ಕರ್ನಾಟಕ

karnataka

By ETV Bharat Karnataka Team

Published : Feb 26, 2024, 10:42 AM IST

ETV Bharat / health

ಭಾರತದ ಶೇ 90ರಷ್ಟು ಮಹಿಳೆಯರಲ್ಲಿ ಕಬ್ಬಿಣಾಂಶದ ಕೊರತೆ: ವೈದ್ಯರು

ಮಹಿಳೆಯರಲ್ಲಿನ ಕಬ್ಬಿಣಾಂಶದ ಕೊರತೆ ರಕ್ತಹೀನತೆಗೂ ಕಾರಣವಾಗುತ್ತದೆ. ಈ ಹಿನ್ನೆಲೆ ಈ ಕುರಿತು ಅಗತ್ಯ ಕಾಳಜಿವಹಿಸುವುದು ಅವಶ್ಯಕ ಎಂದು ತಜ್ಞರು ಹೇಳಿದ್ದಾರೆ.

iron-deficiency-is-a-widespread-issue-in-indian-women
iron-deficiency-is-a-widespread-issue-in-indian-women

ನವದೆಹಲಿ: ಯುವ ಮಹಿಳೆಯರಲ್ಲಿ ಕಬ್ಬಿಣಾಂಶದ ಕೊರತೆ ಸಮಸ್ಯೆ ಹೆಚ್ಚು ವ್ಯಾಪಕವಾಗಿದ್ದು, ಭಾರತದ ಶೇ 90ರಷ್ಟು ಮಹಿಳೆಯರು ಈ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಈ ಹಿನ್ನೆಲೆ ಪರಿಸ್ಥಿತಿಯನ್ನು ಸರಿಯಾದ ಸಮಯದಲ್ಲಿ ಪತ್ತೆ ಮಾಡುವ ಅವಶ್ಯಕತೆ ಇದೆ ಎಂದು ವೈದ್ಯರು ಕರೆ ನೀಡಿದ್ದಾರೆ.

ತಲೆ ಸುತ್ತು ಮತ್ತಿತ್ತರ ಕಾರಣದಿಂದ ದುರ್ಬಲತೆ ಅನುಭವಿಸುವ ಬಹುತೇಕ ಮಹಿಳೆಯರು ತಾವು ಕಡಿಮೆ ಕಬ್ಬಿಣಾಂಶದ ಕೊರತೆಯಿಂದ ಬಳಲುತ್ತಿರುವುದರ ಬಗ್ಗೆ ತಿಳಿದುಕೊಂಡಿರುವುದಿಲ್ಲ. ಕಬ್ಬಿಣದ ಕೊರತೆ ಎಂಬುದು ಸಾಮಾನ್ಯ ಪೋಷಕಾಂಶದ ಕೊರತೆಯಾಗಿದೆ. ಸಾಕಷ್ಟು ಪ್ರಮಾಣ ಕಬ್ಬಿಣಾಂಶ ಹೊಂದಿಲ್ಲದೇ ಇದ್ದಾಗ ದೇಹದ ಕಾರ್ಯಾಚರಣೆಗೆ ಅಡ್ಡಿಯಾಗುತ್ತದೆ.

ದೇಹದ ಸಂಪೂರ್ಣ ಭಾಗಕ್ಕೆ ಆಮ್ಲಜನಕವನ್ನು ಕೊಂಡೊಯ್ಯವಲ್ಲಿ ಕಬ್ಬಿಣವು ನಿರ್ಣಾಯಕ ಪಾತ್ರವನ್ನು ವಹಿಸುತ್ತದೆ. ಜೊತೆಗೆ ಆರೋಗ್ಯಯುತ ಕೆಂಪು ರಕ್ತ ಕಣ ನಿರ್ವಹಣೆ ಮಾಡಿ, ಒಟ್ಟಾರೆ ಶಕ್ತಿ ಮಟ್ಟವನ್ನು ಬೆಂಬಲಿಸುತ್ತದೆ. ಅಗತ್ಯ ಪ್ರಮಾಣದ ಕಬ್ಬಿಣಾಂಶವೂ ಇಲ್ಲದೇ ಹೋದಲ್ಲಿ ಸುಸ್ತು, ದುರ್ಬಲತೆ, ಉಸಿರಾಟದ ಸಮಸ್ಯೆ ಮತ್ತು ಅರಿವಿನ ಕಾರ್ಯಾಚರಣೆಯಲ್ಲಿ ಸಮಸ್ಯೆ ಕಂಡು ಬರುತ್ತದೆ.

