How to Check the Purity of Spices: ಮಸಾಲೆ ಪದಾರ್ಥಗಳು ಇದು ಭಾರತೀಯ ಪಾಕಪದ್ಧತಿಯಲ್ಲಿ ಪ್ರಮುಖ ಸ್ಥಾನವನ್ನು ಹೊಂದಿದೆ. ಆದರೆ, ಒಂದಾನೊಂದು ಕಾಲದಲ್ಲಿ ಮಹಿಳೆಯರು ಮನೆಯಲ್ಲಿಯೇ ಅಡುಗೆಗೆ ಬೇಕಾಗುವ ಮಸಾಲೆ ಪದಾರ್ಥಗಳನ್ನು ಸಿದ್ಧಪಡಿಸುತ್ತಿದ್ದರು. ಆದರೆ, ಇಂದಿನ ಬ್ಯುಸಿ ಲೈಫ್ನಲ್ಲಿ ಮನೆಯಲ್ಲಿ ಸಿದ್ಧಪಡಿಸಲು ತಾಳ್ಮೆ ಇಲ್ಲದಿದ್ದರೆ ಹೊರಗೆ ಕೊಳ್ಳುವುದು ಸಾಮಾನ್ಯ.
ಆದರೆ, ಹೊರಗೆ ಖರೀದಿಸಿದ ವಸ್ತುಗಳಲ್ಲಿ ಏನಿದೆ ಎಂದು ಊಹಿಸಿದರೆ, ಅದರಲ್ಲಿ ಮರದ ತೊಗಟೆ, ಆಮ್ಲಗಳು, ಪ್ರಾಣಿ ಕೊಬ್ಬು ಮಿಕ್ಸ್ ಮಾಡಲಾಗುತ್ತದೆ. ಇದರಿಂದ ಮನದಲ್ಲಿ ಭಯ ಹುಟ್ಟುತ್ತದೆ. ಅದಕ್ಕಾಗಿಯೇ ಅದನ್ನು ಪರೀಕ್ಷೆಗೆ ಒಳಪಡಿಸಬೇಕು. ಮತ್ತು ಅದು ಸರಿ ಎನಿಸಿದರೆ ಮಾತ್ರ ಬಳಸಬೇಕು. ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ (FSSAI) ಅದಕ್ಕಾಗಿ ಕೆಲವು ಸಲಹೆಗಳನ್ನು ನೀಡುತ್ತಿದೆ. ಅವುಗಳನ್ನು ವಿವರವಾಗಿ ತಿಳಿಯೋಣ ಬನ್ನಿ.
ಅರಿಶಿನ: ಇದು ಅಡುಗೆಗೆ ಉತ್ತಮವಾದ ಬಣ್ಣ ಮತ್ತು ಪರಿಮಳ ನೀಡುವಲ್ಲಿ ವಿಶೇಷವಾದ ಪಾತ್ರ ವಹಿಸುತ್ತದೆ. ಅರಿಶಿನವು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ವಿಶೇಷವಾಗಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಆದರೆ, ಅದರಲ್ಲಿ ರಾಸಾಯನಿಕಗಳನ್ನು ಬೆರೆಸುವ ಸಾಧ್ಯತೆ ಹೆಚ್ಚು. ಆದ್ದರಿಂದ ಈ ರೀತಿಯ ಹಳದಿ ಕಲಬೆರಕೆಯನ್ನು ಗುರುತಿಸಿ. ಅದಕ್ಕಾಗಿ.. ಒಂದು ಲೋಟದಲ್ಲಿ ಸ್ವಲ್ಪ ನೀರು ತೆಗೆದುಕೊಂಡು ಕಾಲು ಚಮಚ ಅರಿಶಿನ ಸೇರಿಸಿ. ನೀರು ಹಳದಿ ಬಣ್ಣಕ್ಕೆ ತಿರುಗಿದರೆ, ಅದು ಹಾನಿಕಾರಕ ರಾಸಾಯನಿಕಗಳನ್ನು ಹೊಂದಿದೆ ಎಂದು ಅರ್ಥ. ಅರಿಶಿನವು ನೀರಿನ ಬಣ್ಣವನ್ನು ಹೆಚ್ಚು ಬದಲಾಯಿಸುವುದಿಲ್ಲ.
