ಕರ್ನಾಟಕ

karnataka

ETV Bharat / health

ನೀವು ಕಾಲಿನ ಸೆಳೆತದಿಂದ ಬಳಲುತ್ತಿದ್ದಿರಾ?: ತಜ್ಞರ ಈ ಸಿಂಪಲ್​ ಟಿಪ್ಸ್​ ಪಾಲಿಸಿದರೆ ತಕ್ಷಣವೇ ಪರಿಹಾರ!

Leg Cramps Reasons and Remedies: ತಜ್ಞರು ನೀಡಿರುವ ಈ ಸಿಂಪಲ್​ ಟಿಪ್ಸ್ ಪಾಲಿಸಿದರೆ ಸಾಕು, ತಕ್ಷಣವೇ ಕಾಲಿನ ಸೆಳೆತಕ್ಕೆ ಪರಿಹಾರ ಲಭಿಸುತ್ತದೆ.

LEG CRAMPS REASONS AND REMEDIES  LEG CRAMPS CAUSES AND CURES  LEG CRAMPS CAUSES AND TREATMENT  LEG CRAMPS AT NIGHT DURING SLEEP
ಸಾಂದರ್ಭಿಕ ಚಿತ್ರ (ETV Bharat)

By ETV Bharat Health Team

Published : 4 hours ago

Leg Cramps Reasons and Remedies:ನೀವು ಉತ್ತಮ ನಿದ್ರೆ ಮಾಡುವಾಗ ಹಠಾತ್ ಕಾಲಿನ ಸೆಳೆತ ವಾಗುತ್ತದೆಯಾ? ಈ ರೀತಿ ಅನೇಕ ಜನರಿಗೆ ಸಂಭವಿಸುತ್ತದೆ. ಅಲ್ಪ ಸಮಯವಾದರೂ ತೀವ್ರವಾದ ನೋವಿನಿಂದ ಬಳಲುತ್ತಾರೆ, ಜೊತೆಗೆ ನಿದ್ರೆಯಿಂದ ಎಚ್ಚರವಾಗುತ್ತಾರೆ. ವಿಶೇಷವಾಗಿ ಸುಮಾರು ಶೇ 50ರಿಂದ 60ರಷ್ಟು ವಯಸ್ಕರು ತಮ್ಮ ಜೀವನದಲ್ಲಿ ಒಂದು ಹಂತದಲ್ಲಿ ಈ ರೀತಿಯ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಕಾಲಿನ ಸೆಳೆತದಿಂದ ಇದರಿಂದ ಸುಮಾರು ಶೇ.20 ರಷ್ಟು ಜನರು ನಿದ್ರಾಹೀನತೆಯಿಂದ ಬಳಲುತ್ತಿದ್ದಾರೆ ಎಂದು ತಜ್ಞರು ತಿಳಿಸುತ್ತಾರೆ. ಕಾಲಿನ ಸೆಳೆತಕ್ಕೆ ಕಾರಣಗಳು ಹಾಗೂ ಪರಿಹಾರಗಳೇನು ಎಂಬುದನ್ನು ವೈದ್ಯರಾದ ಡಾ. ಎಂ. ವಿ. ರಾವ್ ವಿವರಿಸಿದ್ದಾರೆ.

ಸ್ನಾಯುಗಳ ಹಠಾತ್ ಮತ್ತು ಅನೈಚ್ಛಿಕ ಸಂಕೋಚನದಿಂದ ಸೆಳೆತ ಉಂಟಾಗುತ್ತದೆ. ಇದು ಹಾನಿಕಾರಕವಲ್ಲದಿದ್ದರೂ, ಇದು ತೀವ್ರವಾದ ನೋವನ್ನು ಉಂಟುಮಾಡುತ್ತದೆ. ಸ್ನಾಯುವಿನ ಸಂಕೋಚನ ಮತ್ತು ವಿಸ್ತರಣೆಯನ್ನು ಬೆಂಬಲಿಸುವ ಕ್ಯಾಲ್ಸಿಯಂ, ಮೆಗ್ನೀಸಿಯಮ್ ಮತ್ತು ಪೊಟ್ಯಾಸಿಯಮ್‌ನಂತಹ ಲವಣಗಳ ಪ್ರಮಾಣದಲ್ಲಿ ಇಳಿಕೆಯಾಗಿರುವುದು ಮುಖ್ಯ ಕಾರಣವಾಗುತ್ತದೆ ಎಂದು ಡಾ. ಎಂ. ವಿ. ರಾವ್ ಹೇಳುತ್ತಾರೆ.

