ETV Bharat / state

ಬೆಳಗಾವಿ ಟು ಲಂಡನ್: ರಾಣಿ ಚನ್ನಮ್ಮ ವಿವಿಯ 5 ವಿದ್ಯಾರ್ಥಿಗಳಿಗೆ ವಿದೇಶ ಪ್ರವಾಸದ ಅವಕಾಶ

ಬ್ರಿಟಿಷ್ ಕೌನ್ಸಿಲ್ ಹಾಗು ಉನ್ನತ ಶಿಕ್ಷಣ ಪರಿಷತ್ತಿನ ಸಹಯೋಗದಲ್ಲಿ ರಾಜ್ಯದ 6 ವಿಶ್ವವಿದ್ಯಾಲಯಗಳಿಂದ ಒಟ್ಟು 30 ವಿದ್ಯಾರ್ಥಿಗಳು ಲಂಡನ್‌ಗೆ ಅಧ್ಯಯನ ಪ್ರವಾಸ ಮಾಡಲಿದ್ದಾರೆ.

ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯದ ಐವರು ವಿದ್ಯಾರ್ಥಿಗಳಿಗೆ ಲಂಡನ್​​ ಪ್ರವಾಸ ಭಾಗ್ಯ
ಬೆಳಗಾವಿಯ ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯದ ಐವರು ವಿದ್ಯಾರ್ಥಿಗಳಿಗೆ ಲಂಡನ್​​ ಪ್ರವಾಸ ಭಾಗ್ಯ (ETV Bharat)
author img

By ETV Bharat Karnataka Team

Published : Nov 7, 2024, 10:36 AM IST

ಬೆಳಗಾವಿ: ಲಂಡನ್​ನಲ್ಲಿ ನಡೆಯಲಿರುವ ಪ್ರತಿಷ್ಠಿತ SCOUT (Scholars for Outstanding Undergraduate Talent) ಅಧ್ಯಯನ ಪ್ರವಾಸದಲ್ಲಿ ಭಾಗವಹಿಸಲು ಬೆಳಗಾವಿ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಐವರು ವಿದ್ಯಾರ್ಥಿಗಳು ಆಯ್ಕೆಯಾಗಿದ್ದಾರೆ.

ಬ್ರಿಟಿಷ್ ಕೌನ್ಸಿಲ್ ಮತ್ತು ರಾಜ್ಯ ಉನ್ನತ ಶಿಕ್ಷಣ ಪರಿಷತ್ (KSHEC) ಸಹಯೋಗದಲ್ಲಿ ನವೆಂಬರ್ 9ರಿಂದ 23ರವರೆಗೆ ಪೂರ್ವ ಲಂಡನ್ ವಿಶ್ವವಿದ್ಯಾಲಯದಲ್ಲಿ ಎರಡು ವಾರಗಳ ಅಧ್ಯಯನ ಪ್ರವಾಸ ಹಮ್ಮಿಕೊಳ್ಳಲಾಗಿದೆ.

ರಾಣಿ ಚೆನ್ನಮ್ಮ ವಿವಿಯ 5 ವಿದ್ಯಾರ್ಥಿಗಳಿಗೆ ವಿದೇಶ ಪ್ರವಾಸದ ಅವಕಾಶ (ETV Bharat)

ಅಧ್ಯಯನ ಪ್ರವಾಸಕ್ಕೆ ರಾಜ್ಯದ 6 ವಿಶ್ವವಿದ್ಯಾಲಯಗಳಿಂದ ಒಟ್ಟು 30 ವಿದ್ಯಾರ್ಥಿಗಳು ಆಯ್ಕೆಯಾಗಿದ್ದಾರೆ.

ಸಂಗೊಳ್ಳಿ ರಾಯಣ್ಣ ಪ್ರಥಮ ದರ್ಜೆ ಕಾಲೇಜಿನ ಮೀರಾ ನದಾಫ್ ಮತ್ತು ಅನಾಮಿಕಾ ಶಿಂಧೆ, ಖಾನಾಪುರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಯುವರಾಜ್ ಪಾಟೀಲ್, ಗೋಕಾಕಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಜಗದೀಶ್ ಅರಭಾವಿ ಮತ್ತು ದಾನೇಶ್ವರಿ ಮಾದರ ಅಧ್ಯಯನ ಪ್ರವಾಸದಲ್ಲಿ ಭಾಗವಹಿಸಲಿರುವ ಬೆಳಗಾವಿಯ ವಿದ್ಯಾರ್ಥಿಗಳು.