![HOW TO CHECK THE PURITY OF SPICES PURITY OF MASALA CHECKING TIPS TIPS TO FIND ADULTERATED SPICES MASALA PURITY CHECKING TIPS](https://etvbharatimages.akamaized.net/etvbharat/prod-images/07-11-2024/22846015_turmeric.jpg)
ಮಸಾಲೆ ಪುಡಿಗಳು: ಧನಿಯಾ, ಜೀರಿಗೆ, ಸಾಂಬಾರ್ ಪುಡಿ ಮುಂತಾದ ಹಲವಾರು ಮಸಾಲೆ ಪುಡಿಗಳು ನಮಗೆ ಸಿಗುತ್ತವೆ. ಅವು ಕಲಬೆರಕೆಯಾಗಿದೆಯೇ ಅಥವಾ ಇಲ್ಲವೇ ಎಂಬುದನ್ನು ನಾವು ತಿಳಿದುಕೊಳ್ಳಲು ಬಯಸುತ್ತೇವೆ. ಅದಕ್ಕಾಗಿ.. ಯಾವುದಾದರೂ ಪಾತ್ರೆಯಲ್ಲಿ ನೀರು ತೆಗೆದುಕೊಂಡು ಅದರಲ್ಲಿ ಈ ಪುಡಿಗಳನ್ನು ಹಾಕಿ. ಇದು ನೀರಿನ ಮೇಲೆ ತೇಲಿದರೆ, ಅದು ಮರದ ಸಿಪ್ಪೆಯಂತೆ. ಅಥವಾ ಒಂದು ಹನಿ ಅಯೋಡಿನ್ ದ್ರಾವಣವನ್ನು ಸೇರಿಸಲು ಪ್ರಯತ್ನಿಸಿ. ಅದು ನೀಲಿ ಬಣ್ಣಕ್ಕೆ ತಿರುಗಿದರೆ, ಹಿಟ್ಟು ಮಿಶ್ರಣವಾಗಿದೆ ಎಂದು ಅರ್ಥ.
![HOW TO CHECK THE PURITY OF SPICES PURITY OF MASALA CHECKING TIPS TIPS TO FIND ADULTERATED SPICES MASALA PURITY CHECKING TIPS](https://etvbharatimages.akamaized.net/etvbharat/prod-images/07-11-2024/22846015_masala.jpg)
ಲವಂಗ: ಲವಂಗಗಳಿಗೆ ಹೆಚ್ಚಿನ ಬೇಡಿಕೆಯಿದೆ. ಲವಂಗಗಳಲ್ಲಿನ ಕಲಬೆರಕೆ ಪತ್ತೆ ಮಾಡಲು, ಅವುಗಳನ್ನು ನೀರಿನಲ್ಲಿ ಹಾಕಿ. ಅವುಗಳು ಒರಿಜಿನಲ್ ಲವಂಗಗಳು ಆಗಿದ್ದರೆ ಮುಳುಗುತ್ತವೆ. ಅದು ನೀರಿನ ಮೇಲೆ ತೇಲುತ್ತಿದ್ದರೆ ನಕಲಿ ಎಂಬುದು ತಿಳಿಯುತ್ತದೆ.
![HOW TO CHECK THE PURITY OF SPICES PURITY OF MASALA CHECKING TIPS TIPS TO FIND ADULTERATED SPICES MASALA PURITY CHECKING TIPS](https://etvbharatimages.akamaized.net/etvbharat/prod-images/07-11-2024/22846015_clove.jpg)
ಕೇಸರಿ: ಸಿಹಿತಿಂಡಿಗಳಿಗೆ ಬಣ್ಣ ಬರಲು ಕೆಸರಿಯನ್ನು ಅದರೊಳಗೆ ಮಿಶ್ರಣ ಮಾಡಲಾಗುತ್ತದೆ. ನೀವು ಖರೀದಿಸಿರುವ ಕೆಸರಿ ಅಸಲಿಯೋ ಅಥವಾ ನಕಲಿಯೋ ಕಂಡುಹಿಡಿಯುವುದು ಹೀಗೆ... ಮೂಲ ಕೇಸರಿ ದಳ ಗಟ್ಟಿಯಾಗಿರುತ್ತದೆ. ಕೇಸರಿ ಎಳೆಗಳನ್ನು ಬಣ್ಣ ಗಾಢವಾಗಿರುತ್ತದೆ. ನೀರಿನಲ್ಲಿ ನೆನೆಸಿದರೆ ಅದು ಬಣ್ಣ ಬಿಡುವುದಿಲ್ಲ. ನಕಲಿ ಕೇಸರಿಯಾಗಿದ್ದರೆ ಅದು ಸುಲಭವಾಗಿ ಒಡೆದು ಬೆರಳಿಗೆ ಹೆಚ್ಚು ಬಣ್ಣ ಹತ್ತಿಕೊಳ್ಳುತ್ತದೆ.