ಯುವ ಮಹಿಳೆಯರಲ್ಲಿ ಕಬ್ಬಿಣಾಂಶದ ಕೊರತೆ ಕಾಳಜಿ ವಿಷಯವಾಗಿದ್ದು, ಇದನ್ನು ಕಡೆಗಣಿಸಲಾಗುತ್ತದೆ. ಆರೋಗ್ಯಕರ ಆಹಾರ ಮತ್ತು ಪೂರಕಗಳ ಸೇವನೆ ಹೊರತಾಗಿಯು ಈ ಕಬ್ಬಿಣಾಂಶ ಕೊರತೆಯಿಂದ ಶೇ 90ರಷ್ಟು ಮಹಿಳೆಯರು ಹೋರಾಡುತ್ತಿದ್ದಾರೆ ಎಂದು ಅಪೋಲೋ ಡಯೋಗ್ನಸ್ಟಿಕ್​ನ ನ್ಯಾಷನಲ್​ ಟೆಕ್ನಿಕಲ್​ ಮುಖ್ಯಸ್ಥ ಮತ್ತು ರೋಗಶಾಸ್ತ್ರಜ್ಞರಾದ ಡಾ ರಾಜೇಶ್​ ಬೇಂದ್ರೆ ತಿಳಿಸಿದ್ದಾರೆ.

ಕಬ್ಬಿಣಾಂಶ ಕೊರತೆಗೆ ಕಾರಣ: ಋತುಚಕ್ರದ ರಕ್ತಸ್ರಾವ, ನಿಯಂತ್ರಿಕ ಡಯಟ್​​, ಸಂಸ್ಕರಿಸಿದ ಆಹಾರದ ಮೇಲಿನ ಹೆಚ್ಚಿನ ಅವಲಂಬನೆ ಮಹಿಳೆಯರಲ್ಲಿ ಕಬ್ಬಿಣಾಂಶ ಕೊರತೆಗೆ ಕಾರಣವಾಗಿದೆ.

ಮಹಿಳೆಯರಲ್ಲಿ ಕಬ್ಬಿಣಾಂಶ ಸಮೃದ್ಧ ಆಹಾರ ಮೂಲಗಳ ಕುರಿತು ಶಿಕ್ಷಣದ ಕೊರತೆ ಮತ್ತು ಆಹಾರದ ಅವಶ್ಯಕತೆಗಳು ಸಮಸ್ಯೆಯನ್ನು ಹೆಚ್ಚಿಸುತ್ತದೆ. ಈ ಹಿನ್ನೆಲೆ ಕಬ್ಬಿಣ ಮಟ್ಟದ ಕುರಿತು ಅವರಲ್ಲಿ ಜಾಗೃತಿ ಮೂಡಿಸುವುದು ಮತ್ತು ಸರಿಯಾದ ಪೋಷಣೆಗಳ ಕುರಿತು ಶಿಕ್ಷಣ ನೀಡುವುದು ಅಗತ್ಯವಾಗಿದೆ ಎಂದು ವೈದ್ಯರು ತಿಳಿಸುತ್ತಾರೆ.

ಗರ್ಭಿಣಿಯರಲ್ಲಿ ಕಬ್ಬಿಣದ ಕೊರತೆ ಅನೇಕ ಅಪಾಯವ ಉಂಟು ಮಾಡಬಹುದು. ರಕ್ತ ಕೊರತೆ ಮತ್ತು ಆಯಾಸದ ಹೊರತಾಗಿ ಕಬ್ಬಿಣಾಂಶದ ಕೊರತೆಯು ಭ್ರೂಣದ ಬೆಳವಣಿಗೆಯಲ್ಲಿ ತೊಡಕು ಆಗುತ್ತದೆ. ಅಸಮರ್ಪಕ ಕಬ್ಬಿಣದ ಕೊರತೆಯು ಮಗುವಿನ ಅಕಾಲಿಕ ಜನನ ಮತ್ತು ಕಡಿಮೆ ತೂಕದ ಜನನಕ್ಕೆ ಕಾರಣವಗುವ ಜೊತೆಗೆ ಇದು ಮಗುವಿನ ಆರೋಗ್ಯದ ಮೇಲೆ ದೀರ್ಘ ಪರಿಣಾಮ ಮತ್ತು ಅರಿವಿನ ಬೆಳವಣಿಗೆಗೆ ತೊಡಕನ್ನು ಉಂಟು ಮಾಡುತ್ತದೆ ಎಂದು ತಿಳಿಸಿದ್ದಾರೆ.

