ETV Bharat / technology

ಮೀನುಗಾರಿಕಾ ವಲಯಕ್ಕೆ ಡ್ರೋನ್​ ತಂತ್ರಜ್ಞಾನ: ಅನುಕೂಲಗಳೇನು?

Drone Technology For Fisheries Sector: ಕೇರಳದ ಕೊಚ್ಚಿಯಲ್ಲಿಂದು ಮೀನುಗಾರಿಕಾ ವಲಯದಲ್ಲಿ ಡ್ರೋನ್​ ತಂತ್ರಜ್ಞಾನದ ಕುರಿತು ವಿಶೇಷ ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ.

FISHERIES MINISTRY  CMFRI TO TRAIN FISHERMEN ON DRONES  CMFRI TO USE DRONES
ಮೀನುಗಾರಿಕಾ ವಲಯಕ್ಕೆ ಡ್ರೋನ್​ ತಂತ್ರಜ್ಞಾನದ ನೆರವು (IANS)
author img

By ETV Bharat Tech Team

Published : Nov 8, 2024, 8:33 AM IST

Drone Technology For Fisheries Sector: ದೇಶದ ಮೀನುಗಾರಿಕಾ ವಲಯಕ್ಕೆ ಅನುಕೂಲವಾಗುವಂತೆ ಕೇಂದ್ರ ಸರ್ಕಾರ ಡ್ರೋನ್​ ತಂತ್ರಜ್ಞಾನವನ್ನು ಪರಿಚಯಿಸಲಿದೆ. ಇದರಿಂದ ಉದ್ಯಮಕ್ಕೆ ಬಹಳಷ್ಟು ಅನುಕೂಲವಾಗಲಿದೆ. ಈ ಕುರಿತು ಕೇರಳದ ಕೊಚ್ಚಿಯಲ್ಲಿ ಇಂದು ವಿಶೇಷ ಕಾರ್ಯಾಗಾರ ನಡೆಯಲಿದ್ದು, ನೂರಾರು ಮಹಿಳಾ ಮೀನುಗಾರರು, ತಜ್ಞರು ಪಾಲ್ಗೊಳ್ಳಲಿದ್ದಾರೆ. ಬೆಳಗ್ಗೆ 11 ಗಂಟೆಗೆ ಕೇಂದ್ರ ಮೀನುಗಾರಿಕಾ ರಾಜ್ಯ ಸಚಿವ ಜಾರ್ಜ್ ಕುರಿಯನ್ ಕಾರ್ಯಾಗಾರ ಉದ್ಘಾಟಿಸಲಿದ್ದಾರೆ.

ಕೇಂದ್ರದ ಮೀನುಗಾರಿಕೆ ಇಲಾಖೆ ಮತ್ತು ರಾಷ್ಟ್ರೀಯ ಮೀನುಗಾರಿಕಾ ಅಭಿವೃದ್ಧಿ ಮಂಡಳಿ (ಎನ್‌ಎಫ್‌ಡಿಬಿ), ಐಸಿಎಆರ್-ಸೆಂಟ್ರಲ್ ಮೆರೈನ್ ಫಿಶರೀಸ್ ರಿಸರ್ಚ್ ಇನ್‌ಸ್ಟಿಟ್ಯೂಟ್‌ ಆಶ್ರಯದಲ್ಲಿ (ಸಿಎಂಎಫ್‌ಆರ್‌ಐ) ಕಾರ್ಯಾಗಾರ ನಡೆಯಲಿದೆ.

ಎನ್‌ಎಫ್‌ಡಿಬಿ ಹೊಸ ಸ್ಟಾರ್ಟಪ್‌ಗಳ ಜೊತೆಗೆ ಮೀನುಗಾರಿಕೆ ಮತ್ತು ಅಕ್ವಾಕಲ್ಚರ್ ವಲಯದಲ್ಲಿ ಡ್ರೋನ್ ತಂತ್ರಜ್ಞಾನದ ಪರಿವರ್ತಕ ಸಾಮರ್ಥ್ಯವನ್ನು ಎತ್ತಿ ತೋರಿಸುವ ಕಾರ್ಯವನ್ನು ಇದು ಮಾಡಲಿದೆ.

ಮೀನು ಸಾಗಣೆ, ಮೀನು ಆಹಾರ ವಿತರಣೆ ಮತ್ತು ರಕ್ಷಣಾ ಕಾರ್ಯಾಚರಣೆಗಳಿಗೆ ಲೈಫ್ ಜಾಕೆಟ್ ವಿತರಣೆ ಮುಂತಾದ ಮೀನುಗಾರಿಕೆಯಲ್ಲಿನ ವಿವಿಧ ಡ್ರೋನ್ ಅಪ್ಲಿಕೇಶನ್‌ಗಳ ಕುರಿತು ಲೈವ್ ಡ್ರೋನ್ ಪ್ರದರ್ಶನ ನಡೆಯಲಿದೆ. ಹೊಸ ತಾಂತ್ರಿಕ ಪ್ರಗತಿಯನ್ನು ಹೈಲೈಟ್ ಮಾಡಲು ಒಂದು ವಿಶಿಷ್ಟ ವೇದಿಕೆಯನ್ನು ಈ ಕಾರ್ಯಾಗಾರ ನೀಡುತ್ತದೆ. ಮೀನುಗಾರಿಕೆ ವಲಯವನ್ನು ಪರಿವರ್ತಿಸುವಲ್ಲಿ ಮತ್ತು ಅದರ ಸಾಮರ್ಥ್ಯವನ್ನು ಹೆಚ್ಚಿಸುವಲ್ಲಿ ಡ್ರೋನ್ ತಂತ್ರಜ್ಞಾನದ ಪ್ರಮುಖ ಪಾತ್ರವನ್ನು ಇಲ್ಲಿ ಕೇಂದ್ರೀಕರಿಸಲಾಗಿದೆ.

