಿದ್ದಾರೆ. ಈ ಯೋಜನೆಯಲ್ಲಿ ತಮಿಳುನಾಡಿನವರು‌ ನಮ್ಮ ಕುತ್ತಿಗೆ ಹಿಡಿದಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.

ಆರು ತಿಂಗಳಿಂದ ಕಾಂಗ್ರೆಸ್ ಅಧ್ಯಕ್ಷ ಡಿ.ಕೆ.ಶಿವಕುಮಾರ್ ನಾನೇ ಅಭ್ಯರ್ಥಿ ಅಂದರು. ರಾಜ್ಯದ ಮಾನ ಮಾರ್ಯಾದೆಯನ್ನು ತೀರಾ ಕೆಳಮಟ್ಟಕ್ಕೆ ತೆಗೆದುಕೊಂಡು ಹೋದರು. 55 ವರ್ಷದಿಂದ ಚನ್ನಪಟ್ಟಣದಲ್ಲಿ ನಾನು ಸಂಘಟನೆ ಮಾಡಿದ್ದೇನೆ. ಕಡಿಮೆ ದರದಲ್ಲಿ ಪಡಿತರ ನೀಡಿದ್ದೇನೆ. ಅದನ್ನು ಸಿದ್ದರಾಮಯ್ಯ ಬಳಿ‌ ನೀವು ಕೇಳಿ. ಆಲಮಟ್ಟಿ, ಹಾರಂಗಿ, ಹೇಮಾವತಿ, ಯಗಚಿ ಅಣೆಕಟ್ಟು ಕಟ್ಟಿದವರು ಯಾರು? ಬರೀ ಇಗ್ಗಲೂರು ಡ್ಯಾಂ ಅಷ್ಟೇ ಅಲ್ಲ. ನಿಮ್ಮನ್ನು ‌ನಾನು ನೋಡುತ್ತಿದ್ದರೆ 92 ವರ್ಷದ ನನಗೆ 18ರ ಶಕ್ತಿ ಬರುತ್ತದೆ. ಇನ್ನೂ ನಾಲ್ಕಾರು ವರ್ಷ ಬದುಕುತ್ತೇನೆ ಎಂದು ದೇವೇಗೌಡರು ತಿಳಿಸಿದರು.

Where is Kumaranna? Where is DK? ಹಿಮಾಲಯ ಪರ್ವತಕ್ಕೂ ಇಲ್ಲಿನ ಸಣ್ಣ ಗುಡ್ಡಕ್ಕೂ ಎಲ್ಲಿಯ ಹೋಲಿಕೆ?. ಒಂದು ಶಾಲೆ ಮಾಡಲು ಜಾಗ ಕೇಳಿದರೆ ದುಡ್ಡು ದುಡ್ಡು ಅಂತಾರೆ ಎಂದು ಮಾಜಿ ಪ್ರಧಾನಿ ಗುಡುಗಿದರು. ನಿಖಿಲ್​​ನನ್ನ ನಾನೇ ರಾಜ್ಯ ನಾಯಕನನ್ನಾಗಿ ಮಾಡ್ತೇನೆ. ತೋಟದಲ್ಲಿ ಕುಳಿತು ಹೇಳಿಕೊಟ್ಟು ರಾಜ್ಯ ನಾಯಕನನ್ನಾಗಿ ಮಾಡುವ ಕಾಲ ಬರಲಿದೆ. ಅವನನ್ನು ದೊಡ್ಡ ನಾಯಕನನ್ನಾಗಿ ರೂಪಿಸುತ್ತೇನೆ ಎಂದು ದೇವೆಗೌಡ ಹೇಳಿದರು.

ಪ್ರಚಾರದ ವೇಳೆ ದೇವೇಗೌಡ, ತಾರಾ
ಮತಪ್ರಚಾರದ ವೇಳೆ ದೇವೇಗೌಡ, ತಾರಾ (ETV Bharat)

ಯಾರಾದರೂ ಕಣ್ಣೀರು ಹಾಕಿದರೆ ಅಣಕಿಸಬಾರದು- ನಟಿ ತಾರಾ: ಯಾರಾದರೂ ಕಣ್ಣೀರು ಹಾಕಿದರೆ ಅಣಕಿಸಬಾರದು. ತಾಯಿಯ ಭಾವನೆ ಇದ್ದವರಿಗೆ ಮಾತ್ರ ಕಣ್ಣೀರು ಬರುತ್ತದೆ. ಏನೇನೋ ಟೀಕೆ ಮಾಡಬಾರದು ಎಂದು ಬಿಜೆಪಿ ನಾಯಕಿ, ನಟಿ ತಾರಾ ಹೇಳಿದರು. ದೇವೇಗೌಡರ ಜೊತೆ ನಿಲಸಂದ್ರದಲ್ಲಿ ನಿಖಿಲ್ ಪರ ಅವರು ಪ್ರಚಾರ ಮಾಡಿದರು.

ಅಭಿವೃದ್ಧಿ ಬಗ್ಗೆ ಮಾತಾಡಿದರೆ ಬಹಳ‌ ಮಾತಾಡಬಹುದು. ಎಲ್ಲರಿಗೂ ಒಂದು ಅವಕಾಶ ಕೊಟ್ಟಿದ್ದೀರಿ. ನಿಖಿಲ್ ಕುಮಾರಸ್ವಾಮಿಗೆ ಒಂದು ಅವಕಾಶ ಕೊಡಿ. ಈ ಕ್ಷೇತ್ರಕ್ಕೆ ದೇವೇಗೌಡರು, ಕುಮಾರಸ್ವಾಮಿ ಏನ್ ಮಾಡಿದ್ದಾರೆ ಅಂತ ನೆನಪು ಮಾಡಿಕೊಳ್ಳಿ. ನೂರಾರು ಕೆರೆ ತುಂಬಿದವರು ಕುಮಾರಸ್ವಾಮಿ. ಆದರೆ, ಯಾರೋ ಕೆರೆ ತುಂಬಿಸಿದವರು ಅಂತಾರೆ. ಇದು ಸರಿಯಲ್ಲ ಎಂದು ತಾರಾ ಹೇಳಿದರು.

ಇದನ್ನೂ ಓದಿ: ನಿಖಿಲ್ ಪರ ಜಂಟಿ ಪ್ರಚಾರ: ಅಭಿವೃದ್ಧಿಗಾಗಿ ನಾನು, ಕುಮಾರಸ್ವಾಮಿ ಶಕ್ತಿ ಮೀರಿ ಕೆಲಸ ಮಾಡಿದ್ದೇವೆ - ಯಡಿಯೂರಪ್ಪ

ಇದನ್ನೂ ಓದಿ: ಚನ್ನಪಟ್ಟಣ ಉಪ ಚುನಾವಣೆ: ಮೈತ್ರಿ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದ ಸಿಎಂ ಸಿದ್ದರಾಮಯ್ಯ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.