![HOW TO CHECK THE PURITY OF SPICES PURITY OF MASALA CHECKING TIPS TIPS TO FIND ADULTERATED SPICES MASALA PURITY CHECKING TIPS](https://etvbharatimages.akamaized.net/etvbharat/prod-images/07-11-2024/22846015_safron.jpg)
ದಾಲ್ಚಿನ್ನಿ: ಇದೊಂದು ಔಷಧೀಯ ಸಸ್ಯ. ಸಾಮಾನ್ಯವಾಗಿ ಇದು ತೆಳುವಾಗಿತ್ತದೆ. ಇಲ್ಲದಿದ್ದರೆ, ಅದು ಬಹು ಪದರಗಳೊಂದಿಗೆ ದಪ್ಪವಾಗಿದ್ದರೆ, ಅದನ್ನು ನಕಲಿ ಎಂದು ಗುರುತಿಸಬೇಕು.
![HOW TO CHECK THE PURITY OF SPICES PURITY OF MASALA CHECKING TIPS TIPS TO FIND ADULTERATED SPICES MASALA PURITY CHECKING TIPS](https://etvbharatimages.akamaized.net/etvbharat/prod-images/07-11-2024/22846015_cinnamon.jpg)
ಇಂಗು: ಕರಿಗಳಿಗೆ ಪರಿಮಳವನ್ನು ಸೇರಿಸುವಲ್ಲಿ ಇಂಗು ಕೂಡ ಪಾತ್ರ ವಹಿಸುತ್ತದೆ. ಕಲಬೆರಕೆ ಇಂಗು ಗುರುತಿಸುವ ಸಲುವಾಗಿ. ಒಂದು ಚಮಚದಲ್ಲಿ ಸ್ವಲ್ಪ ಇಂಗು ತೆಗೆದುಕೊಳ್ಳಿ. ಆ ಚಮಚವನ್ನು ಬರ್ನರ್ ಮೇಲೆ ಹಾಕಿ ಸುಟ್ಟರೆ, ಕರ್ಪೂರದಂತೆ ಬೆಳಗಿದರೆ ಅದು ಶುದ್ಧವಾಗಿರುತ್ತದೆ. ಇಲ್ಲದಿದ್ದರೆ ಅದು ನಕಲಿ.
![HOW TO CHECK THE PURITY OF SPICES PURITY OF MASALA CHECKING TIPS TIPS TO FIND ADULTERATED SPICES MASALA PURITY CHECKING TIPS](https://etvbharatimages.akamaized.net/etvbharat/prod-images/07-11-2024/22846015_hing.jpg)
ಕಾಳುಮೆಣಸು: ಕಾಳುಮೆಣಸಿನ ಪುಡಿಯನ್ನು ಕೂಡ ಅನೇಕ ಖಾದ್ಯಗಳಲ್ಲಿ ಬಳಸುತ್ತಾರೆ. ಮತ್ತು ಆ ಕಾಳುಮೆಣಸು ಅಸಲಿಯೋ ಅಥವಾ ನಕಲಿಯೋ ಎಂಬುದನ್ನು ತಿಳಿಯಬೇಕಾದರೆ.. ಗಾಜಿನ ಲೋಟದಲ್ಲಿ ನೀರು ತೆಗೆದುಕೊಳ್ಳಿ. ಅದರಲ್ಲಿ ಒಂದು ಚಮಚ ಕಾಳುಮೆಣಸು ಹಾಕಿ. ಕಾಳುಮೆಣಸು ತಳಭಾಗಕ್ಕೆ ಬಂದರೆ ಅದು ಶುದ್ಧವಾಗಿದ್ದು, ನೀರಿನಲ್ಲಿ ತೇಲಿದರೆ ಅದರಲ್ಲಿ ಪಪ್ಪಾಯಿ ಕಾಳುಗಳಿರುವುದು ಗುರುತಿಸಲ್ಪಡುತ್ತದೆ.
![HOW TO CHECK THE PURITY OF SPICES PURITY OF MASALA CHECKING TIPS TIPS TO FIND ADULTERATED SPICES MASALA PURITY CHECKING TIPS](https://etvbharatimages.akamaized.net/etvbharat/prod-images/07-11-2024/22846015_pepper.jpg)