ಇದು ಪ್ರಧಾನ ಮಂತ್ರಿ ಮತ್ಸ್ಯ ಸಂಪದ ಯೋಜನೆಯ (PMMSY) ಭಾಗವಾಗಿದೆ. ಮೀನುಗಾರಿಕೆ ಮತ್ತು ಜಲಕೃಷಿ ವಲಯದಲ್ಲಿ ಸುಸ್ಥಿರ, ಆರ್ಥಿಕವಾಗಿ ಕಾರ್ಯಸಾಧ್ಯ ಮತ್ತು ಅಂತರ್ಗತ ಬೆಳವಣಿಗೆಯನ್ನು ಉತ್ತೇಜಿಸುವ ಗುರಿ ಹೊಂದಲಾಗಿದೆ. ಡ್ರೋನ್‌ಗಳು ಮೀನುಗಾರಿಕೆ ವಲಯದಲ್ಲಿನ ವಿವಿಧ ಸವಾಲುಗಳಿಗೆ ಹೊಸ ಪರಿಹಾರಗಳನ್ನು ನೀಡುತ್ತವೆ. ನೀರಿನ ಮಾದರಿ, ರೋಗ ಪತ್ತೆ, ಮೇಲ್ವಿಚಾರಣೆ ಚಟುವಟಿಕೆಗಳು, ಫೀಡ್ ನಿರ್ವಹಣೆ ಮತ್ತು ಮೀನು ಸಾಗಣೆಯಲ್ಲಿ ಕಾರ್ಯಕ್ರಮದ ಪ್ರಮುಖ ಭಾಗವಾಗಿದೆ.

FISHERIES MINISTRY  CMFRI TO TRAIN FISHERMEN ON DRONES  CMFRI TO USE DRONES
ಕೇಂದ್ರೀಯ ಸಮುದ್ರ ಮೀನುಗಾರಿಕೆ ಸಂಶೋಧನಾ ಸಂಸ್ಥೆ, ಕೊಚ್ಚಿ (ETV Bharat)

ಶಿಪ್ಪಿಂಗ್, ಬಂದರುಗಳು ಮತ್ತು ಜಲಮಾರ್ಗಗಳ ಸಚಿವಾಲಯದ DG ಶಿಪ್ಪಿಂಗ್‌ನ ತಾಂತ್ರಿಕ ಬೆಂಬಲದೊಂದಿಗೆ ಮೀನುಗಾರಿಕೆ ಇಲಾಖೆ ಇಂದು ಸೆಂಟ್ರಲ್ ಇನ್‌ಸ್ಟಿಟ್ಯೂಟ್ ಆಫ್ ಫಿಶರೀಸ್ ನಾಟಿಕಲ್ ಮತ್ತು ಇಂಜಿನಿಯರಿಂಗ್ ಟ್ರೈನಿಂಗ್‌ನಲ್ಲಿ (CIFNET) ಒಂದು ದಿನದ ಸಂವಾದಾತ್ಮಕ ಕಾರ್ಯಾಗಾರ ಆಯೋಜಿಸಿದೆ.

ಈ ಕಾರ್ಯಾಗಾರ ಕೊಚ್ಚಿ ಮೀನುಗಾರಿಕೆ ಹಡಗುಗಳ ನೋಂದಣಿ, ಸಮೀಕ್ಷೆ ಮತ್ತು ಪ್ರಮಾಣೀಕರಣದ ವಿಷಯಗಳ ಬಗ್ಗೆ ನಡೆಯಲಿದೆ. ಕರಾವಳಿ ರಾಜ್ಯ/ಕೇಂದ್ರಾಡಳಿತ ಪ್ರದೇಶಗಳ ಮೀನುಗಾರಿಕೆ ಇಲಾಖೆಗೆ 'ಮೀನುಗಾರಿಕೆ ಹಡಗುಗಳ ರಿಜಿಸ್ಟ್ರಾರ್' ಆಗಿ ಕಾರ್ಯನಿರ್ವಹಿಸಲು ಮತ್ತು ಮೀನುಗಾರಿಕೆ ಹಡಗುಗಳ ತಾಂತ್ರಿಕ ಫಿಟ್‌ನೆಸ್ ಮೌಲ್ಯಮಾಪನವನ್ನು ಕೈಗೊಳ್ಳಲು ಅಗತ್ಯವಾದ ಪರಿಣತಿ ಒದಗಿಸಲಿದೆ.

ಇದನ್ನೂ ಓದಿ: ಇಂದಿನಿಂದ ಮುತ್ತಿನ ನಗರಿಯಲ್ಲಿ ತಂತ್ರಜ್ಞಾನ ಉತ್ಸವ, ಸಾವಿರಾರು ವಿದ್ಯಾರ್ಥಿಗಳ ಪ್ರತಿಭೆ ಅನಾವರಣಕ್ಕೆ ವೇದಿಕೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.