"ಲಂಡನ್​ನಲ್ಲಿ​ ವಿದ್ಯಾರ್ಥಿಗಳಿಗೆ ಅಂತಾರಾಷ್ಟ್ರೀಯ ಮಟ್ಟದ ಉನ್ನತ ಶಿಕ್ಷಣದಲ್ಲಿನ ಸಾಧ್ಯತೆಗಳು ಹಾಗೂ ನಾವೀನ್ಯತೆ ಮತ್ತು ಸಂಶೋಧನೆಯ ಕ್ಷೇತ್ರಗಳಲ್ಲಿನ ಅವಕಾಶಗಳ ಕುರಿತು ಅರಿತುಕೊಳ್ಳಲು ಹಾಗೂ ಅಂತಾರಾಷ್ಟ್ರೀಯ ಶಿಕ್ಷಣದ ನೇರ ಅನುಭವ ಪಡೆದುಕೊಳ್ಳಲು ಅತ್ಯುತ್ತಮ ಅವಕಾಶ ದೊರೆಯಲಿದೆ. ಈ ಕಾರ್ಯಕ್ರಮದಿಂದ ವಿದ್ಯಾರ್ಥಿಗಳು ಪಡೆಯುವ ಅನುಭವ ಮತ್ತು ಕೌಶಲ್ಯಗಳು ಪದವಿಯ ನಂತರ ಅವರ ವೃತ್ತಿಪರ ಮತ್ತು ಶೈಕ್ಷಣಿಕ ಅನ್ವೇಷಣೆಗಳಲ್ಲಿ ಅತ್ಯಮೂಲ್ಯವಾಗಿರುತ್ತವೆ. ಆಯ್ದ ವಿದ್ಯಾರ್ಥಿಗಳಲ್ಲಿ ಸುಸ್ಥಿರ ಅಭಿವೃದ್ಧಿಯ ಗುರಿಗಳು, ವಿಮರ್ಶಾತ್ಮಕ ಚಿಂತನೆ ಮತ್ತು ಸಮಸ್ಯೆಗಳನ್ನು ಪರಿಹರಿಸುವ ಕೌಶಲ್ಯಗಳು, ಉದ್ಯಮಶೀಲತೆ ಹಾಗೂ ವ್ಯಕ್ತಿತ್ವ ವಿಕಸನದ ಕುರಿತು ಜ್ಞಾನ ಹಾಗೂ ಕೌಶಲ ಬೆಳೆಸುವುದು ಈ ಕಾರ್ಯಕ್ರಮದ ಪ್ರಮುಖ ಉದ್ದೇಶಗಳಾಗಿವೆ" ಎಂದು ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಸಿ.ಎಂ.ತ್ಯಾಗರಾಜ್​ ಈಟಿವಿ ಭಾರತಕ್ಕೆ ತಿಳಿಸಿದರು.

ವೀಸಾ ಇತರೆ ಖರ್ಚು ಭರಿಸಲಿರುವ ಬ್ರಿಟಿಷ್ ಕೌನ್ಸಿಲ್: "ಅಧ್ಯಯನ ಪ್ರವಾಸದ ವೀಸಾ ಹಾಗೂ ಇತರೆ ಖರ್ಚುಗಳನ್ನು ಬ್ರಿಟಿಷ್ ಕೌನ್ಸಿಲ್ ಭರಿಸಲಿದೆ. ಪ್ರಯಾಣದ ವೆಚ್ಚವಾದ 5 ಲಕ್ಷ ರೂ. ಅನ್ನು ವಿವಿ ಭರಿಸಲಿದೆ. ನೋಡಲ್ ಅಧಿಕಾರಿ, ಸಮಾಜಕಾರ್ಯ ವಿಭಾಗದ ಪ್ರಾಧ್ಯಾಪಕ ಡಾ.ಅಶೋಕ್ ಡಿಸೋಜಾ ವಿದ್ಯಾರ್ಥಿಗಳೊಂದಿಗೆ ಲಂಡನ್​​ಗೆ ತೆರಳಲಿದ್ದಾರೆ. ಪ್ರವಾಸದಲ್ಲಿ ಪಾಲ್ಗೊಂಡ ನಂತರದಲ್ಲಿ ವಿದ್ಯಾರ್ಥಿಗಳು ಪ್ರವಾಸದ ತಮ್ಮ ಅನುಭವ ಮತ್ತು ಕಲಿತ ಕೌಶಲ್ಯಗಳ ಕುರಿತು ವರದಿ ಸಿದ್ಧಪಡಿಸಿ ವಿಶ್ವವಿದ್ಯಾಲಯಕ್ಕೆ ಸಲ್ಲಿಸಬೇಕು. ಜೊತೆಗೆ ತಮ್ಮ ವಿದ್ಯಾಲಯದ ಇತರ ವಿದ್ಯಾರ್ಥಿಗಳೊಂದಿಗೆ ತಮ್ಮ ಕಲಿಕೆಗಳನ್ನು ಹಂಚಿಕೊಳ್ಳಲಿದ್ದಾರೆ" ಎಂದು ತಿಳಿಸಿದ ವಿದ್ಯಾರ್ಥಿಗಳಿಗೆ ಪ್ರೊ.ಸಿ.ಎಂ.ತ್ಯಾಗರಾಜ್ ಶುಭಾಶಯ ಕೋರಿದರು.