ಗರ್ಭಿಣಿ ಮಹಿಳೆಯರಲ್ಲಿ ಕಬ್ಬಿಣಾಂಶದ ಕೊರತೆಯನ್ನು ಕಬ್ಬಿಣಾಂಶದ ಮಾತ್ರೆಗಳ ಜೊತೆಗೆ ಪೂರಕಗಳೊಂದಿಗೆ ಸರಿದೂಗಿಸಬಹುದಾಗಿದೆ. ಈ ಗರ್ಭಿಣಿಯರಲ್ಲಿ ನಿಯಮಿತವಾಗಿ ಕಬ್ಬಿಣದ ಪರೀಕ್ಷೆ ನಡೆಸುವ ಮೂಲಕ ಸಮಯಕ್ಕೆ ಸರಿಯಾಗಿ ಈ ಸಮಸ್ಯೆ ನಿರ್ವಹಣೆ ಕುರಿತು ಶಿಕ್ಷಣ ನೀಡಬೇಕು.

ರಕ್ತ ಹೀನತೆ ಕೂಡ ಮಹಿಳೆಯರಲ್ಲಿ ವ್ಯಾಪಕವಾಗಿರುವ ಆರೋಗ್ಯ ಸಮಸ್ಯೆಯಾಗಿದ್ದು, ಇದು ಆರೋಗ್ಯ ಮತ್ತು ಕಲ್ಯಾಣ, ಸಾಮಾಜಿಕ ಮತ್ತು ಆರ್ಥಿಕ ಪರಿಣಾಮಗಳನ್ನು ಹೊಂದಿದೆ. ಈ ಸಮಸ್ಯೆಯಿಂದ ಕೆಲಸದ ಸಮಯವನ್ನು ಕಡಿಮೆ ಮಾಡುವ ಜೊತೆಗೆ ಏಕಾಗ್ರತೆ ಕೊರತೆ, ಕಡಿಮೆ ಆತ್ಮವಿಶ್ವಾಸದಂತಹ ಸಮಸ್ಯೆಗೆ ಕಾರಣವಾಗುತ್ತದೆ. ಅಲ್ಲದೇ, ಇದು ಗರ್ಭಿಣಿಯರಲ್ಲಿ ಹೆರಿಗೆ ವೇಳೆ ಸಾವಿನ ಅಪಾಯ ಹೆಚ್ಚಿಸುತ್ತದೆ. ಗರ್ಭಾವಸ್ಥೆಯ ಅವಧಿಯಲ್ಲಿ ಶೇ 50 ರಿಂದ 60ರಷ್ಟು ಗರ್ಭಿಣಿಯರಲ್ಲಿ ಕಬ್ಬಿಣಾಂಶದ ಕೊರತೆ ಕಾಡುತ್ತದೆ ಎಂದು ಲೀಲಾವತಿ ಆಸ್ಪತ್ರೆಯ ಹೆಮಟೊಲಾಜಿಸ್ಟ್​ ಡಾ ಅಭಯ್​ ಭಾವೆ ತಿಳಿಸಿದ್ದಾರೆ.

ವಿದ್ಯಾರ್ಥಿಗಳು ಮತ್ತು ಮದುವೆ ವಯಸ್ಸಿನ ಯುವತಿಯರಲ್ಲಿ ಈ ರಕ್ತಹೀನತೆ ಸಮಸ್ಯೆ ಹೆಚ್ಚಿದೆ. ಕಬ್ಬಿಣಾಂಶದ ಕೊರತೆ ರಕ್ತ ಹೀನತೆಗೆ ಕಾರಣವಾಗುತ್ತದೆ. ಇದಕ್ಕೆ ಪ್ರಮುಖ ಕಾರಣ ಕಳಪೆ ಪೋಷಣೆ ಮತ್ತು ಕಳಪೆ ಆಹಾರ ಸೇವನೆ ಆಗಿದೆ. ಇದು ಕರುಳಿನ ಹುಳು, ಕರುಳಿನ ರಕ್ತದ ನಷ್ಟ ಮತ್ತು ಋತುಚಕ್ರದ ರಕ್ತ ನಷ್ಟಕ್ಕೆ ಕಾರಣವಾಗುತ್ತದೆ.

ಇದನ್ನೂ ಓದಿ:ಕಲುಷಿತ ಗಾಳಿಗೆ ನಿರಂತರವಾಗಿ ಒಡ್ಡಿಕೊಂಡರೆ ಹೃದಯಾಘಾತದ ಅಪಾಯ: ಅಧ್ಯಯನ

ABOUT THE AUTHOR

...view details