ಶುಗರ್​ನಿಂದಲೂ ಉಂಟಾಗುವ ಸಾಧ್ಯತೆ: ಶುಗರ್​ನಿಂದಲೂ ಸ್ನಾಯುಸೆಳೆತ ಉಂಟಾಗುವ ಸಾಧ್ಯತೆ ಹೆಚ್ಚಿದೆ. ಸ್ನಾಯುವಿನ ಸಂಕೋಚನ ಮತ್ತು ವಿಶ್ರಾಂತಿಗಾಗಿ ಗ್ಲೂಕೋಸ್ ಅಗತ್ಯವಿದೆ. ಆದರೆ, ಮಧುಮೇಹಿಗಳಲ್ಲಿ ಗ್ಲೂಕೋಸ್ ಅಧಿಕವಿದ್ದರೂ ಸ್ನಾಯುಗಳಿಗೆ ಉಪಯೋಗವಾಗುವುದಿಲ್ಲ. ಪರಿಣಾಮವಾಗಿ, ಸ್ನಾಯುಗಳಲ್ಲಿ ಸಂಭವಿಸುವ ಚಯಾಪಚಯ ಬದಲಾವಣೆಗಳು ಸಂಕೋಚನ ಮತ್ತು ವಿಸ್ತರಣೆಗೆ ಅಡ್ಡಿಪಡಿಸುತ್ತವೆ. ಮತ್ತೊಂದೆಡೆ, ಮಧುಮೇಹದಲ್ಲಿ ನರಗಳು ಮತ್ತು ರಕ್ತನಾಳಗಳು ಹಾನಿಗೊಳಗಾಗುತ್ತವೆ. ಇದರಿಂದಾಗಿ ರಕ್ತ ಪರಿಚಲನೆ ಕಡಿಮೆಯಾಗುತ್ತದೆ. ಮತ್ತು ಪಿಂಚ್ಡ್​ ನರ್ವ್ ನಂತಹ ನೋವು ಉಂಟಾಗಬಹುದು ಎಂದು ವೈದ್ಯರು ತಿಳಿಸಿದರು.

ಅತಿಯಾದ ಮೂತ್ರ ವಿಸರ್ಜನೆ ತೊಂದರೆ: ಅತಿಯಾದ ಮೂತ್ರ ವಿಸರ್ಜನೆಯಿಂದಲೂ ಸ್ನಾಯುಗಳಿಗೆ ತೊಂದರೆ ಆಗುತ್ತದೆ. ಮೂತ್ರ ಮತ್ತು ದೇಹದಲ್ಲಿನ ಅನೇಕ ಲವಣಗಳ ಕೊರತೆಯಿಂದ ಇದು ಸಂಭವಿಸುತ್ತದೆ. ಹೆಚ್ಚು ಮೂತ್ರವನ್ನು ಉಂಟುಮಾಡುವ ಔಷಧಿಗಳೊಂದಿಗೆ ಸೋಡಿಯಂ ಮತ್ತು ಪೊಟ್ಯಾಸಿಯಮ್ ಮಟ್ಟಗಳು ಕುಸಿಯಬಹುದು ಎಂದು ತಜ್ಞರು ತಿಳಿಸುತ್ತಾರೆ.

ಎಲೆಕ್ಟ್ರೋಲೈಟ್‌ಗಳಲ್ಲಿನ ಬದಲಾವಣೆಯಿಂದ ಸಮಸ್ಯೆ:ಕೊಲೆಸ್ಟ್ರಾಲ್ ಕಡಿಮೆ ಮಾಡುವ ಸ್ಟ್ಯಾಟಿನ್​ಗಳು ಕೂಡ ಈ ಸ್ನಾಯು ಸೆಳೆತದ ಸಮಸ್ಯೆಗೆ ಕಾರಣವಾಗಬಹುದು. ಕೆಲವೊಮ್ಮೆ ಎಲೆಕ್ಟ್ರೋಲೈಟ್‌ಗಳ ಬದಲಾವಣೆಯಿಂದ ಮೂತ್ರಪಿಂಡದ ತೊಂದರೆಗಳು ಉಂಟಾಗಬಹುದು. ಹಾಗಾಗಿ ಕಾರಣವನ್ನು ಗುರುತಿಸಿ ಚಿಕಿತ್ಸೆ ನೀಡಿದರೆ, ಸಮಸ್ಯೆ ನಿವಾರಣೆಯಾಗುತ್ತದೆ ಎನ್ನುತ್ತಾರೆ ತಜ್ಞರು. ದೈಹಿಕ ಚಟುವಟಿಕೆ ಹಾಗೂ ವ್ಯಾಯಾಮ ಅಲ್ಲದೆ, ಬಿಸಿಲಿನಲ್ಲಿ ಮತ್ತು ಬಿಸಿ ವಾತಾವರಣದಲ್ಲಿ ದೀರ್ಘಕಾಲ ಕೆಲಸ ಮಾಡುವಾಗ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಇದರಿಂದ ದೇಹದಲ್ಲಿ ವಿದ್ಯುದ್ವಿಚ್ಛೇದ್ಯಗಳು ಕಡಿಮೆಯಾಗುತ್ತವೆ. ವಿಟಮಿನ್ ಬಿ12 ಮತ್ತು ವಿಟಮಿನ್ ಡಿ ಕೊರತೆಯು ಇದಕ್ಕೆ ಕಾರಣವಾಗಬಹುದು ಎಂದು ತಜ್ಞರು ಹೇಳುತ್ತಾರೆ.