"ಲಂಡನ್ ಹೋಗುತ್ತೇನೆಂದು ಕನಸಿನಲ್ಲೂ ಅಂದುಕೊಂಡಿರಲಿಲ್ಲ. ಆದರೆ, ವಿಶ್ವವಿದ್ಯಾಲಯ ನನ್ನನ್ನು ಆಯ್ಕೆ ಮಾಡಿದ್ದು ತುಂಬಾ ಸಂತಸವಾಗುತ್ತಿದೆ. ಈ ಅವಕಾಶವನ್ನು ನನ್ನ ಭವಿಷ್ಯದ ಸಾಧನೆಗೆ ದೊಡ್ಡ ಮೆಟ್ಟಿಲಾಗಿ ಬಳಸುತ್ತೇನೆ. ತಂದೆ-ತಾಯಿ, ಉಪನ್ಯಾಸಕರು ತುಂಬಾ ಸಹಕಾರ ನೀಡಿದ್ದಾರೆ" ಎಂದು ಜಗದೀಶ್ ತಿಳಿಸಿದರು.

ಮತ್ತೋರ್ವ ವಿದ್ಯಾರ್ಥಿನಿ ಅನಾಮಿಕಾ ಶಿಂಧೆ ಮಾತನಾಡಿ, "ಲಂಡನ್ ಅಧ್ಯಯನ ಪ್ರವಾಸಕ್ಕೆ ಆಯ್ಕೆ ಆಗಿದ್ದಕ್ಕೆ ತುಂಬಾ ಖುಷಿಯಾಗುತ್ತಿದೆ. ನನಗೆ ಅವಕಾಶ ಮಾಡಿಕೊಟ್ಟ ವಿಶ್ವವಿದ್ಯಾಲಯ ಮತ್ತು ಸಹಕಾರ ನೀಡಿದ ಮನೆಯವರು, ಸ್ನೇಹಿತರಿಗೆ ಕೃತಜ್ಞತೆ ಸಲ್ಲಿಸುತ್ತೇನೆ" ಎಂದು ಸಂತಸ ವ್ಯಕ್ತಪಡಿಸಿದರು.

ವಿದ್ಯಾರ್ಥಿನಿ ಮೀರಾ ನದಾಫ ಮಾತನಾಡಿ, "ಇದೇ ಮೊದಲ ಬಾರಿ ವಿದೇಶ ಪ್ರವಾಸ ಮಾಡುತ್ತಿದ್ದೇನೆ. ಲಂಡನ್​ಗೆ ಹೋಗಲು ತುಂಬಾ ಉತ್ಸುಕಳಾಗಿದ್ದೇನೆ. ಅಲ್ಲಿ ನಮಗೆ ಸುಸ್ಥಿರ ಅಭಿವೃದ್ಧಿಯ ಗುರಿಗಳು, ಕೌಶಲ್ಯ ಅಭಿವೃದ್ಧಿ, ವ್ಯಕ್ತಿತ್ವ ವಿಕಸನ, ಉದ್ಯಮ ಶೀಲತೆ ಸಂವಹನ ಕೌಶಲ್ಯಗಳ ಬಗ್ಗೆ ತಿಳಿಸಲಿದ್ದಾರೆ. ಅದೇ ರೀತಿ ಲಿಂಗ ಸಮಾನತೆ, ಬಡತನ ನಿರ್ಮೂಲನೆ ಸೇರಿ‌ ಮತ್ತಿತರ ವಿಚಾರಗಳ ಬಗ್ಗೆ ಪೂರ್ವ ಲಂಡನ್ ವಿಶ್ವವಿದ್ಯಾಲಯದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಅಧ್ಯಯನ ಮಾಡಲಾಗುತ್ತದೆ" ಎಂದು ತಿಳಿಸಿದರು. ಸರ್ಕಾರಿ ಕಾಲೇಜಿನ ವಿದ್ಯಾರ್ಥಿಗಳು ಲಂಡನ್ ಅಧ್ಯಯನ ಪ್ರವಾಸಕ್ಕೆ ಹೊರಟಿರುವುದಕ್ಕೆ ವಿದ್ಯಾರ್ತಿಗಳ ಪಾಲಕರು ಕೂಡ ಸಂತಸಗೊಂಡಿದ್ದಾರೆ.

ಇದನ್ನೂ ಓದಿ: ಧಾರವಾಡದಲ್ಲಿದೆ ಪಿಯುಸಿ ಆದವರಿಗೆ ಉದ್ಯೋಗಾವಕಾಶ: ಇಲ್ಲಿದೆ ಹುದ್ದೆಗಳ ವಿವರ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.