ವಹಿಸಬೇಕಾದ ಮುನ್ನೆಚ್ಚರಿಕೆಗಳೇನು?:ಈ ಸಮಸ್ಯೆಯನ್ನು ಕಡಿಮೆ ಮಾಡಲು ವಿಟಮಿನ್- ಕೆ 2 ಸಹಾಯ ಮಾಡುತ್ತದೆ ಎಂದು ಇತ್ತೀಚಿನ ಸಂಶೋಧನೆಯು ತೋರಿಸಿದೆ. ಈ ವಿಟಮಿನ್​ನಿಂದಾಗಿ ಯಾವುದೇ ಅಡ್ಡ ಪರಿಣಾಮಗಳಿಲ್ಲದೆ ಈ ಸಮಸ್ಯೆಯನ್ನು ಕಡಿಮೆ ಮಾಡುತ್ತದೆ. ಜೊತೆಗೆ ತೀವ್ರ ನೋವು ಕೂಡ ಕಡಿಮೆಯಾಗುತ್ತದೆ. ಸ್ನಾಯು ಸೆಳೆತವನ್ನು ತಪ್ಪಿಸಲು ದೇಹದಲ್ಲಿನ ನೀರಿನ ಅಂಶವನ್ನು ನಿಯಂತ್ರಣದಲ್ಲಿಡಬೇಕು ಎಂದು ತಜ್ಞರು ಸಲಹೆ ನೀಡುತ್ತಾರೆ. ಬಿಸಿಲಿನಲ್ಲಿ ಹೆಚ್ಚು ಕೆಲಸ ಮಾಡುತ್ತಿದ್ದರೆ ಒಆರ್​ಎಸ್ ಪೌಡರ್ ಬೆರೆಸಿದ ನೀರು ಕುಡಿಯಬೇಕು. ಸ್ನಾಯು ಚಲನೆಗಳು ಸರಾಗವಾಗಿ ನಡೆಯುತ್ತವೆ. ಸಾಧ್ಯವಾದರೆ, ರಾತ್ರಿ ಮಲಗುವ ಮೊದಲು, ಸ್ನಾಯುಗಳನ್ನು ಹಿಗ್ಗಿಸಲು ವ್ಯಾಯಾಮವನ್ನು ಮಾಡಲು ಸಲಹೆ ನೀಡಲಾಗುತ್ತದೆ. ಇದರಿಂದ ಸಮಸ್ಯೆಗೆ ಸಿಲುಕಿಕೊಳ್ಳುವುದಿಲ್ಲ ಎಂದು ಎಂದು ವೈದ್ಯರು ತಿಳಿಸುತ್ತಾರೆ.

ಹೆಚ್ಚಿನ ಮಾಹಿತಿಗಾಗಿ ಈ ವೆಬ್​ಸೈಟ್​ನ್ನು ಸಂರ್ಪಕಿಸಬಹುದು:https://www.nhs.uk/conditions/leg-cramps/

ಓದುಗರಿಗೆ ಸೂಚನೆ:ಇಲ್ಲಿ ನಿಮಗೆ ನೀಡಿರುವ ಎಲ್ಲ ಆರೋಗ್ಯ ಮಾಹಿತಿ ಹಾಗೂ ಸಲಹೆಗಳು ನಿಮ್ಮ ತಿಳುವಳಿಕೆಗಾಗಿ ಮಾತ್ರ. ವೈಜ್ಞಾನಿಕ ಸಂಶೋಧನೆ, ಅಧ್ಯಯನ, ವೈದ್ಯಕೀಯ ಮತ್ತು ಆರೋಗ್ಯ ವೃತ್ತಿಪರ ಸಲಹೆಯನ್ನು ಆಧರಿಸಿ ನಾವು ಈ ಮಾಹಿತಿಯನ್ನು ನೀಡಿದ್ದೇವೆ.

ಇವುಗಳನ್ನು ಓದಿ:

ABOUT THE AUTHOR

...view details